Kotilingeshwara Temple; ಸಂಭ್ರಮದ ಕೋಟೇಶ್ವರ ಕೊಡಿಹಬ್ಬ; 30 ಸಾವಿರಕ್ಕೂ ಮಿಕ್ಕಿ ಭಕ್ತರು
Team Udayavani, Nov 28, 2023, 12:23 AM IST
ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿಹಬ್ಬ ಸೋಮವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರಗಿತು.
ರಥೋತ್ಸವ ಸಲುವಾಗಿ ವಿಶೇಷ ಪೂಜೆಯು ಪ್ರಧಾನ ತಂತ್ರಿ ಪ್ರಸನ್ನ ಕುಮಾರ್ ಐತಾಳ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯನಿರ್ವಹಣಾ ಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಸಮಿತಿ ಸದಸ್ಯರಾದ ಎನ್. ರಾಘವೇಂದ್ರ ರಾವ್, ಸುರೇಶ ಬೆಟ್ಟಿನ್, ಚಂದ್ರಿಕಾಧನ್ಯ, ಮಂಜುನಾಥ ಆಚಾರ್ಯ, ಶಾರದಾ, ಭಾರತಿ, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣದೇವ ಕಾರಂತ ಕೋಣಿ, ಮಾಜಿ ಆಡಳಿತ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ರಾವ್ ಗೋಪಾಡಿ, ಬಿ. ಹೆರಿಯಣ್ಣ, ಸಮಿತಿ ಮಾಜಿ ಸದಸ್ಯ ಅಶೋಕ ಪೂಜಾರಿ ಬೀಜಾಡಿ, ಪಟ್ಟಾಭಿರಾಮಚಂದ್ರ ದೇಗು ಲದ ಆಡಳಿತ ಧರ್ಮದರ್ಶಿ ಶ್ರೀಧರ ವಿ. ಕಾಮತ್, ದಿನೇಶ ಕಾಮತ್, ನಿರಂಜನ ಕಾಮತ್, ಸು ಧೀರ ಕುಮಾರ್ ಶೆಟ್ಟಿ ಮಾರ್ಕೋಡು, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ರಾಗಿಣಿ ದೇವಾಡಿಗ ಇದ್ದರು.
ಗರುಡ ಪ್ರದಕ್ಷಿಣೆ: ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಆಕಾಶದಲ್ಲಿ ವಾಡಿಕೆಯಂತೆ ರಥದ ಸುತ್ತ ಗರುಡ ಪ್ರದಕ್ಷಿಣೆ ಹಾಕಿದ್ದು, ಭಕ್ತರು “ಹರಹರ ಮಹಾದೇವ’ ಎಂಬ ಉದ್ಘೋಷದೊಡನೆ ಮಾಡಿದರು.
30 ಸಾವಿರಕ್ಕೂ ಮಿಕ್ಕಿ ಭಕ್ತರು
ಜಿಲ್ಲೆಯ ವಿವಿಧ ಗ್ರಾಮಗಳಿಂದ 30 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ವಿಶೇಷ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧ ಸಂಘಟನೆಗಳ ಸದಸ್ಯರು ನೂಕುನುಗ್ಗ ಲಾಗದಂತೆ ಕ್ರಮ ಕೈಗೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.