![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 10, 2022, 5:45 PM IST
ಕುಂದಾಪುರ: ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿಯಲ್ಲಿ ನ್ಯಾಯಾ ಲಯ ಸಮೀಪದಲ್ಲಿ ನಿರ್ಮಾಣವಾದ ನ್ಯಾಯಾಲಯ ಹಾಗೂ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ.
ಫೆ. 19ರಂದು ಸರ್ವೋಚ್ಚ ನ್ಯಾಯಾ ಲಯದ ನ್ಯಾಯಮೂರ್ತಿ ಗಳಿಂದ ಉದ್ಘಾಟನೆಯಾಗಲಿದೆ. ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಾಸ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಅಂಗಾರ ಅವರು ಭಾಗವಹಿಸಲಿದ್ದಾರೆ.
3 ವರ್ಷಗಳ ಒಳಗೆ
6 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ವಾದ ಈ ಕಟ್ಟಡಕ್ಕೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು 2019ರ ಜೂ. 8ರಂದು ಶಿಲಾನ್ಯಾಸ ಮಾಡಿ ದ್ದರು. ಈಗ ಉದ್ಘಾಟನೆಗೂ ಅವರೇ ಆಗಮಿಸಲಿದ್ದಾರೆ.
ಕೋವಿಡ್ ಲಾಕ್‌ಡೌನ್ ಇತ್ಯಾದಿ ಎಲ್ಲ ಸಂಕಷ್ಟಗಳ ನಡುವೆಯೂ ಬೃಹತ್ ಸಂಕೀರ್ಣ 3 ವರ್ಷಗಳ ಒಳಗೆ ನಿರ್ಮಾಣವಾಗಿದೆ. ಕೆಂಬಣ್ಣದ ಬೃಹತ್ ಕಟ್ಟಡ ಈ ಪರಿಸರದಲ್ಲಿ ತಲೆ ಎತ್ತಿದ್ದು ನಗರಕ್ಕೊಂದು ಮಕುಟಮಣಿಯಂತೆ ಕಾಣುತ್ತಿದೆ. ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರ, ವಕೀಲರ ವಾಹನಗಳು ನಿಲ್ಲುವಲ್ಲಿ ಈಗಾಗಲೇ ಪುರಸಭೆ ಇಂಟರ್‌ಲಾಕ್ ಅಳವಡಿಸಿದೆ.
ಹಳೆ ಕಟ್ಟಡ
ಈಗ ಇರುವ ಕಟ್ಟಡದಲ್ಲಿ ಪ್ರಸ್ತುತ 5 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ವಕೀಲರ ಸಂಘವೂ ಇದೇ ಕಟ್ಟಡದಲ್ಲಿದೆ. ಈ ಕಟ್ಟಡದಿಂದ 2 ನ್ಯಾಯಾಲಯಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಉಳಿಕೆ 3 ಕೋರ್ಟ್ ಗಳು ಹಳೆ ಕಟ್ಟಡದಲ್ಲೇ ಕಾರ್ಯಭಾರ ಮುಂದುವರಿಸಲಿವೆ. ಬೈಂದೂರು ತಾ| ನ್ಯಾಯಾಲಯ ಪ್ರತ್ಯೇಕ ಆದ ಕಾರಣ ಕುಂದಾಪುರದಲ್ಲಿ ಅಲ್ಲಿನ ಪ್ರಕ ರ ಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಎರಡೂ ಕಟ್ಟಡಗಳಲ್ಲಿ ನ್ಯಾಯಾಲಯಗಳು ಕಾರ್ಯನಿರ್ವಹಿಸಲಿವೆ.
ನೂತನ ಕೋರ್ಟ್ ಮಂಜೂರು?
ಕುಂದಾಪುರಕ್ಕೆ ಕೌಟುಂಬಿಕ ನ್ಯಾಯಾ ಲಯದ ಅಗತ್ಯ ಇದ್ದು ಮಂಜೂರು ಮಾಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆ. ಅಷ್ಟಲ್ಲದೇ ಸಿವಿಲ್ ಜಡ್ಜ್ ಸೀನಿಯರ್ ಡಿವಿಜನ್ ಕೋರ್ಟ್ ಕೂಡ ಬೇಕೆಂದು ಬೇಡಿಕೆ ಇಡಲಾಗಿದೆ. ಈ ಪೈಕಿ ಒಂದು ನ್ಯಾಯಾಲಯ ಮಂಜೂರಾಗುವ ನಿರೀಕ್ಷೆಯಿದೆ. ಯಾವುದು ಮಂಜೂ ರಾಗಲಿದೆ ಎನ್ನುವ ಕುರಿತು ಖಚಿತ ಇಲ್ಲ.
ಏನೆಲ್ಲ ಇದೆ
ನೆಲ ಅಂತಸ್ತು ಹಾಗೂ ಅದರ ಮೇಲೆ 2 ಅಂತಸ್ತುಳ್ಳ ವಿಶಾಲ ಕಟ್ಟಡ ಇದಾಗಿದೆ. ಸುಮಾರು 6,500 ಚದರ ಅಡಿ ವಿಸ್ತೀರ್ಣ ಹೊಂದಿದೆ. ಕೆಳ ಅಂತಸ್ತಿನಲ್ಲಿ ವಕೀಲರ ಸಂಘದ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಮೇಲಂತಸ್ತಿನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ ಸೀನಿಯರ್ ಸಿವಿಲ್ ಕೋರ್ಟ್, ನ್ಯಾಯಾಧೀಶರ ಕಚೇರಿ ಕಾರ್ಯನಿರ್ವಹಿಸಲಿದೆ. ಮಹಡಿಗೆ ಹೋಗಲು 2 ಲಿಫ್ಟ್ ವ್ಯವಸ್ಥೆ ಇದೆ. ಹಳೆ ನ್ಯಾಯಾಲಯದಲ್ಲಿ ಲಿಫ್ಟ್ ಇಲ್ಲ.
ಸಿದ್ಧವಾಗಿದೆ
ಎಲ್ಲರ ಬೇಡಿಕೆಯಂತೆ ಕಟ್ಟಡ ಮಂಜೂರಾಗಿದ್ದು ಕಾಮಗಾರಿ ಪೂರ್ತಿಯಾಗಿ ಉದ್ಘಾಟನೆಗೆ ಸಜ್ಜಾಗಿದೆ. ನ್ಯಾಯಾಲಯ ಹಾಗೂ ವಕೀಲರ ಸಂಘ ಈ ವಿಶಾಲವಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.
-ಸಳ್ವಾಡಿ ನಿರಂಜನ ಹೆಗ್ಡೆ, ಅಧ್ಯಕ್ಷ, ಕುಂದಾಪುರ ತಾ| ವಕೀಲರ ಸಂಘ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.