ಗುಜ್ಜಾಡಿ – ಆಲೂರು- ವಂಡ್ಸೆ ಜಿಲ್ಲಾ ಮುಖ್ಯ ರಸ್ತೆ; ರಸ್ತೆಗೆ ವಿಸ್ತರಣೆ ಭಾಗ್ಯ
ಹತ್ತಾರು ಊರುಗಳಿಗೆ ತೆರಳಲು ಇದು ಪ್ರಮುಖ ಮಾರ್ಗವಾಗಿದೆ
Team Udayavani, Dec 9, 2023, 3:15 PM IST
ಕುಂದಾಪುರ: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗುಜ್ಜಾಡಿ – ಆಲೂರು – ವಂಡ್ಸೆ ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗೂ ಅಂತೂ ಕಾಲ ಕೂಡಿ ಬಂದಿದೆ. ಜಿಲ್ಲಾ ಮುಖ್ಯ ರಸ್ತೆ ಹಾಗೂ ಇತರೆ ರಸ್ತೆಗಳ ನವೀಕರಣ ಯೋಜನೆಯಡಿ 9.90 ಕೋ.ರೂ. ವೆಚ್ಚದಲ್ಲಿ ಈ ಮುಖ್ಯ ರಸ್ತೆಯ ವಿಸ್ತರಣೆ ಹಾಗೂ ಮರು ಡಾಮರು ಕಾಮಗಾರಿ ನಡೆಯಲಿದೆ.
ಗುಜ್ಜಾಡಿಯಿಂದ ವಂಡ್ಸೆಯವರೆಗಿನ 18 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಿರಿದಾಗಿರುವ 12 ಕಿ.ಮೀ. ವರೆಗಿನ ರಸ್ತೆ ವಿಸ್ತರಣೆಯಾಗಲಿದೆ. ಅಪಘಾತ ಸಂಭವಿಸುವ ತಿರುವುಗಳು ಸಹ ವಿಸ್ತರಣೆಯಾಗಲಿದೆ.
5.5 ಮೀ. ಅಗಲ
ಮುಳ್ಳಿಕಟ್ಟೆಯಿಂದ ಆರಂಭಗೊಂಡು ಆರಂಭದ 2 ಕಿ.ಮೀ. ವರೆಗೆ ಮರು ಡಾಮರು ಕಾಮಗಾರಿ ನಡೆಯಲಿದೆ. ಅಲ್ಲಿಂದ ಮುಂದಕ್ಕೆ ಅಂದರೆ ಬಂಟ್ವಾಡಿಯಿಂದ ಆಲೂರು ಪೇಟೆಯವರೆಗೆ ಹಾಗೂ ಅಲ್ಲಿಂದ ಮುಂದಕ್ಕೆ ಕೆಲ ದೂರ ಒಟ್ಟಾರೆ ಸುಮಾರು 10-12 ಕಿ.ಮೀ. ದೂರದವರೆಗೆ 3.30 ಮೀ. ಅಗಲ ಇರುವ ರಸ್ತೆಯು 5.50 ಮೀ. ಡಾಮರು ಕಾಮಗಾರಿಯೊಂದಿಗೆ ವಿಸ್ತರಣೆಯಾಗಲಿದೆ.
ಪ್ರಮುಖ ರಸ್ತೆ
ಗಂಗೊಳ್ಳಿ, ಗುಜ್ಜಾಡಿ, ಮುಳ್ಳಿಕಟ್ಟೆ, ನಾಡ, ಪಡುಕೋಣೆ, ಹಕ್ಲಾಡಿ, ಆಲೂರು, ಕಳಿ ಭಾಗದವರಿಗೆ ಕೊಲ್ಲೂರು, ಮಾರಣಕಟ್ಟೆ ದೇಗುಲಗಳಿಗೆ ತೆರಳಲು ಜನ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಆಲೂರು ಭಾಗದಿಂದ ಕುಂದಾಪುರಕ್ಕೆ ಬರಬೇಕಾದರೂ ಈ ರಸ್ತೆ ಹತ್ತಿರವಾಗಿದೆ. ಆದರೆ ಕಿರಿದಾದ ರಸ್ತೆ ಹಾಗೂ ಅಲ್ಲಲ್ಲಿ ಡಾಮರೆಲ್ಲ ಎದ್ದು, ಗುಂಡಿಮಯ ಆಗಿರುವುದರಿಂದ ವಾಹನ ಸವಾರರು ಕೊಲ್ಲೂರು ಕಡೆಗೆ ತೆರಳಲು ಬೇರೆ ರಸ್ತೆಯನ್ನು ಆಶ್ರಯಿಸುವಂತಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯನ್ನೇ ಅವಲಂಬಿಸಿದ್ದು, ಹತ್ತಾರು ಊರುಗಳಿಗೆ ತೆರಳಲು ಇದು ಪ್ರಮುಖ ಮಾರ್ಗವಾಗಿದೆ.
ಅನೇಕ ವರ್ಷದ ಬೇಡಿಕೆ
ಬಂಟ್ವಾಡಿಯಿಂದ ಆಲೂರಿನ ಏಳು ಸುತ್ತಿನ ಕೋಟೆಯವರೆಗಿನ ಈ ರಸ್ತೆ ಬಹಳ ಕಿರಿದಾಗಿತ್ತು. ಇದರಿಂದ ಜನರಿಗೆ ತುಂಬಾ
ತೊಂದರೆಯಾಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿತ್ತು. ಈಗ ಅಗಲೀಕರಣದಿಂದ ಅನುಕೂಲವಾಗಲಿದೆ. ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಇದರೊಂದಿಗೆ ಎರಡೂ ಬದಿ ಚರಂಡಿ, ಬೀದಿ ದೀಪದ ಅಳವಡಿಕೆ ಆಗಬೇಕು, ಶಾಲಾ ಪರಿಸರಲ್ಲಿ ಹಂಪ್, ತಿರುವುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲಿ.
ರಾಜೇಶ್ ದೇವಾಡಿಗ,
ಅಧ್ಯಕ್ಷ ಆಲೂರು ಗ್ರಾ.ಪಂ.
ಶೀಘ್ರ ಆರಂಭ
ಜಿಲ್ಲಾ ಮುಖ್ಯ ರಸ್ತೆ ಮತ್ತು ಇತರ ರಸ್ತೆ ನವೀಕರಣ ಯೋಜನೆಯಡಿ 9.90 ಕೋ.ರೂ. ವೆಚ್ಚದಲ್ಲಿ 12 ಕಿ.ಮೀ. ರಸ್ತೆ ವಿಸ್ತರಣೆಯಾಗಲಿದೆ. 3.30 ಮೀ. ಇದ್ದ ರಸ್ತೆಯು 5.50 ಮೀ. ವಿಸ್ತರಣೆಯಾಗಲಿದೆ. ಆದಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ.
ಕೆ. ಮೂರ್ತಿ, ಎಂಜಿನಿಯರ್,
ಲೋಕೋಪಯೋಗಿ ಇಲಾಖೆ ಕುಂದಾಪುರ
*ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.