Karkala: ಅನಂತಶಯನ ಗುಡ್ಡೆಯಂಗಡಿ ರಸ್ತೆ ದುಃಸ್ಥಿತಿ; ಸವಾರರಿಗೆ ಪ್ರಾಣಸಂಕಟ
ದಿನ ಕಳೆದಂತೆ ದೊಡ್ಡದಾಗುತ್ತಿರುವ ಗುಂಡಿಗಳು; ಡಾಮರು ಕಾಮಗಾರಿ ನಡೆಸುವಂತೆ ಸ್ಥಳೀಯರ ಆಗ್ರಹ
Team Udayavani, Nov 27, 2024, 2:22 PM IST
ಕಾರ್ಕಳ: ಪುರಸಭೆ ವ್ಯಾಪ್ತಿ ಅನಂತಶಯನದಿಂದ ಗುಡ್ಡೆಯಂಗಡಿವರೆಗಿನ ರಸ್ತೆ ಅಲ್ಲಲ್ಲಿ ಹದಗೆಟ್ಟು ಹೋಗಿದ್ದು, ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ಬೃಹತ್ ಗಾತ್ರದ ಹೊಂಡ, ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ತೆಳ್ಳಾರು, ದುರ್ಗ, ಶಿರ್ಲಾಲು ಗ್ರಾಮಗಳಿಗೆ ಕಾರ್ಕಳ ಪೇಟೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ಮಂದಿ ಸಾರ್ವಜನಿಕರು ಈ ರಸ್ತೆ ಓಡಾಡಬೇಕಿದೆ. ಕಾರು, ಸಹಿತ ಇತರೆ ಸರಕು ವಾಹನಗಳು ಬಸ್ಸುಗಳಿಗೆ ಈ ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚಾರ ಸಂಕಷ್ಟಕರವಾಗಿ ಪರಿಣಮಿಸಿದೆ.
ಮಳೆಗಾಲ ಆರಂಭವಾದಂದಿನಿಂದ ಬೃಹದಾಕಾರದ ಹೊಂಡಗಳು ರಸ್ತೆಯುದ್ದಕ್ಕೂ ಕಾಣಿಸಿಕೊಂಡಿದ್ದು, ಗುಂಡಿಗಳು ದಿನ ಕಳೆದಂತೆ ದೊಡ್ಡದಾಗುತ್ತಿದೆ.
ಗಾಜ್ರಿಯ ಆಸ್ಪತ್ರೆ, ವೃದ್ಧಾಶ್ರಮ, ಗೋ-ಶಾಲೆ ಹಲವಾರು ಪೂಜಾ ಸ್ಥಳಗಳು, ವಿದ್ಯಾಕೇಂದ್ರಗಳು, ಪುರಸಭೆ ಪಂಪ್ ಹೌಸ್, ದುರ್ಗ ಫಾಲ್ಸ್ ಸೇರಿದಂತೆ ಎಲ್ಲಾ ಕಡೆಗಳಿಗೂ ಈ ರಸ್ತೆ ಸಂಪರ್ಕ ರಸ್ತೆ ಮುಖ್ಯವಾಗಿದೆ.
ಪುರಸಭೆಗೂ ಮನವಿ
ಶೀಘ್ರ ಹೊಂಡ-ಗುಂಡಿಗಳನ್ನು ಮುಚ್ಚಿ ಡಾಮರೀಕರಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸಾರ್ವಜನಿಕ ವಲಯ ದಿಂದಲೂ ಈ ಬಗ್ಗೆ ಕಾರ್ಕಳ ಪುರಸಭೆಗೂ ಮನವಿ ಸಲ್ಲಿಸಲಾಗಿದೆ. ಶೀಘ್ರ ರಸ್ತೆಯನ್ನು ವ್ಯವಸ್ಥಿತಗೊಳಿಸಿಕೊಡುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ಯಮಕೂಪ
ದ್ವಿಚಕ್ರ ವಾಹನ ಸವಾರರಿಗೆ ಈ ಗುಂಡಿ ಯಮಕೂಪವಾಗಿದೆ. ರಾತ್ರಿ ವೇಳೆ ಕೊಂಚ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಈಗಾಗಲೆ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪುರಸಭೆ ವ್ಯಾಪ್ತಿ ರಸ್ತೆಗಳ ದುರಸ್ತಿ ಕಾರ್ಯ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ, ಹಂತಹಂತವಾಗಿ ಕಾಮಗಾರಿ ನಡೆಸಲಾಗುತ್ತದೆ. ವ್ಯವಸ್ಥಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು.
-ಯೋಗೀಶ್ ದೇವಾಡಿಗ, ಅಧ್ಯಕ್ಷರು, ಪುರಸಭೆ, ಕಾರ್ಕಳ
ಸಾಕಷ್ಟು ಮಂದಿ ಪೆಟ್ಟು ಮಾಡಿಕೊಂಡಿ ದ್ದಾರೆ. ಅನಂತಶಯನ ಗುಡ್ಡೆಯಂಗಡಿ ರಸ್ತೆ ಅರ್ಧ ಕಿ. ಮೀ. ತೀರ ಹದಗೆಟ್ಟಿದೆ. ಈ ರಸ್ತೆಯಲ್ಲಿ ಗುಂಡಿಗಳಿಂದ ಸಾಕಷ್ಟು ಮಂದಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಪುರಸಭೆಗೆ ಈಗಾಗಲೆ ಮನವಿ ಮಾಡಲಾಗಿದೆ. ಇದೇ ಮಾರ್ಗದಲ್ಲಿ ನೀರಿನ ಮುಖ್ಯ ಪೈಪ್‌ಲೈನ್ ಕೆಲಸ ನಡೆಯಲು ಬಾಕಿ ಇದ್ದು, ಈ ಕಾಮಗಾರಿ ಅನಂತರ ರಸ್ತೆ ಅಭಿವೃದ್ಧಿಗೊಳಿಸುವ ಕೆಲಸ ಆಗಬೇಕಿದೆ. ಎರಡು ಕಾಮಗಾರಿ ಶೀಘ್ರವಾಗಿ ನಡೆಯಬೇಕು.
-ಎಸ್. ಪಾರ್ಶ್ವನಾಥ್ ವರ್ಮ, ಮಾಜಿ ಸದಸ್ಯರು, ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malayalam; ಹೋಟೆಲ್ ರೂಂನಲ್ಲಿ ಶ*ವವಾಗಿ ಪತ್ತೆಯಾದ ಖ್ಯಾತ ನಟ ದಿಲೀಪ್ ಶಂಕರ್
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.