3 ವರ್ಷ ಹಿಂದೆ 18; ಈಗ ನೂರು ವಿದ್ಯಾರ್ಥಿಗಳು


Team Udayavani, Sep 16, 2021, 3:10 AM IST

3 ವರ್ಷ ಹಿಂದೆ 18; ಈಗ ನೂರು ವಿದ್ಯಾರ್ಥಿಗಳು

ಕುಂದಾಪುರ: ಶತಮಾನೋತ್ಸವ ಹೊಸ್ತಿಲ ಲ್ಲಿರುವ ಕೊಡ್ಲಾಡಿಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 3 ವರ್ಷದ ಹಿಂದೆ 18 ಮಕ್ಕಳಿದ್ದ ಶಾಲೆಯಲ್ಲಿ ಈಗ ಬರೋಬ್ಬರಿ 100 ಮಕ್ಕಳಿದ್ದಾರೆ. ಕಿರಿಯ ಪ್ರಾಥಮಿಕದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, ಕಳೆದೆರಡು ವರ್ಷಗಳಿಂದ ಮಕ್ಕಳ ದಾಖಲಾತಿ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ. ಇದರೊಂದಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಸರಕಾರ ಮುಂದಾಗಬೇಕಿದೆ.

1926ರಲ್ಲಿ ಪ್ರಾರಂಭವಾದ ಕೊಡ್ಲಾಡಿಯ ಕಿರಿಯ ಪ್ರಾಥಮಿಕ (ಈಗ ಹಿ.ಪ್ರಾ. ಶಾಲೆ) ಶಾಲೆಯು ಇನ್ನು 5 ವರ್ಷ ಪೂರೈಸಿದರೆ ಶತಮಾನೋತ್ಸವ ಆಚರಿಸಲಿದೆ. ಕಳೆದ ವರ್ಷದ ಜೂನ್‌ನಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂಭಡ್ತಿ ಪಡೆಯಿತು.

ಕೊಠಡಿ ತುರ್ತು ಅಗತ್ಯ:

ಕಳೆದ ವರ್ಷದಿಂದ ಕಿ.ಪ್ರಾ.ದಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. ಆದರೆ 7 ತರಗತಿಗಳಿರುವ ಈ ಶಾಲೆಯಲ್ಲಿ ಇರುವುದು ಒಂದೇ ಕಟ್ಟಡ. ಅದರಲ್ಲಿ 3 ತರಗತಿಗಳಿವೆ. ಇನ್ನುಳಿದ ತರಗತಿಗಳಿಗಾಗಿ ಹೊಸ ಕಟ್ಟಡದ ಅಗತ್ಯವಿದೆ. ಎಸ್‌ಡಿಎಂಸಿ, ಊರವರು ಈ ಬಗ್ಗೆ   ಇಲಾಖಾ ಅಧಿಕಾರಿಗಳ ಮೂಲ ಕ ಮನವಿ ಸಲ್ಲಿಸಿದ್ದು, ಇನ್ನಷ್ಟು ಅನುದಾನ ಮಂಜೂರಾಗಬೇಕಿದೆ. ಆದಷ್ಟು ಬೇಗ ಕಟ್ಟಡ ಮಂಜೂರಾದರೆ ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಮತ್ತಷ್ಟು ಚೈತನ್ಯ ಸಿಗಲಿದೆ. ಇದರೊಂದಿಗೆ ಈಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಅಗತ್ಯವೂ ಇದೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬೆಂಚ್‌, ಡೆಸ್ಕ್ನಂತಹ ಪೀಠೊಪಕರಣಗಳು ಸಹ ಬೇಕಾಗಿವೆ.

ದಾನಿಗಳ ನೆರವು:

ಒಂದು ಹಂತದಲ್ಲಿ ಮಕ್ಕಳ ಸಂಖ್ಯೆ ಕುಸಿತಗೊಂಡು, ಮುಚ್ಚುವ ಹಂತಕ್ಕೆ ತಲುಪಿದ್ದ ಶಾಲೆಗೆ ಮತ್ತೆ ಪುನಶ್ಚೇತನ ನೀಡುವಲ್ಲಿ ಸ್ಥಳೀಯರಾದ, ವಕ್ವಾಡಿ ಗುರುಕುಲ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟರ ಪಾತ್ರ ಮಹತ್ತರವಾಗಿದೆ. ಶಾಲೆಗೆ ಒಂದಷ್ಟು ಅಗತ್ಯ ಸೌಕರ್ಯಗಳ ಜತೆಗೆ ಶಿಕ್ಷಕರ ಕೊರತೆಯನ್ನು ನೀಗಿಸಿದ್ದಾರೆ. ಇವರಿಗೆ ಎಸ್‌ಡಿಎಂಸಿ, ಊರವರು ಸಹಕಾರ ನೀಡಿದ್ದಾರೆ.

ಇಬ್ಬರು ಶಿಕ್ಷಕರು ಅಗತ್ಯ:

ಈ ಶಾಲೆಯಲ್ಲಿ ಕಳೆದ ವರ್ಷದವರೆಗೆ ಇಬ್ಬರು ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ನಿವೃತ್ತರಾಗಿದ್ದಾರೆ. ಈಗ ಇಲ್ಲಿ ಖಾಯಂ ಶಿಕ್ಷಕರಾಗಿರುವುದು ಒಬ್ಬರು ಮಾತ್ರ. ಸುಭಾಶ್ಚಂದ್ರ ಶೆಟ್ಟರು ಗೌರವ ಶಿಕ್ಷಕರನ್ನು ನೀಡಿದ್ದಾರೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನು ಇಬ್ಬರು ಶಿಕ್ಷಕರ ಬೇಡಿಕೆಯಿದೆ.

ವರ್ಷದಿಂದ ವರ್ಷಕ್ಕೆ ಏರಿಕೆ:

ಸರಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎನ್ನುವ ಮಾತಿಗೆ ತದ್ವಿರುದ್ಧವಾಗಿ ಈ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಮಕ್ಕಳ ಸಂಖ್ಯೆ ಏರುತ್ತಲೇ ಇದೆ. 2018-19ನೇ ಶೈಕ್ಷಣಿಕ ಸಾಲಿನಲ್ಲಿ 18ರಲ್ಲಿದ್ದ ಮಕ್ಕಳ ಸಂಖ್ಯೆಯು, 2019-20ರಲ್ಲಿ 29ಕ್ಕೇರಿತು. 2020-21ನೇ ಸಾಲಿನಲ್ಲಿ 70ಕ್ಕೇರಿದರೆ, 2021-22ನೇ ಸಾಲಿನಲ್ಲಿ ಮೂರಂಕಿ ಅಂದರೆ 100ಕ್ಕೇರಿದೆ. ಅಂದರೆ ಕಳೆದ 3 ವರ್ಷಗಳಲ್ಲಿಯೇ ಈ ಶಾಲೆಯ ಮಕ್ಕಳ ಸಂಖ್ಯೆಯೂ 82ರಷ್ಟು ಹೆಚ್ಚಾಗಿದೆ.

ಮಂಜೂರಾಗುವ ನಿರೀಕ್ಷೆ:

ಶಾಲೆಯು ಕಳೆದ ವರ್ಷ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿದೆ. ಅದರಂತೆ ಹೆಚ್ಚುವರಿ ಕೊಠಡಿ ಬೇಡಿಕೆ ಬಗ್ಗೆ ಮನವಿ ಸಲ್ಲಿಸಿದ್ದೆವು. ಶೀಘ್ರ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ. ಇನ್ನು ಶಿಕ್ಷಕರ ಬೇಡಿಕೆ, ಶೌಚಾಲಯ, ಪೀಠೊಪಕರಣಗಳ ಅಗತ್ಯದ ಬಗ್ಗೆಯೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಶಾಲೆಗೆ ಊರ ದಾನಿಗಳು ನೆರವು ನೀಡಿದ್ದಾರೆ.  ಜನಾರ್ದನ ಪಟಗಾರ್‌, ಮುಖ್ಯ ಶಿಕ್ಷಕರು ಕೊಡ್ಲಾಡಿ ಸರಕಾರಿ ಹಿ.ಪ್ರಾ. ಶಾಲೆ

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident2

Kundapura: ಬೈಕ್‌ ಲಾರಿ ಢಿಕ್ಕಿ; ಸವಾರ ಗಾಯ; ಆಸ್ಪತ್ರೆಗೆ ದಾಖಲು

9

Kota: ರಾ.ಹೆ. ಪಕ್ಕದಲ್ಲಿ ನಿರ್ವಹಣೆ ಇಲ್ಲದೆ ಭಾರೀ ಸಮಸ್ಯೆ; ಸೈಕಲ್‌ ಸವಾರರಿಗೆ ಅಪಾಯ

5

Mullikatte: ಟ್ರಕ್‌ ಬೇ, ವಿಶ್ರಾಂತಿ ಕೊಠಡಿ ಆರಂಭಕ್ಕೆ ಗ್ರಹಣ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

ಯಕ್ಷಗಾನ ಮೇಳಗಳ ದಿಗ್ವಿಜಯ ಆರಂಭ; ಇನ್ನೂ ಅಂತಿಮವಾಗದ ಪಾವಂಜೆ ಎರಡನೇ ಮೇಳ

crime

Kundapura: ಕಾರು – ಬೈಕ್‌ ಢಿಕ್ಕಿ; ಗಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.