ಶೀಘ್ರ ಪೊಲೀಸ್‌ ಚೌಕಿ, ಸ್ನಾನಗೃಹ ನಿರ್ಮಾಣ


Team Udayavani, Sep 2, 2021, 3:10 AM IST

ಶೀಘ್ರ ಪೊಲೀಸ್‌ ಚೌಕಿ, ಸ್ನಾನಗೃಹ ನಿರ್ಮಾಣ

ಕುಂದಾಪುರ:  ಅಲ್ಲೋ ಇಲ್ಲೋ ಪ್ರವಾಸಿಗರು ಸೇರುವಲ್ಲಿ ನಡೆಯುವ ಕೆಲವು ದುರ್ಘ‌ಟನೆಗಳು ಅಚ್ಚಳಿಯದೇ ಮನದಲ್ಲಿ ಉಳಿದು ಎಲ್ಲೆಡೆಯೂ ಆತಂಕ ಉಂಟಾಗುವುದು ಸಹಜ.

ಈ ನಿಟ್ಟಿನಲ್ಲಿ ಕುಂದಾಪುರ ಪುರಸಭೆ ತುಸು ಮುನ್ನೆಚ್ಚರಿಕೆಯಾಗಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಸೇರುವಲ್ಲಿ ಭದ್ರತೆಗೆ ಆದ್ಯತೆ ನೀಡಿದ್ದಾರೆ. ದಿನವೊಂದರಲ್ಲಿ 10 ಸಾವಿರ ಪ್ರವಾಸಿಗರು ಸೇರಿದ ಇತಿಹಾಸವುಳ್ಳ ಕೋಡಿ ಸೀ ವಾಕ್‌ನಲ್ಲಿ ಬೆಳಕಿನ ವ್ಯವಸ್ಥೆ, ಸಿಸಿ ಕೆಮರಾ, ಸಂಚಾರಿ ಶೌಚಾಲಯ ಅಳವಡಿಸಲಾಗಿದೆ. ಇನ್ನಷ್ಟು ನಡೆಯಲಿದೆ. ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಪುರಸಭೆ ಕ್ರಮಕೈಗೊಂಡಿದೆ.

ಅರ್ಧ ಎಕರೆ ಜಾಗ ಮೀಸಲು :

ಸೀವಾಕ್‌ ಸಮೀಪ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸ್ನಾನಗೃಹ ಹಾಗೂ ಪೊಲೀಸ್‌ ಚೌಕಿ ನಿರ್ಮಾಣ ನಡೆಯಲಿದೆ. ಇದಕ್ಕಾಗಿ ಪುರಸಭೆ ಲೈಟ್‌ಹೌಸ್‌ ಪಕ್ಕದಲ್ಲಿ ಸುಮಾರು ಅರ್ಧ ಎಕರೆ ಜಾಗ ಮೀಸಲಿಟ್ಟಿದೆ. ಅಲ್ಲಿ ಸ್ನಾನಗೃಹ, ಶೌಚಾಲಯ, ಕಾವಲು ಸೌಧ ನಿರ್ಮಾಣ ನಡೆಯಲಿದೆ.

ಸ್ವಚ್ಛತೆ:

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ವತಿಯಿಂದ ಸ್ವಯಂಸೇವಕರು ಸತತ 100 ವಾರಗಳಿಂದ ಸೀವಾಕ್‌ ಸಮೀಪ, ಲೈಟ್‌ ಹೌಸ್‌ ಸಮೀಪದ ಕಡಲತೀರದಲ್ಲಿ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ಕೆಲವೇ ಗಂಟೆಗಳಲ್ಲಿ 3 ಟನ್‌ ಕಸ ಸಂಗ್ರಹವಾದುದೂ ಇದೆ. ಮಳೆಗಾಲದಲ್ಲಿ ಸಮುದ್ರದ ಮೂಲಕ ಬಂದ ಕಸದ ರಾಶಿ ಕಡಲತಡಿಯಲ್ಲಿ ಸಂಗ್ರಹವಾಗುತ್ತದೆ. ಇದನ್ನು ತೆಗೆದಾಗ ಅತ್ಯಂತ ಸುಂದರ ಬೀಚ್‌ ಆಗಿ ಇದು ಪರಿವರ್ತನೆಯಾಗಿ ಕಂಗೊಳಿಸುತ್ತದೆ.

ಉದ್ದನೆಯ ಕಡಲತಡಿ:

ಅತಿ ಉದ್ದ ವ್ಯಾಪ್ತಿ ಹೊಂದಿದ ಬೀಚ್‌ ಎಂಬ ಹೆಗ್ಗಳಿಕೆಗೆ ಕೋಡಿ ಬೀಚ್‌ ಪಾತ್ರವಾಗಿದೆ. ಸರಿಸುಮಾರು 3.5 ಕಿ.ಮೀ. ದೂರದಲ್ಲಿ ಬೀಚ್‌ ಹರಡಿಕೊಂಡಿದೆ.  ಜನಸಂದಣಿ ಹೆಚ್ಚಿದ್ದು ಪ್ರವಾಸೋದ್ಯಮದ ದೃಷ್ಟಿಯಲ್ಲಿ ಉತ್ತಮ ಬೆಳವಣಿಗೆ.  ಪ್ರವಾಸಿಗರ ಸಂಖ್ಯೆ ಏರುತ್ತಿರುವಂತೆಯೇ ಹೊಟೇಲ್‌, ಅಂಗಡಿ, ಮಳಿಗೆ ಸ್ಥಾಪನೆಗೆ ಅವಕಾಶ ಇದೆ.  ರಿಕ್ಷಾ, ಪ್ರವಾಸಿ ವಾಹನಗಳಿಗೂ ಬಾಡಿಗೆ ದೊರೆಯಲಿದೆ. ಆಗಮಿಸಿದ ಪ್ರವಾಸಿಗರು ಸ್ವತ್ಛತೆ ಕಡೆಗೆ ಗಮನ ಹರಿಸಬೇಕಿದೆ.

ಸುದಿನ ವರದಿ:

ಕೋಡಿ ಕಡಲತಡಿಯ ಸೀವಾಕ್‌ನಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿ, ಬೆಳಕಿನ ವ್ಯವಸ್ಥೆ ಇತ್ಯಾದಿ ಕುರಿತು “ಉದಯವಾಣಿ’ “ಸುದಿನ’ ವರದಿಗಳನ್ನು ಪ್ರಕಟಿಸಿದೆ. ಪುರಸಭೆ ಆಡಳಿತ ಇವುಗಳಿಗೆ ಸ್ಪಂದಿಸಿ ಜನೋಪಯೋಗಿ ಕಾರ್ಯ ನಡೆಸಿದೆ.

ಸಿಸಿ ಕೆಮರಾ  ಅಳವಡಿಕೆ :

ಈಗ 5 ಸಿಸಿ ಕೆಮರಾಗಳನ್ನು ಅಳವಡಿಸ ಲಾಗಿದೆ. ಸೈನ್‌ ಇನ್‌ಸೆಕ್ಯುರಿಟಿ ಸಿಸ್ಟಂ ಮೂಲಕ ಸಿಸಿ ಕೆಮರಾ ಅಳವಡಿಸಲಾಗಿದ್ದು ಇದರ ಚಿತ್ರಣ ಪೊಲೀಸ್‌ ಠಾಣೆ ಹಾಗೂ ಸನ್‌ ಇನ್‌ ಸಂಸ್ಥೆಯಲ್ಲಿ ದೊರೆಯಲಿದೆ. ಈ ಮೂಲಕ ಪೊಲೀಸ್‌ ಕಣ್ಗಾವಲು ಕಲ್ಪಿಸಿದಂತಾಗಿದೆ. ಕೋಡಿ ಅಷ್ಟೇ ಅಲ್ಲದೆ ನಗರದ ಇತರೆಡೆ ಫೆರ್ರಿ ಪಾರ್ಕ್‌, ಪದೇ ಪದೇ ಸೌಹಾರ್ದ ಕದಡುವ ಸಂಘರ್ಷ ನಡೆಯುತ್ತಿದ್ದ ಜಾಗವಾದ  ಕೋಡಿ, ಚರ್ಚ್‌ ರೋಡ್‌ ಕೋಡಿ ಸಂಪರ್ಕಿಸುವ ಸೇತುವೆ, ಚಕ್ರಮ್ಮ ದೇವಸ್ಥಾನ ಮೊದಲಾದೆಡೆಯೂ ಪುರಸಭೆ ವತಿಯಿಂದ ಸಿಸಿ ಕೆಮರಾ ಹಾಕಿ ನಿರ್ವಹಣೆ ಶುಲ್ಕ ಭರಿಸಲಾಗುತ್ತಿದೆ.

ಬೆಳಕಿನ ವ್ಯವಸ್ಥೆ: ರಂಗೇರಿದ ಕಡಲ ತೀರ :

ಸೀವಾಕ್‌ಗೆ ಕೋವಿಡ್‌ ಸಂಕಷ್ಟದಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನರು  ಸೇರುತ್ತಿದ್ದಾರೆ. ಸಂಜೆಯ ವೇಳೆ ಕತ್ತಲು ಆವರಿಸಿ ಅವಘಡಗಳಾಗದಂತೆ, ಆಸ್ವಾದನೆಗೆ ಹೆಚ್ಚು ಸಮಯ ದೊರೆಯುವಂತೆ ಮೀನುಗಾರಿಕೆ ಇಲಾಖೆ  ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ  ಆಯೋಗ ಅಧ್ಯಕ್ಷ ಜಯಪ್ರಕಾಶ್‌ ಹೆಗಡೆ ಮೂಲಕ ಲೈಟಿಂಗ್‌ ವ್ಯವಸ್ಥೆ ಮಾಡಿದ್ದರು. ಇದರ ಹಣ ಪಾವತಿ ಸಹಿತ ನಿರ್ವಹಣೆಯನ್ನು ಪುರಸಭೆ ಮಾಡುತ್ತಿದೆ.  ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೆಚ್ಚುವರಿ ಲೈಟ್‌, ಹೈ ಮಾಸ್ಟ್‌ ಅಳವಡಿಕೆಗೂ ಮೀನುಗಾರಿಕಾ ಇಲಾಖೆಯಿಂದ ಅನುದಾನ ನೀಡುವ ಭರವಸೆಯಿತ್ತಿದ್ದರು. ಬೆಳಕಿನ ವ್ಯವಸ್ಥೆ ಮಾಡಿದ ಕಾರಣ ಸಮುದ್ರತೀರ ರಂಗೇರಿದೆ.

ಸಿಸಿ ಕೆಮರಾ ಅಳವಡಿಸಲಾಗಿದ್ದು ಪೊಲೀಸ್‌ ಇಲಾಖೆ ಹಾಗೂ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆ ಇದನ್ನು ನಿರ್ವಹಿಸುತ್ತಿದೆ. ಮೀನುಗಾರಿಕೆ ಇಲಾಖೆ ಲೈಟ್‌ ಅಳವಡಿಸಿದೆ. ಪುರಸಭೆ ಸಿಸಿ ಕೆಮರಾ ಹಾಗೂ ಲೈಟಿಂಗ್‌ನ ವೆಚ್ಚ ಭರಿಸುತ್ತಿದೆ. ಸಂಚಾರಿ ಶೌಚಾಲಯ ಇಡಲಾಗಿದೆ. ಶೌಚಾಲಯ, ಸ್ನಾನಗೃಹ, ಪೊಲೀಸ್‌ ಚೌಕಿ ನಿರ್ಮಾಣವಾಗಲಿದೆ. -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

ಕೋಡಿ ಕಡಲತಡಿಯಲ್ಲಿ ಸುರಕ್ಷೆ ,  ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಇನ್ನಷ್ಟು ಅಭಿವೃದ್ಧಿ  ಕೆಲಸ ನಡೆಯಬೇಕಿದೆ. -ವೀಣಾ ಭಾಸ್ಕರ ಮೆಂಡನ್‌,  ಅಧ್ಯಕ್ಷರು, ಪುರಸಭೆ

 

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8(1

Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

6(1

Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್‌ ನಿಲ್ದಾಣ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

Kundapura: ಇಂದು ಉಳ್ಳೂರು ಕೆರೆಗದ್ದೆ ಕಂಬಳ

8

Kundapura: ದರ್ಲೆಗುಡ್ಡೆ ಕೊರಗ ಕಾಲನಿ; ಈಗಲೇ ಕುಡಿಯುವ ನೀರಿಗೆ ತತ್ವಾರ

7

Karkala: ಅನಂತಶಯನ ಗುಡ್ಡೆಯಂಗಡಿ ರಸ್ತೆ ದುಃಸ್ಥಿತಿ; ಸವಾರರಿಗೆ ಪ್ರಾಣಸಂಕಟ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.