ಕೋಟೆರಾಯನ ಬೆಟ್ಟಕ್ಕೆ ಭೂವಿಜ್ಞಾನಿಗಳು
Team Udayavani, Sep 24, 2020, 6:09 AM IST
ಕೋಟೆರಾಯನ ದುರ್ಗಕ್ಕೆ ಭೇಟಿ ನೀಡಿದ ಭೂವಿಜ್ಞಾನಿಗಳ ತಂಡ.
ಕುಂದಾಪುರ: ಉಡುಪಿ-ಶಿವಮೊಗ್ಗ ಜಿಲ್ಲೆಗಳ ಗಡಿಭಾಗದಲ್ಲಿರುವ ಪಶ್ಚಿಮ ಘಟ್ಟ ಶ್ರೇಣಿಯ ಕೋಟೆರಾಯನ ಬೆಟ್ಟದಲ್ಲಿ ಕುಸಿತ ಸಂಭವಿಸಿದ ಸ್ಥಳಕ್ಕೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಗಳು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಭೂವಿಜ್ಞಾನಿಗಳ ತಂಡವು ಗುಡ್ಡ ಕುಸಿಯಲು ಕಾರಣ, ಎಷ್ಟು ದೂರದವರೆಗೆ ಕುಸಿದಿದೆ, ಮತ್ತಷ್ಟು ಅಪಾಯ ಎದುರಾಗಬಹುದೇ? ಮನೆ ಗಳಿಗೆ ಅಪಾಯ ವಿದೆಯೇ ಇತ್ಯಾದಿ ವಿಚಾರಗಳ ಕುರಿತು ಅಧ್ಯಯನ ನಡೆಸಿದರು. ಭೂವಿಜ್ಞಾನಿಗಳಾದ ಗೌತಮ್ ಶಾಸ್ತ್ರಿ, ಪದ್ಮಶ್ರೀ, ಸಂಧ್ಯಾ, ಹಾಜಿರಾ ಸಜಿನಿ, ಸ್ಥಳೀಯರಾದ ಶೋಭ್‌ರಾಜ್ ತಂಡದಲ್ಲಿದ್ದರು.
ಮಡಾಮಕ್ಕಿಯಿಂದ 5 ಕಿ.ಮೀ., ಶೇಡಿಮನೆ ಗ್ರಾಮದ ಅಗಳಿಬೈಲಿನಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಬೆಟ್ಟವು ಗಾಳಿ – ಮಳೆಗೆ ಕುಸಿದು, ಗುಡ್ಡದ ಮಣ್ಣು ಬುಡದಲ್ಲಿರುವ ಮನ್ನಾಡಿಯ ತನಕ ಜರಿದು ಬಂದಿದೆ.
ಕುಸಿತಕ್ಕೆ ಕಾರಣ
ಭೂವಿಜ್ಞಾನಿಗಳ ಪ್ರಕಾರ, ನಿರಂತರ ಮಳೆಯಾಗಿದ್ದರಿಂದ ಬೆಟ್ಟದಲ್ಲಿರುವ ಬಂಡೆಗಳ ಸುತ್ತಲಿನ ಮಣ್ಣು ಕೊಚ್ಚಿ ಹೋಗಿದ ಮಣ್ಣು ಸಡಿಲಗೊಂಡು ಜಾರಿದೆ. ಮೇಲ್ಭಾಗದಲ್ಲಿ ಸುಮಾರು 250 ಮೀಟರ್ ಬೆಟ್ಟ ಕುಸಿದರೆ, ಮುಂದೆ 1.5 ಕಿ.ಮೀ. ವರೆಗೆ ಜರಿಯುತ್ತ ಸಾಗಿದೆ. ಮರ, ಗಿಡಗಳು, ಸಣ್ಣ-ಪುಟ್ಟ ಬಂಡೆ ಗಳು ಕೊಚ್ಚಿಕೊಂಡು ಬಂದಿವೆ.
ಭೇಟಿ ಸಾಹಸ ಬೇಡ
ಬೆಟ್ಟದ ಕೆಳಭಾಗದಲ್ಲಿ ಮನೆಗಳು ತುಂಬಾ ದೂರದಲ್ಲಿರುವುದರಿಂದ ಯಾವುದೇ ಅಪಾಯ ಸದ್ಯಕ್ಕಿಲ್ಲ. ಕೋಟೆರಾಯನ ಮೂಲ ಸಾನ್ನಿಧ್ಯಕ್ಕೆ ತೆರಳಲೂ ತೊಂದರೆಯಿಲ್ಲ. ಬೆಟ್ಟ ಕುಸಿತವನ್ನು ವೀಕ್ಷಿಸಲು ಜನ ಕುತೂಹಲ ದಿಂದ ಅಲ್ಲಿಗೆ ಭೇಟಿ ನೀಡುತ್ತಿ ದ್ದಾರೆ. ಆದರೆ ಆ ದುಸ್ಸಾಹಸ ಸದ್ಯ ಬೇಡ. ಅಲ್ಲಿನ ಹಾದಿಯು ದುರ್ಗಮವಾಗಿದೆ. 3-4 ಹಳ್ಳಗಳನ್ನು ದಾಟಿ ಹೋಗಬೇಕು. ಹೋದ ಮೇಲೆ ವಿಪರೀತ ಮಳೆ ಬಂದಲ್ಲಿ ಮರಳುವುದು ಕಷ್ಟ .
– ಗೌತಮ್ ಶಾಸ್ತ್ರೀ ಭೂವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.