ಲಕ್ಷ್ಮೀನಾರಾಯಣ ಆಚಾರ್ಯರಿಗೆ ಜಕಣಾಚಾರಿ ಪ್ರಶಸ್ತಿ
Team Udayavani, Jul 12, 2019, 10:37 AM IST
ಕೋಟೇಶ್ವರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2018ನೇ ಸಾಲಿನ ಶಿಲ್ಪಕಲಾ ಕ್ಷೇತ್ರದ ಜಕಣಾಚಾರಿ ಪ್ರಶಸ್ತಿಗೆ ಕೋಟೇಶ್ವರದ ಹಿರಿಯ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಪಾತ್ರರಾಗಿದ್ದಾರೆ.
ರಥಶಿಲ್ಪದಲ್ಲಿ ತನ್ನದೇ ಆದನ್ನು ಛಾಪನ್ನು ಬೀರಿರುವ ಲಕ್ಷ್ಮೀನಾರಾಯಣ ಆಚಾರ್ಯ ಅವರು 1982ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1990ರಲ್ಲಿ ರಾಷ್ಟ್ರ ಪ್ರಶಸ್ತಿ, 2006ರಲ್ಲಿ ಶಿಲ್ಪಗುರು ಪ್ರಶಸ್ತಿ ಪುರಸ್ಕೃತರಾಗಿದ್ದರು.
ಕೋಟೇಶ್ವರದ ನಿವಾಸಿ ದಿ| ತಲ್ಲೂರು ರಾಮಾಚಾರ್ಯ- ಜಾನಕಿ ಅವರ ಪುತ್ರ ಲಕ್ಷ್ಮೀನಾರಾಯಣ ಅವರು ಕುಲಕಸುಬನ್ನು ಮುಂದುವರಿಸಿದ್ದಲ್ಲದೆ, ರಥನಿರ್ಮಾಣದಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ವಿವಿಧ ದೇಗುಲಗಳ ರಥ ನಿರ್ಮಾಣ ವಿನ್ಯಾಸದ ಬಗ್ಗೆ ತಿಳಿದು ಕೊಂಡಿದ್ದರು. ಅಗತ್ಯವಾದ ಗೃಹ ವಾಸ್ತು ದರ್ಪಣ ಅಲ್ಲದೇ ಅದಕ್ಕೆ ಪೂರಕವಾದ ಹಲವು ಗ್ರಂಥಗಳನ್ನು ಸಂಗ್ರಹಿಸಿದ್ದರು.
ರಥದ ಮಾದರಿ ಮತ್ತು ಶಿಲಕ³ಲಾ ನೈಪುಣ್ಯವನ್ನು ತೋರಿಸುವ ವಿವಿಧ ಕಲಾ ಪ್ರಕಾರಗಳ ಮಾದರಿ ರಚಿಸಿ ಕನ್ನಡ ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಕೋಟೇಶ್ವರದಲ್ಲಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ ನಿರ್ಮಿಸಿ ಅಲ್ಲೇ ಕಾರ್ಯ ನಿರತರಾಗಿದ್ದಾರೆ.
127 ರಥ ನಿರ್ಮಾಣ
ಈವರೆಗೆ 127 ರಥವನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ಕುಕ್ಕೆಯ ಬೃಹತ್ ಬ್ರಹ್ಮರಥವೂ ಸೇರಿದೆ. ಕುಕ್ಕೆ ಕ್ಷೇತ್ರದ ಚಿನ್ನದ ರಥ ನಿರ್ಮಾಣ ಹಂತದಲ್ಲಿದೆ. ಬ್ರಹ್ಮರಥ, ಪುಷ್ಪರಥ, ಬೆಳ್ಳಿರಥ ಮತ್ತು ಚಿನ್ನದ ರಥವನ್ನು ನಿರ್ಮಿಸಿರುವ ಆಚಾರ್ಯರು ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದು ಕುಂಬಾಶಿ ಮಂಡಲಪ್ರಧಾನರಾಗಿ, ಗೋಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ನಾನು ಯಾವುದೇ ಪ್ರಶಸ್ತಿಗಾಗಿ ರಥ ನಿರ್ಮಿಸುತ್ತಿಲ್ಲ. ಶಿಲ್ಪಕಲಾ ಶಾಸ್ತ್ರದಲ್ಲಿ ವಿಶೇಷತೆ ಇರಬೇಕು; ರಥ ನಿರ್ಮಾಣ ಕಾರ್ಯವು ಭಕ್ತರ ಇಷ್ಟಾರ್ಥ ಪೂರೈಸುವ ಮಾದರಿಯಲ್ಲಿರಬೇಕು.
– ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.