Kota: ಹಾವೇರಿಯ ಹಾಡುಗಾರರ  ಸಂಗೀತವೀಗ ಕೇಳಿಸುತ್ತಿಲ್ಲ!

 ಶ್ರಾವಣದಲ್ಲಿ ಕರಾವಳಿಯಲ್ಲಿ ಕಾಣಸಿಗುತ್ತಿದ್ದ ಹತ್ತಾರು ತಂಡಗಳಲ್ಲಿ ಈಗಿರುವುದು ಒಂದೆರಡು ಮಾತ್ರ

Team Udayavani, Sep 26, 2024, 4:39 PM IST

10

ಕೋಟ: ಕಳೆದ ದಶಕದವರೆಗೆ‌ ಹಿಂದೆ ಹಾವೇರಿ, ಶಿಗ್ಗಾಂವಿ ಮೊದಲದ ಬಯಲುಸೀಮೆ ಭಾಗದವರಾದ ವೇಷಧಾರಿಗಳು ಎಂದು ಕರೆಯುವ ಸುಗಮ ಸಂಗೀತ ಹಾಡುಗಾರರ ಹತ್ತಾರು ತಂಡಗಳು ಶ್ರಾವಣ ಮಾಸದಲ್ಲಿ ಕರಾವಳಿಗೆ ಬರುತ್ತಿತ್ತು. ಎರಡು ತಿಂಗಳು ಇಲ್ಲಿಯೇ ವಾಸ್ತವ್ಯವಿದ್ದು ತಬಲ, ಹಾರ್ಮೋನಿಯಂ, ತಾಳದೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಭಕ್ತಿಗೀತೆ, ನೀತಿ ಪದ್ಯ, ಸುಗಮ ಸಂಗೀತ ಗೀತೆಗಳನ್ನು ಹಾಡಿ ಜನರ ಮನರಂಜಿಸುವುದರ ಜತೆಗೆ ಉದರ ಪೋಷಣೆ ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಎರಡು-ಮೂರು ತಂಡಗಳು ಮಾತ್ರ ಕರಾವಳಿಯಲ್ಲಿ ಕಾಣಸಿಗುತ್ತಿವೆ.

ಹಾವೇರಿಯ ಶಿಗ್ಗಾವಿ ತಾಲೂಕಿನ ಶಂಕರಪ್ಪ-ಚೆನ್ನಪ್ಪ ಮತ್ತು ತಂಡದವರು ಈ ರೀತಿಯ ಕಲೆಯನ್ನು ವಂಶ ಪಾರಂಪರ್ಯವಾಗಿ ತಪ್ಪದೇ ಮುಂದುವರಿಸಿಕೊಂಡು ಬಂದಿದ್ದಾರೆ. ಅತ್ಯಂತ ಸುಶ್ರಾವ್ಯವಾಗಿ ಹಾಡುವ ಇವರಲ್ಲಿ ಬಹುತೇಕರು ಹಿರಿಯರು ಹಾಡುವುದನ್ನು ಕೇಳಿಕೊಂಡು, ಮನೆಯಲ್ಲಿರುವ ಹಾರ್ಮೋನಿಯಂ, ತಬಲಗಳನ್ನು ನುಡಿಸುತ್ತ ಹಾಡುಗಾರರಾಗಿದ್ದಾರೆ.   ಇವರು ಹೇಳುವ ಪ್ರಕಾರ ಕೆಲವು ದಶಕದ ಹಿಂದೆ ಅಲ್ಲಿನ ಒಂದು ಗ್ರಾಮದಲ್ಲೇ ಹತ್ತಾರು ಈ ರೀತಿ ತಂಡಗಳಿದ್ದವು. ಈಗೀಗ ಯುವ ಪೀಳಿಗೆ ಶಿಕ್ಷಣ, ಉನ್ನತ ಉದ್ಯೋಗ ಆರಿಸಿಕೊಂಡಿದ್ದಾರೆ. ಊರೂರು ಅಲೆದು ಹಾಡು ಹೇಳುವುದರ ಬದಲಿಗೆ ಶಾಸ್ತ್ರೀಯವಾಗಿ ಕಲಿತು ಕಛೇರಿಗಳನ್ನು ನೀಡುತ್ತಾರೆ.

ಬಹುರೂಪಿ ಚೌಡಯ್ಯನ ಪರಂಪರೆ
ನಾವು ಹಣಕ್ಕಾಗಿ ಈ ವೃತ್ತಿ ಮಾಡುತ್ತಿಲ್ಲ. ಮನೆಯಲ್ಲೂ ಈಗೀಗ ಬೇಡ ಅನ್ನುತ್ತಾರೆ. ಆದರೆ, ವಚನ, ಕಲೆಯ ಮೂಲಕ ಜನಜಾಗೃತಿ ಮೂಡಿಸುತ್ತಿದ್ದ ಬಹುರೂಪಿ ಚೌಡಯ್ಯನ ಪರಂಪರೆ ಮುಂದುವರಿಸುತ್ತಿದ್ದೇವೆ.  ಹಿರಿಯರ  ಪರಂಪರೆ ನಮ್ಮ ಕಾಲದ ತನಕವಾದ್ರು ಮುಂದುವರಿಸಬೇಕು ಎನ್ನುವ ಕಾರಣಕ್ಕೆ ನಾವಿದನ್ನ ಮಾಡುತ್ತೇವೆ ಎನ್ನುತ್ತಾರೆ ಹಾಡುಗಾರರು.

ಉಡುಪಿ ಜತೆ ಉತ್ತಮ ನಂಟು
ಬೇರೆ-ಬೇರೆ ಜಿಲ್ಲೆಗಳಿಗೆ ತೆರಳಲು ಅವಕಾಶವಿದ್ದರೂ ಇವರಿಗೆ ಮಾತ್ರ ಕರಾವಳಿಯ ಮೇಲೆ ಇನ್ನಿಲ್ಲದ ಪ್ರೀತಿ.  ಹೀಗಾಗಿ ಬೈಂದೂರಿನಿಂದ ಹಿಡಿದು ಕುಂದಾಪುರ, ಬ್ರಹ್ಮಾವರ, ಉಡುಪಿ ತನಕ ಮನೆ-ಮನೆಗೆ ಭೇಟಿ ನೀಡುತ್ತಾರೆ. ಮೊದಲೆಲ್ಲ ದೇಗುಲದ ಜಗಳಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಮನೆ-ಮನೆಗೆ ತಿರುಗುತ್ತಿದ್ದರು. ಆದರೆ ಈಗ ಕಾಲಬದಲಾಗಿದೆ. ಯಾವುದಾದರು ಒಂದು ಕಡೆ ರೂಮ್‌ ಬಾಡಿಗೆಗೆ ಪಡೆದು ವಾಸ್ತವ್ಯವಿರುತ್ತಾರೆ. ಇಲ್ಲಿನ ಚೌತಿ, ನವರಾತ್ರಿ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಅವರಿಂದ ಹಾಡಿಸುವುದುಂಟು.

ಕಲೆಗೆ ಬೆಲೆ ಕೊಡಿ ಸಾಕು
ನಾವು ಎಲ್ಲ ಅಂಗಡಿ, ಮನೆಗಳಿಗೆ ಹೋಗುವುದಿಲ್ಲ. ಗೌರವ ನೀಡುವವರನ್ನ, ನಮ್ಮೊಳಗಿರುವ ಸಂಗೀತ ಕಲೆಗೆ ಬೆಲೆ ಕೊಡುವವರನ್ನ ಆಯ್ಕೆ ಮಾಡಿಕೊಂಡು ಹಾಡು ಹೇಳುತ್ತೇವೆ. ಕೆಲವು ಮಂದಿ ಚಿಲ್ಲರೆ ಹಣ ಕೊಡುತ್ತಾರೆ. ಇನ್ನು ಕೆಲವರು ನೂರಾರು ರೂ. ಕೊಡುತ್ತಾರೆ. ಹಣ ಎಷ್ಟು ಕೊಡ್ತಾರೆ ಎನ್ನುವುದು ಮುಖ್ಯವಲ್ಲ. ನಮ್ಮನ್ನ ಗೌರವದಿಂದ ಕಂಡರೆ, ಚೆಂದದಿಂದ  ಮಾತನಾಡಿದರೆ  ಅದೇ ಖುಷಿ.
-ಚೆನ್ನಪ್ಪ, ಹಾವೇರಿ, ಹಾಡುಗಾರ ತಂಡದ ಸದಸ್ಯ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KMC: New Medical Oncology Outpatient, Chemotherapy Day Care Center inaugurated

KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ

ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್

Naxaliam-End

Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!

Naxal-encounter-Vikram-1

Naxal Encounter: ಬಂಧಿತ ಸುರೇಶ್‌ ಅಂಗಡಿ ಮಾಹಿತಿಯಂತೆ ʼಆಪರೇಷನ್‌ ವಿಕ್ರಂ ಗೌಡʼ

Pranav-mohanthi

Naxal Encounter: ನಕ್ಸಲ್‌ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.