ಕುಂದಾಪುರ: ಕೋಡಿ ಕಡಲು ನೀಲ ವರ್ಣಕ್ಕೆ ; ಜನರಲ್ಲಿ ಕುತೂಹಲ
Team Udayavani, Mar 27, 2022, 3:07 PM IST
ಕುಂದಾಪುರ: ಕೋಡಿ ಕಡಲತೀರದಲ್ಲಿ ನೀರಿನ ಬಣ್ಣ ನೀಲ ವರ್ಣಕ್ಕೆ ತಿರುಗಿದ ಜೈವಿಕ ಪ್ರಕಾಶದ ವಿದ್ಯಮಾನ ಮಾರ್ಚ್ 24 ರ ಗುರುವಾರ ರಾತ್ರಿ ಕಂಡು ಬಂದಿದ್ದು, ಜನರು ಆ ವಿದ್ಯಮಾನವನ್ನು ಮತ್ತೆ ನೋಡಲು ಕಾತುರರಾಗಿದ್ದಾರೆ.
ನೀಲಿ ಅಲೆಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದಕ್ಕೆ ಕಡಲತೀರ ಸಾಕ್ಷಿಯಾಯಿತು.ಅವರಲ್ಲಿ ಹೆಚ್ಚಿನವರು ತಡರಾತ್ರಿಯವರೆಗೂ ಇದ್ದು, ಅಪರೂಪದ ರಮ್ಯಾ ಮನೋಹರ ಕ್ಷಣವನ್ನು ಕಣ್ ತುಂಬಿಕೊಂಡರು, ಮೊಬೈಲ್ ಗಳಲ್ಲಿ ಚಿತ್ರೀಕರಿಸಿಕೊಂಡರು.
2020 ರಲ್ಲಿ, ಮಲ್ಪೆಯಿಂದ ಕಾರವಾರದವರೆಗಿನ ಕಡಲತೀರಗಳಲ್ಲಿ ಬಯೋಲ್ಯೂಮಿನೆಸೆನ್ಸ್ ಮಿಂಚುವಿಕೆಯ ಬಗ್ಗೆ ಸುದ್ದಿ ಹರಡಿದ ನಂತರ, ಈ ವಿದ್ಯಮಾನವನ್ನು ವೀಕ್ಷಿಸಲು ಸಾವಿರಾರು ಜನರು ರಾತ್ರಿ ವೇಳೆ ಬೀಚ್‌ಗಳಿಗೆ ಮುಗಿ ಬಿದ್ದು ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
ಬಯೋಲ್ಯುಮಿನೆಸೆನ್ಸ್ ಎನ್ನುವುದು ಜೀವಂತ ಜೀವಿಗಳು ಅಥವಾ ಪಾಚಿಗಳಿಂದ ಅವುಗಳ ದೇಹದಲ್ಲಿನ ರಾಸಾಯನಿಕ ಕ್ರಿಯೆಗಳ ಮೂಲಕ ಹೊರಸೂಸುವ ಬೆಳಕು. ಇದು ಕೊಳೆಯುತ್ತಿರುವ ಸಾವಯವ ವಸ್ತುಗಳ ಮೇಲೆ ಅಥವಾ ಕೆಸರು ಇಲ್ಲವೇ ಮರಳಿನಲ್ಲಿ ಬ್ಯಾಕ್ಟೀರಿಯಾಗಳ ಹೊಳಪು ಆಗಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.