ಹಾಲಾಡಿಗೆ ದೊರಕದ ಸಚಿವ ಸ್ಥಾನ
Team Udayavani, Jan 15, 2021, 2:00 AM IST
ಕುಂದಾಪುರ: ಕುಂದಾಪುರದ ವಾಜಪೇಯಿ ಎಂದೇ ಜನರಿಂದ ಪ್ರೀತಿ ಗಳಿಸಿದ ಸೋಲರಿಯದ ಶಾಸಕ, ಐದು ಬಾರಿ ಕುಂದಾಪುರ ವಿಧಾನಸಭೆಯನ್ನು ಪ್ರತಿನಿಧಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಕೇಳಿ ಬಂದಿದ್ದರೂ ಈ ಬಾರಿಯೂ ಕೊನೆಗೂ ಆದದ್ದು ನಿರಾಶೆಯೇ. ಏಳು ಮಂದಿ ಸಚಿವರ ಸೇರ್ಪಡೆ ಸಂದರ್ಭವೂ ಕುಂದಾಪುರಕ್ಕೆ ಸಿಹಿಸುದ್ದಿ ಬರಲೇ ಇಲ್ಲ.
ಆಂದೋಲನ :
ಹಾಲಾಡಿಯವರಿಗೆ ಸಚಿವ ಸ್ಥಾನ ಕೊಡಬೇಕೆಂದು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಬೆಂಬಲಿಗರು, ಸಾರ್ವಜನಿಕರು ಜಾಲತಾಣದಲ್ಲಿ ಆಂದೋಲನ ಮಾದರಿಯಲ್ಲಿ ಒತ್ತಡ ನಡೆಸಿದ್ದರು. ಎಲ್ಲ ಮಾಧ್ಯಮಗಳಲ್ಲೂ ಹಾಲಾಡಿಯವರ ಹೆಸರು ಸಂಭಾವ್ಯರ ಸಾಲಿನಲ್ಲಿಯೇ ಇತ್ತು. ಬಿಜೆಪಿಯಲ್ಲಿ ಸಚಿವ ಸ್ಥಾನ ಹಂಚಿಕೆಗೆ ಸುಲಭ ಎಂಬ ನಿರೀಕ್ಷೆಯಲ್ಲಿ ಹಾಲಾಡಿಯವರಿಗೆ ಸ್ಥಾನ ದೊರೆಯಬಹುದೆಂಬ ಮಾತಿತ್ತು. ಈ ಹಿಂದೆ ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದರು. ಉಡುಪಿ ಜಿಲ್ಲೆಯ ಅಷ್ಟೂ ಮಂದಿ ಸಚಿವರಾಗಲು ಅರ್ಹರೇ ಆಗಿದ್ದು ಹಾಲಾಡಿಯವರಿಗೆ ಏಕೆ ಕೊಡಬೇಕು ಎಂಬ ಕುರಿತು ಕಾರಣಗಳನ್ನು ಕೂಡ ಪಟ್ಟಿ ಮಾಡಲಾಗಿತ್ತು. ಈ ಬಾರಿಯೂ ಹಾಲಾಡಿ ಹೆಸರು ಪಟ್ಟಿಯಲ್ಲಿ ಇಲ್ಲ. ದಕ್ಷಿಣ ಕನ್ನಡದ ಅಂಗಾರ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನೀಡಿದ್ದಕ್ಕೆ ವಿರೋಧವಂತೂ ಅಲ್ಲ. ಹಾಲಾಡಿಯವರಿಗೆ ದೊರೆಯಬೇಕೆಂಬ ಬೇಡಿಕೆ ಸಾರ್ವತ್ರಿಕವಾಗಿದೆ.
ಏಕೆ ಆಗ್ರಹ :
ಕಾಂಗ್ರೆಸ್ ಭದ್ರಕೋಟೆಯ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದ ಮೊದಲ ಶಾಸಕ. ಇಂದಿಗೂ ಪಕ್ಷ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದಾರೆ. ಮಂತ್ರಿಯಾಗುವ ಅರ್ಹತೆ ಇದ್ದರೂ 2008 ರಲ್ಲಿ ಮಂತ್ರಿಗಿರಿಗೆ ಹಾತೊರೆಯಲಿಲ್ಲ. ಅನಂತರ ನಿಮ್ಮೊಡನೆ ಪಕ್ಷ ಬಿಡುತ್ತೇನೆ ಎಂದು ರಾಜೀನಾಮೆ ಪತ್ರ ಬರೆದಿದ್ದ ಇತರ ಶಾಸಕರ ರಾಜೀನಾಮೆ ಪತ್ರ ಹರಿದು ಹಾಕಿ ನೀವು ಪಕ್ಷದಲ್ಲೇ ಇರಿ ಎಂದಿದ್ದರು. ಪಕ್ಷದಿಂದ ಹೊರ ಹೋಗಿ ಪಕ್ಷೇತರರಾಗಿ ಸ್ಪರ್ಧಿಸಿದಾಗ ಪಕ್ಷದ ವಿರುದ್ಧವಾಗಲಿ, ಪಕ್ಷದ ನಾಯಕರ ವಿರುದ್ಧವಾಗಲಿ ಒಂದೇ ಒಂದು ಹೇಳಿಕೆ ಕೊಡಲಿಲ್ಲ. ಪಕ್ಷೇತರರಾಗಿ ಗೆದ್ದ ಅನಂತರ ರಾಜ್ಯಸಭಾ ಚುನಾವಣೆಯಲ್ಲಿ ಇತರರು ತೋರಿದ ಆಮಿಷವನ್ನು ಧಿಕ್ಕರಿಸಿದರು. ಜೆಡಿಎಸ್‌ನ ಏಳು ಜನ ಶಾಸಕರನ್ನು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಳೆದರೂ ಹಾಲಾಡಿ ಮಾತ್ರ ಬಿಜೆಪಿ ರಾಜ್ಯಸಭಾ ಹಾಗೂ ವಿಧಾನಪರಿಷತ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದರು ಎನ್ನಲಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಶಾಸಕ ರಾಗಿದ್ದರೂ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದರು. 2016ರ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಎಲ್ಲ ಜಿ.ಪಂ. ಸ್ಥಾನವನ್ನು ಬಿಜೆಪಿ ಗೆಲ್ಲುವಂತೆ ಮಾಡಿದ್ದರು. ಕೇವಲ ಒಂದು ತಾ.ಪಂ. ಬಿಜೆಪಿ ಕಳೆದುಕೊಂಡರೆ ಉಳಿದೆಲ್ಲೆಡೆ ಬಿಜೆಪಿ ಗೆದ್ದಿತ್ತು.
ಲಾಬಿ ಇಲ್ಲ :
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೇ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದ ಹೆಸರುಗಳಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರದ್ದೂ ಒಂದು. ಆದರೆ ಬೆಂಗಳೂರು ಅಥವಾ ದಿಲ್ಲಿಗೆ ಹೋಗಿ ಹೈಕಮಾಂಡ್ ಹಾಗೂ ಪ್ರಮುಖರ ಬಳಿ ಸಚಿವ ಸ್ಥಾನಕ್ಕೆ ಲಾಬಿ ಮಾಡದಿರುವುದೇ ಶೆಟ್ಟರಿಗೆ ಮುಳುವಾಯಿತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅವರು ಇನ್ನು ಮುಂದೆಯೂ ಲಾಬಿ ಮಾಡುವುದಿಲ್ಲ ಎನ್ನುತ್ತಾರೆ ಅವರ ಬೆಂಬಲಿಗರು.
ಹುಸಿಯಾದ ನಿರೀಕ್ಷೆ :
ಏಳು ಸಚಿವರ ಸೇರ್ಪಡೆ ಎಂದಾದಾಗ ಒಮ್ಮೆ ಹಾಲಾಡಿಯವರಿಗೆ ದೊರೆಯಬಹುದು ಎಂಬ ನಿರೀಕ್ಷೆ ಇತ್ತು. ಈ ಹಿಂದಿನ ಭರವಸೆಗಳೆಲ್ಲ ಕಾರ್ಯಕರ್ತರ ಮನದಲ್ಲಿ ಒಮ್ಮೆ ಹಾದಹೋಯಿತು. ಹಾಲಾಡಿ ಬೆಂಬಲಿಗರ ಎಲ್ಲ ನಿರೀಕ್ಷೆಗಳೂ ಪ್ರತಿ ಬಾರಿ ಸಂಪುಟ ವಿಸ್ತರಣೆ ಸಂದರ್ಭ ಹುಸಿಯಾಗಿವೆ. ಹಾಲಾಡಿಯವರಿಗೆ ಸಚಿವ ಸ್ಥಾನ ದೊರೆಯುವುದು ಬಿಡಿ, ಪಕ್ಷದ ವರಿಷ್ಠರು ಸಚಿವ ಸಂಪುಟದ ಪ್ರಮಾಣವಚನಕ್ಕೆ ಆಹ್ವಾನವನ್ನೂ ನೀಡುತ್ತಿಲ್ಲ. ಮುಂದಿನ ಬಾರಿ ಅವಕಾಶ ನೀಡಲಾಗುವುದು ಎಂಬಂತಹ ಮಾತುಗಳೇ ಸಮಾಧಾನಕ್ಕಾಗಿ ಪ್ರತಿ ಬಾರಿ ಕೇಳಿ ಬರುತ್ತಿದೆ. ಸಹಜವಾಗಿ ಕಾರ್ಯಕರ್ತರಲ್ಲಿ ಆಕ್ರೋಶ ಮಡುಗಟ್ಟಿದೆ. ಬುಧವಾರ ಇಡೀ ದಿನ ಪಕ್ಷದ ಕಚೇರಿ ಬಿಕೋ ಎನ್ನುತ್ತಿತ್ತು.
ರಾಜ್ಯದಲ್ಲೇ ಅಧಿಕ ಮತಗಳ ಲೀಡ್ :
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದ ಶಾಸಕ ಹಾಲಾಡಿಯವರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಬಿಜೆಪಿ ಅಭ್ಯರ್ಥಿಗೆ 70ಸಾವಿರಕ್ಕೂ ಅಧಿಕ ಮತಗಳ ಮೂಲಕ ಅತೀ ಹೆಚ್ಚು ಮತಗಳ ಅಂತರದ ಲೀಡ್ ಕೊಟ್ಟ ಕ್ಷೇತ್ರ ಕುಂದಾಪುರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.