Kollur: ಕಿರುಸೇತುವೆ ಸಂಪೂರ್ಣ ಕೆಸರುಮಯ; ರಸ್ತೆ ತುಂಬಾ ಹೊಂಡಗುಂಡಿ
ಅಪೂರ್ಣ ಕಾಮಗಾರಿಯಿಂದ ಸಂಚಾರ ಸಂಕಷ್ಟ; ಆಗಾಗ ವಾಹನ ದಟ್ಟಣೆ
Team Udayavani, Oct 31, 2024, 1:36 PM IST
ಕೊಲ್ಲೂರು: ಇಲ್ಲಿನ ಸ್ವಾಗತ ಗೋಪುರ ಮಾರ್ಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಸಾಗುವ ರಾ. ಹೆದ್ದಾರಿಯ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾದ ನೂತನ ಕಿರುಸೇತುವೆ ಹೊಂಡದಿಂದ ಕೂಡಿದ್ದು, ಆ ವ್ಯಾಪ್ತಿಯಲ್ಲಿ ಡಾಮರು ಕಾಮಗಾರಿ ನಡೆಸದಿರು ವುದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ.
ಕೆಸರುಮಯ ಮಾರ್ಗ
ಸೇತುವೆ ನಿರ್ಮಾಣ ಹಂತದಲ್ಲಿ ಅಲ್ಲಿನ ಪರಿಸರದ ಮಣ್ಣನ್ನು ಅಗೆದು ಮುಖ್ಯರಸ್ತೆಯ ಅಂಚಿಗೆ ಎಸೆದಿರುವುದು ಸುರಿಯುತ್ತಿರುವ ಮಳೆಯ ಈ ಸಂದರ್ಭದಲ್ಲಿ ರಸ್ತೆಯುದ್ದಕ್ಕೂ ಕೆಸರು ಮಯವಾಗಿ ದ್ವಿಚಕ್ರ ವಾಹನ ಸಹಿತ ಇತರ ವಾಹನದಲ್ಲಿ ಸಂಚರಿಸುವವರು ಪ್ರಯಾಸದ ಪ್ರಯಾಣದಲ್ಲಿ ಸಾಗಬೇಕಾಗಿದೆ.
ಆಮೆಗತಿ ಡಾಮರು ಕಾಮಗಾರಿ
ಸ್ವಾಗತ ಗೋಪುರದ ಬಳಿಯ ಮಾಸ್ತಿಕಟ್ಟೆಯಿಂದ ದಳಿವರೆಗಿನ ಮುಖ್ಯ ರಸ್ತೆಯ ಡಾಮರು ಕಾಮಗಾರಿ ನಾನಾ ವಿಘ್ನಗಳ ನಡುವೆ ಅಂತೂ ಪೂರ್ಣಗೊಂಡಿದೆ. ಆದರೆ ಹಳೆಯ ಸೇತುವೆಯನ್ನು ತೆರವುಗೊಳಿಸಿ ಆರಂಭಗೊಂಡಿದ್ದ ಕಿರುಸೇತುವೆ ನಿರ್ಮಾಣ ಕಾಮಗಾರಿಗೆ ದೀರ್ಘಕಾಲದ ಅವ ಬೇಕಾಯಿತು. ಅರಣ್ಯ ಇಲಾಖೆ ಕಾನೂನು ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಯಿತು. ಕಂದಾಯ, ಅರಣ್ಯ ಇಲಾಖೆ ಹಾಗೂ ಸರಕಾರದ ನಡುವಿನ ಒಡಂಬಡಿಕೆಯಿಂದ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಯಿತು. ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ನೀತಿ ಬಗ್ಗೆ ಸುದಿನದಲ್ಲಿ ವರದಿ ಮಾಡಿದ ನಂತರ ಕಾಮಗಾರಿ ಆಮೆನಡಿಗೆಯಲ್ಲಿ ಕೊನೆಗೊಂಡಿತು. ಆದರೆ ಡಾಮರು ಕಾಣದ ಸೇತುವೆ ಸಹಿತ ಪರಿಸರ ಪ್ರತಿದಿನ ಕೊಲ್ಲೂರು ದೇಗುಲಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸುಗಮ ವಾಹನ ಸಂಚಾರಕ್ಕೆ ಎದುರಾಗಿದ್ದ ಹೊಂಡಮಯ ರಸ್ತೆಯ ಅಡ್ಡಿಆತಂಕ ಕೊನೆಗೂ ಅಂತ್ಯಗೊಂಡಿತು ಎನ್ನುವಷ್ಟರಲ್ಲಿ ಇದೀಗ ಸೇತುವೆಯ ಮೇಲ್ಗಡೆಯ ಹೊಂಡ ಡಾಮರಿಲ್ಲದ ಹೊಂಡಮಯ ಪರಿಸರ ರಸ್ತೆಯಾಯಿತು. ವಾಹನ ಸಂಚಾರಕ್ಕೆ ಬಹಳಷ್ಟು ಕಿರಿಕಿರಿ ಉಂಟುಮಾಡುತ್ತಿದೆ. ಇದಕ್ಕೊಂದು ತುರ್ತು ಪರಿಹಾರ ಕಂಡು ಕೊಳ್ಳಬೇಕಾಗಿರುವುದರಿಂದ ಇಲಾಖೆ ಹಾಗು ಗುತ್ತಿಗೆದಾರರು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.
ಮಳೆಯಿಂದ ತೊಡಕು
ಕಿರುಸೇತುವೆ ಬಳಿ ಡಾಮರು ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು. ಮಳೆಗಾಲದ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತೊಡಕಾಗಿದೆ.
-ಇಲಾಖೆ ಅಧಿಕಾರಿಗಳು
ಸವಾರರಿಗೆ ಸಂಕಷ್ಟ
ವಾಹನ ಸಂಚಾರಕ್ಕೆ ತೊಡಕಾಗಿರುವ ಇಲ್ಲಿನ ಸೇತುವೆ ಬಳಿಯ ಕಾಮಗಾರಿ ಅಪೂರ್ಣಗೊಂಡಿರುವುದು ಸಾವಿರಾರು ನಿತ್ಯಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾದೀತು.
-ರಮೇಶ ಗಾಣಿಗ ಕೊಲ್ಲೂರು, ತಾ.ಪಂ. ಮಾಜಿ ಸದಸ್ಯರು
2 ತಾಸು ಟ್ರಾಫಿಕ್ ಜಾಮ್
ಅ.27ರಂದು ಕೆಸರುಮಯ ಮುಖ್ಯ ರಸ್ತೆಯ ಹೊಂಡದಲ್ಲಿ ಬಸ್ ಸಂಚರಿಸಲಾಗದೇ ಜಾಮ್ ಆದ ಹಿನ್ನೆಲೆಯಲ್ಲಿ 2 ಗಂಟೆಗೂ ಮಿಕ್ಕಿ ಕಾಲ ಟ್ರಾಫಿಕ್ ಜಾಮ್ ಆಗಿ ಭಕ್ತರು ಪರದಾಡಿದರು. ಬೆಂಗಳೂರು, ಕೇರಳ ಹಾಗು ತಮಿಳುನಾಡಿನಿಂದ ಆಗಮಿಸಿದ ಭಕ್ತರಿಗೆ ಸಾಗಬೇಕಾದ ಸಮಯದ ವಿಳಂಬದಿಂದಾಗಿ ಮುಂಗಡ ಕಾಯ್ದಿರಿಸಿದ ರೈಲುಗಳಲ್ಲಿ ಸಾಗಲಾಗದೇ ಪರದಾಡಿ ದರು.ಅನೇಕರು ದುಸ್ಥಿತಿಯಲ್ಲಿರುವ ಸಂಚಾರ ಮಾರ್ಗವಾಗಿ ನಡೆದುಕೊಂಡು ಇನ್ನೊಂದು ಭಾಗದ ಟ್ಯಾಕ್ಸಿಗಳಿಗಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಒಟ್ಟಾರೆ ದಿನವಿಡೀ ವಾಹನ ಸಂಚಾರಕ್ಕೆ ಎದುರಾದ ಗೊಂದಲಮಯ ವ್ಯವಸ್ಥೆಯಿಂದಾಗಿ ಅನೇಕ ಭಕ್ತರು ಹಿಡಿಶಾಪ ಹಾಕುತ್ತಿರುವುದು ಕಂಡುಬಂತು.
-ಡಾ| ಸುಧಾಕರ ನಂಬಿಯಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.