ಇಂದು ಜನತಾ ಕರ್ಫ್ಯೂ: ಎಲ್ಲೆಡೆ ವ್ಯಾಪಕ ಬೆಂಬಲ
ಶನಿವಾರವೇ ದಿನಸಿ ಖರೀದಿಯಲ್ಲಿ ತೊಡಗಿದ ಜನ
Team Udayavani, Mar 22, 2020, 4:51 AM IST
ಕುಂದಾಪುರ: ಕೋವಿಡ್- 19 ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಮಾ. 22ಕ್ಕೆ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಇದಕ್ಕೆ ಕುಂದಾಪುರದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಗತ್ಯದ ಮಳಿಗೆಗಳು ಬಿಟ್ಟು, ಉಳಿದೆಲ್ಲವೂ ಬಂದ್ ಆಗುವ ಸಾಧ್ಯತೆಯಿದೆ.
ಕುಂದಾಪುರ ಭಾಗದ ಬಹುತೇಕ ಎಲ್ಲ ಅಂಗಡಿ – ಮುಂಗಟ್ಟುಗಳು ರವಿವಾರ ಮುಚ್ಚುವ ಸಾಧ್ಯತೆಯಿದೆ. ಹೊಟೇಲ್‌ಗಳು, ಮೀನು ಮಾರುಕಟ್ಟೆಗಳು ಕೂಡ ಬಂದ್ ಆಗಿರಲಿವೆ. ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು, ಕಾರು, ರಿಕ್ಷಾ ಸಹಿತ ಹೆಚ್ಚಿನೆಲ್ಲ ವಾಹನಗಳು ಕೂಡ ರಸ್ತೆಗಿಳಿಯಲ್ಲ.
ಐಎಂಎ ಬೆಂಬಲ
ಜನತಾ ಕರ್ಫ್ಯೂಗೆ ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಕುಂದಾಪುರ ತಾಲೂಕು ಸಮಿತಿ ಕೂಡ ಬೆಂಬಲ ವ್ಯಕ್ತಪಡಿಸಿದೆ. ಆದರೆ ತುರ್ತು ಪ್ರಕರಣಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. ಆದರೆ ಒಪಿಡಿ ವಿಭಾಗ ತೆರೆದಿರುವುದಿಲ್ಲ. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳನ್ನು ವೈದ್ಯರು ಬೆಳಗ್ಗೆ 6 – 7 ಗಂಟೆಯೊಳಗೆ ತಪಾಸಣೆ ಮಾಡುತ್ತೇವೆ. ಆ ಬಳಿಕ ಸಂಜೆ ಅನಂತರ ತಪಾಸಣೆ ನಡೆಸಲಾಗುವುದು ಎಂದು ಕುಂದಾಪುರದ ಭಾರತೀಯ ವೈದ್ಯಕೀಯ ಸಂಘಟನೆಯ ಅಧ್ಯಕ್ಷೆ ಶ್ರೀದೇವಿ ಕಟ್ಟೆ ತಿಳಿಸಿದ್ದಾರೆ.
ಮೀನಿಗೆ ಭಾರೀ ಬೇಡಿಕೆ
ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರವಿವಾರ ಮೀನು ಮಾರುಕಟ್ಟೆಗಳಲ್ಲಿ ಮೀನು ಮಾರಾಟ ಇಲ್ಲದಿರುವ ಕಾರಣ ಶನಿವಾರವೇ ಮೀನು ಖರೀದಿಗೆ ಜನ ಮುಗಿ ಬಿದ್ದದ್ದು ಕಂಡುಬಂತು. ಕುಂದಾಪುರದ ಮೀನು ಮಾರುಕಟ್ಟೆಗಳಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು.
ದಿನಸಿ ಅಂಗಡಿಯಲ್ಲಿಯೂ ವ್ಯಾಪಾರ
ದಿನಸಿ ವಸ್ತುಗಳು ರವಿವಾರ ಸಿಗದ ಹಿನ್ನೆಲೆಯಲ್ಲಿ ಹೆಚ್ಚಿನೆಲ್ಲ ದಿನಸಿ ಅಂಗಡಿ, ತರಕಾರಿ, ಹಣ್ಣುಗಳ ಅಂಗಡಿಗಳಲ್ಲಿ ಶನಿವಾರವೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಖರೀದಿಸುತ್ತಿದ್ದರು. ಅದರಲ್ಲೂ ಸಂಜೆ ವೇಳೆ ಅಂತೂ ಜನ ದಿನಬಳಕೆಯ ಸಾಮಗ್ರಿಗಳನ್ನು ಖರೀದಿಸಲು ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕುಂದಾಪುರದ ವಾರದ ಸಂತೆ ಇಲ್ಲದಿರುವ ಕಾರಣ ಕೂಡ ಅಂಗಡಿಗಳಿಗೆ ಉತ್ತಮ ವ್ಯಾಪಾರ ಇತ್ತು ಎನ್ನಲಾಗಿದೆ.
ಏನೆಲ್ಲ ಇರುತ್ತೆ?
ಮೆಡಿಕಲ್ ಮಳಿಗೆಗಳು, ಹಾಲಿನ ಅಂಗಡಿಗಳು, ದಿನಪತ್ರಿಕೆ ಮಾರಾಟ ಮಳಿಗೆ, ಆಸ್ಪತ್ರೆಗಳು, ಕ್ಲಿನಿಕ್, ಆ್ಯಂಬುಲೆನ್ಸ್.
ಮೀನುಗಾರಿಕೆಯೂ ಇಲ್ಲ
ಜನತಾ ಕರ್ಫ್ಯೂಗೆ ಎಲ್ಲ ಮೀನುಗಾರರಿಂದಲೂ ಬೆಂಬಲ ವ್ಯಕ್ತವಾಗಿದ್ದು, ರವಿವಾರ ಎಲ್ಲ ಬೋಟು, ದೋಣಿಗಳು ಕಡಲಿಗಿಳಿಯದಿರಲು ನಿರ್ಧರಿಸಿವೆ. ರವಿವಾರ ಗಂಗೊಳ್ಳಿ, ಮರವಂತೆ, ಕೊಡೇರಿ ಸಹಿತ ಎಲ್ಲ ಕಡೆಗಳಲ್ಲಿ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಯುವುದಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. ಗಂಗೊಳ್ಳಿಯಲ್ಲಿ ಶನಿವಾರವೇ ಹೆಚ್ಚಿನ ಬೋಟು, ದೋಣಿಗಳು ದಡದಲ್ಲಿ ಲಂಗರು ಹಾಕಿದ್ದವು.
ಅಂಗಡಿ ಬಂದ್
ರವಿವಾರ ಜನತಾ ಕರ್ಫ್ಯೂಗೆ ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ, ಸಿದ್ದಾಪುರ, ಬೈಂದೂರು ಸಹಿತ ಎಲ್ಲ ಕಡೆಗಳ ಅಂಗಡಿಗಳ ವ್ಯಾಪಾರಸ್ಥರು ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಅಂಗಡಿಗಳು ತೆರೆದಿರುವುದಿಲ್ಲ.
-ವಿಟ್ಟಲ ಶೆಣೈ ಗಂಗೊಳ್ಳಿ , ಜಿಲ್ಲಾ ವರ್ತಕರ ಸಂಘದ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.