ಕೋಟೇಶ್ವರ; ಬಹುಮುಖ ಪ್ರತಿಭೆ ರಂಜಿತಾ ಮಲ್ಯ
ಆರ್ಟಿಸ್ಟ್ ಕಲರ್, ಆಯಿಲ್ ಪೈಂಟಿಗ್ ಗಳನ್ನು ನಿರಾಯಾಸವಾಗಿ ಮಾಡುತ್ತಾರೆ
Team Udayavani, Dec 29, 2022, 12:59 PM IST
ಕೋಟೇಶ್ವರ: ಬದುಕಿನಲ್ಲಿ ಛಲ ಆತ್ಮವಿಶ್ವಾಸ ಪರಿಶ್ರಮ ಹಾಗೂ ಇಚ್ಚಾಶಕ್ತಿ ಇದ್ದಲ್ಲಿ ಸಾಧನೆಯ ಸಾಧಕರಾಗಲು ಸಾಧ್ಯ ಎನ್ನುವುದಕ್ಕೆ ಕೋಟೇಶ್ವರದ ವರದರಾಜ ಎಂ.ಶೆಟ್ಟಿ ಸರಕಾರಿ ಪದವಿ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ರಂಜಿತಾ ಮಲ್ಯ ಸಾಕ್ಷಿಯಾಗಿದ್ದಾರೆ.
13 ವರ್ಷಗಳ ಸತತ ಪ್ರಯತ್ನ ಚಿತ್ರಕಲೆ ಹಾಗೂ ರಂಗೋಲಿಯಲ್ಲಿ ಕಳೆದ 13 ವರ್ಷಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ರಂಜಿತಾ ಮಲ್ಯ ಅವರು 3ನೇ ತರಗತಿಯಲ್ಲಿರುವಾಗಲೇ ತಾಯಿ ಕಲಿಸಿದ್ದ ರಂಗೋಲಿಯಿಂದ ಪ್ರೇರಿತರಾಗಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಜೆ.ಸಿ.ಐ. ನಡೆಸಿದ್ದ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ್ದರು. ಕುಂದಾಪುರ ದಿ| ರಾಧಾಕೃಷ್ಣ ಮಯ್ಯ ಹಾಗೂ ಸುಮತಿ ಮಲ್ಯ ಅವರ ಪುತ್ರಿಯಾಗಿರುವ ಈಕೆ ಶಾಲಾ ದಿನಗಳಲ್ಲಿ ಕೇವಲ ಸ್ಪರ್ಧೆಗಳಿಗೆ ಸೀಮಿತವಾಗಿದ್ದ ರಂಗೋಲಿ ಹಾಕುವ ಹವ್ಯಾಸ ಇದೀಗ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಧಾರ್ಮಿಕ ಮನೋಭಾವದಿಂದ ಹಾಕಿ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.
ವೈವಿಧ್ಯಮಯ ರಂಗೋಲಿಗಳು
ಚುಕ್ಕಿ ರಂಗೋಲಿ, ಫ್ರೀ ಹ್ಯಾಂಡ್ ರಂಗೋಲಿ, 3ಡಿ ರಂಗೋಲಿ, ಡಿವೈನ್ ರಂಗೋಲಿ, ಹೂವಿನ ರಂಗೋಲಿ, ಸಂಸ್ಕಾರ ರಂಗೋಲಿ, ಅಕ್ಕಿ ಕಾಳಿನಿಂದ ಮಾಡಿದ ರಂಗೋಲಿ, ನೀರಿನ ಮೇಲೆ ತೇಲುವ ರಂಗೋಲಿ, ಅಂಡರ್ ವಾಟರ್ ರಂಗೋಲಿ, ಹಾಗೂ ದೇವರ ರಂಗೋಲಿಗಳನ್ನು ಹಾಕುವುದು ರಂಜಿತಾಗೆ ಕರಗತವಾದ ರಂಗೋಲಿಗಳು.
ವಿವಿಧೆಡೆ ರಂಗೋಲಿ
ರಂಜಿತ ಮಲ್ಯ ಅವರಿಗೆ ರಂಗೋಲಿಗಳಿಗೆ ಉತ್ತಮ ವೇದಿಕೆಯೆಂದರೆ ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನ. ಇಲ್ಲಿ ಪ್ರತಿವರ್ಷ ವಿಶ್ವರೂಪ ದರ್ಶನದಲ್ಲಿ ರಂಗೋಲಿಯನ್ನು ರಚಿಸಿ ಆಡಳಿತ ಮಂಡಳಿಯವರ ಹಾಗೂ ಭಕ್ತರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ಶ್ರೀ ಗಣೇಶ ಕ್ಯಾಶ್ಯೂ ಸಮೂಹ ಸಂಸ್ಥೆ ಬೆಳ್ವೆ ಇಲ್ಲಿ ಏಳು ವರ್ಷಗಳಿಂದ ದೀಪಾವಳಿ ಕಾರ್ಯಕ್ರಮದಲ್ಲಿ ರಂಗೋಲಿಯನ್ನು ರಚಿಸಿದ್ದಾರೆ.
ಕಳೆದ ವರ್ಷ ತಿರುಪತಿ ಶ್ರೀ ವೆಂಕಟೇಶ್ವರನ 11 ಅಡಿಗಳ ರಂಗೋಲಿಯನ್ನು ನಿರಂತರ 11 ಗಂಟೆಗಳ ಪರಿಶ್ರಮದಿಂದ ಹಾಗೂ ಈ ವರ್ಷ ದೀಪಾವಳಿಯಂದು ಕೋದಂಡರಾಮನ 12 ಅಡಿಗಳ ರಂಗೋಲಿಯನ್ನು ನಿರಂತರ 11.30 ಗಂಟೆಗಳ ಕಠಿನ ಪರಿಶ್ರಮದಿಂದ ರಚಿಸಿರುತ್ತಾರೆ. ಚಿತ್ರಕಲೆಯಲ್ಲೂ ಸಾಧನೆ ಮಾಡಿರುವ ಅವರು ಪೆನ್ಸಿಲ್ ಶೇಡಿಂಗ್, ವಾಟರ್‌ಕಲರ್, ಆರ್ಟಿಸ್ಟ್ ಕಲರ್, ಆಯಿಲ್ ಪೈಂಟಿಗ್ ಗಳನ್ನು ನಿರಾಯಾಸವಾಗಿ ಮಾಡುತ್ತಾರೆ.ಸಾಯಿಬಾಬ, ಗಣಪತಿ, ಆಂಜನೇಯ , ತಿರುಪತಿ ವೆಂಕಟ ಸ್ವಾಮೀಯ ಚಿತ್ರಗಳನ್ನು ಬಿಡಿಸಿರುತ್ತಾರೆ.
ತಾಲೂಕು, ಜಿಲ್ಲಾ, ರಾಜ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಳಿಸಿದ್ದಾರೆ. ವಿಶ್ವವಿದ್ಯಾಲಯ ಮಟ್ಟದಲ್ಲೂ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ, ಕನ್ನಡ ನುಡಿ ಜಾಣ ಪ್ರಶಸ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಇವರ ಮುಡಿಗೇರಿದೆ. ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಈಕೆ ಚಾಂಪಿಯನ್ ಆಗಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಕಲೆಯಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿರುವ ರಂಜಿತಮಲ್ಯ ರಂಗೋಲಿ ಹಾಗೂ ಚಿತ್ರಕಲೆಯಲ್ಲಿ ಹೊಸ ಅನ್ವೇಷಣೆಯನ್ನು ಸಾಧಿಸುತ್ತಿರುವ ಯುವಪ್ರತಿಭಾವಂತ ಕಲಾವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಜನಾರ್ದನ ರೆಡ್ಡಿ ಪಟಾಲಂ ರಾಜಕೀಯವಾಗಿ ಮತ್ತೆ ಬೆಳೆಯದಂತೆ ಮಾಡಬೇಕು: ಸಿದ್ದರಾಮಯ್ಯ
Udupi: ಭತ್ತದ ಕಟಾವು ಚುರುಕು; ದ್ವಿದಳ ಧಾನ್ಯ ಬಿತ್ತನೆಗೆ ಸಿದ್ಧತೆ
Bengaluru: ಬಿಷಪ್ ಕಾಟನ್ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್: ಆತಂಕ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.