Karkala: ಮೃತಪಟ್ಟವರ ಹೆಸರಲ್ಲಿದೆ ಸಾವಿರಾರು ಎಕ್ರೆ ಆಸ್ತಿ!
ಕಾರ್ಕಳ ತಾಲೂಕಿನಲ್ಲಿ 50 ಸಾವಿರಕ್ಕೂ ಅಧಿಕ ಭೂ ಮಾಲಕರು ಈಗಿಲ್ಲ; ಆಸ್ತಿ ವರ್ಗಾವಣೆಯಾಗದೆ ಹಲವು ಸಮಸ್ಯೆ; ಸುಲಲಿತ ವರ್ಗಾವಣೆಗೆ ಕಂದಾಯ ಇಲಾಖೆಯಿಂದ ಪೌತಿ ಖಾತೆ ಆಂದೋಲನ; ನ. 11ಕ್ಕೆ ದಾಖಲೆ ಸರಿಪಡಿಸಿಕೊಳ್ಳಿ
Team Udayavani, Nov 6, 2024, 2:27 PM IST
ಕಾರ್ಕಳ: ತಂದೆ-ತಾಯಿಯ ನಿಧನದ ಅನಂತರ ಅವರ ಜಮೀನನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಕೆಲವೊಂದು ಕುಟುಂಬಗಳಲ್ಲಿ ಮೊದಲೇ ಆಸ್ತಿ ವಿಭಜನೆ ಆಗಿರಲೂಬಹುದು. ಆದರೆ, ಕೆಲವೊಂದು ವಿದ್ಯಮಾನಗಳಲ್ಲಿ ಆಸ್ತಿಯ ಮಾಲೀಕತ್ವವನ್ನು ವರ್ಗಾವಣೆ ಮಾಡಿಸಿಕೊಳ್ಳುವಲ್ಲಿ ಉದಾಸೀನ ಭಾವ ತೋರಲಾಗುತ್ತದೆ. ಮುಂದೆ ಮಾಡಿಸಿಕೊಂಡರಾಯಿತು ಎಂಬ ಈ ನಿರ್ಲಕ್ಷ್ಯದಿಂದ ಮುಂದೆ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ. ಎಲ್ಲ ಕಡೆಗಳಲ್ಲಿಯೂ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ. ದಾಖಲೆಗಳನ್ನು ಹುಡುಕಹೊರಟರೆ ಅದರ ಮೂಲ ಹಿರಿಯರ ಹೆಸರಲ್ಲೇ ಇರುವುದು ಕಂಡುಬರುತ್ತದೆ. ವರ್ಷಗಳು ಕಳೆದಂತೆ ಈ ಆಸ್ತಿ ವರ್ಗಾವಣೆ ಪ್ರಕ್ರಿಯೆ ಸಂಕೀರ್ಣವಾಗುತ್ತಾ ಹೋಗುತ್ತದೆ.
ಕಾರ್ಕಳ ತಾಲೂಕಿನಲ್ಲೂ ಈ ಸಮಸ್ಯೆ ತೀವ್ರವಾಗಿದೆ. ಕಾರ್ಕಳ ತಾಲೂಕು ಒಂದರಲ್ಲಿಯೇ ಸಾವಿರಾರು ಎಕ್ರೆ ಆಸ್ತಿ ಮೃತಪಟ್ಟವರ ಹೆಸರಲ್ಲಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಹತ್ತಾರು ದಾಖಲೆ, ಹಲವು ಇಲಾಖೆಗಳ ಮೆಟ್ಟಿಲು ಹತ್ತಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯು ಜನ ಸಮಾನ್ಯರಿಗೆ ಒಂದೆ ವೇದಿಕೆಯಡಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದಿಂದ ಪೌತಿ ಖಾತೆ ಆಂದೋಲನ ಹಮ್ಮಿಕೊಂಡಿದೆ. ಕಾರ್ಕಳ ತಾಲೂಕಿನಲ್ಲಿ ನವೆಂಬರ್ 11ರಂದು ಪೌತಿ ಖಾತೆ ಆಂದೋಲನ ನಡೆಯಲಿದೆ
ಯಾವ ಸೌಲಭ್ಯಗಳೂ ಸಿಗುವುದಿಲ್ಲ
ಆಸ್ತಿ ಮಾಲಕರು ನಿಧನ ಹೊಂದಿದ ಬಳಿಕ ಜಮೀನು ವರ್ಗಾವಣೆ ಮಾಡಿಕೊಳ್ಳದಿದ್ದರೆ ಜಮೀನುಗಳ ಸ್ವಾಧೀನ ಹೊಂದಿದ್ದರೂ ಉಪಯೋಗವಿಲ್ಲದಂತಾಗುತ್ತದೆ.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ವಿಮೆಯಾಗಲಿ ಅಥವಾ ನಷ್ಟ ಪರಿಹಾರವಾಗಲೀ ಸಿಗುವುದಿಲ್ಲ.
ಬ್ಯಾಂಕ್‌ಗಳಿಂದ ಸಾಲ – ಸೌಲಭ್ಯ ಪಡೆಯಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಮುಂದೆ ಹೊಸ ಕಾನೂನು, ಭೂ ದಾಖಲೆ ನಿಯಮಾವಳಿಗಳು ಬಂದು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೆ. ಹಾಗಾಗಿ ಆಸ್ತಿಯನ್ನು ಪೌತಿ ಖಾತೆಯಡಿ ಬದಲಾವಣೆ ಮಾಡಿಕೊಳ್ಳಲು ಮುತುವರ್ಜಿ ವಹಿಸಬೇಕಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ಏನಿದು ಪೌತಿ ಖಾತೆ, ವರ್ಗಾವಣೆ ಪ್ರಕ್ರಿಯೆ ಹೇಗೆ?
ಮರಣ ಹೊಂದಿದ ವ್ಯಕ್ತಿ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಹೆಸರಿಗೆ ಖಾತೆ ವರ್ಗಾವಣೆ ಮಾಡುವುದು ‘ಪೌತಿ ಖಾತೆ’ ಎನ್ನಲಾಗುತ್ತದೆ. ಜಮೀನು ಮಾಲಕ ನಿಧನ ಹೊಂದಿದ ಅನಂತರ ಸರಕಾರದ ಸೂಚಿಸಿರುವ ಮೂಲಗಳ ಪ್ರಕಾರ ಮರಣ ಹೊಂದಿದ ಮಾಲಕ ಪ್ರಮಾಣ ಪತ್ರ ಮತ್ತು ವಂಶವೃಕ್ಷ ಪಡೆದು ನಮೂನೆ-1 ರಲ್ಲಿ ಅರ್ಜಿ ಸಲ್ಲಿಸಬೇಕು. ಪೌತಿ ಖಾತೆ ಮಾಡಿಕೊಳ್ಳಲು ಅರ್ಜಿ ನಮೂನೆ-1 ಅರ್ಜಿ ನಾಡಕಚೇರಿಗಳಲ್ಲಿ ಸಿಗುತ್ತದೆ. ವಂಶ ವೃಕ್ಷ ಇಲ್ಲದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿ ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಬಹುದು. ಉದಾಹರಣೆಗೆ, ಒಂದು ಕುಟುಂಬದಲ್ಲಿ ಮೂರ್ನಾಲ್ಕು ಮಕ್ಕಳಿದ್ದರೆ ಯಾರ ಹೆಸರಿನ ಮೇಲೆ ಎಷ್ಟು ಜಮೀನು ವರ್ಗಾವಣೆ ಮಾಡಬೇಕೆಂಬ ವಿವರ ಅರ್ಜಿಯಲ್ಲಿರಬೇಕು. ಜಮೀನು ದಾಖಲೆಗಳಲ್ಲಿ ಹೆಸರು, ಹಿಸ್ಸಾ, ನಂಬರ್ ತಪ್ಪಾಗಿದ್ದರೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
ಪೌತಿ ಖಾತೆಗೆ ಬೇಕಾದ ದಾಖಲೆಗಳು
ಮರಣ ಪ್ರಮಾಣ ಪತ್ರ, ವಂಶಾವಳಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಓಟರ್ ಐಡಿ, ರೇಷನ್ ಕಾರ್ಡ್, ಇತ್ತೀಚಿನ ಪಹಣಿ, ಮ್ಯುಟೇಷನ್.
ಆಧಾರ್ ಸೀಡಿಂಗ್‌ನಲ್ಲಿ ಪತ್ತೆ
ಬಹಳಷ್ಟು ರೈತರು ಪಿತ್ರಾರ್ಜಿತ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿಲ್ಲ ಎಂಬುದು ಇತ್ತೀಚೆಗೆ ಸರಕಾರ ನಡೆಸಿದ ಆಧಾರ್ ಸೀಡಿಂಗ್ ಪರಿಶೀಲನೆ ವೇಳೆ ಕಂದಾಯ ಇಲಾಖೆ ಪತ್ತೆ ಮಾಡಿದೆ. ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 53,783 ಖಾತೆಗಳು ಮೃತರ ಹೆಸರಿನಲ್ಲೇ ಇವೆ. ಇದರಲ್ಲಿ ಒಂದು ಆರ್‌ಟಿಸಿಯಲ್ಲಿ ಒಬ್ಬರ ಹೆಸರು ಇದ್ದರೂ ಇರಬಹುದು, ಮೂರ್ನಾಲ್ಕು ಹೆಸರಿರುವ ಸಾಧ್ಯತೆಯೂ ಇದೆ.
ಬಹುತೇಕರಿಗೆ ಮಾಹಿತಿ ಕೊರತೆ
ಆಸ್ತಿಯ ಮೂಲ ಮಾಲಕರ ಮರಣ ಪ್ರಮಾಣ ಪತ್ರ ಇಲ್ಲದೇ ಜಮೀನಿನ ಖಾತೆ ವರ್ಗಾವಣೆ ಆಗುವುದಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರಗಳು ಸಿಗದೆ ಆಸ್ತಿ ವರ್ಗಾವಣೆ ಮಾಡಿಕೊಂಡಿಲ್ಲ ಎಂದು ಕೆಲವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ನಿಯಮದ ಪ್ರಕಾರ ಗ್ರಾಮಗಳಲ್ಲಿ ವ್ಯಕ್ತಿ ನಿಧನರಾದ 28 ದಿನದೊಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ ಪತ್ರ ನೀಡಬೇಕು. ಒಂದು ವರ್ಷದೊಳಗಿದ್ದರೆ ತಹಶೀಲ್ದಾರ್ ನೀಡಬಹುದು. ಒಂದು ವರ್ಷ ಮೇಲ್ಪಟ್ಟ ಪ್ರಕರಣಗಳಿದ್ದರೆ ಜೆಎಂಎಫ್ ನ್ಯಾಯಾಲಯದ ಮೂಲಕ ದಾವೆ ಹೂಡಿ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕು.
ನ. 11ರಂದು ಆಂದೋಲನದಲ್ಲಿ ಭಾಗವಹಿಸಿ
ತಾಲೂಕಿಗೆ ಸಂಬಂಧಿಸಿದ ಮರಣ ಹೊಂದಿದ ಖಾತದಾರರ ಹೆಸರಿನ ಪಹಣಿಗಳ ಪೌತಿ ಖಾತೆಯ ಬಗ್ಗೆ ಸ್ಥಳದಲ್ಲೆ ಇತ್ಯರ್ಥಪಡಿಸಲು ನ. 11ರಂದು ಕಾರ್ಕಳ ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕುಂದಾಪುರ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಪೌತಿ ಖಾತೆ ಆಂದೋಲನ ನಡೆಯಲಿದೆ. ಬಹುತೇಕರು ಅನುಭವಿಸುತ್ತಿರುವ ಕಿರಿಕಿರಿ ತಪ್ಪಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ.
– ಡಾ| ಪ್ರತಿಭಾ ಆರ್., ತಹಶೀಲ್ದಾರ್, ಕಾರ್ಕಳ
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.