ಪಶ್ಚಿಮ ಭಾಗದ ಹರಾಜು-ಮಾರಾಟದಲ್ಲಿ ಆದೇಶ ಉಲ್ಲಂಘನೆ
ಕೊಡೇರಿ ಕಿರು ಮೀನುಗಾರಿಕಾ ಬಂದರು
Team Udayavani, Oct 20, 2021, 5:15 AM IST
ವಿಶೇಷ ವರದಿ- ಕಿರಿಮಂಜೇಶ್ವರ: ಕೊಡೇರಿಯ ಕಿರು ಮೀನುಗಾರಿಕಾ ಬಂದರಿನ ಪಶ್ಚಿಮ ಭಾಗದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ತಾತ್ಕಾಲಿಕವಾಗಿ ಮೀನು ಹರಾಜು ಹಾಗೂ ಮಾರಾಟಕ್ಕೆ ಹರಾಜು ಪ್ರಾಂಗಣವೊಂದನ್ನು ನಿಗದಿಮಾಡಿದ್ದು, ಅಲ್ಲಿಯೇ ಮೀನು ಹರಾಜು ಮಾಡಬೇಕು ಎನ್ನುವ ಆದೇಶವನ್ನು ಇಲಾಖೆಯು ವರ್ಷದ ಹಿಂದೆಯೇ ಹೊರಡಿಸಿದೆ. ಆದರೆ ಕೊಡೇರಿಯ ಪಶ್ಚಿಮ ಭಾಗದಲ್ಲಿ ಈ ಆದೇಶ ಮಾತ್ರ ಪಾಲನೆಯಾಗುತ್ತಿಲ್ಲ.
ಹೌದು ಕೊಡೇರಿಯ ಕಿರು ಮೀನುಗಾರಿಕಾ ಬಂದರಿನ ಪಶ್ಚಿಮ ಭಾಗದ ಹರಾಜು ಪ್ರಾಂಗಣದಲ್ಲಿ ಮಾತ್ರ ಹರಾಜು ಹಾಗೂ ಮಾರಾಟ ಮಾಡಬೇಕು ಎನ್ನುವ ಆದೇಶವಿದ್ದರೂ, ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಮಾಡುತ್ತಿ ಲ್ಲ. ಬಂದರಿನಿಂದ ಹೊರಗೆಯೇ ದೋಣಿಗಳಿಂದ ಮೀನನ್ನು ಇಳಿಸಿ, ಪ್ರಾಂಗಣದ ಹೊರಗೆಯೇ ಹರಾಜು ಹಾಕುತ್ತಿರುವುದು ಕಂಡು ಬಂದಿದೆ. ಆದೇಶ ಉಲ್ಲಂಘಿಸುತ್ತಿರುವುದರ ಬಗ್ಗೆ ಕೊಡೇರಿ ಭಾಗದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರಿತ್ತರೂ ಪ್ರಯೋಜನವಿಲ್ಲ
ಈ ಬಗ್ಗೆ ಕೊಡೇರಿ ಭಾಗದ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ವಾರ ಕಳೆದರೂ ಅವರು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕಳೆದ ಅ. 3ರಿಂದ ಪಶ್ಚಿಮ ಭಾಗದಲ್ಲಿ ಆದೇಶ ಉಲ್ಲಂಘಿಸಿ, ಹರಾಜು ಪ್ರಾಂಗಣದ ಹೊರಗೆ ಮೀನು ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಇದು ಅಧಿಕಾರಿಗಳ ಗಮನಕ್ಕೆ ಬಂದರೂ ಅವರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಈಬಗ್ಗೆ ಕೊಡೇರಿ ಭಾಗದ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದೇಶದಲ್ಲೇನಿದೆ?
ಕಳೆದ ವರ್ಷದ ನವೆಂಬರ್‌ನಲ್ಲಿ ಮೀನುಗಾರಿಕೆ ನಿರ್ದೇಶನಾಲಯದ ನಿರ್ದೇಶಕರು ಕೊಡೇರಿ ಬಂದರಿನ ಹರಾಜು ಪ್ರಾಂಗಣದ ಕುರಿತು ಒಂದು ಆದೇಶವನ್ನು ಹೊರಡಿಸಿದ್ದರು. ಅದರಂತೆ…
– ಹರಾಜು ಪ್ರಾಂಗಣ ಹೊರತುಪಡಿಸಿ ಬೇರೆ ಕಡೆ ಮೀನು ಹರಾಜು/ಮಾರಾಟ ಮಾಡಬಾರದು.
– ಹರಾಜು ವೇಳೆ ತ್ಯಾಜ್ಯಗಳನ್ನು ಅಲ್ಲಿಯೇ ಬಿಡದೇ, ಪ್ರಾಂಗಣವಿಡೀ ಪೂರ್ಣ ಸ್ವಚ್ಛತೆ ಕಾಪಾಡಬೇಕು.
– ಕಿರು ಮೀನುಗಾರಿಕಾ ಬಂದರಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಇನ್ನೂ ಪ್ರಗತಿಯಲ್ಲಿ ಇರುವುದರಿಂದ ತಾತ್ಕಾಲಿಕ ವಾಗಿ ಹರಾಜು ಪ್ರಾಂಗಣದಲ್ಲಿಯೇ ಹರಾಜು ಪ್ರಕ್ರಿಯೆ ನಡೆಸಲು ಅವಕಾಶ ನೀಡಲಾಗಿದೆ.ಕಾಮಗಾರಿ ಪೂರ್ಣಗೊಂಡಾಗ ತೆರವು ಮಾಡಲಾಗುವುದು.
– ಬಂದರಿನ ಜಾಗದಲ್ಲಿ ಯಾವುದೇ ಅನಧಿಕೃತ ಬದಲಾವಣೆ ಮಾಡಬಾರದು. ತಪ್ಪಿದರೆ ಈಗಿರುವ ಅನುಮತಿ ಹಿಂಪಡೆದು, ಕಾನೂನು ಕ್ರಮಕೈಗೊಳ್ಳಲಾಗುವುದು.
– ಈಗ ಪ್ರಸ್ತಾವಿತ ಜಾಗದಲ್ಲಿ ಮೀನು ಖಾಲಿ ಮಾಡುವಾಗ ಅವಘಢ ಸಂಭವಿಸದಂತೆ ಎಚ್ಚರ ವಹಿಸಬೇಕು.
– ಈ ಷರತ್ತುಗಳನ್ನು ಉಲ್ಲಂಘಿಸಿದರೆ ಅನುಮತಿ ರದ್ದುಗೊಳಿಸಲಾಗುವುದು.
ಇದನ್ನೂ ಓದಿ:“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ
ಪ್ರಸ್ತಾವನೆ ಸಲ್ಲಿಕೆ
ಕೊಡೇರಿ ಕಿರು ಬಂದರಿಗೆ ಸಂಬಂಧಿಸಿದಂತೆ ಪಶ್ಚಿಮ ದಕ್ಕೆಯಲ್ಲಿ ನಿರ್ಮಾಣವಾಗಿರುವ ಜಟ್ಟಿಯಲ್ಲಿ ತಾತ್ಕಾಲಿಕವಾಗಿ ಮೀನು ಹರಾಜು ಹಾಗೂ ಮಾರಾಟಕ್ಕೆ ಅವಕಾಶ ನೀಡಿದ್ದೇವೆ. ಜಟ್ಟಿಯ ಪ್ರದೇಶ ಬಿಟ್ಟು ಬೇರೆ ಕಡೆ ಮೀನು ಖಾಲಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಹಿಂದೆ ಮಾಡಿದ್ದ ಆದೇಶದಲ್ಲಿ ಮೀನು ಖಾಲಿ ಮಾಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹೀಗಾಗಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಬಂದಿರುವ ದೂರಿನನ್ವಯ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಉತ್ತರ ಬಂದ ಅನಂತರ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ.
– ಪಿ.ಎಸ್. ಪಾಯಲ್, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ
ತೊಂದರೆಗಳೇನು?
ಬಂದರಿನ ಹೊರಗೆಯೇ ಸಮುದ್ರದ ದಡಗಳಲ್ಲಿ ದೋಣಿಯಿಂದ ಮೀನು ಇಳಿಸಿ, ಅದನ್ನು ಪ್ರಾಂಗಣಕ್ಕೆ ತರದೇ ಹೊರಗಡೆಯೇ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಬಂದರು ಬಿಟ್ಟು ದಡಗಳಲ್ಲಿ ಮೀನು ಇಳಿಸುತ್ತಿರುವುದರಿಂದ ಅಲ್ಲಿ ನೂರಾರು ಮಂದಿ ನಿತ್ಯ ನಡೆದುಕೊಂಡು, ಮೀನು ಹೊತ್ತು ಕೊಂಡು ಹೋಗುತ್ತಿರುವುದಿಂದ ಕಡಲ ತೀರದ ಕೊರೆತ ಶುರುವಾಗಿದೆ. ಇದಲ್ಲದೆ ಆ ಪರಿಸರವಿಡೀ ಸ್ವತ್ಛ ಇಲ್ಲದೆ, ದುರ್ನಾತ ಬೀರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.