ಹಂಗಳೂರು: ಪಾಳುಬಿದ್ದ ಕೆರೆಗಳಿಗೆ ಬೇಕು ರಕ್ಷಣೆ
Team Udayavani, Jun 24, 2019, 5:42 AM IST
ಕುಂದಾಪುರ: ನಾವು ಸಣ್ಣದಿರುವಾಗ ಈ ಕೆರೆಗಳು ಬಹಳ ಅನುಕೂಲವಾಗಿದ್ದವು. ಇಲ್ಲಿನ ನೀರೇ ಜನರ ಆದ್ಯತೆಗೆ ಬಳಕೆಯಾಗುತ್ತಿತ್ತು. ಕುಡಿಯುವ ಹೊರತಾದ ಇತರ ಉಪಯೋಗಕ್ಕೆ, ಜಾನುವಾರುಗಳಿಗೆ, ಕೃಷಿಗೆ ಈ ನೀರು ಬಳಕೆಯಾಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಉಪಯೋಗಕ್ಕೆ ಇಲ್ಲದಂತಾಗಿದೆ ಎನ್ನುತ್ತಾರೆ ಹಂಗಳೂರಿನ ಆನಂದ ಪೂಜಾರಿ ಅವರು.
ಹಂಗಳೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಇರುವ ಕೆರೆಗಳು ಹೂಳೆತ್ತದೆ ನಿಸ್ತೇಜವಾದುದನ್ನು ಕಾಣು ತ್ತಿದ್ದಂತೆಯೇ ಒಂದೊಂದೇ ಕೆರೆಗಳು ಗತಕಾಲದ ಕಥೆ ಹೇಳುವಂತೆ ಭಾಸವಾಗುತ್ತಿತ್ತು. ಒಂದೊಂದು ಕೆರೆಗೂ ಒಂದೊಂದು ಹೆಸರಿದ್ದಂತೆ ಅದರ ಹಿಂದೆ ಜನಪದೀಯ ಕಥೆಗಳೂ ಇದ್ದವು. ಇವೆಲ್ಲಕ್ಕಿಂತ ಮುಖ್ಯವಾಗಿ ವಿಶಾಲವಾಗಿ ಹರವಿಕೊಂಡು ಗದ್ದೆಯ ನಡುವೆ ಇದ್ದ ಈ ಕೆರೆಗಳು ಈಗ ಕೆಸರು ತುಂಬಿಕೊಂಡು, ಕಳೆಗಿಡ ತುಂಬಿಕೊಂಡು ಕಳಾಹೀನವಾಗಿವೆ.
ಹುಚ್ಕೆರೆ
ಅರ್ಧ ಎಕರೆಯಷ್ಟು ವಿಶಾಲವಾದ ಕೆರೆ. ಇದರ ವಿಸ್ತೀರ್ಣ ಬರೋಬ್ಬರಿ 53 ಸೆಂಟ್ಸ್‌ನಷ್ಟಿದೆ. ಪಂಚಾಯತ್‌ನಿಂದ ಹಿಂದೊಮ್ಮೆ ಹೂಳೆತ್ತಿದ್ದರು. ಆದರೆ ಕೆಲಸಕ್ಕಿಂತ ಜಾಸ್ತಿ ಬಿಲ್ ಆಗಿದೆ ಎನ್ನುವುದು ಸ್ಥಳೀಯರ ಆರೋಪ. ಈಗಂತೂ ಪ್ರಯೋಜನಕ್ಕಿಲ್ಲ.
ಹಿತ್ಲಗುಮ್ಮಿಕೆರೆ
ಈ ಕೆರೆ ಖಾಸಗಿಯಾಗಿದ್ದರೂ ಊರಿನ ಅನೇಕರಿಗೆ ಪ್ರಯೋಜನಕ್ಕೆ ದೊರೆಯುತ್ತಿತ್ತು. ಈಚೆಗೆ ಈ ಕೆರೆಯನ್ನು ಮುಚ್ಚಲಾಗಿದೆ.
ಚೋಕಾಡ್‌ಸಾಲ್ ಕಾಲುವೆ
ಕೋಟೇಶ್ವರದ ಕಾಗೇರಿಯಿಂದ ಹುಣ್ಸೆಕಟ್ಟೆವರೆಗೆ ವ್ಯಾಪಿಸಿರುವ ಚೋಕಾಡ್‌ಸಾಲ್ ಕಾಲುವೆಯ ಹೂಳೆತ್ತಿದರೆ ನೀರು ಸರಾಗವಾಗಿ ಹರಿಯುತ್ತದೆ. ಜನರಿಗೂ ಈ ಕಾಲುವೆಯ ನೀರು ಕೃಷಿ ಅನುಕೂಲಕ್ಕೆ ದೊರೆಯುತ್ತದೆ. ಈ ಭಾಗದ ದೊಡ್ಡ ಕಾಲುವೆ ಇದಾಗಿದೆ. ಕೆಲ ಸಮಯದ ಹಿಂದೆ ಸ್ವಸಹಾಯ ಸಂಘದವರು ಈ ಕಾಲುವೆಯನ್ನು ಭಾಗಶಃ ಸ್ವತ್ಛಗೊಳಿಸಿದ್ದಾರೆ.
ಗೂಗಲ್‌ಗೆ ಸೇರಿಸಲಾಗಿದೆ
ಮುಂದಿನ ಪೀಳಿಗೆಗೆ ಇಲ್ಲಿ ಅನೇಕ ಕೆರೆಗಳು ಇತ್ತೆಂಬ ಕುರುಹುಗಳು ಇರಬೇಕೆಂಬ ನಿಟ್ಟಿನಲ್ಲಿ ಗೂಗಲ್ ಮ್ಯಾಪ್‌ನಲ್ಲಿ ಕೂಡಾ ಈ ಕೆರೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಸ್ಥಳೀಯಾಡಳಿತ ಈ ಕೆರೆಗಳ ಪುನರುಜ್ಜೀವನ ಕಡೆಗೆ ಗಮನ ಹರಿಸಬೇಕು.
-ರೋಶನ್ ಡಿ’ಸೋಜಾ, ಹಂಗಳೂರು ನಿವಾಸಿ
ಡಿಸಿಗೆ ಪತ್ರ
ಈ ಪರಿಸರದ ಕೆರೆಗಳನ್ನು ಉಳಿಸಬೇಕೆಂದು ಸ್ಥಳೀಯರಾದ ರಂಗನಾಥ ಕಾರಂತ್ ಅವರು ಜಿಲ್ಲಾಧಿಕಾರಿಗೆ 2018ರಲ್ಲಿ ಪತ್ರ ಬರೆದಿದ್ದಾರೆ. ಈ ವರೆಗೂ ಸ್ಪಂದನೆ ದೊರೆತಿಲ್ಲ.
ಬೇಡಿಕೆಗಳು
ಬೇಸಗೆಯಲ್ಲಿ ಈ ಕೆರೆಯ ನೀರು ಹಾಯಿಸಿ ಕಾತಿ, ಸುಗ್ಗಿ ಬೆಳೆ ಅನಂತರ ಧಾನ್ಯ ಬೆಳೆಯುತ್ತಿದ್ದೆವು. ಆದರೆ ಈಗ ಹೂಳು ತುಂಬಿ ಉಪಯೋಗಕ್ಕೆ ದೊರೆಯುತ್ತಿಲ್ಲ. ಆದ್ದರಿಂದ ಇದನ್ನು ಉದ್ಯೋಗ ಖಾತರಿ ಯೋಜನೆ ಅಥವಾ ಕೆರೆ ಅಭಿವೃದ್ಧಿ ಯೋಜನೆ ಮೂಲಕ ಹೂಳೆತ್ತಬೇಕು. ಕೆರೆಗೆ ದಂಡೆ ಕಟ್ಟಿಸಬೇಕು. ಜನ ಜಾನುವಾರುಗಳು ಬೀಳದಂತೆ ಬೇಲಿ ಹಾಕಿಸಬೇಕು. ಅಂತರ್ಜಲ ವೃದ್ಧಿಗೆ ನೆರವಾಗಬೇಕು. ಕೆರೆಯ ನೀರು ಸಾರ್ವಜನಿಕರಿಗೆ ಕೃಷಿ ಹಾಗೂ ಇತರ ಅನುಕೂಲಕ್ಕೆ ದೊರೆಯುವಂತೆ ಮಾಡಬೇಕು ಎಂದು ಲಕ್ಷ್ಮಣ ಪೂಜಾರಿ, ಫೆಲಿಕ್ಸ್ ಡಿ’ಸೋಜಾ, ಶಕುಂತಳಾ, ಚಂದು ಪೂಜಾರ್ತಿ, ಪುಂಡಲೀಕ, ಶೀನ ಪೂಜಾರಿ, ಕೊರಗ ಪೂಜಾರಿ, ಕೊರಗಯ್ಯ ಶೆಟ್ಟಿ, ಗಿರಿಜಾ ಪೂಜಾರ್ತಿ, ಪ್ರಕಾಶ್ ಪೂಜಾರಿ, ಸಂತೋಷ್ ಮೊದಲಾದವರು ಒತ್ತಾಯಿಸಿದ್ದಾರೆ.
ಹೂಳೆತ್ತಲಾಗುವುದು
ಉದ್ಯೋಗ ಖಾತರಿ ಹಾಗೂ 14ನೇ ಹಣಕಾಸು ಯೋಜನೆ ಮೂಲಕ ನೇರಂಬಳ್ಳಿ, ಹೊಸೊಕ್ಲು ಹಾಗೂ ಕೋಡಿ ರಸ್ತೆಯ ತೋಡಿನ ಹೂಳೆತ್ತಲಾಗಿದೆ. ಬೇಸಗೆಯಲ್ಲಿ ಹೂಳೆತ್ತಲು ನೀತಿಸಂಹಿತೆ ಅಡ್ಡಿಯಾಗಿತ್ತು. ನೀತಿಸಂಹಿತೆಯಿಂದ ಉದ್ಯೋಗ ಖಾತರಿ ಹೊರಗಿಟ್ಟರೆ ಇಂತಹ ಕಾಮಗಾರಿ ಮಾಡಿಸಬಹುದು. ಈ ಮಳೆಗಾಲ ಮುಗಿದ ತತ್‌ಕ್ಷಣ ಯಾವುದಾದರೂ ಒಂದು ಕೆರೆಯ ಹೂಳೆತ್ತಲಾಗುವುದು. ಇದಕ್ಕಾಗಿ ಈಗಲೇ ಅಂದಾಜುಪಟ್ಟಿ ತಯಾರಿಸಲಾಗುವುದು.
-ಕೆ.ಸಿ. ರಾಜೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಹಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ
Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.