ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಗದ್ದೆಗೆ “ಜೀವಕಳೆ’
Team Udayavani, Jul 9, 2020, 5:56 AM IST
ಕುಂದಾಪುರ: ಕೂಲಿಯಾಳುಗಳ ಕೊರತೆ, ಉಪ್ಪು ನೀರಿನ ಸಮಸ್ಯೆಯಿಂದಾಗಿ ಬೇಸಾಯ ಮಾಡದೇ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಸುಮಾರು 18 ಎಕರೆ ಪ್ರದೇಶದಲ್ಲಿ ಭತ್ತದ ಬೇಸಾಯ ಮಾಡುವ ಮೂಲಕ ಕೋಡಿಯ ರೈತರೊಬ್ಬರು ಬರಡು ಗದ್ದೆಗಳಲ್ಲಿ ಜೀವ ಕಳೆ ತಂದಿದ್ದಾರೆ.
ಕೋಡಿ ಶಿವಾಲಯ ಸಮೀಪದ ನಿವಾಸಿ ಕೆ. ಗಂಗಾಧರ ಪೂಜಾರಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನ ಹದಿನೆಂಟು ಎಕರೆ ಪ್ರದೇಶದಲ್ಲಿರುವ 60ಕ್ಕೂ ಅಧಿಕ ಗದ್ದೆಗಳನ್ನು ಗೇಣಿಗೆ ಪಡೆದು ಕಳೆದ 17 ವರ್ಷಗಳಿಂದ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಹಂಗಳೂರಿನಲ್ಲಿ ಇಲೆಕ್ಟ್ರಿಕಲ್ ಹಾಗೂ ಡೆಕೋರೇಶನ್ ಉದ್ಯಮ ನಡೆಸುತ್ತಿರುವ ಗಂಗಾಧರ ಪೂಜಾರಿಯವರು ಮಳೆಗಾಲದಲ್ಲಿ ಪ್ರತಿ ವರ್ಷವೂ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸ್ವತಃ ಟಿಲ್ಲರ್ ಮೇಲೆ ಕೂತು ಗದ್ದೆ ಉಳುಮೆ ಮಾಡುವುದರಿಂದ ಹಿಡಿದು ಭತ್ತದ ನಾಟಿಗೆ ಪೂರಕವಾದ ಎಲ್ಲ ಕೆಲಸಗಳನ್ನು ಮಾಡುವ ಗಂಗಾಧರ ಪೂಜಾರಿಯವರ ಕೃಷಿ ಕಾಯಕಕ್ಕೆ ಅವರ ಚಿಕ್ಕಪ್ಪ ಶಂಕರ ಪೂಜಾರಿ ಹಾಗೂ ಸಹೋದರ ಗೋವಿಂದ ಪೂಜಾರಿ ಸಹ ಸಾಥ್ ನೀಡುತ್ತಿದ್ದಾರೆ.
ತಂದೆಯೇ ಸ್ಫೂರ್ತಿ
ಗಂಗಾಧರ ಪೂಜಾರಿಯವರ ತಂದೆ ಗಣಪ ಪೂಜಾರಿ ವೃತ್ತಿಪರ ಕೃಷಿಕರಾಗಿ ಕೋಡಿ ಭಾಗದಲ್ಲಿ ಹೆಸರು ಮಾಡಿದವರು. ಅವರ ನೆಚ್ಚಿನ ಕಾಯಕವಾಗಿರುವ ಕೃಷಿಯನ್ನು ಅವರ ಕಾಲಾ ಅನಂತರ ಗಂಗಾಧರ ಪೂಜಾರಿಯವರು ಮುಂದುವರಿಸಿದ್ದಾರೆ. ತಮ್ಮಲ್ಲಿರುವ ಗದ್ದೆಗಳೊಂದಿಗೆ ಮನೆಯ ಸುತ್ತಮುತ್ತಲಿನ ಕೃಷಿಭೂಮಿಯನ್ನೂ ಗೇಣಿ ಪಡೆದು ನಾಟಿ ಮಾಡುತ್ತಿದ್ದಾರೆ. ಇವರ ಕೃಷಿ ಪ್ರೀತಿಗೆ ತಂದೆಯೇ ಸ್ಫೂರ್ತಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.