Kollur: ಟವರೂ ಇದೆ, ಸೋಲಾರೂ ಇದೆ, ಆದರೆ ನೆಟ್‌ವರ್ಕ್‌ ಒಂದೇ ಇಲ್ಲ!

ಬಸ್ರಿಬೇರಿನ ಜನ ಮೊಬೈಲ್‌ ಬಳಸಲು ಮುದೂರು ಮೈದಾನಕ್ಕೆ ಬರಬೇಕು!

Team Udayavani, Jan 14, 2025, 2:27 PM IST

4

ಕೊಲ್ಲೂರು: ಜಡ್ಕಲ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ ವ್ಯಾಪ್ತಿಯ ಬಸ್ರಿಬೇರಿನಲ್ಲಿ ಒಂದು ವರ್ಷದ ಹಿಂದೆ ಸಕಲ ಸೌಲಭ್ಯಗಳೊಂದಿಗೆ ನೂತನ ಬಿ.ಎಸ್‌.ಎನ್‌.ಎಲ್‌. ಮೊಬೈಲ್‌ ಟವರ್‌ ನಿರ್ಮಾಣವಾಗಿದೆ. ಅದರ ಜತೆಗೆ ಜನರೇಟರ್‌ಗೆ ವಿದ್ಯುತ್‌ ಸಮಸ್ಯೆ ಬಾರದಿರಲಿ ಎಂದು ಸೋಲಾರ್‌ ವಿದ್ಯುತ್‌ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಆದರೆ, ಬಳಕೆಗೆ ಇನ್ನೂ ಕಾಲ ಕೂಡಿ ಬರದಿರುವುದು ಅಲ್ಲಿನ ನಿವಾಸಿಗಳಲ್ಲಿ ನಿರಾಸೆ ಉಂಟುಮಾಡಿದೆ.

ಸಂಸದ ಬಿ.ವೈ. ರಾಘವೇಂದ್ರ ಅವರ ಶಿಫಾರಸಿನ ಮೇರೆಗೆ ಈ ಮೊಬೈಲ್‌ ಟವರ್‌ ನಿರ್ಮಾಣವಾಗಿದೆ. ಅದು ನಿರ್ಮಾಣವಾದ ಕೂಡಲೇ ತಮ್ಮ ನೆಟ್ವರ್ಕ್‌ ಸಮಸ್ಯೆಗಳೆಲ್ಲ ಬಗೆಹರಿಯುತ್ತವೆ ಎಂಬ ನಿರೀಕ್ಷೆ ಜನರಲ್ಲಿ ಚಿಗುರೊಡೆದಿತ್ತು. ಆದರೆ ಇದುವರೆಗೆ ಟವರ್‌ ಬಳಕೆಗೆ ಬಾರದಿರುವುದು ಗ್ರಾಮಸ್ಥರ ಪಾಲಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಜತೆಗೆ ಟವರ್‌ ನಿಷ್ಪ್ರಯೋಜಕವಾಯಿತೇ ಎಂಬ ಪ್ರಶ್ನೆಯೂ ಗ್ರಾಮಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸುಮಾರು 100 ಮನೆಗಳಿವೆ
ಬಸ್ರಿಬೇರಿನಲ್ಲಿ ಬಹುತೇಕ ಪರಿಶಿಷ್ಟ ಪಂಗಡದವರು ವಾಸವಾಗಿದ್ದಾರೆ. 100ರಷ್ಟು ಮನೆಗಳಲ್ಲಿ 500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಸರಕಾರಿ ಶಾಲೆಯಿದೆ. ದೇವಾಲಯವಿದೆ. ಆದರೆ, ಮೊಬೈಲ್‌ ಬಳಕೆಗೆ ಟವರ್‌ ಇದ್ದರೂ ಸಂಪರ್ಕಕ್ಕೆ ಸಿಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವರು ಮುದೂರು ಮೈದಾನಕ್ಕೆ
ಬಸ್ರಿಬೇರು ಪರಿಸರದ ನಿವಾಸಿಗಳು ತುರ್ತು ಅಗತ್ಯತೆ, ವ್ಯಾಪಾರ, ವ್ಯವಹಾರ, ದೂರದಲ್ಲಿರುವ ಮನೆಯವರ ಸಂಪರ್ಕಕ್ಕೆ ಅಲ್ಲಿಂದ 5 ಕಿ.ಮೀ. ದೂರದಲ್ಲಿರುವ ಮುದೂರು ಮೈದಾನಕ್ಕೆ ಬಂದು ಮೊಬೈಲ್‌ ಬಳಸಿ ಮಾತನಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತಿದಿನ ಎದುರಾಗುತ್ತಿರುವ ಈ ಗೋಳಿಗೆ ಜನಪ್ರತಿನಿಧಿಗಳು ಸ್ಪಂದಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕೆಲವರು ಜಡ್ಕಲ್‌ ಪೇಟೆಗೆ!
ಗೋಳಿಗುಡ್ಡೆ, ಹೆಮ್ಮಕ್ಕಿ, ನೇತ್ರಾಡಿ, ಕಾನ್ಯಿ , ತಲಕಾಣ ಮುಂತಾದ ಪ್ರದೇಶದ ನಿವಾಸಿಗಳಿಗೆ ಮೊಬೈಲ್‌ ಸಂಪರ್ಕ ವ್ಯವಸ್ಥೆಗೆ ಎದುರಾಗಿರುವ ಟವರ್‌ ಕೊರತೆ ಅವರನ್ನು ದೂರದ ಜಡ್ಕಲ್‌ ಪೇಟೆಗೆ ಪ್ರಯಾಣ ಬೆಳೆಸಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಬಳಕೆ ಹಾಗೂ ಟವರ್‌ ಸಂಪರ್ಕಗಳಲ್ಲಿನ ಅಡಚಣೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿರುವುದು ಆ ಭಾಗದ ಜನರ ಪಾಲಿಗೆ ಈ ಪ್ರಕ್ರಿಯೆ ಗಗನ ಕುಸುಮವಾದಿತೇ ಎಂಬಷ್ಟರ ಮಟ್ಟಿಗೆ ಅವರಲ್ಲಿ ನಿರಾಸೆ ಉಂಟುಮಾಡಿದೆ. ಮರಾಠಿ ಸಮುದಾಯದವರು ಹೆಚ್ಚಾಗಿ ಇಲ್ಲಿ ವಾಸ್ತವ್ಯವಿದ್ದು ಅವರಲ್ಲಿ ಬಹುತೇಕ ಮಂದಿ ಕೆಲಸಕಾರ್ಯ ನಿಮಿತ್ತ ದೇಶವಿದೇಶಗಳಲ್ಲಿ ನೆಲೆಸಿದ್ದಾರೆ. ಮನೆಯವರೊಡನೆ ಸಂಪರ್ಕ ಬೆಳೆಸಲು ನೆಟ್ವರ್ಕ್‌ ಸಮಸ್ಯೆ ಎದುರಾಗುತ್ತಿದೆ. ಎದುರಾಗುತ್ತಿರುವ ಮೊಬೆ„ಲ್‌ ಟವರ್‌ ಬಳಕೆಗೆ ನಿಷ್ಪ್ರಯೋಜಕವಾಗುತ್ತಿರುವುದು ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗುತ್ತಿದೆ.
– ಗಣೇಶ ಶೆಟ್ಟಿ, ಅತ್ತಿಕೇರಿ, ಗ್ರಾಮಸ್ಥರು

ಟವರ್‌ ಕನೆಕ್ಟ್ ಮಾಡಿ
ಆಧುನಿಕ ಯುಗದಲ್ಲಿ ಟೆಲಿಫೋನ್‌ ಬದಲು ಮೊಬೈಲ್‌ ಫೋನ್‌ ಬಳಕೆಗೆ ಬಂದಿರುವುದರಿಂದ ಅದನ್ನೇ ಅವಲಂಬಿಸಬೇಕಾಗಿದೆ. ಆದರೆ ಟವರ್‌ ನಿರ್ಮಾಣವಾಗಿದ್ದರೂ ಉಪಯೋಗಕ್ಕೆ ಬಾರದಿರುವುದು ಇಲಾಖೆಯ ಬೇಜಾವಾಬ್ದಾರಿಯಾಗಿದೆ.
– ಚಂದ್ರ ಪೂಜಾರಿ, ಸಳ್ಕೋಡು

-ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Belthangady: ನೃತ್ಯ ಗುರು ಪಿ.ಕಮಲಾಕ್ಷ ಆಚಾರ್‌ ನಿಧನ

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Surathkal: ಟ್ಯಾಂಕರ್‌ನಿಂದ ಡೀಸೆಲ್‌ ಕಳವು

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

Udupi: ಬೋಟ್‌ ಮುಳುಗಡೆ: 70 ಲ.ರೂ.ನಷ್ಟ

14-karkala

Karkala: ಅಕ್ರಮ ಮರಳು ಸಾಗಾಟದ ಲಾರಿ ತಡೆಯಲು ಯತ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ

Manipal: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ

Manipal: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹ*ತ್ಯೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

Udupi: ಶ್ರೀಕೃಷ್ಣಗೀತಾನುಭವ ಮಂಟಪ ಲೋಕಾರ್ಪಣೆ

sankranti-karnataka

ನಿಸರ್ಗದ ದಿವ್ಯಾರಾಧನೆಯ ಪ್ರತೀಕ ಮಕರ ಸಂಕ್ರಾಂತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.