ಅನುದಾನ ಬಳಕೆ ಮಾನದಂಡ ಬದಲಾವಣೆಗೆ ಗ್ರಾ.ಪಂ.ಗಳ ಆಗ್ರಹ


Team Udayavani, Sep 7, 2021, 7:10 AM IST

ಅನುದಾನ ಬಳಕೆ ಮಾನದಂಡ ಬದಲಾವಣೆಗೆ ಗ್ರಾ.ಪಂ.ಗಳ ಆಗ್ರಹ

ಸಾಂದರ್ಭಿಕ ಚಿತ್ರ

ಉಪ್ಪುಂದ: ಕೇಂದ್ರ ಹಣಕಾಸು ಆಯೋಗದಿಂದ ಪ್ರತೀ ಪಂಚಾಯತ್‌ಗೆ ಬಿಡುಗಡೆಯಾಗುವ ಅನುದಾನದ ವಿನಿಯೋಗಕ್ಕೆ ವಿಧಿಸಿರುವ ಮಾನ ದಂಡಕ್ಕೆ ಕರಾವಳಿಯ ಬಹುತೇಕ ಗ್ರಾಮ ಪಂಚಾಯತ್‌ಗಳು ಆಕ್ಷೇಪ ವ್ಯಕ್ತ ಪಡಿಸಿವೆ. ಈ ಮಾರ್ಗಸೂಚಿಯು ಕುಡಿಯುವ ನೀರು ಮತ್ತು ನೈರ್ಮಲ್ಯ ಬಿಟ್ಟರೆ ಗ್ರಾಮಗಳ ಇನ್ನಿತರ ಅಭಿವೃದ್ಧಿಗೆ ಅಡ್ಡಿಯಾಗಿದೆ ಎನ್ನುವ ಕಳವಳ ಅವುಗಳದು.

ಕೇಂದ್ರ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗುವುದು 15ನೇ ಹಣಕಾಸು ಆಯೋಗದ ಶಿಫಾ ರಸಿನ ಪ್ರಕಾರ, ಆಯಾ ಪಂಚಾಯತ್‌ನ ಜನಸಂಖ್ಯೆಯನ್ನು ಆಧರಿಸಿ ಮಾರ್ಗಸೂಚಿಯ ಪ್ರಕಾರ ಅನುದಾನದ ಶೇ. 60ರಲ್ಲಿ ಶೇ. 30ರಷ್ಟನ್ನು ಕುಡಿಯುವ ನೀರು ಸರಬರಾಜು ಮತ್ತು ನಿರ್ವಹಣೆಗೆ, ಶೇ. 30ರಷ್ಟನ್ನು ನೈರ್ಮಲೀಕರಣಕ್ಕೆ ಮಾತ್ರ ಬಳಸಬೇಕು. ಇನ್ನುಳಿದ ಶೇ. 40ರಲ್ಲಿ ಶೇ. 25ರಷ್ಟನ್ನು ಪರಿಶಿಷ್ಟ ಜಾತಿ, ಪಂಗಡಕ್ಕೂ ಶೇ. 5ರಷ್ಟನ್ನು ಅಂಗವಿಕಲರ ಶ್ರೇಯೋಭಿವೃದ್ಧಿಗೂ ವಿನಿಯೋಗಿಸಬೇಕು.

ಹಿಂದಿನ ಯೋಜನೆಯಲ್ಲೇ ವಿನಿಯೋಗ :

ಉಡುಪಿ ಜಿಲ್ಲೆಯಲ್ಲಿ ಜಲಜೀವನ್‌ ಮಿಷನ್‌, ವಾರಾಹಿ ಯೋಜನೆಯಿಂದಾಗಿ ಶೇ. 100ರಷ್ಟು ಕುಡಿಯುವ ನೀರು ಸರಬರಾಜು ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾ.ಪಂ.ಗಳು 14ನೇ ಹಣಕಾಸು ಯೋಜನೆಯಡಿ ನೀರು, ನೈರ್ಮಲೀಕರಣಕ್ಕೆ ಒತ್ತು ನೀಡಿವೆ. ಈಗ ಮತ್ತೆ ಅದೇ ಕೆಲಸಗಳಿಗೆ ಬಹುಭಾಗ ಮೀಸಲಿಟ್ಟರೆ ಇತರ ಅಭಿವೃದ್ಧಿ ಹೇಗೆ ಎನ್ನುವ ಪ್ರಶ್ನೆ ಗ್ರಾ.ಪಂ.ಗಳದ್ದು.

ಎಷ್ಟು ಪಂಚಾಯತ್‌ಗಳು ಸುಸ್ಥಿರ? :

ಉಡುಪಿ ಜಿಲ್ಲೆಯಲ್ಲಿ 155 ಗ್ರಾ.ಪಂ.ಗಳಿವೆ. ಒಟ್ಟು 132 ಗ್ರಾ.ಪಂ.ಗಳು ಘನ-ದ್ರವ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಿವೆ. ಕೆಲವು ಪಂಚಾಯತ್‌ಗಳು ಗ್ರಾಮ ಘಟಕದಡಿ ವಿಲೇವಾರಿ ಮಾಡುತ್ತಿವೆ. ದ.ಕ. ಜಿಲ್ಲೆಯಲ್ಲಿ 223 ಗ್ರಾ.ಪಂ.ಗಳಿವೆ. ಮಂಗಳೂರು, ಬಂಟ್ವಾಳ ವ್ಯಾಪ್ತಿಯ ಕೆಲವೆಡೆ ಮಾತ್ರ ನೀರಿನ ಸಮಸ್ಯೆ ಇದೆ. ಸಮಸ್ಯೆ ಒಟ್ಟು 10-12 ಗ್ರಾ.ಪಂ.ಗಳಲ್ಲಿ ಇರ

ಬಹುದು. 28 ಗ್ರಾ.ಪಂ.ಗಳಲ್ಲಿ ಸಮರ್ಪಕವಾಗಿ, ಇನ್ನು 47 ಗ್ರಾ.ಪಂ. ಮಾತ್ರವಲ್ಲದೆ, ಹೊಸದಾಗಿ 23 ತ್ಯಾಜ್ಯ ವಿಲೇ ಘಟಕಗಳು ಮಂಜೂರಾಗಿವೆ. ಸ್ವಚ್ಛತೆ, ನೀರಿನ ಸಮಸ್ಯೆ ಇರದಿದ್ದರೂ ನಿರ್ವಹಣೆಗೆ ಸ್ವಲ್ಪ ಅನುದಾನ ಬೇಕಿರುತ್ತದೆ.

ಗ್ರಾ.ಪಂ.ಗಳ ವಾದವೇನು? :

ಮಾರ್ಗಸೂಚಿ ಪ್ರಕಾರ ಅನುದಾನದ ಶೇ. 60ರಲ್ಲಿ ಬಹ್ವಂಶ ಬಳಕೆಯಾದರೆ ಉಳಿಯು ವುದು ಶೇ. 15ರಷ್ಟು ಮಾತ್ರ. ಅಂದರೆ 1 ಕೋ.ರೂ. ಅನುದಾನ ಸಿಕ್ಕಿದರೆ ಕೇವಲ 15 ಲಕ್ಷ ರೂ. ಮಾತ್ರ ಇತರ ಅಭಿವೃದ್ಧಿಗಳಿಗೆ  ಸಿಗುತ್ತದೆ. ಈ ನಿಬಂಧನೆಗಳಿಂದ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿ ಸಾಧಿಸಿರುವ ಗ್ರಾ.ಪಂ.ಗಳಿಗೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಉಪಯೋಗಿಸಲು ಅಡ್ಡಿಯಾಗುತ್ತದೆ. ಈ ಅಡ್ಡಿಯನ್ನು ನಿವಾರಿಸಿ ಕುಡಿಯುವ ನೀರು, ನೈರ್ಮಲ್ಯ ವಿಚಾರದಲ್ಲಿ ಅಭಿವೃದ್ಧಿಯಾಗಿರುವ ಗ್ರಾ.ಪಂ.ಗಳಿಗೆ ಅನುದಾನವನ್ನು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲು ಅವಕಾಶ ನೀಡಬೇಕು; ಅದಕ್ಕಾಗಿ ಮಾರ್ಗಸೂಚಿಯಲ್ಲಿ ಬದಲಾವಣೆ ತರಬೇಕು ಎಂಬುದು ಆಗ್ರಹ. ಇಲ್ಲದಿದ್ದರೆ ಹಲವು ಗ್ರಾ.ಪಂ.ಗಳಲ್ಲಿ ಈ ಅನುದಾನವನ್ನು ಬಳಕೆ ಮಾಡಲಾಗದೆ ಹಿಂದಿರುಗಿಸಬೇಕಾದ ಸ್ಥಿತಿ ಉಂಟಾಗುತ್ತದೆ ಎನ್ನುತ್ತಾರೆ ಶಿರೂರು ಗ್ರಾ.ಪಂ. ಸದಸ್ಯ ನಾಗೇಶ ಅಳ್ವೆಗದ್ದೆ.

ಪ್ರತೀ ಪಂಚಾಯತ್‌ನಿಂದಲೂ ಏನೆಲ್ಲ ಅಭಿವೃದ್ಧಿಗೆ ಒತ್ತು ನೀಡಬೇಕೋ ಆ ಬಗ್ಗೆ ಜಿ.ಪಂ. ಸಿಇಒಗಳಿಗೆ ಪತ್ರ ಬರೆದು, ಪ್ರತಿಯನ್ನು ನನಗೆ ಕಳುಹಿಸಿಕೊಡಲಿ. ಅದರ ಬಗ್ಗೆ ನಾವು ನಮ್ಮ ಕಡೆಯಿಂದ ಕೇಂದ್ರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತೇವೆ.  ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್‌ ಸಚಿವ

ಕೇಂದ್ರದ ಬಳಕೆ ಸೂತ್ರವನ್ನು ಬದಲಾಯಿಸಲಾಗದ್ದರಿಂದ ಅದನ್ನೇ ಅನುಸರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಈ ಅನುದಾನದ ಒಂದು ಭಾಗವನ್ನು ರಾಜ್ಯ ಸರಕಾರವು ವಿದ್ಯುತ್‌ ಬಿಲ್‌ಗಾಗಿ ಪ್ರತ್ಯೇಕವಾಗಿ ಇರಿಸುವ ಎಸ್ಕ್ರೊ  ಖಾತೆಗೆ ವರ್ಗಾಯಿಸುತ್ತಿದೆಯಲ್ಲ? ಅಂದರೆ, ರಾಜ್ಯ ಸರಕಾರಕ್ಕೆ ಕೇಂದ್ರದ ಸೂತ್ರವನ್ನು ಬದಲಿಸಲು ಸಾಧ್ಯ ಎಂದಾಯಿತು. ಆದ್ದರಿಂದ ಮಾರ್ಗಸೂಚಿಯನ್ನು ಬದಲಿಸಲು ಶಾಸಕರು, ಸಂಸದರು ಪ್ರಯತ್ನಿಸಬೇಕು.  ಜನಾರ್ದನ ಮರವಂತೆ, ಪಂ. ರಾಜ್‌ ಒಕ್ಕೂಟದ ಸಂಪನ್ಮೂಲ ವ್ಯಕ್ತಿ

 

-ಕೃಷ್ಣ ಬಿಜೂರು

 

ಟಾಪ್ ನ್ಯೂಸ್

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

“ರವಿ ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

“CT Ravi ಹತ್ಯೆ ಸಂಚಿನಲ್ಲಿ ಸಿಎಂ, ಗೃಹ ಸಚಿವರ ಕೈವಾಡ’: ಆರ್‌. ಅಶೋಕ್‌

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.