Kota: ರಾಷ್ಟ್ರೀಯ ಹೆದ್ದಾರಿಯಲ್ಲಿ ಸೌಲಭ್ಯ ಕೊರತೆ

ಕುಂದಾಪುರ-ತಲಪಾಡಿ ರಾ. ಹೆದ್ದಾರಿ ನಿರ್ವಹಣೆಯಲ್ಲಿ ಸಮಸ್ಯೆಗಳ ಸರಮಾಲೆ; ಹೈವೇ ಕ್ಯಾಂಟೀನ್‌ ಬಂದ್‌, ಶೌಚಾಲಯಗಳಿಲ್ಲ; ಅಡಚಣೆರಹಿತ ಸಂಚಾರಕ್ಕೆ ಕುತ್ತು

Team Udayavani, Nov 28, 2024, 3:17 PM IST

8(1

ಕೋಟ: ಕುಂದಾಪುರ- ತಲಪಾಡಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ಸಾಲು-ಸಾಲು ಸಮಸ್ಯೆಗಳು ಕಂಡು ಬರುತ್ತಿವೆ. ಹೈವೇ ಕ್ಯಾಂಟೀನ್‌ ಸೌಲಭ್ಯ, ಬೀದಿ ದೀಪ ನಿರ್ವಹಣೆ, ಅಂಗವಿಕಲರಿಗೆ ಶೌಚಾಲಯ ವ್ಯವಸ್ಥೆ ಹೀಗೆ ಹಲವಾರು ಬಗೆಯ ಸೌಕರ್ಯ ನೀಡುವಲ್ಲಿ ಕಂಪೆನಿ ಹಿಂದುಳಿದಿದ್ದು ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರಿಗೆ ಕುಡಿಯಲು ನೀರು, ಲಘು ಆಹಾರಗಳು ಸುಲಭವಾಗಿ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲ ಟೋಲ್‌ ಪ್ಲಾಜಾದಿಂದ 200-250 ಮೀಟರ್‌ ದೂರದೊಳಗೆ ಮಿನಿ ಕ್ಯಾಂಟೀನ್‌ಗಳು ಸೇವೆ ನೀಡಬೇಕು ಎಂದು 2022ರಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿಯಮ ರೂಪಿಸಿತ್ತು. ಅದರಂತೆ ಹೈವೇ ನೆಸ್ಟ್‌ ಎಂಬ ಮಿನಿ ಕ್ಯಾಂಟೀನ್‌ಗಳು ಕಾರ್ಯಾರಂಭಿಸಿದ್ದವು. ಆದರೆ ಇದೀಗ ಐದಾರು ತಿಂಗಳಿಂದ ಉಡುಪಿ, ದ.ಕ. ಉಭಯ ಜಿಲ್ಲೆಗಳಲ್ಲಿ ಈ ಕ್ಯಾಂಟೀನ್‌ಗಳ ಸ್ಥಗಿತಗೊಂಡಿದೆ. ಹೆದ್ದಾರಿಯಲ್ಲಿ ರಾತ್ರಿ 11 ಗಂಟೆ ವೇಳೆಗೆ ಎಲ್ಲ ಕ್ಯಾಂಟೀನ್‌, ಅಂಗಡಿಗಳು ಬಾಗಿಲು ಮುಚ್ಚುವುದರಿಂದ ಪ್ರಯಾಣಿಕರಿಗೆ ಆಹಾರ-ನೀರಿಗೆ ತೊಂದರೆ ಉಂಟಾಗುತ್ತದೆ.

ಈ ಬಗ್ಗೆ ಕೇಳಿದರೆ ಈ ಕ್ಯಾಂಟೀನ್‌ಗಳು ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರದ ಮೂಲಕವೇ ನಿರ್ವಹಣೆಗೊಳ್ಳುತ್ತದೆ. ಹೀಗಾಗಿ ಇದು ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ರಸ್ತೆ ನಿರ್ವಹಣೆ ಕಂಪೆನಿಯವರು ಹೇಳುತ್ತಾರೆ. ಪ್ರಯಾಣಿಕರಿಗೆ ಹೈವೇ ನೆಸ್ಟ್‌ ಕ್ಯಾಂಟೀನ್‌ ಅಗತ್ಯವಿದ್ದು ಆದಷ್ಟು ಬೇಗ ಪುನಃ ಆರಂಭಗೊಳ್ಳಬೇಕಿದೆ.

ನೀರಿನ ಎಟಿಎಂ, ಟಾಯ್ಲೆಟ್‌ ಬೇಕು
ಹೈವೇ ಕ್ಯಾಂಟೀನ್‌ಗಳ ಅಕ್ಕ-ಪಕ್ಕದಲ್ಲೇ ನೀರಿನ ಎ.ಟಿ.ಎಂ. ಇರಬೇಕು. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಮತ್ತು ಟೋಲ್‌ ಪ್ಲಾಜಾದ ಎರಡೂ ಕಡೆ ಕ್ಯಾಂಟೀನ್‌ ಇದ್ದು ಇದರ ಪಕ್ಕದಲ್ಲೇ ಶೌಚಾಲಯವಿರಬೇಕು. ವಿಕಲಚೇತನರು ಶೌಚಾಲಯಕ್ಕೆ ಹೋಗಿ ಬರುವಂತೆ ವ್ಯವಸ್ಥೆ ಮಾಡಿರಬೇಕು ಎನ್ನುವ ನಿಯಮವಿದೆ. ಆದರೆ ಎಲ್ಲ ಕಡೆಗಳಲ್ಲಿ ರಸ್ತೆಯ ಒಂದು ಕಡೆಯಲ್ಲಿ ಮಾತ್ರ ಶೌಚಾಲಯ ಕಂಡುಬರುತ್ತದೆ. ಅಲ್ಲಿ ಕೂಡ ವಿಕಲಚೇತನರಿಗೆ ಯಾವುದೇ ವ್ಯವಸ್ಥೆ ಇರುವುದಿಲ್ಲ.

ಹಲವು ಕಡೆ ಬಾಯ್ದೆರೆದ ರಸ್ತೆಗಳು
ವಾಹನಕ್ಕೆ ಟೋಲ್‌ ಪಾವತಿಸಿದ ಅನಂತರ ಅಡಚಣೆ ರಹಿತ ಸಂಚಾರಕ್ಕೆ ಪೂರಕವಾದ ರಸ್ತೆ ವ್ಯವಸ್ಥೆ ಇರಬೇಕು ಎನ್ನುವ ನಿಯಮವಿದೆ. ಆದರೆ ಹೆದ್ದಾರಿಯಲ್ಲಿ ಸಾಸ್ತಾನದಿಂದ ಕುಂದಾಪುರ ತನಕ ರಸ್ತೆಗಳು ಹಲವು ಕಡೆ ಬಾಯ್ದೆರೆದಿದ್ದು ನಿಧಾನವಾಗಿ ಮುಂದೆ ಸಾಗಬೇಕಾದ ಪರಿಸ್ಥಿತಿ ಇದೆ. ಬೀದಿ ದೀಪ ಹಾಳಾದರೆ 24 ಗಂಟೆಯೊಳಗೆ ಅದರ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎನ್ನುವ ನಿಯಮವಿದೆ. ಅದೂ ಕೂಡ ಪಾಲನೆಯಾಗುತ್ತಿಲ್ಲ.

ಹೆದ್ದಾರಿಯಲ್ಲಿ ವಾಹನಗಳು ಕೆಟ್ಟು ನಿಂತರೆ ಅದನ್ನು ಬದಿಗೆ ಸರಿಸಲು ಟೋಯಿಂಗ್‌ ವಾಹನದ ಸೌಲಭ್ಯವಿರಬೇಕು. ಆದರೆ ದೊಡ್ಡ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್‌ ಮಾಡಲು ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ದೂರುಗಳಿದೆ.

ರಾತ್ರಿ 11 ಗಂಟೆ ಬಳಿಕ ಪ್ರಯಾ ಣಿಕರಿಗೆ ಆಹಾರ- ನೀರಿಗೆ ತೊಂದರೆ
ಈಗಾಗಲೇ ಸೂಚನೆ ನೀಡಿದ್ದೇನೆ
ಹೆದ್ದಾರಿಯಲ್ಲಿನ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಹೆದ್ದಾರಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು

ಕ್ಯಾಂಟೀನ್‌ ಟೆಂಡರ್‌ ಹಂತದಲ್ಲಿದೆ
ಹೈವೇ ಕ್ಯಾಂಟೀನ್‌ ಟೆಂಡರ್‌ ಹಂತದಲ್ಲಿದೆ. ಡಾಮರು ಮಿಶ್ರಣ ಘಟಕ ಮಳೆಗಾಲದ ಕಾರಣಕ್ಕೆ ಸ್ಥಗಿತಗೊಂಡಿದ್ದರಿಂದ ರಸ್ತೆ ದುರಸ್ತಿ ತಡವಾಯಿತು. ಶೀಘ್ರವಾಗಿ ದುರಸ್ತಿ ಆರಂಭಿಸಲಾಗುವುದು. ಅಂಗವಿಕಲರ ಶೌಚಾಲಯ, ಎರಡೂ ಕಡೆ ಶೌಚಾಲಯ ಮೊದಲಾದ ನಿಯಮ 2020ರಲ್ಲಿ ರೂಪಿಸಲಾಗಿದ್ದು, ಈ ರಸ್ತೆಯ ಒಡಂಬಡಿಕೆ 2010ರಲ್ಲೇ ನಡೆದಿರುವುದರಿಂದ ಈ ಸೌಲಭ್ಯಗಳು ಒಳಗೊಂಡಿಲ್ಲ.
-ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿ

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

CT Ravi ಪರ ಪ್ರತಿಭಟನೆ: 30 ಕ್ಕೂ ಹೆಚ್ಚು ಮಂದಿಗೆ ನೋಟಿಸ್‌

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

Bihar ಸ್ಪರ್ಧಾತ್ಮಕ ಪರೀಕ್ಷೆ ರದ್ದುಆಗ್ರಹಿಸಿ ಪ್ರಶಾಂತ್‌ ಕಿಶೋರ್‌ ನಿರಶನ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ

RBI: 2000ರೂ. ಮುಖಬೆಲೆಯ 6,691 ಕೋಟಿಯ ನೋಟು ವಾಪಸಾಗಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

1-st

ಜ.26-30: ಅತ್ತೂರು ಸಂತ ಲಾರೆನ್ಸ್‌ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

11

Kota: ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಂಪೂರ್ಣ ಕ್ಯಾಶ್‌ಲೆಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-loka

Kalaburagi;ಅಂಗನವಾಡಿ ಸಹಾಯಕಿ ಹುದ್ದೆಗೂ ಲಂಚ: ಇಬ್ಬರು ಲೋಕಾ ಬಲೆಗೆ

complaint

Manipal: ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ; ದೂರು ದಾಖಲು

de

Kundapura: ಮಲಗಿದ್ದಲ್ಲಿಯೇ ವ್ಯಕ್ತಿ ಸಾವು

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Farmers Protest: ರೈತ ದಲ್ಲೇವಾಲ್‌ ಚಿಕಿತ್ಸೆ ವಿಚಾರದಲ್ಲಿ ಪಂಜಾಬ್‌ನ ನಡೆಗೆ ಸುಪ್ರೀಂ ಗರಂ

Brahmavar

Kumbhashi: ಅಪಘಾತದ ಗಾಯಾಳು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.