karkala ತಾಲೂಕು ಪಂಚಾಯತ್ ಹಳೆಯ ಕಟ್ಟಡವೀಗ ಪಾಳು ಬಂಗಲೆ!

ಹೊಸ ಕಟ್ಟಡ ಬಂದ ಮೇಲೆ ಹಳೆಯದರ ನಿರ್ಲಕ್ಷ್ಯ; ಭಯ ಹುಟ್ಟಿಸುವ ಪರಿಸರ; ಸದುಪಯೋಗಕ್ಕೆ ವಿಫ‌ಲ

Team Udayavani, Oct 15, 2024, 2:33 PM IST

5

ಕಾರ್ಕಳ: ತಾಲೂಕಿನ ಜನತೆಗೆ ಮನೆ ನೀಡುವ, ಸ್ವತ್ಛತೆ ಪಾಠ ಹೇಳುವ, ಶೌಚಾಲಯ ನಿರ್ಮಾಣ ಮಾಡಿಕೊಳ್ಳಿ ಎಂದು ಸಲಹೆ ತಾ.ಪಂ.ಗೆ ಸೇರಿದ ಹಳೆಯ ಕಟ್ಟಡಗಳೇ ಈಗ ಅನಾಥವಾಗಿವೆ. ಹಳೆಯ ಕಟ್ಟಡ ಪಾಳು ಬಿದ್ದು ಶುಚಿತ್ವಕ್ಕೂ ಸವಾಲೊಡ್ಡುತ್ತಿದೆ. ವಿಶೇಷವೆಂದರೆ ತಾ| ಪಂ ಅಧಿಕಾರಿಗಳು ಕಾರ್ಯನಿರ್ವಹಿಸುವ ನೂತನ ಕಚೇರಿ ಹಾಗೂ ಕುಕ್ಕುಂದೂರು ಗ್ರಾ.ಪಂ ಕಚೇರಿಯ ಕೂಗಳತೆ ದೂರದಲ್ಲಿ ಈ ಕಟ್ಟಡಗಳಿವೆ.

ಕಾರ್ಕಳ ಬೈಪಾಸ್‌ ರಸ್ತೆಯ ಸರ್ವಜ್ಞ ವೃತ್ತದ ಪಕ್ಕದ ಜೈನ್‌ ಹೊಟೇಲು ಪಕ್ಕದಲ್ಲಿ ಪುರಸಭೆ ಹಾಗೂ ಕುಕ್ಕುಂದೂರು ಗ್ರಾ.ಪಂ ವ್ಯಾಪ್ತಿಯ ಗಡಿಭಾಗದಲ್ಲಿವೆ ಈ ಪಾಳುಬಿದ್ಧ ಕಟ್ಟಡಗಳು.

ಬಿಡಿಒ ಕಚೇರಿ ಆಗಿತ್ತು
ತಾಲೂಕು ಪಂಚಾಯತ್‌ ಆಗುವ ಮೊದಲು ಬ್ಲಾಕ್‌ ಡೆವಲಪ್‌ಮೆಂಟ್‌ ಆಫಿಸರ್‌ (ಬಿಡಿಒ) ಕಚೇರಿ ಈ ಕಟ್ಟಡದಲ್ಲಿತ್ತು. ಬಿಡಿಒ ಕಚೇರಿ ಜತೆಗೆ ವಸತಿಗೃಹ, ದಾಸ್ತಾನು ಕೊಠಡಿ, ವಾಹನ ಶೆಡ್‌ ಇತ್ಯಾದಿ ಕಟ್ಟಡಗಳು ಇದರ ಅಕ್ಕಪಕ್ಕದಲ್ಲಿತ್ತು. ತಾ.ಪಂ ಇಲಾಖೆಯಾದ ಬಳಿಕ ತುಸು ಸಮಯ ಇಲ್ಲಿ ಕಾರ್ಯಾಚರಿಸಿತ್ತು. ಬಳಿಕ ಬೈಪಾಸ್‌ ರಸ್ತೆ ಬದಿಗೆ ಸ್ಥಳಾಂತರಗೊಂಡು ಇತ್ತೀಚೆಗಷ್ಟೆ ಸುಸಜ್ಜಿತ ತಾ.ಪಂ ಕಟ್ಟಡ ನೂತನವಾಗಿ ನಿರ್ಮಾಣಗೊಂಡು ಕಾರ್ಯಾಚರಿಸುತ್ತಿದೆ.

ಅರ್ಧ ಎಕರೆ ಜಾಗದಲ್ಲಿರುವ ಈ 70 ವರ್ಷ ಹಳೆಯ ಕಟ್ಟಡಗಳಲ್ಲಿ ಹೆಚ್ಚಿನವು ನೆಲ ಕಚ್ಚಿವೆ. ಗೋಡೆಗಳು ಜರಿದುಬಿದ್ದಿವೆ. ಪೊದೆಗಳು ಆವರಿಸಿವೆ ಕಟ್ಟಡಗಳನ್ನು ಹುಡುಕಬೇಕಿದೆ. ಪರಿಸರ ಸ್ವತ್ಛತೆಯ ಕೊರತೆ ಎದುರಿಸುತ್ತಿದೆ. ಬೈಪಾಸ್‌ ರಸ್ತೆಯ ಪಕ್ಕದಲ್ಲೇ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವ್ಯರ್ಥವಾಗಿ ಬಿದ್ದಿದೆ.

ಪ್ಲ್ರಾನ್‌ ಸಿದ್ಧಗೊಂಡಿತ್ತು
ರಾಜೇಂದ್ರ ಬೇಕಲ್‌ ಅವರು ಅಧಿಕಾರಿಯಾಗಿದ್ದಾಗ ಈ ಜಾಗದಲ್ಲಿ ವಾಣಿಜ್ಯ ಉಪಯೋಗಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿದ್ದರು. ಅದೇ ವೇಳೆಗೆ ಅವರು ವರ್ಗಾವಣೆಗೊಂಡರು. ಇದರಿಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಮೊಟಕುಗೊಂಡಿತ್ತು. ಬಳಿಕ ಯಾರೂ ತಲೆಕೆಡಿಸಿಕೊಂಡಿಲ್ಲ.

ಪರಿಶೀಲಿಸಿ, ಬೇಲಿ ನಿರ್ಮಾಣ
ಜಾಗವನ್ನು ಪರಿಶೀಲಿಸಿ, ಸರ್ವೇ ನಡೆಸಿ ತಂತಿ ಬೇಲಿ ನಿರ್ಮಿಸಿ ಸಂರಕ್ಷಿಸಿಡುವ ಕೆಲಸ ಮಾಡುತ್ತೇವೆ. ಜಾಗ ಕುಕ್ಕುಂದೂರು ಪಂಚಾಯತ್‌ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಮುಂದೆ ಆ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲು ಅವಕಾಶ ಕಲ್ಪಿಸಲಾಗುವುದು.
-ಕೃಷ್ಣಾನಂದ, ಮುಖ್ಯಕಾರ್ಯನಿರ್ವಹಣಾಧಿಕಾರಿ

ತಾ.ಪಂ. ಕಾರ್ಕಳ ಬಳಕೆಗೆ ಯೋಗ್ಯವಾಗಿಸಿ
ಸರಕಾರಿ ಜಾಗದಲ್ಲಿರುವ ಈ ಕಟ್ಟಡ ತುಂಬಾ ವರ್ಷಗಳಿಂದ ಪಾಳು ಬಿದ್ದುಕೊಂಡಿದೆ. ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯಾವುದಾದರೂ ಕಟ್ಟಡ ನಿರ್ಮಿಸಿ ಸದುಪಯೋಗ ಪಡಿಸಿಕೊಳ್ಳಲು ಅವಕಾಶವಿದೆ. ಈ ಬಗ್ಗೆ ಸಂಬಂಧಿಸಿದವರು ಅಗತ್ಯ ಕ್ರಮವಹಿಸಬೇಕು. ಶುಚಿತ್ವಕ್ಕೂ ಆದ್ಯತೆ ನೀಡಬೇಕಿದೆ.
-ಹರಿಶ್ಚಂದ್ರ ಹೆಗ್ಡೆ ನಡಿಮಾರು, ಸ್ಥಳೀಯರು

ಸದುಪಯೋಗಕ್ಕೆ ತಾ.ಪಂ ವಿಫ‌ಲ
ಈ ಜಾಗದ ಒಂದು ಭಾಗದಲ್ಲಿ ವನ್ಯಜೀವಿ ವಿಭಾಗದ ಕಚೇರಿ ವರ್ಷದ ಹಿಂದೆ ನಿರ್ಮಾಣಗೊಂಡಿದೆ. ಉಳಿದ ಸ್ಥಳ ಖಾಲಿಯಿದೆ. ಸರಕಾರಿ ಕಟ್ಟಡಗಳಿಗೆ, ವಿವಿಧ ಯೋಜನೆಗಳಿಗೆ ಕಟ್ಟಡ ನಿರ್ಮಾಣ ಮಾಡಲು ಜಾಗವಿಲ್ಲ ಎನ್ನುವುದು ಆಡಳಿತ ಪ್ರತಿ ಭಾರಿ ಸಬೂಬು ಹೇಳುತ್ತದೆ. ಆದರೆ, ಇದರ ಸದುಪಯೋಗಕ್ಕೆ ಮನಸು ಮಾಡಿಲ್ಲ.

ಪಾಳು ಬಿದ್ದ ತಾ.ಪಂ ಇಲಾಖೆಗೆ ಸೇರಿದ ಕಟ್ಟಡ
ಅರ್ಧ ಎಕರೆ ಜಾಗದಲ್ಲಿರುವ ಈ 70 ವರ್ಷ ಹಳೆಯ ಕಟ್ಟಡಗಳಲ್ಲಿ ಹೆಚ್ಚಿನವು ನೆಲ ಕಚ್ಚಿವೆ. ಗೋಡೆಗಳು ಜರಿದುಬಿದ್ದಿವೆ. ಪೊದೆಗಳು ಆವರಿಸಿವೆ ಕಟ್ಟಡಗಳನ್ನು ಹುಡುಕಬೇಕಿದೆ. ಪರಿಸರ ಸ್ವತ್ಛತೆಯ ಕೊರತೆ ಎದುರಿಸುತ್ತಿದೆ. ಬೈಪಾಸ್‌ ರಸ್ತೆಯ ಪಕ್ಕದಲ್ಲೇ ಇರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವ್ಯರ್ಥವಾಗಿ ಬಿದ್ದಿದೆ.

-ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ

Date announcement for by-elections of Channapatnam, Sandur, Shiggamvi constituencies

By Election: ಚನ್ನಪಟ್ಟಣ,ಸಂಡೂರು, ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ

Election: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

Election: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ

BJP MLA: ಅತ್ಯಾ*ಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಜಾಮೀನು

BJP MLA: ಅತ್ಯಾ*ಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಜಾಮೀನು

Salman to Munawar: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಹಿಟ್‌ ಲಿಸ್ಟ್‌ ಯಾರೆಲ್ಲಾ ಇದ್ದಾರೆ

Salman to Munawar: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಹಿಟ್‌ ಲಿಸ್ಟ್‌ ಯಾರೆಲ್ಲಾ ಇದ್ದಾರೆ

Baba Siddique Case: ಮುಂಬೈ ಪೊಲೀಸರಿಂದ ನಾಲ್ಕನೇ ಆರೋಪಿ ಬಂಧನ…

Baba Siddique Case: ಮುಂಬೈ ಪೊಲೀಸರಿಂದ ಇನ್ನೋರ್ವನ ಬಂಧನ… ಬಂಧಿತರ ಸಂಖ್ಯೆ 4ಕ್ಕೆ ಏರಿಕೆ

Gangolli: ಪತ್ನಿಗೆ ಹಿಂಸೆ ನೀಡಿ ಹಲ್ಲೆ; ಅತ್ತೆ-ಗಂಡನ ವಿರುದ್ಧ ದೂರು ದಾಖಲು

Gangolli: ಪತ್ನಿಗೆ ಹಿಂಸೆ ನೀಡಿ ಹಲ್ಲೆ; ಅತ್ತೆ-ಗಂಡನ ವಿರುದ್ಧ ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ

11

Udupi: ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆಂದು ಮುಕ್ತಿ?

1-byndoor

Byndoor: ಡಿವೈಡರ್‌ ಗೆ ಗುದ್ದಿದ ಸ್ಕೂಟರ್‌; ಸಹಸವಾರ ಸಾವು, ಸವಾರ ಗಂಭೀರ

6

Basroor: ಹೊಂಡಮಯ ಸಟ್ವಾಡಿ ಸರ್ಕಲ್‌- ಕೋಣಿ ರಸ್ತೆ

Hubballi: ಅಪರಿಚಿತ ವಾಹನ ಡಿಕ್ಕಿ… ದ್ವಿಚಕ್ರ ವಾಹನ ಸವಾರರ ದೇಹಗಳು ಛಿದ್ರ

Hubballi: ಭೀಕರ ಅಪಘಾತ… ದ್ವಿಚಕ್ರ ವಾಹನ ಸವಾರರು ಸ್ಥಳದಲ್ಲೇ ಮೃತ್ಯು, ದೇಹಗಳು ಛಿದ್ರ

MUST WATCH

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

ಹೊಸ ಸೇರ್ಪಡೆ

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ

ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಕೇಂದ್ರದ ಮೇಲೆ ಆರೋಪ: ಸಿಎಂ ವಿರುದ್ದ ರೇಣುಕಾ ಟೀಕೆ

13

Shirva: ಕೊರಗರೂ ಮನುಷ್ಯರೆಂಬ ಭಾವನೆ ಸಾರ್ವತ್ರಿಕವಾಗಲಿ

12

Padubidri: ಮುದರಂಗಡಿಯಲ್ಲಿ ಕಾಡುಕೋಣ ಹಾವಳಿ; ವಾಹನ ಸವಾರರಿಗೆ ಅಪಾಯ

14

Swarajya 1942 Movie: ಸ್ವರಾಜ್ಯದಲ್ಲಿ ಕ್ರಾಂತಿಯ ಕಹಳೆ

Date announcement for by-elections of Channapatnam, Sandur, Shiggamvi constituencies

By Election: ಚನ್ನಪಟ್ಟಣ,ಸಂಡೂರು, ಶಿಗ್ಗಾಂವಿ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.