Karkala ಮಾರುಕಟ್ಟೆ ಅವ್ಯವಸ್ಥೆಯ ಆಗರ; ರಸ್ತೆ ಬದಿಯಲ್ಲೇ ಸಂತೆ; ಬೇರೆ ಮಾರ್ಗ ಎಲ್ಲಿದೆ?

Team Udayavani, Sep 26, 2024, 3:15 PM IST

6

ಕಾರ್ಕಳ: ಕಾರ್ಕಳದಲ್ಲಿ  ಮಾರುಕಟ್ಟೆ ಇಲ್ಲವೆಂದಲ್ಲ. ಆದರೆ, ವಿವಿಧ ಮಾರುಕಟ್ಟೆಗೆಂದು ನಿರ್ಮಿಸಿದ ಕಟ್ಟಡವನ್ನು ಕೋಳಿ, ಮೀನು ಮಾರಾಟವೇ  ಆಕ್ರಮಿಸಿಕೊಂಡಿದೆ. ಹೀಗಾಗಿ ವ್ಯವಸ್ಥಿತ ತರಕಾರಿ ಮಾರುಕಟ್ಟೆ ಇಲ್ಲ.   ಶನಿವಾರ ನಡೆಯುವ ವಾರದ ಸಂತೆಯಂತೂ ರಸ್ತೆಯ ಬದಿಗಳಲ್ಲೇ ನಡೆಯುತ್ತಿದೆ. ಹೀಗಾಗಿ ವಾರದ ಸಂತೆಗೆ ಸೂಕ್ತ ಜಾಗ ಗುರುತಿಸಿ  ವ್ಯವಸ್ಥೆ  ಕಲ್ಪಿಸುವುದು  ಅವಶ್ಯಕವೆನಿಸಿದೆ, ಸವಾಲೆನಿಸಿದೆ.

2012ರಲ್ಲಿ  ಇಂದಿರಗಾಂಧಿ ವಾಣಿಜ್ಯ ಸಂಕೀರ್ಣದ ಹೆಸರಲ್ಲಿ  ವಿಸ್ತೃತ ಕಟ್ಟಡ ನಿರ್ಮಾಣವಾಗಿದೆ. ಅದರಲ್ಲಿ ಹಸಿಮೀನು, ಒಣಮೀನು, ತರಕಾರಿ ಮಾರಾಟಕ್ಕೆ  ಅವಕಾಶವಿದ್ದರೂ ಅಲ್ಲೀಗ ಮೀನು ಮಾರುಕಟ್ಟೆ ಮಾತ್ರ ಉಳಿದುಕೊಂಡಿದೆ. ಇದರಿಂದ ವಾರದ ಸಂತೆ ನಡೆಯುವ ವೇಳೆ ಸಂತೆಯಲ್ಲಿ  ಆಗುತ್ತಿರುವ ಸಮಸ್ಯೆಗಳಿಗೆ ದಶಕಗಳಿಂದಲೂ ಮುಕ್ತಿ ಸಿಕ್ಕಿಲ್ಲ.

ಕೋಳಿ, ಮೀನು ಮಾರುಕಟ್ಟೆ  ಪರಿಸರ ಗಬ್ಬೆದ್ದು ನಾರುತ್ತಿದೆ. ಮೀನು ಖರೀದಿಸಲಷ್ಟೆ  ತೆರಳುವ ಗ್ರಾಹಕರು ಮೀನು ಖರೀದಿಸಿ ಹೊರಬರುತ್ತಿದ್ದಾರೆ. ಕಟ್ಟಡದೊಳಗೆ  ಸಂತೆ ನಡೆಸಲು ಅವಕಾಶವಿದ್ದರೂ ಮೀನಿನ ವಾಸನೆ ಮಧ್ಯೆ  ತರಕಾರಿ ಮಾರಾಟ ಅಸಾಧ್ಯ ಎಂಬ ಪರಿಸ್ಥಿತಿ ಇದೆ.. ಇದರಿಂದಾಗಿ ತರಕಾರಿ ಮಾರಾಟಗಾರರು  ಕಟ್ಟಡದ ಹೊರಗೆ ಆಸುಪಾಸಿನ ಸ್ಥಳಗಳಲ್ಲಿ  ಕುಳಿತುಕೊಳ್ಳುತ್ತಿದ್ದಾರೆ.

ಸಂತೆ ಮಾರುಕಟ್ಟೆ ಮಾರ್ಗ  ಇಕ್ಕಟ್ಟಾಗಿದ್ದು, ಇಲ್ಲೇ ಖಾಸಗಿ ಬಸ್‌ ಸಹಿತ ಇತರೆ ವಾಹನಗಳು ಓಡಾಟ ನಡೆಸುತ್ತವೆ. ಇದರಿಂದಾಗಿ ಇಲ್ಲಿ  ಟ್ರಾಫಿಕ್‌ ಸಮಸ್ಯೆ ದಟ್ಟಣೆ ಉಂಟಾಗುತ್ತಿದೆ.  ವಾಹನಗಳು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ಸಣ್ಣಪುಟ್ಟ ಅಪಘಾತ, ಮಾತಿನ ಚಕಮಕಿಗಳು ನಡೆಯುತ್ತಿರುತ್ತವೆ.

ಇನ್ನು ಮೂರು ಮಾರ್ಗ ಜಂಕ್ಷನ್‌ನಿಂದ  ಮಾರುಕಟ್ಟೆ  ಕಡೆಗೆ ಸಂಪರ್ಕಿಸುವ ರಸ್ತೆ ಬದಿಯಲ್ಲಿ  ಶನಿವಾರದ ಸಂತೆ ನಡೆಯುತ್ತದೆ. ಹೀಗಾಗಿ ಇಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.  ಶನಿವಾರವಾದರೂ ವಾಹನ ಓಡಾಟ ನಿಷೇದಿಸಿದರೆ ಸಂತೆಗೆ ಬರುವವರಿಗೆ ಕೊಂಚವಾದರೂ ಅನುಕೂಲವಾಗಬಹುದು.

ಏನು ಸಮಸ್ಯೆ? ಬೇಡಿಕೆಗಳೇನು?

  • ವಿಶಾಲ ಪಾರ್ಕಿಂಗ್‌ ವ್ಯವಸ್ಥೆಯಿದ್ದರೂ ಮಳೆಗಾಲದಲ್ಲಿ  ನೀರು ತುಂಬುವ ಸಮಸ್ಯೆ.
  • ಮೀನು ಮಾರುಕಟ್ಟೆ  ಪ್ರಥಮ ಅಂತಸ್ತಿನಲ್ಲಿದ್ದು,  ತರಕಾರಿಗೆ ವಾರಕ್ಕೊಮ್ಮೆ ಮಾತ್ರ ವ್ಯಾಪಾರ
  • ಕೋಳಿಯಂಗಡಿ ದುರ್ವಾಸನೆಯಿಂದ ತರಕಾರಿ  ಗ್ರಾಹಕರು ಅತ್ತ ಸುಳಿಯುತ್ತಿಲ್ಲ.
  • ಸ್ವತ್ಛತೆ ಬಗ್ಗೆ  ಪುರಸಭೆ ಕಟ್ಟು ನಿಟ್ಟಿಲ್ಲ.  ವ್ಯಾಪಾರಿಗಳ ಸ್ಪಂದನೆಗೆ ಇರುವ ಅಡ್ಡಿ  ನಿವಾರಿಸಬೇಕು.
  • ವಾರದ ಸಂತೆ ಉತ್ತಮ ರೀತಿಯಲ್ಲಿ ನಡೆ ಯಲು ಸಮರ್ಪಕ ವ್ಯವಸ್ಥೆ ಬೇಕಾಗಿದೆ.

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

CM-vidhna

MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್‌ ನುಡಿ

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

MUDA Scam: ಸಿಎಂ ರಾಜೀನಾಮೆಗೆ ಕೋಳಿವಾಡ ಆಗ್ರಹ; ಕಾಂಗ್ರೆಸ್‌ ನಾಯಕರ ಭಿನ್ನರಾಗ

western-Ghat

Cabinet Decision: ನಿರೀಕ್ಷೆಯಂತೆ ಕಸ್ತೂರಿ ರಂಗನ್‌ ವರದಿ ತಿರಸ್ಕಾರ

Puttur: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

Puttur: ಸಾಲ ವಸೂಲಾತಿಗೆ ತೆರಳಿದ್ದ ಬ್ಯಾಂಕ್‌ ಸಿಬಂದಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-DC

Udupi: ಸೆಪ್ಟೆಂಬರ್ 28-29: ದಸರಾ ಕ್ರೀಡಾಕೂಟ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Santhekatte Road ; ಸ್ವಾಮಿ, ನಮ್ಮ ಗೋಳನ್ನೂ ಕೇಳಿ ಸ್ವಲ್ಪ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌, ಎಂಆರ್‌ಐ ಸೇವೆ ವ್ಯತ್ಯಯ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

Udupi: ಗೀತಾರ್ಥ ಚಿಂತನೆ-47: ಅಪರೋಕ್ಷಜ್ಞಾನದ ಬಳಿಕವೂ ನಿಷ್ಕಾಮಕರ್ಮ

k

Protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಕಂದಾಯ ಸೇವೆ ವ್ಯತ್ಯಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

Sky-dia

Tourism Spot: ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ತಾಣವಾಗಲಿದೆ ಕುಂದಾಪುರದ ತ್ರಾಸಿ

CM-vidhna

MUDA Scam: ರಾಜೀನಾಮೆ ಪ್ರಶ್ನೆಯೇ ಇಲ್ಲ: ಮತ್ತೆ ಸಿಎಂ ಸಿದ್ದರಾಮಯ್ಯ ಖಡಕ್‌ ನುಡಿ

manjunath bhandari

CM ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ:ಮಂಜುನಾಥ ಭಂಡಾರಿ

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.