ಕೋಟ:ದಲಿತರಿಗೆ ಕಾನೂನು ಮಾಹಿತಿ ಶಿಬಿರದಲ್ಲಿ ಗಲಾಟೆ

Team Udayavani, Dec 7, 2017, 10:32 AM IST

0612kota4e.jpg

ಕೋಟ: ಕೋಟ ಗ್ರಾ.ಪಂ. ಆಶ್ರಯದಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ದಲಿತರಿಗೆ ಕಾನೂನಿನ ಮಾಹಿತಿ ನೀಡುವ ಸಲುವಾಗಿ ಮಂಗಳವಾರ ಬೆಳಗ್ಗೆ ಆಯೋಜಿಸಿದ್ದ   ಕಾನೂನು ಮಾಹಿತಿ ಶಿಬಿರ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದ ಸಂದರ್ಭ ದಲಿತರ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಪ್ರಕರಣ ಠಾಣೆಯ ಮೆಟ್ಟಿಲೇರಿತು.

ಸಭೆಯ ಆರಂಭದಲ್ಲಿ  ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಗೈರಾದ ಕುರಿತು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಭೆ ರದ್ದುಪಡಿಸುವಂತೆ ಆಗ್ರಹಿಸಿದರು.  ಆದರೆ ಇವರ ಬೇಡಿಕೆಯನ್ನು ಪುರಸ್ಕರಿಸದೆ ಸಭೆ ಮುಂದುವರಿಸಲಾಯಿತು. ಅನಂತರ  ದಲಿತರ ವಿಶೇಷ  ಸವಲತ್ತುಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಫಲಾನುಭವಿಗಳಿಗೆ ವಿವಿಧ ಸೌಕರ್ಯ ವಿತರಿಸಲಾಯಿತು.

ಎರಡು ತಂಡಗಳ ನಡುವೆ ಗಲಾಟೆ
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ವಕೀಲ ಟಿ. ಮಂಜುನಾಥ ಅವರು ಕಾನೂನು ಕುರಿತು ಮಾಹಿತಿ ನೀಡುವ ಸಂದರ್ಭ ದಲಿತ ದೌರ್ಜನ್ಯದ ಕುರಿತು ಪೀಠಿಕೆಯ ಮಾತುಗಳನ್ನಾಡಿದರು. ಈ ಸಂದರ್ಭ ದಲಿತ ಸಂಘಟನೆಯ ಮುಖಂಡ  ಶ್ಯಾಮ್‌ ಅವರು ನೀವು ಬೇರೆ ವಿಚಾರ ಮಾತನಾಡಬೇಡಿ. ಕೇವಲ ಕಾನೂನಿನ ಮಾಹಿತಿ ನೀಡಿ ಎಂದು ಆಕ್ಷೇಪಿಸಿದರು. ಇದರಿಂದ ಅಸಮಾಧಾನಗೊಂಡ ಟಿ.ಮಂಜುನಾಥ  ನಿಮ್ಮ ಬಳಿ ಕೇಳಿಕೊಂಡು ನಾನು ಮಾಹಿತಿ ನೀಡಬೇಕಾದ ಅಗತ್ಯವಿಲ್ಲ ಎಂದು ಸಭಾ ವೇದಿಕೆಯಿಂದ ಮುಂದೆ  ಬಂದು ಉತ್ತರಿಸಿದರು. ಈ ಸಂದರ್ಭ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ವನಿತಾ ಎಸ್‌. ಆಚಾರ್ಯ, ಸಮನ್ವಯಾಧಿಕಾರಿ ಅರುಣ್‌ ಕುಮಾರ್‌ ಮುಂತಾದವರು ಅವರನ್ನು ಸಮಾಧಾನಪಡಿಸಲು ಮುಂದಾದರು. ಆದರೆ ಸಭೆಯಲ್ಲಿ ಉಪಸ್ಥಿತರಿದ್ದ ದಲಿತ ಮುಖಂಡರ  ನಡುವೆ ಎರಡು ಗುಂಪುಗಳಾಗಿ ವಾದ-ಪ್ರತಿವಾದ ತೀವ್ರಗೊಂಡು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.  ಅನಂತರ ಪರಿಸ್ಥಿತಿಯನ್ನು ಕೊಂಚ ತಿಳಿಗೊಳಿಸಿ ಸಭೆ ಮುಂದುವರಿಸಲಾಯಿತು. ಈ ನಡುವೆ ದಲಿತ ಸಂಘಟನೆಯೊಂದರ ಮುಖಂಡೆ ಆರತಿ ಅವರು ಗ್ರಾ.ಪಂ. ವಿರುದ್ಧ ಹರಿಹಾಯ್ದರು. ಸಭೆಯ ಅನಂತರ ಠಾಣೆಗೆ ತೆರಳಿ ಅಧ್ಯಕ್ಷರ ವಿರುದ್ಧ ದಲಿತ ನಿಂದನೆ ಪ್ರಕರಣ ದಾಖಲಿಸಲು ಮುಂದಾದರು.  ಠಾಣೆಯಲ್ಲಿ  ಮಾತುಕತೆ ನಡೆಸಿ ಮನವೊಳಿಸಲಾಯಿತು.

ಅನಂತರ ಸಂಜೆ ಇದೇ ವಿಚಾರವಾಗಿ ಕೋಟ ಠಾಣೆಯ ಎದುರು ಎರಡು ಗುಂಪುಗಳ ನಡುವೆ ಮತ್ತೆ ಗಲಾಟೆ ನಡೆಯಿತು.

ಟಾಪ್ ನ್ಯೂಸ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

3

Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು

1-vandaru-kamabala

Kambala; ವಂಡಾರು ಕಂಬಳ: ಇದು ಹರಕೆಯ ಸೇವೆ, ಇಲ್ಲಿ ಸ್ಪರ್ಧೆಯಿಲ್ಲ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.