ಬಸ್ರೂರು ದೇಗುಲದ ಪ್ರಭಾವಳಿಯಲ್ಲಿ ಶಾಸನ ಪತ್ತೆ
Team Udayavani, Feb 20, 2024, 4:40 PM IST
ಬಸ್ರೂರು: ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುರಾತನ ಕಂಚಿನ ಪ್ರಭಾವಳಿಯಲ್ಲಿ ಶಾಸನ ಪತ್ತೆಯಾಗಿದೆ. ಪ್ರಭಾವಳಿಯ ಹಿಂಭಾಗದಲ್ಲಿ ಮೇಲೆ ಹಾಗೂ ಕೆಳಗಿನ ಭಾಗದಲ್ಲಿಶಾಸನ ಇರುವುದು ಕಂಡು ಬಂದಿದೆ. ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯನ್ನು ನಖರೇಶ್ವರ ಎಂದು ಸಂಬೋಧಿಸಲಾಗಿದೆ. ನಖರ ವ್ಯಾಪಾರಿ ಸಂಘ ಬಸರೂರು ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ತಿಳಿದು ಬಂದಿದೆ.
ಕ್ರಿ.ಶ. 1513-1545ರ ಕಾಲಮಾನದಲ್ಲಿ ತುಳು ರಾಜ್ಯವನ್ನು ಆಳುತ್ತಿದ್ದುದು ಸದಾಶಿವ ನಾಯಕರು ಎನ್ನಲಾಗಿದ್ದು, ಕೆಳದಿಯ ಸದಾಶಿವ ನಾಯಕರು ಹಲವಾರು ಯುದ್ಧಗಳಲ್ಲಿ ತೋರಿಸಿದ ಸಾಹಸದಿಂದಾಗಿ ಅವರಿಗೆ ರಾಯರು ರಾಜ್ಯಪಾಲರ ಹುದ್ದೆ ನೀಡಿ ನಾಯಕ ಹುದ್ದೆ ನೀಡಿದ್ದರು. ಅಂದು ಸದಾಶಿವ ನಾಯಕರು ಬಾರಕೂರು ಮತ್ತು ಮಂಗಳೂರು ರಾಜ್ಯದ ಅಧಿಕಾರ ಹೊಂದಿದ್ದರು ಎಂದು ತಿಳಿದು ಬರುತ್ತದೆ. ತಮ್ಮ ಇಬ್ಬರು ಮಕ್ಕಳಿಗೆ ದೊಡ್ಡ ಸಂಕಣ್ಣ ಮತ್ತು ಚಿಕ್ಕ ಸಂಕಣ್ಣ ಎಂದು ನಾಮಕರಣ ಮಾಡಿರುತ್ತಾರೆ.
ಮಕ್ಕಳು ತಮ್ಮ ಅವಧಿಯಲ್ಲಿ ತಂದೆಯ ಹೆಸರಿನಲ್ಲಿ ಈ ಶಾಸನ ಬರೆಸಿರುವುದು ಕಂಡು ಬರುತ್ತದೆ. ಬಸ್ರೂರಿನಲ್ಲಿ ದೊರೆತ ಪ್ರಭಾವಳಿ ಶಾಸನ ಹೊಸ ಅಧ್ಯಯನಕ್ಕೆ ಸಾಕಷ್ಟು ಅವಕಾಶ ನೀಡಿದೆ. ಐತಿಹಾಸಿಕ ತಾಳೀಕೋಟೆ ಯುದ್ಧದ ತರುವಾಯ ಕೆಳದಿಯ ಸಾಮ್ರಾಜ್ಯ ಗೋವೆಯಿಂದ ಕೇರಳದ ನೀಲೇಶ್ವರದವರೆಗೂ ವಿಸ್ತರಿಸಿತ್ತು ಎಂದೂ ತಿಳಿದುಬರುತ್ತದೆ.
ಈ ಶಾಸನಗಳನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಜಿಲ್ಲಾ ಸಂಚಾಲಕ ಪ್ರದೀಪ್ ಕುಮಾರ್ ಅವರಿಗೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರು ಮಾರ್ಗದರ್ಶನ ನೀಡಿದ್ದು, ಬಸ್ರೂರು ಗ್ರಾ.ಪಂ. ಸದಸ್ಯ ಮಹೇಶ್ ಮೆಂಡನ್ ಸಹಕರಿಸಿದ್ದಾರೆ. ಅಧ್ಯಯನಕ್ಕೆ ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಸದಸ್ಯ ಅಜಯ ಕುಮಾರ್ ಶರ್ಮ ಮತ್ತು ಶ್ರೀಪತಿ ಆಚಾರ್ಯ ಸಹಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.