ಕಾಮಗಾರಿ ಆರಂಭಗೊಂಡಿದ್ದರೆ ಮಾತ್ರ ಅನುದಾನ
39 ಕಾಮಗಾರಿಗಳಿಗೆ 41 ಕೋ.ರೂ.: ಬಿಡುಗಡೆಯ ಗ್ಯಾರಂಟಿ ಇಲ್ಲ!
Team Udayavani, Aug 12, 2023, 3:00 PM IST
ಸಾಂದರ್ಭಿಕ ಚಿತ್ರ
ಕುಂದಾಪುರ; ಬ್ರಹ್ಮಾವರ, ಕುಂದಾಪುರ, ಹೆಬ್ರಿ ತಾಲೂಕುಗಳ ಗ್ರಾಮಗಳಲ್ಲಿ ನಡೆಯಬೇಕಾದ 39 ಕಾಮಗಾರಿಗಳಿಗೆ ಬಿಡುಗಡೆಯಾಗಬೇಕಿದ್ದ 41.67 ಕೋ.ರೂ.ಗಳಿಗೆ ಬಿಡುಗಡೆ ದೊರೆತಿಲ್ಲ. ಸರಕಾರ ಅನುದಾನ ಬಿಡುಗಡೆ ಮಾಡುತ್ತದೆ ಎಂಬ ಗ್ಯಾರಂಟಿಯನ್ನೂ ನೀಡಿಲ್ಲ. ಸರಕಾರ ತಡೆ ಆದೇಶ ನೀಡಿದ ಕಾರಣ ಈ ಕಾಮಗಾರಿ ಅನುಷ್ಠಾನಕ್ಕಾಗಿ ಕಾದವರು ಬಾಕಿಯಾಗಿ ಉಳಿದಿದ್ದಾರೆ.
ಬ್ರಹ್ಮಾವರ ತಾಲೂಕು
ಬ್ರಹ್ಮಾವರ ತಾಲೂಕಿನಲ್ಲಿ ಜನ್ನಾಡಿ ರಸ್ತೆಗೆ 8 ಕೋ. ರೂ., ಯಡ್ತಾಡಿಗೆ 1 ಕೋ.ರೂ., ಕೋಡಿ ಹೊಸಬೆಂಗ್ರೆ ರಸ್ತೆ 75 ಲಕ್ಷ ರೂ., ವಡ್ಡರ್ಸೆ ಕಾವಡಿ ಹವರಾಲು ರಸ್ತೆಗೆ 75 ಲಕ್ಷ ರೂ., ಕಾಡೂರು ಪರಿಶಿಷ್ಟ ಕಾಲನಿ ರಸ್ತೆಗೆ 75 ಲಕ್ಷ ರೂ., ಕಾಡೂರು ನಡೂರು ರಸ್ತೆಗೆ 75 ಲಕ್ಷ ರೂ., ಯಡ್ತಾಡಿ ಆಲ್ತಾರು ಸೇತುವೆ ಸಹಿತ ರಸ್ತೆಗೆ 1.25 ಕೋ.ರೂ., ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಚಿತ್ರಪಾಡಿ ರಸ್ತೆಗೆ 15 ಲಕ್ಷ ರೂ., ಕೋಟತಟ್ಟು ಗ್ರಾ.ಪಂ.. ಮಣೂರಿನ ಪಡುಕೆರೆ ಕೊಮೆ ಮೀನುಗಾರಿಕಾ ರಸ್ತೆ 25 ಲಕ್ಷ ರೂ., ಬಿಲ್ಲಾಡಿ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ರಸ್ತೆ ಅಭಿವೃದ್ಧಿಗೆ 4.6 ಕೋ.ರೂ. ಹಾಗೂ 2.4 ಕೋ.ರೂ., ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ರಸ್ತೆ 20 ಲಕ್ಷ ರೂ., ಯಡ್ತಾಡಿಯ ಜಡ್ಡಿನಮನೆ ರಸ್ತೆ 15 ಲಕ್ಷ ರೂ., ಆವರ್ಸೆ ಗ್ರಾ.ಪಂ.ನ ತಂಗೋಡ್ಲು ಆವರ್ಸೆ ಶಂಕರ ನಾರಾಯಣ ದೇವಸ್ಥಾನದ ರಸ್ತೆ 40 ಲಕ್ಷ ರೂ., ಹನೆಹಳ್ಳಿ ಗ್ರಾ.ಪಂ.ನ ಬೈಲುಮನೆ ರಸ್ತೆ 25 ಲಕ್ಷ ರೂ., ಆವರ್ಸೆ ಗ್ರಾ.ಪಂ.ನ ಮಾರ್ವಿ ಸಂಪರ್ಕ ರಸ್ತೆ 25 ಲಕ್ಷ ರೂ., ಹನೆಹಳ್ಳಿ ಗ್ರಾ.ಪಂ.ನ ಬಾರ್ಕೂರು ಕೊಕ್ಕರ್ಣೆ ರಸ್ತೆ 50 ಲಕ್ಷ ರೂ. ಅನುದಾನ ಎಂದು ಪಟ್ಟಿ ಮಾಡಲಾಗಿತ್ತು.
ಕುಂದಾಪುರ ತಾಲೂಕು
ಕುಂದಾಪುರ ತಾಲೂಕಿನ ಗುಡ್ಡೆಯಂಗಡಿ ರಸ್ತೆ 5 ಕೋ.ರೂ., ಕೋಟೇಶ್ವರ ಹಳೆ ಅಳಿವೆ ರಸ್ತೆ 4.95 ಕೋ. ರೂ.,. ಕೋಣಿ ಪರಿಶಿಷ್ಟ ಕಾಲನಿ ರಸ್ತೆ 50 ಲಕ್ಷ ರೂ., ಬೇಳೂರು ಗ್ರಾ.ಪಂ. ವ್ಯಾಪ್ತಿಯ ನೂಜಿ ಶಿರಿಯಾರ ರಸ್ತೆಗೆ 75 ಲಕ್ಷ ರೂ., ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಆರಾಲ್‌ಗುಡ್ಡೆ ಬಳಿ ರಸ್ತೆಗೆ 35 ಲಕ್ಷ ರೂ., ಹಂಗಳೂರು ಪಂಚಾತ್ ವ್ಯಾಪ್ತಿಯ ನೇರಂಬಳ್ಳಿ ರಸ್ತೆಗೆ 25 ಲಕ್ಷ ರೂ., ಬೇಳೂರು ಮುಳ್ಳುಗುಡ್ಡೆ ರಸ್ತೆ 50 ಲಕ್ಷ ರೂ., ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಐತಾಳಬೆಟ್ಟು ರಸ್ತೆ 25 ಲಕ್ಷ ರೂ., ಬಸ್ರೂರು ಗ್ರಾ.ಪಂ. ವ್ಯಾಪ್ತಿಯ ಮಾರ್ಗೋಳಿ ರಸ್ತೆ 30 ಲಕ್ಷ ರೂ., ಬೀಜಾಡಿ ಪಂಚಾಯತ್‌ನ ಗೋಪಾಡಿ ಚಿಕ್ಕು ಅಮ್ಮ ದೇವಸ್ಥಾನದ ರಸ್ತೆ 20 ಲಕ್ಷ ರೂ., ಕಾಳಾವರ ಗ್ರಾ.ಪಂ.ನ ಶಾಲಾ ರಸ್ತೆ 20 ಲಕ್ಷ ರೂ., ತೆಕ್ಕಟ್ಟೆ ಪಂಚಾಯತ್‌ನ ರಸ್ತೆ 15 ಲಕ್ಷ ರೂ. ಹಾಗೂ 50 ಲಕ್ಷ ರೂ., ಹೊಂಬಾಡಿ ಮಂಡಾಡಿ ಪಂಚಾಯತ್‌ನ ಹುಣ್ಸೆಕಟ್ಟೆ ಬೇಳೂರು ರಸ್ತೆಯಿಂದ ಕಾಸನಕಟ್ಟೆ ರಸ್ತೆ 40 ಲಕ್ಷ ರೂ. ಅದೇ ಪಂಚಾಯತ್‌ನ ಜಪ್ತಿ ಗ್ರಾಮದ ಉಳ್ಳೂರುಬೆಟ್ಟು ಮುಲ್ಲಿಮನೆ ರಸ್ತೆಗೆ 50 ಲಕ್ಷ ರೂ., ಗೋಪಾಡಿಯ ಮೂಡುಓಪಾಡಿ ರಸ್ತೆಗೆ 1.5 ಕೋ.ರೂ. ಅಮಾಸೆಬೈಲಿನ ರಟ್ಟಾಡಿ ಕಾಲುಸಂಕ ರಚನೆಗೆ 7 ಲಕ್ಷ ರೂ., ಕಾಳಾವರ ಪಂಚಾಯತ್‌ನ ಕಿರಾಬಳಿಬೆಟ್ಟು ಕಾಲು ಸಂಕ ರಚನೆಗೆ 15.5 ಲಕ್ಷ ರೂ. ಗಳ ಅನುದಾನಕ್ಕೆ ಬೇಡಿಕೆ ಇತ್ತು.
ಹೆಬ್ರಿ ತಾಲೂಕು
ಹೆಬ್ರಿ ತಾಲೂಕಿನ ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯ ಅಲಾºಡಿ ಆರ್ಡಿ ರಸ್ತೆ 50 ಲಕ್ಷ ರೂ., ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಮಾಂಡಿ ಮೂರುಕೈ ಶೇಡಿಮನೆ ರಸ್ತೆ 75 ಲಕ್ಷ ರೂ., ಮಡಾಮಕ್ಕಿ ಗ್ರಾ.ಪಂ.ನ ಹಂಜ ಶಾಲೆ ರಸ್ತೆಗೆ ಸೇತುವೆ ರಚನೆಗೆ 50 ಲಕ್ಷ ರೂ. ಅನುದಾನ ಇರಿಸಲಾಗಿತ್ತು.
ಕಾಮಗಾರಿಗಳು
ಬಾಕಿಯಾದ ಕಾಮಗಾರಿಗಳಲ್ಲಿ ರಸ್ತೆ, ಸೇತುವೆ, ಕಾಲುಸಂಕಗಳಿವೆ. ಇವುಗಳ ಪ್ರಸ್ತಾವನೆ ಹೋಗಿ ವಿವಿಧ ಕಾಮಗಾರಿಗಳು ಮಂಜೂರಾತಿ ಹಂತದಲ್ಲಿದ್ದವು. ಕೆಲವು ಕಾಮಗಾರಿಗಳು ತಾಂತ್ರಿಕ ಬಿಡ್ ಪರಿಶೀಲನೆ, ಕೆಲವು ಅಂದಾಜುಪಟ್ಟಿ ತಯಾರಿಸಿದ ತರುವಾಯದ ತಾಂತ್ರಿಕ ಮಂಜೂರಾತಿ, ಕೆಲವು ಆರ್ಥಿಕ ಬಿಡ್ ಪರಿಶೀಲನೆ ಹಂತದಲ್ಲಿದ್ದವು. ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ, ಬಿಜೆಪಿ ಸರಕಾರ ಒಪ್ಪಿದ್ದ, ಫೆಬ್ರವರಿ ನಂತರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಂತೆ ಆದೇಶ ನೀಡಿತ್ತು. ಕಾಮಗಾರಿ ಆರಂಭಗೊಂಡಿದ್ದರೆ ಮಾತ್ರ ಅನುದಾನ, ಇಲ್ಲದಿದ್ದರೆ ಅನುಮಾನ ಎಂಬ ಸ್ಥಿತಿ ಇತ್ತು. ಇದರ ಬಗ್ಗೆ ಕಾಂಗ್ರೆಸ್ ಶಾಸಕರೂ ಮನವಿ ಮಾಡಿದ ನಂತರ ತಿದ್ದುಪಡಿ ಮಾಡಿ ಈಗಾಗಲೇ ಪೂರ್ಣ ಹಂತದಲ್ಲಿ ಮಂಜೂರಾಗದಿದ್ದರೆ ಸಚಿವರ ಪರಿಶೀಲನೆ ಬಳಿಕ ಅನುದಾನ ಎಂದಾಗಿದೆ. ಸಚಿವರು ಮನಸ್ಸು ಮಾಡಿದರೆ ಅನುದಾನ ಗ್ಯಾರಂಟಿ ಎಂದಾಗಿದೆ.
ಮನವಿ ಮಾಡಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಮಗಾರಿಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ಮಂಜೂರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. –ಕಿರಣ್ ಕುಮಾರ್ ಕೊಡ್ಗಿ ಶಾಸಕರು, ಕುಂದಾಪುರ
-ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.