![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, May 18, 2022, 11:44 AM IST
ಕುಂದಾಪುರ: ಸೋಮವಾರ ರಾತ್ರಿಯ ಭಾರೀ ಗಾಳಿ- ಮಳೆಗೆ ಕುಂದಾಪುರ ತಾಲೂಕಿನಲ್ಲಿ 10ಕ್ಕೂ ಮಿಕ್ಕಿ ಮನೆಗಳಿಗೆ ಹಾನಿಯಾಗಿದ್ದು, 3 ಜಾನುವಾರು ಕೊಟ್ಟಿಗೆಗೂ ಮರ ಬಿದ್ದು ತೊಂದರೆಯಾಗಿದೆ. ಇನ್ನು ಕೃಷಿಗೂ ಹಾನಿಯಾಗಿದ್ದು, ಒಟ್ಟಾರೆ 6.35 ಲಕ್ಷ ರೂ. ನಷ್ಟ ಸಂಭವಿಸಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನೆಲ್ಲೆಡೆ ಸೋಮವಾರ ರಾತ್ರಿ ಭಾರೀ ಮಳೆಯಾಗಿದ್ದು, ಹಲವೆಡೆ ಗುಡುಗು, ಮಿಂಚು ಸಹಿತ ಗಾಳಿ- ಮಳೆಗೆ ಮರ ಬಿದ್ದು, ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿದ್ದರಿಂದ ರಾತ್ರಿಯಿಡೀ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿತ್ತು.
ಮನೆ, ಕೊಟ್ಟಿಗೆಗೆ ಹಾನಿ
4.50 ಲಕ್ಷ ರೂ. ನಷ್ಟ ವಂಡ್ಸೆ ಗ್ರಾಮದ ಮೂಕಾಂಬು ಅವರ ಮನೆಗೆ ಹಾನಿಯಾಗಿದ್ದು, ಕುಳಂಜೆ ಗ್ರಾಮದ ಪ್ರಭು ಅವರ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ. 74 ಉಳ್ಳೂರು ಗ್ರಾಮದ ರತ್ನ ದೇವಾಡಿಗ, ಬುಡ್ಡು ದೇವಾಡಿಗ, ಹೆಸ್ಕತ್ತೂರು ಗ್ರಾಮದ ಹೇಮ ಮೊಗೇರ್ತಿ, ಸಾಧು ಪೂಜಾರ್ತಿ, ವಕ್ವಾಡಿ ಗ್ರಾಮದ ಕನಕ, ಗುಲಾಬಿ ಆಚಾರ್ತಿ, ಅಸೋಡು ಗ್ರಾಮದ ಗುಲಾಬಿ ಪೂಜಾರ್ತಿ, ಕಂದಾವರ ಗ್ರಾಮದ ಬಾಬಿ ದೇವಾಡಿಗ, ನಾರಾಯಣ ದೇವಾಡಿಗ ಮನೆಗಳಿಗೆ ಹಾನಿಯಾಗಿದೆ. ಕಾವ್ರಾಡಿ ಗ್ರಾಮದ ಬಾಬಿ ಕುಲಾಲ್ತಿ ಹಾಗೂ ಸಣ್ಣಮ್ಮ ಮೊಗೇರ್ತಿ ಅವರ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಒಟ್ಟಾರೆ 11 ಮನೆಗಳು ಹಾಗೂ ಮೂರು ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದ್ದು, ಅಂದಾಜು 4.50 ಲಕ್ಷ ರೂ. ನಷ್ಟ ಸಂಭವಿಸಿದೆ.
ತೋಟಗಳಿಗೆ ಹಾನಿ: ಅಪಾರ ನಷ್ಟ
ಶಂಕರನಾರಾಯಣ ಗ್ರಾಮದ ಗಿರಿಜಮ್ಮ ಶೆಡ್ತಿ, ಆಶಾ, ಅಭಿಷೇಕ್, ಶರಾವತಿ, ಕೊರ್ಗಿ ಗ್ರಾಮದ ಮೀನ ಬಳೆಗಾರ್ತಿ, ಶಂಕರ ಶೆಟ್ಟಿ ಹಾಗೂ ವಡೇರಹೋಬಳಿ ಗ್ರಾಮದ ಸೀತು ಅವರ ತೋಟಗಳಿಗೆ ಗಾಳಿ- ಮಳೆಯಿಂದಾಗಿ ಹಾನಿ ಉಂಟಾಗಿದೆ. ಒಟ್ಟಾರೆ 1.85 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಶಂಕರನಾರಾಯಣ: ಗ್ರಾ.ಪಂ. ನಿಯೋಗ ಭೇಟಿ
ಶಂಕರನಾರಾಯಣ ಗ್ರಾಮದ ಬೆದ್ರಕಟ್ಟೆ ಎಂಬಲ್ಲಿ ಕೊರಗ ಕಾಲೊನಿಯಲ್ಲಿ ನೆಲೆಸಿದ್ದ ಸಣ್ಣ ಶೆಡ್ ರೀತಿಯ 4-5 ಸಣ್ಣ-ಸಣ್ಣ ಮನೆಗಳ ಶೀಟು ಗಾಳಿ – ಮಳೆಗೆ ಹಾರಿ ಹೋಗಿದೆ. ಮಂಗಳವಾರ ಬೆಳಗ್ಗೆ ಗ್ರಾ.ಪಂ. ಅಧ್ಯಕ್ಷೆ ಲತಾ ದೇವಾಡಿಗ ನೇತೃತ್ವದ ಪಂ. ನಿಯೋಗ ಭೇಟಿ ನೀಡಿ, ಹೊಸ ಶೀಟು ಖರೀದಿಸಲು ವ್ಯವಸ್ಥೆ ಕಲ್ಪಿಸಿದೆ. ಈ ವೇಳೆ ಉಪಾಧ್ಯಕ್ಷ ರವಿ ಕುಲಾಲ್, ಗ್ರಾ.ಪಂ. ಸದಸ್ಯರು, ಪಿಡಿಒ ಶ್ವೇತಲತಾ, ಸಿಬಂದಿ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.