ಅತಿಹೆಚ್ಚಿನ ಅಂತರದ ಗೆಲುವು ಸಾಧಿಸಿದ ಕಿರಣ್ ಕೊಡ್ಗಿ
2 ಜಿಲ್ಲೆಯಲ್ಲಿ ಅತಿಹೆಚ್ಚು ಮತ ಪಡೆದ ಭರತ್ ಶೆಟ್ಟಿ
Team Udayavani, May 14, 2023, 6:33 AM IST
ಕುಂದಾಪುರ: ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತ ಪಡೆದ ಶಾಸಕರಾಗಿ ಕಿರಣ್ ಕೊಡ್ಗಿ ಹೊರಹೊಮ್ಮಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎರಡನೆ ಅತಿಹೆಚ್ಚು ಮತ ಪಡೆದವರಾದರೆ, ಉಭಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತಗಳ ಅಂತರದ ಗೆಲುವು ಕೊಡ್ಗಿಯವರದ್ದೇ. 1,03,531 ಮತಗಳನ್ನು ಪಡೆದ ಭರತ್ ಶೆಟ್ಟಿ ಎರಡು ಜಿಲ್ಲೆಗಲ್ಲಿ ಅತ್ಯಧಿಕ ಮತಗಳನ್ನು ಪಡೆದ ದಾಖಲೆ ಮಾಡಿದ್ದರೆ ಕಿರಣ್ ಕೊಡ್ಗಿ 1,02,424 ಮತಗಳನ್ನು ಪಡೆದು ಅತ್ಯಧಿಕ ಮತಗಳ ಅಂತರವನ್ನು ಪಡೆದಿದ್ದಾರೆ.
ಕಿರಣ್ ಕೊಡ್ಗಿ ಅವರು 41,556 ಮತಗಳ ಅಂತರ, ಗುರುರಾಜ ಗಂಟಿಹೊಳೆ 16,153, ಯಶ್‌ಪಾಲ್ ಸುವರ್ಣ 32,776, ಸುರೇಶ್ ಶೆಟ್ಟಿ ಗುರ್ಮೆ 13,004, ವಿ.ಸುನಿಲ್‌ಕುಮಾರ್ 4,602 ಮತಗಳ ಅಂತರದಿಂದ ಗೆದ್ದಿದ್ದಾರೆ. ದ.ಕ.ದಲ್ಲಿ ಡಾ| ವೈ. ಭರತ್ ಶೆಟ್ಟಿ 32,922, ವೇದವ್ಯಾಸ ಕಾಮತ್ 23,962, ಯು.ಟಿ. ಖಾದರ್ 22,790, ಉಮಾನಾಥ ಕೋಟ್ಯಾನ್ 22,468, ರಾಜೇಶ್ ನಾಯ್ಕ 8,282, ಅಶೋಕ್ ಕುಮಾರ್ ರೈ 4,149, ಭಾಗೀರಥಿ ಮುರುಳ್ಯ 30,874 ಮತಗಳ ಅಂತರದಿಂದ ಗೆದ್ದಿದ್ದಾರೆ. ಅತಿ ಕಡಿಮೆ ಅಂತರದ ಗೆಲುವು ಪುತ್ತೂರಿನ ಅಶೋಕ್ ಕುಮಾರ್ ರೈಗಳದ್ದು. ನಂತರದ ಸ್ಥಾನದ ಕಾರ್ಕಳದ ಸುನಿಲ್ ಕುಮಾರ್ ಅವರದ್ದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.