ಡಿ. 8 ರಂದು ಕೋಟಿಲಿಂಗೇಶ್ವರ ಕೊಡಿಹಬ್ಬ: ರಂಗೋತ್ಸವ
ಭಕ್ತರಿಂದ ಶತರುದ್ರಾಭಿಷೇಕ ಹಾಗೂ ಸಣ್ಣರಂಗಪೂಜೆ ನಡೆಯಿತು.
Team Udayavani, Dec 7, 2022, 3:36 PM IST
ಕೋಟೇಶ್ವರ: ಇಲ್ಲಿನ ಶ್ರಿ ಕೋಟಿಲಿಂಗೇಶ್ವರ ದೇಗುಲದಲ್ಲಿ ಡಿ. 8 ರಂದು ನಡೆಯಲಿರುವ ಕೊಡಿಹಬ್ಬದ ಸಲುವಾಗಿ ಡಿ. 6ರಂದು ದೇಗುಲದಲ್ಲಿ ರಂಗೋತ್ಸವ ಹಾಗೂ ಅಶ್ವವಾಹನೋತ್ಸವ ನಡೆಯಿತು.
ದೇಗುಲದಲ್ಲಿ ತಂತ್ರಿ ಹಾಗೂ ಪ್ರಧಾನ ಅರ್ಚಕ ಪ್ರಸನ್ನ ಕುಮಾರ್ ಐತಾಳ್ ಅವರ ನೇತೃತ್ವದಲ್ಲಿ ಶ್ರೀ ದೇವರಿಗೆ ಪೂಜಾ ವಿ ಧಿವಿಧಾನ ನಡೆಯಿತು. ಉತ್ಸವ ಮೂರ್ತಿಯ ಪ್ರದಕ್ಷಿಣೆಯ ತಾಂಡವ ನೃತ್ಯ, ಪಂಚವಾದ್ಯ ಚೆಂಡೆ, ಬ್ಯಾಂಡ್ ವಾದ್ಯ ಭಕ್ತರ ಗಮನ ಸೆಳೆಯಿತು. ಭಕ್ತರಿಂದ ಶತರುದ್ರಾಭಿಷೇಕ ಹಾಗೂ ಸಣ್ಣರಂಗಪೂಜೆ ನಡೆಯಿತು.
ಗಮನ ಸೆಳೆದ ಕಟ್ಟೆಪೂಜೆ ವರ್ಷಂಪ್ರತಿ ನಡೆಯುವ ಕಟ್ಟೆ ಪೂಜೆಗಾಗಿ ವಿವಿಧೆಡೆ ಅಲಂಕೃತಗೊಂಡ ಶ್ರೀ ದೇವರ ಕಟ್ಟೆಯಲ್ಲಿ ತಂತ್ರಿ ಪ್ರಸನ್ನಕುಮಾರ್ ಐತಾಳ್ ಅವರು ಪೂಜೆ ನಡೆಸಿದರು. ದೇಗುಲದ ಸಭಾಮಂಟಪದಲ್ಲಿ ಡಿ. 5ರಂದು ಜಾನಪದ ನೃತ್ಯೋತ್ಸವ ನಡೆಯಿತು. ಡಿ. 6ರಂದು ಭಕ್ತಿ ಭಾವ ಗಾನಸುಧೆ ಸ್ಥಳೀಯ ಪ್ರತಿಭಾವಂತ ಕಲಾವಿದರಿಂದ ನಡೆಯಿತು. ಆಸ್ತಿಕ ಸಮಾಜದಿಂದ ಪ್ರತಿದಿನ ಸಂಜೆ ಭಜನೆ ಹಾಗೂ ಮಂಗಲೋತ್ಸವ ನಡೆಯುತ್ತಿದೆ.
ಅಲಂಕಾರಗೊಳ್ಳುತ್ತಿರುವ ಬ್ರಹ್ಮರಥ
ಜಿಲ್ಲೆಯಲ್ಲೇ ಅತೀ ದೊಡ್ಡ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ರಥಕ್ಕೆ ವಿಶೇಷ ಪುಷ್ಪಾಲಂಕಾರದ ಹೊಣೆ ಹೊತ್ತಿರುವ ಶ್ರೀ ಪಟ್ಟಾಭಿರಾಮಚಂದ್ರ ದೇಗುಲದ ಶ್ರೀ ರಾಮ ಸೇವಾ ಸಂಘ ಹಾಗೂ ಶ್ರೀ ದೇವರು ಹಾಗೂ ದೇವಸ್ಥಾನದ ವಿಶೇಷ ಪುಷ್ಪಾಲಂಕಾರ ಸೇವಾಕರ್ತರಾದ ಮಿತ್ರದಳ ಕೋಟೇಶ್ವರ ಚಾರಿಟೆಬಲ್ ಟ್ರಸ್ಟ್ ಅವರಿಂದ ಅಲಂಕಾರದ ಭರದ ಸಿದ್ಧತೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಂಬರ್‌ಗ್ರೀಸ್ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ
Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!
Shiroor: ಡಿವೈಡರ್‌ಗೆ ಕಾರು ಢಿಕ್ಕಿ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.