ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡಲು ಸೂಚನೆ
ಕುಂದಾಪುರ: ಶಾಸಕರಿಂದ ಸಭೆ
Team Udayavani, Apr 14, 2020, 5:05 AM IST
ಕುಂದಾಪುರ: ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್ ಉಲ್ಲಂಘನೆ ಯಾಗದಂತೆ, ಕಾನೂನು ಮೀರದಂತೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್‌ನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ಕೃಷಿಗೆ ಸಂಬಂಧಪಟ್ಟ ಅಂಗಡಿಗಳನ್ನು ತೆರೆಯಲು, ವಾಹನಗಳನ್ನು ಕೊಂಡೊ ಯ್ಯಲು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಗಳ ಸಾಗಾಟದ ವಾಹನಕ್ಕೆ ರೈತರಿಗೆ ಪಾಸ್ ನೀಡಲಾಗಿದೆ. ಕುಂದಾಪುರ ಹೋಬಳಿ ಯಲ್ಲಿ ಕೃಷಿ ಸಂಬಂಧಿ 7 ಅಂಗಡಿಗಳಿಗೆ ಪಾಸ್ ನೀಡಲಾಗಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯವರು ಹೇಳಿ ದರು. ಸ್ಥಳೀಯವಾಗಿ ಅನುಮತಿ ಬೇಕಿದ್ದರೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಮಾಹಿತಿ ನೀಡಿ ಪಡೆಯಲು ಶಾಸಕರು ಎಎಸ್‌ಪಿ ಅವರಿಗೆ ಸೂಚಿಸಿದರು. ಲಾಕ್‌ಡೌನ್ ಆರಂಭವಾದ ಬಳಿಕ ಕುಂದಾಪುರ ಹೋಬಳಿಗೆ 11,539, ಕೋಟ ಹೋಬಳಿಗೆ 4,124 ಮಂದಿ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದಾರೆ. 339 ಮಂದಿ ವಿದೇಶದಿಂದ ಬಂದವರ ಪೈಕಿ ಕುಂದಾಪುರ ಹೋಬಳಿ 2, ಕೋಟ ಹೋಬಳಿ 15 ಹೈ ರಿಸ್ಕ್ ಪ್ರಕರಣಗಳು, ಕ್ರಮವಾಗಿ 22 ಹಾಗೂ 130 ಲೋ ರಿಸ್ಕ್ ಪ್ರಕರಣಗಳಿದ್ದವು. ಇನ್ನು 12 ಜನರ ವರದಿ ಬರಬೇಕಿದೆ. ಒಂದು ಹಂತದ ಹೋಮ್ ಕ್ವಾರಂಟೈನ್ ಅವಧಿ ಪೂರ್ಣವಾಗಿದ್ದು ಎರಡನೇ ಹಂತದಲ್ಲಿ ಕೆಲವರು ಇದ್ದಾರೆ. ಪುರುಷ ಆರೋಗ್ಯ ಸಹಾಯಕರು, ಲ್ಯಾಬ್ ಟೆಕ್ನಿಶಿಯನ್ ಸೇರಿದಂತೆ ಹುದ್ದೆಗಳ ಕೊರತೆ ಇದೆ ಎಂದು ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಶಾಸಕರ ಗಮನಕ್ಕೆ ತಂದರು. ತೂಕ ಮತ್ತು ಅಳತೆಗೆ ಸಂಬಂಧಿಸಿ ಕುಂದಾಪುರದಲ್ಲಿ 4 ಪ್ರಕರಣ ದಾಖಲಿಸಲಾಗಿದೆ ಎಂದು ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಸಹಾಯಕ ಕಮಿಷನರ್ ಕೆ. ರಾಜು, ಎಎಸ್‌ಪಿ ಹರಿರಾಮ್ ಶಂಕರ್, ಕುಂದಾಪುರ ಇಒ ಕೇಶವ ಶೆಟ್ಟಿಗಾರ್, ಬೈಂದೂರು ಇಒ ಭಾರತಿ, ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಪಶುವೈದ್ಯಾಧಿಕಾರಿ ಡಾ| ಸೂರ್ಯನಾರಾಯಣ ಉಪಾಧ್ಯಾಯ, ಕೃಷಿ ಸಹಾಯಕ ನಿರ್ದೇಶಕಿ ರೂಪಾ ಮಾಡ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ, ಎಪಿಎಂಸಿ ಕಾರ್ಯದರ್ಶಿ ದೀಪ್ತಿ, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಿಕೃಷ್ಣ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ವಿವಿಧ ಠಾಣೆಗಳ ಎಸ್‌ಐಗಳು, ಇತರ ಅಧಿಕಾರಿಗಳಿದ್ದರು.
ಜ್ವರ ಚಿಕಿತ್ಸಾಲಯ
ಉಡುಪಿ ಜಿಲ್ಲೆಯ 10 ಕಡೆ ಜ್ವರ ಚಿಕಿತ್ಸಾಲಯ ಮಾಡಲು ಸೂಚನೆ ಬಂದಿದ್ದು ಸಾಕಷ್ಟು ಪ್ರಮಾಣದಲ್ಲಿ ಕಿಟ್‌ಗಳ ಲಭ್ಯತೆ ಇಲ್ಲದ ಕಾರಣ ಉಡುಪಿ, ಕಾರ್ಕಳ, ಕುಂದಾಪುರ ಸರಕಾರಿ ಆಸ್ಪತ್ರೆಗಳಲ್ಲಿ ಜ್ವರ ಚಿಕಿತ್ಸಾಲಯ ಆರಂ ಭಿಸಲಾಗಿದೆ. ಆರ್‌ಆರ್ ಕಿಟ್‌ಗಳನ್ನು ನೀಡಿದ ಕೂಡಲೇ ಜಿಲ್ಲೆಯ 70 ಪ್ರಾ.ಆ. ಕೇಂದ್ರಗಳಲ್ಲೂ ಜ್ವರ ರೋಗಿಗಳ ತಪಾಸಣೆ ನಡೆಸಬಹುದು. ಅಲ್ಲಿವರೆಗೆ ಜ್ವರ ರೋಗಿಗಳ ತಪಾಸಣೆ ಈ ಮೂರು ಕಡೆ ಮಾತ್ರ ನಡೆಸಲಾಗುತ್ತದೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.