ಕುಂದಾಪುರ: ಕೊಂಕಣ ಖಾರ್ವಿ ಹೋಳಿ ಸಂಪನ್ನ
Team Udayavani, Mar 20, 2022, 4:20 AM IST
ಕುಂದಾಪುರ: ಕೊಂಕಣ ಖಾರ್ವಿ ಸಮುದಾಯದವರು 7 ದಿನಗಳ ಕಾಲ ಸಡಗರ, ಸಂಭ್ರಮದಿಂದ ಆಚರಿಸುವ ಹೋಳಿ ಉತ್ಸವವು ಬಣ್ಣದ ಪೂಜೆ, ಓಕುಳಿಯೊಂದಿಗೆ ವೈಭವದ ಪುರ ಮೆರವಣಿಗೆಯೊಂದಿಗೆ ಶನಿವಾರ ಸಂಪನ್ನಗೊಂಡಿತು.
ಶತಮಾನಗಳ ಇತಿಹಾಸವಿರುವ ಕೊಂಕಣ ಖಾರ್ವಿ ಸಮುದಾಯದವರ ಹೋಳಿ ಉತ್ಸವವನ್ನು ಕುಂದಾಪುರ, ಗಂಗೊಳ್ಳಿ, ಬಸ್ರೂರು ಮತ್ತಿತರ ಭಾಗಗಳಲ್ಲಿ ಆಚರಿಸುವ ಮೂಲಕ ಸಂಭ್ರಮಿಸಿದರು.
ಬಣ್ಣದ ಪೂಜೆ :
ಹೋಳಿ ಹಬ್ಬದ ಕೊನೆಯ ದಿನವಾದ ಶನಿವಾರ ಓಕುಳಿ, ಮೆರವಣಿಗೆಗೂ ಮುಂಚಿತವಾಗಿ ಕೊಂಕಣ ಖಾರ್ವಿ ಸಮುದಾಯದವರ ಆರಾಧ್ಯ ದೇವತೆಯಾದ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ಸನ್ನಿಧಾನದಲ್ಲಿ ಬಣ್ಣದ ಪೂಜೆ ನೆರವೇರಿಸಲಾಯಿತು.
ಬಣ್ಣದ ಪೂಜೆಯ ಅಂಗವಾಗಿ ಮಹಾಕಾಳಿ ದೇವಿಗೆ ಅರಿಶಿನ ಕುಂಕುಮ, ಗಂಧ, ವಿವಿಧ ಬಣ್ಣಗಳನ್ನು ಸಮರ್ಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಈ ವೇಳೆ ಉಪಸ್ಥಿತರಿದ್ದ ಗಣ್ಯರು, ಹೋಳಿ ಮನೆಯವರು, ಸಮುದಾಯದ ಪ್ರತಿ ಮನೆಯವರು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡರು.
ಶ್ರೀ ಕುಂದೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಸದಸ್ಯ ಸತೀಶ್ ಶೆಟ್ಟಿ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್, ಶ್ರೀ ಮಹಾಂಕಾಳಿ ದೇವಸ್ಥಾನದ ಅಧ್ಯಕ್ಷ ಜಯಾನಂದ ಖಾರ್ವಿ, ಪ್ರಧಾನ ಕಾರ್ಯದರ್ಶಿ ಕೆ. ಕೇಶವ ಖಾರ್ವಿ, ಸಲಹೆಗಾರರಾದ ಪ್ರಕಾಶ್ ಖಾರ್ವಿ, ಗಣಪತಿ ಖಾರ್ವಿ, ದೇವಸ್ಥಾನದ ಮೊಕ್ತೇಸರರಾದ ಶಂಕರ ನಾಯ್ಕ, ಪಾಂಡು ಸಾರಂಗ, ಆನಂದ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಹೋಳಿ ಓಕುಳಿ: ಬೃಹತ್ ಮೆರವಣಿಗೆ :
ಹೋಳಿ ಆಚರಣೆಯ ಕೊನೆಯ ದಿನ ಕೊಂಕಣ ಖಾರ್ವಿ ಸಮುದಾಯದ ಸಹಸ್ರಾರು ಬಂಧುಗಳು ಹೋಳಿ ಓಕುಳಿ ಹಾಗೂ ವೈಭವದ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಮೇಲ್ ಖಾರ್ವಿಕೇರಿ, ಮುಖ್ಯ ಖಾರ್ವಿಕೇರಿ, ಮಧ್ಯ ಖಾರ್ವಿಕೇರಿ, ಕೆಳಾ ಖಾರ್ವಿಕೇರಿ, ಬಹಾದ್ದೂರ್ ಷಾ ರಸ್ತೆ, ಹೊರ ವಲಯದ ಕೊಂಕಣ ಭಾಷಿಕ ಖಾರ್ವಿ ಸಮುದಾಯದ ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಗಂಗೊಳ್ಳಿ : ಹೋಳಿ ಓಕುಳಿ
ಕುಂದಾಪುರ ಮಾತ್ರವಲ್ಲದೆ ಗಂಗೊಳ್ಳಿ ಯಲ್ಲಿಯೂ ತ್ರಾಸಿ, ಕಂಚುಗೋಡು ಮತ್ತಿತರ ಭಾಗದ ಕೊಂಕಣ ಖಾರ್ವಿ ಸಮುದಾಯದವರು ಹೋಳಿ ಓಕುಳಿಯನ್ನು ಅದ್ದೂರಿ ಮೆರವಣಿಗೆ, ಓಕುಳಿ ಉತ್ಸವದೊಂದಿಗೆ ಆಚರಿಸಿದರು. ಬಸ್ರೂರಲ್ಲಿಯೂ ಖಾರ್ವಿ ಭಾಷಿಕರು ಹೋಳಿ ಓಕುಳಿ ಯಲ್ಲಿ ಮಿಂದೆದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ :
ಕುಂದಾಪುರ ಹಾಗೂ ಗಂಗೊಳ್ಳಿಯಲ್ಲಿ ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಹಾಗೂ ಸಂತೋಷ್ ಕಾಯ್ಕಿಣಿ, ವಿವಿಧ ಠಾಣೆಗಳ ಠಾಣಾ ಧಿಕಾರಿಗಳ ಉಸ್ತುವಾರಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.