Kota: ಆಚೆ ಟ್ರ್ಯಾಕಲ್ಲಿ ರೈಲು ಬಂದರೆ ಹಳಿಗೆ ಇಳಿದೇ ಹತ್ತಬೇಕು!

ಬಾರಕೂರು ರೈಲ್ವೆ ನಿಲ್ದಾಣದಲ್ಲೂ ಸಮಸ್ಯೆಗಳ ಸುರಿಮಳೆ; ಕೊಂಕಣ ರೈಲ್ವೇ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

Team Udayavani, Aug 7, 2024, 4:09 PM IST

Screenshot (135)

ಕೋಟ: ಕೊಂಕಣ ರೈಲ್ವೆಧೀಯಡಿ ಬರುವ ಉಡುಪಿಯ ಇಂದ್ರಾಳಿ ರೈಲು ನಿಲ್ದಾ ಣದ ಅವ್ಯವಸ್ಥೆಗಳನ್ನು ಉದಯವಾಣಿ ಸಮಗ್ರವಾಗಿ ಬೆಳಕಿಗೊಡ್ಡಿದ ನಡುವೆಯೇ ಉಳಿದ ನಿಲ್ದಾಣಗಳಲ್ಲೂ ಪ್ರಯಾಣಿಕರು ಭಾರಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೆಳಕಿಗೆ ಬರು ತ್ತಿದೆ. ರೈಲು ಪ್ರಯಾಣವೆಂದರೆ ಜನರು ಹಿಂದೆ ಮುಂದೆ ನೋಡುವಷ್ಟು ಕಿರಿಕಿರಿಗಳು ಇಲ್ಲಿವೆ.

ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಹೇರಾಡಿ ಗ್ರಾಮದಲ್ಲಿ ಐತಿಹಾಸಿಕ ರಾಜನಗರಿ ಬಾರ್ಕೂರು ರೈಲ್ವೇ ನಿಲ್ದಾಣವಿದೆ. ಕೋಟ ಹಾಗೂ ಬ್ರಹ್ಮಾವರ ಹೋಬಳಿ ವ್ಯಾಪ್ತಿಯ ನಿವಾಸಿಗಳು ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಆಗಮಿಸುವ ರೈಲ್ವೇ ಪ್ರಯಾಣಿಕರು ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಇದು ಬ್ರಹ್ಮಾವರ ತಾಲೂಕಿನ ಏಕೈಕ ರೈಲ್ವೇ ನಿಲ್ದಾಣ ಕೂಡ ಹೌದು. ಸಾಕಷ್ಟು ಮಂದಿ ಪ್ರತಿ ದಿನ ಇಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿರುವ ಹತ್ತಾರು ಸಮಸ್ಯೆಗಳನ್ನು ಎದುರಿಸಿಕೊಂಡೇ ಪ್ರಯಾಣಿಸುತ್ತಾರೆ. ಬಾರಕೂರು ರೈಲು ನಿಲ್ದಾಣದ ಮೂಲಕ ಮಡ್‌ಗಾಂವ್‌-ಮಂಗಳೂರು ಪ್ಯಾಸೆಂಜರ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳು, ಬೆಂಗಳೂರು-ಕಾರವಾರ ಪಂಚಗಂಗಾ ರೈಲು, ಮುಂಬೈನ ಮತ್ಸ್ಯಗಂಧ ರೈಲು ಸೇರಿದಂತೆ 75 ರೈಲುಗಳು ದಿನವೊಂದಕ್ಕೆ ಓಡಾಡುತ್ತವೆ.

2ನೇ ಪ್ಲ್ರಾಟ್‌ಫಾರಂ ಇಲ್ಲ, ಹಳಿಯಿಂದಲೇ ನೇರ ರೈಲು ಹತ್ತಬೇಕು!

ಈ ನಿಲ್ದಾಣದಲ್ಲಿ ಒಂದು ಪ್ಲ್ರಾಟ್‌ಫಾರಂ ಮಾತ್ರ ಸ್ವಲ್ಪ ವ್ಯವಸ್ಥಿತವಾಗಿದೆ. ಈ ಟ್ರ್ಯಾಕ್‌ನಲ್ಲಿ ರೈಲು ಬಂದರೆ ಓಕೆ. ಅದು ಬಿಟ್ಟು ಇನ್ನೊಂದರಲ್ಲಿ ಬಂದರೆ ದೇವರೇ ಗತಿ. ಯಾಕೆಂದರೆ ಇಲ್ಲಿ ಎರಡನೇ ಪ್ಲ್ರಾಟ್‌ ಫಾರಂ ಇಲ್ಲವೇ ಇಲ್ಲ. ಆಚೆ ಇರುವುದು ಕೇವಲ ಟ್ರ್ಯಾಕ್‌ ಮಾತ್ರ. ಪ್ರಯಾಣಿಕರು ಆ ಟ್ರ್ಯಾಕ್‌ಗೆ ಹೊಗಬೇಕು ಎಂದರೆ ಪ್ಲ್ರಾಟ್‌ ಫಾರಂನಿಂದ ಆಳದಲ್ಲಿರುವ ಒಂದನೇ ಹಳಿಗೆ ಇಳಿಯಬೇಕು. ಅದರಲ್ಲಿ ರೈಲೇನಾದರೂ ನಿಂತಿದ್ದರೆ ಇನ್ನಷ್ಟು ಸಮಸ್ಯೆ.

ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿದು ಕಂಬಿಗಳ ಮಧ್ಯದಲ್ಲಿ ಕೊಳಕಿನ ನಡುವೆ ನಡೆದೇ ಸಾಗಬೇಕು. ಅಲ್ಲಿಂದ ನೆಲದಿಂದಲೇ ನೇರವಾಗಿ ರೈಲನ್ನು ಹತ್ತಬೇಕು. ಇದು ಅನಾರೋಗ್ಯ ಪೀಡಿತರು, ಹಿರಿಯ ನಾಗರಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಹೀಗಾಗಿ ಎರಡನೇ ಫ್ಲಾಟ್‌ ಫಾರ್ಮ್ ತುರ್ತಾಗಿ ನಿರ್ಮಾಣ ವಾಗಿ ಮೇಲ್ಸೇತುವೆ ನಿರ್ಮಾಣವಾದರೆ ವೃದ್ಧರು, ಮಹಿಳೆ- ಮಕ್ಕಳಿಗೆ ಸಹಾಯವಾಗಲಿದೆ.

ಸಂಸದರ ಮೂಲಕ ಕೇಂದ್ರಕ್ಕೆ ಮನವಿ

ಬಾರ್ಕೂರು ರೈಲ್ವೇ ನಿಲ್ದಾಣದ ಅಭಿವೃದ್ಧಿ ಬಗ್ಗೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೀಗ ಮತ್ತೂಮ್ಮೆ ನಮ್ಮ ಸಂಸದರ ಮೂಲಕ ರೈಲ್ವೇ ಸಚಿವರಿಗೆ ಬೇಡಿಕೆಗಳನ್ನು ಸಲ್ಲಿಸಲಾಗುವುದು.

-ಪ್ರಕಾಶ್‌ ಶೆಟ್ಟಿ, ಹೇರಾಡಿ, ಅಧ್ಯಕ್ಷರು, ಯಡ್ತಾಡಿ ಗ್ರಾಮ ಪಂಚಾಯತ್‌

ಬದಲಾವಣೆ ಆಗಲಿ

ಹಳಿ ದಾಟುವುದು ಭಾರಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಎರಡನೇ ಫ್ಲಾಟ್‌ ಫಾರ್ಮ್, ಮೇಲ್ಚಾವಣಿ ವಿಸ್ತರಣೆ ಹಾಗೂ ಪಾರ್ಕಿಂಗ್‌ ಯಾರ್ಡ್‌ ಅಭಿವೃದ್ಧಿ ಸೇರಿದಂತೆ ಒಂದಷ್ಟು ಬದಲಾವಣೆ ಆಗಬೇಕಿದ್ದು ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಬಾರ್ಕೂರು ಶಾಂತರಾಮ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಸಂಸದರಿಗೆ ಬೇಡಿಕೆ ಸಲ್ಲಿಸಲಾಗಿದೆ.

-ಪ್ರಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ರೈಲ್ವೇ ಹಿತರಕ್ಷಣ ಸಮಿತಿ ಪ್ರಮುಖರು

ಪ್ರಮುಖ ಬೇಡಿಕೆಗಳೇನು?

1ಒಂದು ಟ್ರ್ಯಾಕ್‌ನಿಂದ ಇನ್ನೊಂದಕ್ಕೆ ಹೋಗಲು ರೈಲು ಹಳಿಯನ್ನೇ ಬಳಸುವುದು ಅಪಾಯಕಾರಿ. ಹೀಗಾಗಿ

2ನೇ ಪ್ಲ್ರಾಟ್‌ಫಾರಂ, ಮೇಲ್ಸೇತುವೆ ಬೇಕು.

2ನಿಲ್ದಾಣದ ಎಡ ಬಲದಲ್ಲಿ ಸ್ವಲ್ಪ ದೂರಕ್ಕೆ ಮಾತ್ರ ಮೇಲ್ಛಾವಣಿ ಇದೆ. ಬಿಸಿಲು, ಮಳೆಗೆ ನಿಲ್ಲಲು ಸಮಸ್ಯೆ. ಮೇಲ್ಛಾವಣಿ ವಿಸ್ತರಣೆ ಆಗಬೇಕು.

3ಪಾರ್ಕಿಂಗ್‌ ವ್ಯವಸ್ಥೆ ಸರಿಯಾಗಿ ಇಲ್ಲ. ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗದಲ್ಲಿ ಮಳೆಗಾಲದಲ್ಲಿ ನೀರು ನಿಂತು ಕೆಸರುಮಯವಾಗಿರುತ್ತದೆ.

4ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಜತೆಗೆ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಇನ್ನೂ ಹೆಚ್ಚಿನ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು.

5ಈಗ ಕೆಲವೇ ರೈಲುಗಳು ನಿಲ್ಲುತ್ತವೆ. ಹೆಚ್ಚಿನ ರೈಲುಗಳು ನಿಲುಗಡೆಗೆ ಅವಕಾಶ ಸಿಗಬೇಕು.

ರೈಲ್ವೇ ಕ್ರಾಸಿಂಗ್‌ ಸಂದರ್ಭ ಗಡಿಬಿಡಿ

ರೈಲ್ವೇ ಕ್ರಾಸಿಂಗ್‌ ಸಂದರ್ಭದಲ್ಲಿ ಒಂದು ಫ್ಲಾಟ್‌ ಫಾರಂನಿಂದ ಇನ್ನೊಂದು ಫ್ಲಾಟ್‌ ಫಾರಂಗೆ ಹೋಗಬೇಕಾದಾಗ ಫ್ಲಾಟ್‌ ಫಾರಂಗೆ ಇಳಿಯಲು ಸರಿಯಾದ ವ್ಯವಸ್ಥೆ ಇಲ್ಲ ಹಾಗೂ ಕಂಬಿಗಳ ಮಧ್ಯದಲ್ಲಿ ನಡೆದೇ ಸಾಗಬೇಕು ಮತ್ತು ಹೆಚ್ಚು ಸಮಯಾವಕಾಶ ಕೂಡ ಇರುವುದಿಲ್ಲ. ಇಂತಹ ಸಂದರ್ಭ ಹಿರಿಯ ನಾಗರಿಕರು, ಮಹಿಳೆಯರು ಬಿದ್ದು ಗಾಯಗೊಂಡಿದ್ದು, ಕೈ ಮುರಿದುಕೊಂಡ ಉದಾಹರಣೆ ಕೂಡ ಇದೆ.

– ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

Kota-Shrinivas

Manipal: ಕೇಂದ್ರ ಸರಕಾರದ ಯೋಜನೆ ಫ‌ಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ

puttige-5

Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.