Kota: ನವವಿವಾಹಿತೆಯ ದಾರುಣ ಹತ್ಯೆ; ಪತಿಯಿಂದಲೇ ಕೃತ್ಯ ಶಂಕೆ; ಆರೋಪಿ ಪೊಲೀಸ್ ವಶಕ್ಕೆ
Team Udayavani, Aug 23, 2024, 12:29 PM IST
ಕೋಟ: ಕೇವಲ 8 ತಿಂಗಳ ಹಿಂದೆ ವಿವಾಹವಾಗಿದ್ದ ದಂಪತಿಯ ಜಗಳವು ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ಶುಕ್ರವಾರ ಸಂಭವಿಸಿದೆ.
ಬೀದರ್‌ನ ದೊಣಗಾಪುರ ನಿವಾಸಿ ಜಯಶ್ರೀ (31) ಹತ್ಯೆಯಾದವರು. ದೇಗುಲಗಳಲ್ಲಿ ಅಡುಗೆ ಸಹಾಯಕ ನಾಗಿದ್ದ ಗುಂಡ್ಮಿ ಗ್ರಾಮದ ನಿವಾಸಿ ಕಿರಣ್ ಉಪಾಧ್ಯ (44) ಆರೋಪಿ.
ಮದುವೆಯಾಗಿ ಒಂದೆರಡು ತಿಂಗಳಲ್ಲೇ ಮನೆ ತೊರೆದಿದ್ದ ಇವರು ಎಪ್ರಿಲ್‌ನಿಂದ ಕಾರ್ಕಡದ ಪರಿಚಿತ ರೊಬ್ಬರ ಮನೆಯ ಮೊದಲನೇ ಮಹಡಿ ಯಲ್ಲಿ ಬಾಡಿಗೆಗಿದ್ದರು. ಚಿನ್ನ ಹಾಗೂ ಹಣದ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಅದು ತಾರಕ್ಕಕ್ಕೇರಿ ಕೊಲೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಗುರುವಾರ ಇಬ್ಬರ ನಡುವೆ ಮಧ್ಯರಾತ್ರಿ ತನಕ ಜಗಳವಾಗಿದೆ. ಬಳಿಕ ಕಿರಣ್ ಕತ್ತಿಯಿಂದ ಮನಸೋ ಇಚ್ಛೆ ಕಡಿದಿದ್ದಾನೆ. ಈ ಸಂದರ್ಭ ಕಿರಣ್‌ನ ಕೈ ಬೆರಳಿಗೂ ಗಾಯವಾಗಿದೆ.
ಕಥೆ ಕಟ್ಟಲು ಮುಂದಾಗಿದ್ದ
ದಂಪತಿ ವಾಸವಿದ್ದ ಮನೆಯ ಕೆಳ ಭಾಗ ದಲ್ಲಿ ಮನೆಯ ಮಾಲಕರು ವಾಸ ವಿದ್ದು, ಅವರು ಕೆಲಸ ನಿಮಿತ್ತ ಹೆಚ್ಚಿನ ದಿನ ಮಂಗಳೂರಿನಲ್ಲಿರುತ್ತಿದ್ದರು. ಘಟನೆ ನಡೆದ ದಿನವೂ ಇವರು ಮನೆ ಯಲ್ಲಿರಲಿಲ್ಲ. ಹೀಗಾಗಿ ಕೊಲೆಯ ಕುರಿತು ಯಾರಿಗೂ ತಿಳಿದಿರಲಿಲ್ಲ.
ಕೊಲೆ ನಡೆಸಿದ ಬಳಿಕ ಕೆಲವು ಗಂಟೆಗಳ ಕಾಲ ಆತ ಶವದ ಜತೆಗಿದ್ದ. ಬಳಿಕ ಮೃತದೇಹವನ್ನು ಮಹಡಿ ಯಿಂದ ಕೆಳಗೆ ತಂದು ಬೇರೆಡೆ ಸಾಗಿಸಲು ಪ್ರಯತ್ನಿಸಿದ್ದ. ಗೊಬ್ಬರದ ಗುಂಡಿಯಲ್ಲಿ ಹೂತು ಹಾಕಲೂ ಯೋಜನೆ ರೂಪಿ ಸಿದ್ದ. ಕೊನೆಗೆ ಯೋಜನೆ ಬದ ಲಾಯಿಸಿ ಸಂಬಂಧಿಗಳು, ಸ್ನೇಹಿತ ರಿಗೆ ಕರೆ ಮಾಡಿ, ಪತ್ನಿ ಮಹಡಿ ಮೆಟ್ಟಿಲಿನಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ,ಮಾತನಾಡುತ್ತಿಲ್ಲ ಎಂದು ಕಥೆ ಕಟ್ಟಿದ್ದ. ಆದರೆ ಅವರಿಗೆ ಅನುಮಾನ ಬಂದಿದ್ದು ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಅನಂತರ ಬೆಳಗಿನ ಜಾವ 5.30ರ ಸುಮಾರಿಗೆ ಕೋಟ ಜೀವನ್‌ಮಿತ್ರ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಕರೆಸಿಕೊಂಡು ಉಡುಪಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದರು.
ಸಾಕ್ಷಿ ನಾಶ ಯತ್ನ
ಆಸ್ಪತ್ರೆಯಿಂದ ನೇರವಾಗಿ ಮನೆಗೆ ಬಂದು ರಕ್ತದ ಕಲೆಗಳನ್ನು ಅಳಿ ಸಲು ಪ್ರಯತ್ನಿಸಿದ್ದ. ಕೂಡಲೇ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದು, ಕೋಟ ಪೊಲೀಸರು ಆಗಮಿಸಿ ಆರೋಪಿ ಯನ್ನು ವಶಕ್ಕೆ ಪಡೆದಿದ್ದಾರೆ. ಜಯಶ್ರೀಯವರ ಮನೆ ಯವರು ಶನಿವಾರ ಕೋಟಕ್ಕೆ ಬರಲಿದ್ದು, ಅನಂತರ ಅವರಿಂದ ದೂರು ದಾಖಲಿಸಿ ಕೊಂಡು ಶವವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಎಸ್.ಟಿ. ಸಿದ್ಧಲಿಂಗಪ್ಪ, ಡಿವೈಎಸ್‌ಪಿ ಡಿ.ಟಿ.ಪ್ರಭು, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ, ಕೋಟ ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ ಸುಧಾಪ್ರಭು, ಉಡುಪಿ ಜಿಲ್ಲಾ ತೆರಳಚ್ಚು ತಂಡ, ಎಫ್‌ಎಸ್‌ಎಲ್ ತಂಡ ಮತ್ತು ಕೋಟ ಠಾಣೆಯ ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೂರ್ವಯೋಜಿತ ಕೃತ್ಯ?
ಸ್ಥಳೀಯರ ಮಾಹಿತಿ ಪ್ರಕಾರ ಆರೋಪಿಯು ಗುರುವಾರ ಸಂಜೆ ಪೇಟೆ ಯಲ್ಲಿ ಕತ್ತಿಯೊಂದನ್ನು ಖರೀದಿಸಿ ಮನೆಗೆ ತಂದಿದ್ದ ಎನ್ನಲಾಗಿದೆ ಹಾಗೂ ತನ್ನ ಪತ್ನಿ ಕುರಿತು ಆಪ್ತರಲ್ಲಿ ಅಸಮಾಧಾನದ ಮಾತುಗಳನ್ನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕೊಲೆ ಕುರಿತು ಆರೋಪಿ ಪೂರ್ವ ತಯಾರಿ ನಡೆಸಿರುವ ಅನುಮಾನಗಳಿದೆ.
ಜಯಶ್ರೀಗೆ
ಎರಡನೇ ವಿವಾಹ
ಬೀದರ್ ನಿವಾಸಿಯಾಗಿದ್ದ ಜಯಶ್ರೀ ಪಂಚಮಸಾಲಿ ಸಮು ದಾಯಕ್ಕೆ ಸೇರಿದ್ದು, ಆಕೆಯ ಮನೆಯವರು ದೇಗುಲದ ಅರ್ಚಕ ರಾಗಿದ್ದರು. ಈಕೆಗೆ ಹಿಂದೆ ಮಂಗಳೂರು ಮೂಲದ ವ್ಯಕ್ತಿ ಜತೆ ವಿವಾಹವಾಗಿದ್ದು, ಆತ ಮೃತಪಟ್ಟಿದ್ದ.
ರೀಲ್ಸ್ ಹುಚ್ಚು
ಜಯಶ್ರೀಗೆ ಸಾಕಷ್ಟು ರೀಲ್ಸ್ ಹುಚ್ಚು ಇತ್ತು. ತಾನು ಒಂಟಿಯಾಗಿ ಹಾಗೂ ಕೆಲವೊಮ್ಮೆ ಗಂಡನೊಂದಿಗೆ ಸೇರಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಳು. ಆ ವೀಡಿಯೋಗಳಲ್ಲಿ ದಂಪತಿ ಅನ್ಯೋನ್ಯವಾಗಿ ಕಂಡು ಬರುತ್ತಿದ್ದರು. ಜತೆಗೆ ಆಕೆಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ವಿಪರೀತ ಚಟವಿದ್ದು, ಇದಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸುತ್ತಿದ್ದಳು. ಈ ಬಗ್ಗೆಯೂ ಗಂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ನನಗೆ ಹಣ, ಕಾರು, ಒಳ್ಳೆಯ ಮನೆ ಬೇಕು ಎನ್ನುವ ಬೇಡಿಕೆಗಳು ಆಕೆಯಿಂದ ಯಾವಾಗಲೂ ಬರುತ್ತಿತ್ತು ಎನ್ನಲಾಗಿದೆ.
ದಂಪತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪತಿ ಕಿರಣ್‌ನಿಂದಲೇ ಈ ಕೃತ್ಯ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
– ಡಾ| ಅರುಣ್ ಕುಮಾರ್, ಎಸ್.ಪಿ. ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.