Karkala: ಸೆಲ್ಫಿ ಕಾರ್ನರ್‌ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!

ನೀರೆ ಗ್ರಾ.ಪಂ.ನ ಉತ್ತಮ ಪರಿಕಲ್ಪನೆಗೂ ಕಲ್ಲು ಹಾಕುತ್ತಿರುವ ಕಿಡಿಗೇಡಿಗಳು; ಈಗ 360 ಡಿಗ್ರಿ ಕೆಮರಾ ಅಳವಡಿಕೆ; ಕಾರ್ಕಳ ಬಸ್‌ ನಿಲ್ದಾಣ ಪರಿಸರವನ್ನೇ ತಿಪ್ಪೆ ಗುಂಡಿ ಮಾಡಿದ ಜನ; ನಲ್ಲೂರಿನ ಟ್ರೀಪಾರ್ಕ್‌ ಪರಿಸರದಲ್ಲೂ ಕಸದ ಗುಡ್ಡೆ

Team Udayavani, Nov 8, 2024, 12:56 PM IST

2(1)

ಕಾರ್ಕಳ: ಸುಂದರ ಸ್ಥಳ, ಪ್ರವಾಸೋದ್ಯಮ ಕ್ಷೇತ್ರ, ಸಾರ್ವಜನಿಕ ಬಸ್‌ ನಿಲ್ದಾಣ ಇದ್ಯಾವುದೋ ಕೆಲವರಿಗೆ ಲೆಕ್ಕಕ್ಕೆ ಬರುವುದಿಲ್ಲ. ಸಾರ್ವಜನಿಕ ದುಷ್ಪರಿಣಾಮಗಳ ಬಗ್ಗೆ ಯೋಚಿಸದೇ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಜನರ, ಪ್ರವಾಸಿಗರ ಮನಸ್ಥಿತಿ ಎಷ್ಟೇ ಅರಿವು, ಜಾಗೃತಿ ಮೂಡಿಸಿದರೂ ಬದಲಾಗುತ್ತಿಲ್ಲ. ಇದು ಕಾರ್ಕಳದ ಹಲವು ಭಾಗಗಳಲ್ಲಿ ಕಂಡುಬಂದ ಸ್ಥಿತಿಗತಿ.

ಕಾರ್ಕಳ-ಉಡುಪಿ ಮುಖ್ಯರಸ್ತೆಯಲ್ಲಿ ನೀರೆ ಬಳಿ ರಸ್ತೆ ಬದಿ ಅರಣ್ಯ ಪ್ರದೇಶದಲ್ಲಿ ಜನರು ಕಸ ಎಸೆಯುತ್ತಿದ್ದು, ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಲಾಗಿತ್ತು. ಈ ಜಾಗದಲ್ಲಿ ತಿಂಗಳಿಗೆ 200-300 ಕೆಜಿ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ಪ್ರದೇಶವನ್ನು ಸ್ವತ್ಛಗೊಳಿಸಿ ಸೆಲ್ಫಿ ಕಾರ್ನರ್‌ ಮಾಡಲಾಗಿತ್ತು. ಬೆಂಚ್‌ ಅಳವಡಿಸಿ, ಟಯರ್‌ಗಳಿಗೆ ಬಣ್ಣ ಬಳಿದು ಸುಂದರಗೊಳಿಸಲಾಗಿತ್ತು. ಈ ಭಾಗದಲ್ಲಿ ನಿಂತರೆ ಅರಣ್ಯದ ಸುಂದರ ಚಿತ್ರಣ ಕಾಣಿಸುತ್ತದೆ.

ಗ್ರಾಮ ಪಂಚಾಯತ್‌ ಉತ್ತಮ ಪರಿಕಲ್ಪನೆ ಮೂಲಕ ಜಾಗೃತಿ ಮೂಡಿಸಿತಾದರೂ ಕೆಲವು ಕಿಡಿಗೇಡಿಗಳು ಆಗಾಗ ತ್ಯಾಜ್ಯ ಎಸೆಯುವುದನ್ನು ಮುಂದುವರಿಸಿದ್ದಾರೆ. ಪ್ರವಾಸಿಗರು ಅಲ್ಲಿಯೇ ಊಟ, ತಿಂಡಿ ಸೇವಿಸಿ ತಟ್ಟೆ ಎಸೆಯುವುದು, ಆಹಾರ ಪದಾರ್ಥ ಚೆಲ್ಲುವುದು ಮಾಡುತ್ತಿದ್ದಾರೆ. ಈಗ ಪಂಚಾಯತ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 360 ಡಿಗ್ರೀ ಸಿಸಿ ಟಿವಿ ಕೆಮರಾ ಅಳವಡಿಸಿದೆ. “ಇಲ್ಲಿ ಸೋಲಾರ್‌ ಶಕ್ತಿ ಸಿಸಿ ಕೆಮರಾ ಹಾಕಿದ್ದು, ಪಿಡಿಒ, ಅಧ್ಯಕ್ಷರು, ಗ್ರಾ. ಪಂ. ಕಚೇರಿ ಕಂಪ್ಯೂಟರ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಒಬ್ಬರನ್ನು ಪತ್ತೆ ಮಾಡಿ ದಂಡವನ್ನು ವಿಧಿಸಿದ್ದೇವೆ” ಎಂದು ನೀರೆ ಗ್ರಾ.ಪಂ. ಪಿಡಿಒ ಅಂಕಿತಾ ನಾಯಕ್‌ ತಿಳಿಸಿದ್ದಾರೆ.

ತಿಮ್ಮಕ್ಕ ಟ್ರೀಪಾರ್ಕ್‌ ಬಳಿ ಬಾಟಲಿ ರಾಶಿ
ತಾಲೂಕಿನ ನಲ್ಲೂರಿನ ಹರಿಯಪ್ಪನ ಕೆರೆ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನ ಸಮೀಪವೂ ತಾಜ್ಯ ಗುಡ್ಡೆ ನಿರ್ಮಾಣವಾಗಿದೆ. ಇಲ್ಲಿಗೆ ಬರುವವರು ನೀರಿನ ಬಾಟಲಿ, ತಿಂಡಿ ಸೇವಿಸಿ ಪರಿಸರದಲ್ಲಿ ಎಸೆದು ಹೋಗುತ್ತಿದ್ದಾರೆ. ಜೋರು ಮಳೆಯಾದಲ್ಲಿ ಈ ತ್ಯಾಜ್ಯವು ನೀರಿನೊಂದಿಗೆ ಹರಿದು ಎಲ್ಲ ಪ್ಲಾಸ್ಟಿಕ್‌ ತೊಟ್ಟೆ, ಬಾಟಲಿ ಟ್ರೀಪಾರ್ಕ್‌ ಪರಿಸರದ ಕೆರೆಗೆ ಸೇರಿ ಕೆರೆ ಮಾಲಿನ್ಯಗೊಳ್ಳುತ್ತದೆ. ಸ್ಥಳೀಯಾಡಳಿತಕ್ಕೂ ತ್ಯಾಜ್ಯ ನಿರ್ವಹಣೆ ಸವಾಲಾಗಿದೆ. ಬ್ಯಾನರ್‌ ಹಾಕಿ ಎಚ್ಚರಿಕೆ ನೀಡಿದರೂ ಕ್ಯಾರೇ ಅನ್ನುತ್ತಿಲ್ಲ.

ಖಾಸಗಿ ಬಸ್‌ ನಿಲ್ದಾಣದ ಹಿಂಭಾಗ
ಕಾರ್ಕಳ ಪೇಟೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲುವ ಹಿಂಬದಿ ಪರಿಸರದಲ್ಲಿಯೂ ಆಗಾಗ ತ್ಯಾಜ್ಯ ಸುರಿದು ಹೋಗುತ್ತಾರೆ. ಈ ತ್ಯಾಜ್ಯದಲ್ಲಿ ಹಸಿ, ಒಣಕಸ, ಪ್ಲಾಸ್ಟಿಕ್‌ ಎಲ್ಲ ತ್ಯಾಜ್ಯವನ್ನು ಗಂಟು ಕಟ್ಟಿ ಎಸೆದು ಹೋಗುತ್ತಾರೆ. ಪುರಸಭೆ ಸ್ವತ್ಛತಾ ಸಿಬಂದಿಗೂ ಇದನ್ನು ತೆರವುಗೊಳಿಸುವ ಕಾರ್ಯ ಸವಾಲಿನಿಂದ ಕೂಡಿದೆ.

ವನ್ಯಜೀವಿಗಳಿಗೆ ಅಪಾಯ: ಎಚ್ಚರವಿರಲಿ
ಕಾರ್ಕಳ-ಕುದುರೆಮುಖ ವನ್ಯಜೀವಿ ವಿಭಾಗ ಅಮೂಲ್ಯ ವನ್ಯಜೀವಿ ಸಂಪತ್ತು ಇರುವ ಪರಿಸರವಾಗಿದೆ. ಇಲ್ಲಿನ ಕಾಡು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಪ್ಲಾಸ್ಟಿಕ್‌ ಸಹಿತ ಎಲ್ಲ ರೀತಿಯ ತ್ಯಾಜ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿ, ತಿಂಡಿ ಪೊಟ್ಟಣ ಎಸೆಯುವುದು, ವನ್ಯಜೀವಿಗಳಿಗೆ ಊಟ ಕೊಡುವುದನ್ನು ನಿಯಂತ್ರಿಸಬೇಕಾಗಿದೆ. ಇಲ್ಲವಾದಲ್ಲಿ ಇದು ವನ್ಯಜೀವಿಗಳ ಆರೋಗ್ಯ ಮತ್ತು ಜೀವನಕ್ರಮದ ಮೇಲೆ ದುಷ್ಪರಿಣಾಮ ಬೀರಲಿದೆ.

ಜನರಲ್ಲಿಯೂ ಅರಿವು ಮೂಡಬೇಕಿದೆ
ಅರಣ್ಯ ಪ್ರದೇಶ ವ್ಯಾಪ್ತಿ ರಸ್ತೆ ಬದಿಯಲ್ಲಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪರಿಸರವನ್ನು ಸೆಲ್ಫಿ ಕಾರ್ನರ್‌ ಆಗಿ ರೂಪಿಸಿ ಸುಂದರ ಸ್ಥಳವಾಗಿಸಿದ್ದೇವೆ. ತಿಂಗಳಿಗೆ ನೂರಾರು ಕೆಜಿ ತ್ಯಾಜ್ಯ ಸುರಿಯುತ್ತಿದ್ದ ಸ್ಥಳವೀಗ ಬದಲಾಗಿದೆ. ಆದರೆ ಕೆಲವು ದೂರದೂರಿನಿಂದ ಬರುವ ಪ್ರವಾಸಿಗರು ತ್ಯಾಜ್ಯ ಎಸೆಯುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮ ವಹಿಸಲಾಗುವುದು. ಜನರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಬೇಕು. ಎಸ್‌ಆರ್‌ಎಲ್‌ಎಂ ತಂಡ ಅಲ್ಲಿನ ಸ್ವತ್ಛತೆಗೆ ಕ್ರಮವಹಿಸುತ್ತಿದೆ.
-ಸಚ್ಛಿದಾನಂದ ಪ್ರಭು, ಅಧ್ಯಕ್ಷರು, ನೀರೆ ಗ್ರಾ.ಪಂ.

-ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.