ಈ ಬಾರಿ ಆನ್‌ಲೈನ್‌ನಲ್ಲಿ ಮೂಡಿಬರಲಿದೆ ಕುಂದಾಪ್ರ ಕನ್ನಡದ ಕಂಪು


Team Udayavani, Jul 18, 2020, 11:49 AM IST

ಈ ಬಾರಿ ಆನ್‌ಲೈನ್‌ನಲ್ಲಿ ಮೂಡಿಬರಲಿದೆ ಕುಂದಾಪ್ರ ಕನ್ನಡದ ಕಂಪು

ಕುಂದಾಪುರ: ಕುಂದ ಗನ್ನಡದ ಭಾಷೆ, ಸಂಸ್ಕೃತಿಯ ಸೊಬ ಗನ್ನು ವಿಶ್ವದೆಲ್ಲೆಡೆ ಪಸರಿಸುವ, ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಕಳೆದ ವರ್ಷದಿಂದ ಕುಂದಾಪ್ರ ಕನ್ನಡ ದಿನಾಚರಣೆ ಎನ್ನುವ ವಿಶಿಷ್ಟ ಕಾರ್ಯಕ್ರಮ ಕುಂದಗನ್ನಡಿಗರಿಂದ ಆಯೋಜಿಸಲ್ಪ ಡುತ್ತಿದೆ. ಆಸಾಡಿ ಅಮಾಸಿ ಬಂತು ಎಂದರೆ ಈಗ ನೆನಪಾಗೋದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ. ಈ ಬಾರಿ ಕೊರೊನಾ ಲಾಕ್‌ಡೌನ್‌, ಗಡಿ ಸೀಲ್‌ಡೌನ್‌, ಸೆಕ್ಷನ್‌ 144 ಜಾರಿ ಮೊದಲಾದ ನಿರ್ಬಂಧಗಳು ಇರುವ ಕಾರಣ ಆನ್‌ಲೈನ್‌ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಜು.20ರಂದು ಜಾಲತಾಣ ಗಳಲ್ಲಿ ನಡೆಯಲಿದೆ.

ಹೇಗಾಯ್ತು
ಕಳೆದ ವರ್ಷ ಒಂದಷ್ಟು ಮಂದಿ ಯುವಕರು ತಮ್ಮ ತಮ್ಮಲ್ಲೇ ಚರ್ಚಿಸಿ ಹೀಗೊಂದು ದಿನಾಚರಣೆ ಮಾಡುವ ಬಗೆಯನ್ನು ಮಾತನಾಡಿಕೊಂಡರು. ದಿನ ಹೋದಂತೆ ಅದು ಬೃಹದಾಕಾರವಾಯಿತು. ಪ್ರಪಂಚದ ನಾನಾ ಕಡೆಗಳಿಂದ, ಕುಂದಾಪುರದ ಬೇರಿ ನಿಂದ ಹೊರಟು ಎಲ್ಲೆಡೆ ಚದುರಿದ ಚಟು ವಟಿಕೆ ನಿರತರಿಂದ, ಸೆಲೆಬ್ರಿಟಿಗಳಿಂದ, ಸಂಘಟನೆಗಳಿಂದ ಅಭೂತಪೂರ್ವ ಬೆಂಬಲ ದೊರೆಯಿತು. ಉಡುಪಿ ಜಿಲ್ಲೆಯ ನಾನಾ ಕಡೆ ಮಾತ್ರವಲ್ಲ ದ.ಕ., ಬೆಂಗಳೂರು, ಮುಂಬಯಿ, ಪುಣೆ, ಬಹ್ರೈನ್‌, ದುಬಾೖ ಹೀಗೆ ವಿಶ್ವದ ನಾನಾ ಕಡೆ ವಿಶ್ವ ಕುಂದಾಪ್ರ ಕನ್ನಡ ದಿನದ ಆಚರಣೆ ನಡೆಯಿತು. ಕುಂದಾಪ್ರ ಕನ್ನಡದ ಕುರಿತು ಚರ್ಚೆಗಳು ನಡೆದವು. ಭಾಷಾ ಸೊಗಡಿನ ಗಾದೆ, ಸಾಹಿತ್ಯ, ಕಥೆ, ಕವನ, ಪ್ರೇಮಪತ್ರ, ಅಬ್ಬಿಗೊಂದು ಪತ್ರ, ಲೇಖನ, ಮಾತು, ಹಳೆಯದಾದ ಬಳಕೆಯಲ್ಲಿಲ್ಲದ ಶಬ್ದಗಳು ಚಾಲನೆಗೆ ಬಂದವು. ಅನಂತರದ ದಿನಗಳಲ್ಲಿ ಕುಂದಗನ್ನಡ ನಿಘಂಟು ಆ್ಯಪ್‌ ಬಂತು. ಯಾವುದೇ ಒಂದು ನಿರ್ದಿಷ್ಟ ಸಂಘಟನೆಯಿಲ್ಲದೆ, ಎಲ್ಲರೂ ಮುಕ್ತವಾಗಿ, ಸಾಮೂಹಿಕವಾಗಿ ಆಚರಿಸುವ ದಿನವಾಗಿ ಮಾರ್ಪಾಡಾಯಿತು.

ಆಸಾಡಿ ಅಮಾಸಿ
ಮಳೆಗಾಲದಲ್ಲಿ ಹಬ್ಬಗಳು ಇರುವುದಿಲ್ಲ, ಜಾತ್ರೆಯಂತಹ ಆಚರಣೆ ಕೆಲವು ಕಡೆಗಷ್ಟೇ ಸೀಮಿತ. ಆಸಾಡಿ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆ ಇಲ್ಲಿನ ಜನರ ಪಾಲಿಗೆ ಶ್ರೇಷ್ಠ ದಿನ. ಹಾಗಾಗಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂದೇ ಪ್ರತಿವರ್ಷ ನಡೆಸುವುದು ಎಂದು ಆರಂಭಿಸಲಾಗಿದೆ.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ಸಭಾ ಕಾರ್ಯಕ್ರಮ ನಡೆಯುವುದಿಲ್ಲ. ಆದರೆ ಆನ್‌ಲೈನ್‌ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಕರು ಹಮ್ಮಿಕೊಂಡಿದ್ದಾರೆ. ಕುಂದಾಪ್ರ ಕನ್ನಡದ ಮೇಲೆ ಅಭಿಮಾನ ಉಳ್ಳ ಯಾರು ಬೇಕಾದರೂ ಎಲ್ಲಿ ಬೇಕಾದರೂ ಅವರದ್ದೇ ಮಾದರಿಯಲ್ಲಿ ಅನುಸರಿಸಬಹುದಾದ ಕಾರ್ಯಕ್ರಮವಾಗಿದೆ. ಕುಂದಾಪ್ರ ಕನ್ನಡ ನಮ್ಮದು ಎಂಬ ಹೆಮ್ಮೆಯಿಂದ ಮೆರೆಸುವ ಕಾರ್ಯವಾಗಬೇಕು ಎಂಬ ನಿಟಿ rನಲ್ಲಿ ಈ ದಿನ ಆಚರಿಸಲು ಜನರೆಲ್ಲ ಮುಂದಾಗಿದ್ದಾರೆ.

ಈ ಬಾರಿ ಏನೆಲ್ಲ ವಿಶೇಷ ?
ಕುಂದಗನ್ನಡವನ್ನು ಬರಹದ ಭಾಷೆಯಾಗಿ ಬಳಕೆ ಮಾಡಬೇಕು ಹಾಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ನೆನಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅಬ್ಬಿಗೊಂದು ಪತ್ರ ಎನ್ನುವ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಕುಂದಾಪ್ರದ ಖಾದ್ಯಗಳನ್ನು ಮನೆಯಲ್ಲೇ ಮಾಡಿ ಅದನ್ನು ತಯಾರಿಸುವ ವಿಧಾನ ಹೇಗೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಸ್ಪರ್ಧೆ ಹಾಗೂ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ಚೆನ್ನಮಣೆ, ಪೇಡಗಾ ಮುಂತಾದ ಆಟಗಳನ್ನು ಮಕ್ಕಳ ಮೂಲಕ ಆಡಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ಕುಂದಾಪ್ರ ಭಾಷೆಯ ಡಬ್‌ಮ್ಯಾಶ್‌, ವೀಡಿಯೋಗಳನ್ನು ಹಂಚಿಕೊಳ್ಳುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಟಾಪ್ ನ್ಯೂಸ್

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್‌.ಎನ್‌. ನಾಗಮೋಹನ್‌ ದಾಸ್‌ ಅಧ್ಯಕ್ಷ?

tirupati

Supreme Court; ಧರ್ಮಕ್ಕೊಂದು ರಾಜ್ಯ ಕೂಡದು: ತಿರುಪತಿ ಕುರಿತ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್‌ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್‌ ಶೆಟ್ಟಿ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Sukhu

Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?

ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ : ಸಚಿವ

Minister Sudhakar: ಸೀಟ್‌ ಬ್ಲಾಕಿಂಗ್‌ ದಂಧೆ ವಿರುದ್ಧ ಕ್ರಿಮಿನಲ್‌ ಕೇಸ್‌ ಅಸ್ತ್ರ

Donald-Trumph

Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ

Ajit Pawar

Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್‌: ಮಹಾಯುತೀಲಿ ಬಿರುಕು?

canada

Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.