Kateel Yakshagana Mela: ನಾಳೆ ಸೇವೆಯಾಟದೊಂದಿಗೆ ಆರಂಭ
Team Udayavani, Dec 6, 2023, 6:30 AM IST
ಕಟೀಲು: ಕಟೀಲು ದೇವಸ್ಥಾನದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಈ ಬಾರಿಯ ತಿರುಗಾಟ ಡಿ. 7ರಂದು ಗುರುವಾರ ಸೇವೆಯಾಟ ದೊಂದಿದೆ ಆರಂಭ ವಾಗಲಿದೆ.
ಬೆಳಗ್ಗೆ ದೇವಸ್ಥಾನದಲ್ಲಿ ಚಂಡಿಕಾ ಹೋಮ, 108 ತೆಂಗಿನ ಕಾಯಿ ಗಣಪತಿ ಹವನ, ಸಂಜೆ 5ಕ್ಕೆ ದೇವಸ್ಥಾನದಲ್ಲಿ ಆರು ಮೇಳಗಳ ತಾಳಮದ್ದಳೆ ನಡೆಯಲಿದ್ದು, 6.45ಕ್ಕೆ ಕಲಾವಿದರಿಗೆ ಗೆಜ್ಜೆ ಹಸ್ತಾಂತರ, 8.30ಕ್ಕೆ ಚೌಕಿ ಪೂಜೆ 10.30ಕ್ಕೆ ಪಾಂಡವಾಶ್ವಮೇಧ ಯಕ್ಷಗಾನ ಬೆಳಗ್ಗಿನ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಪ್ರತೀ ವರ್ಷ ಮೇಳದ ಪರಿಕರಗಳನ್ನು ದುರಸ್ತಿ ಮಾಡಲಾಗುತ್ತಿದ್ದು, ಈ ಬಾರಿ ಹೆಚ್ಚಿನ ವೇಷ ಭೂಷಣಗಳು ಹೊಸದಾಗಿ ತಯಾರಿಸಿದ್ದು, 30ಕ್ಕೂ ಹೆಚ್ಚು ಕಿರೀಟ, 12ಕ್ಕೂ ಹೆಚ್ಚು ಕೇಸರಿ ತಟ್ಟಿ, ಧರ್ಮರಾಯನ 6 ಕಿರೀಟ ಮತ್ತಿತರ ಸಾಮಗ್ರಿಗಳು, ದೇವಿ ಮಹಾತೆ¾ ಪ್ರಸಂಗದ ಎಲ್ಲ ವೇಷಭೂಷಣ ಹೊಸದಾಗಿ ತಯಾರಿಸಲಾಗಿದೆ. ಮೇಳದ ಎಲ್ಲ ಚಿನ್ನ ಹಾಗೂ ಬೆಳ್ಳಿಯ ದೇವರ ಹಾಗೂ ಕಿರೀಟಗಳನ್ನು ದುರಸ್ತಿ ಮಾಡಿದ್ದು, ಮೇಳಕ್ಕೆ ಹೆಚ್ಚಿನ ಮೆರುಗು ನೀಡಲಿದೆ.
167 ದಿನ ತಿರುಗಾಟ
ಈ ಬಾರಿ ಅಧಿಕಮಾಸದ ನಿಮಿತ್ತ ಮೇಳಗಳು ತಡವಾಗಿ ಹೊರಡುತ್ತಿದ್ದು, 167 ದಿನ ತಿರುಗಾಟ ನಡೆಸಲಿವೆ ಎಂದು ಅರ್ಚಕ ಹರಿನಾರಾಯಣ ಆಸ್ರಣ್ಣ ತಿಳಿಸಿದ್ದಾರೆ.
8 ಕಲಾವಿದರ ಸೇರ್ಪಡೆ
ಹಾಸ್ಯ ಕಲಾವಿದ ಭಾಗಮಂಡಲ ಮಹಬಲೇಶ್ವರ ಭಟ್, ನಿತೇಶ್ ಕುಪ್ಪೆಪದವು, ಬಂದಾರು ಬಾಲಕೃಷ್ಣ ಗೌಡ, ಪ್ರಸಾದ್ ಮೂಡುಬಿದಿರೆ, ಕಾರ್ತಿಕ್ ಮಂಚಿ, ಅಕ್ಷಯ್ ಕಾಂತಾವರ, ಅಕ್ಷಯ ಶೆಟ್ಟಿ ಬೆಳ್ಮಣ್ಣು, ಗಣೇಶ್ ಮಿಜಾರು ಕಟೀಲು ಮೇಳಕ್ಕೆ ಸೇರ್ಪಡೆಗೊಂಡಿದ್ದಾರೆ ಮೇಳಗಳ ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.