ಕುಂದಾಪುರ: ಆಧಾರ್‌ಗಾಗಿ ಮುಗಿಬಿದ್ದ ಜನತೆ


Team Udayavani, Oct 21, 2019, 5:47 AM IST

adhar

ಕುಂದಾಪುರ: ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು, ಕುಂದಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರವಿವಾರ ನಡೆಸಿದ ಆಧಾರ್‌ ಅದಾಲತ್‌ಗೆ ಸಾವಿರಾರು ಮಂದಿ ಆಗಮಿಸಿ ಕೆಲವರಿಗಷ್ಟೇ ಪ್ರಯೋಜನ ದೊರೆತ ಕಾರಣ ಅನೇಕರು ನಿರಾಶರಾಗಿ ವಾಪಸಾದರು.

ಅಂಚೆ ಇಲಾಖೆ ವತಿಯಿಂದ ಆಧಾರ್‌ ಅದಾಲತ್‌ ಹಮ್ಮಿಕೊಳ್ಳಲಾಗಿತ್ತು. ಅಂಚೆ ಇಲಾಖೆ ಸಿಬಂದಿಯನ್ನು ರವಿವಾರದ ರಜೆಯಾದರೂ ಅಂಚೆ ಅಧೀಕ್ಷಕರು ಸಾರ್ವಜನಿಕರಿಗೆ ಪ್ರಯೋಜನ ದೊರಕಿಸಿಕೊಡುವ ಸಲುವಾಗಿ ಆಧಾರ್‌ ಅದಾಲತ್‌ ನಡೆಸಿಕೊಡಲು ಒಪ್ಪಿಸಿದ್ದರು. ಸುತ್ತಲಿನ ಐದು ಅಂಚೆ ಕಚೇರಿಗಳಿಂದ ಸಿಬಂದಿ ಹಾಗೂ ಕಂಪ್ಯೂಟರನ್ನು ತರಿಸಲಾಗಿತ್ತು. ಒಂದು ಘಟಕದಲ್ಲಿ 1 ದಿನದಲ್ಲಿ ಸಾಮಾನ್ಯವಾಗಿ 50 ಮಂದಿ ಆಧಾರ್‌ ಪ್ರಕ್ರಿಯೆ ನಡೆಸಬಹುದು. ಈ ನಿಟ್ಟಿನಲ್ಲಿ ಸುಮಾರು 250ರಿಂದ 300 ಜನರಿಗೆ ಪ್ರಯೋಜನ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿತ್ತು.

ಹೆಚ್ಚುವರಿ ಕೌಂಟರ್‌
ಆದರೆ ಬೆಳಗ್ಗೆ 8.30ಕ್ಕೆ ಅದಾಲತ್‌ ಆರಂಭಕ್ಕೆ ಒಂದೂವರೆ ತಾಸು ಮುನ್ನವೇ ಇಲಾಖಾ ಕಚೇರಿ ಎದುರು ಜನಸಂದಣಿ ಇತ್ತು. ಅದಾಲತ್‌ ಆರಂಭವಾಗುವ ವೇಳೆಗೆ ಸುಮಾರು 3 ಸಾವಿರ ಮಂದಿ ಸಾರ್ವಜನಿಕರು ಆಧಾರ್‌ ಸೇವೆಗಾಗಿ ಕಾಯುತ್ತಿದ್ದರು. ತತ್‌ಕ್ಷಣ ಅಂಚೆ ಇಲಾಖೆಯು ಇನ್ನೆರಡು ಘಟಕಗಳ ವ್ಯವಸ್ಥೆಯನ್ನು ಮಾಡಿತು. ಅದೇನೇ ಇದ್ದರೂ 300ರಿಂದ 400 ಮಂದಿಗಷ್ಟೇ ಪ್ರಯೋಜನ. ಆಧಾರ್‌ ಪ್ರಕ್ರಿಯೆಗಾಗಿ ಆಗಮಿಸಿದ ಅನೇಕರು ದಾಖಲೆಗಳ ಮೂಲಪ್ರತಿಯನ್ನು ತಾರದ ಕಾರಣ ಸಮಸ್ಯೆಯಾಯಿತು. ಸರಿಯಾದ ಮಾಹಿತಿ ಅರಿಯದೇ ಬಂದಿದ್ದರಿಂದ ಮರಳಿ ಹೋಗುವಂತಾಯಿತು.

ಮಾತಿನ ಚಕಮಕಿ
ಸಾರ್ವಜನಿಕರ ಜಮಾವಣೆ ಹೆಚ್ಚಾಗುತ್ತಿದ್ದಂತೆಯೇ ಸ್ಥಳದಲ್ಲಿ ಪೊಲೀಸ್‌ ನಿಯೋಜಿಸಲಾಯಿತು. ಅಂಚೆ ಇಲಾಖೆ ಕಚೇರಿ ಇರುವ ರಸ್ತೆಯ ತುಂಬ ಜನಜಂಗುಳಿ, ವಾಹನಗಳ ಸಾಲು ಹೆಚ್ಚಾಯಿತು. ಸೇರಿದ್ದ ಜನರ ಸರತಿ ಸಾಲು ಉದ್ದವಾಗುತ್ತಿದ್ದಂತೆಯೇ ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಬಳಿಕ ಅಂಚೆ ಕಚೇರಿಯ ಬಾಗಿಲು ಹಾಕಿ ನಿಗದಿತ ಸಂಖ್ಯೆಯ ಜನರನ್ನಷ್ಟೇ ಒಳ ಬಿಡುತ್ತಾ ಪ್ರಕ್ರಿಯೆ ನಡೆಸಲಾಯಿತು. ಈ ಮಧ್ಯೆ ಅನೇಕರು ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.

ಕೇಂದ್ರಗಳಿಲ್ಲ
ಕುಂದಾಪುರದಲ್ಲಿ ತಾಲೂಕು ಕಚೇರಿ, ಅಂಚೆ ಕಚೇರಿ, ಎಸ್‌ಬಿಐ, ಕೆನರಾ ಬ್ಯಾಂಕ್‌, ವಂಡ್ಸೆ ಹೋಬಳಿ ಕಚೇರಿ, ಬೈಂದೂರು ತಾಲೂಕು ಕಚೇರಿಯಲ್ಲಿ ಮಾತ್ರ ಆಧಾರ್‌ ಕೇಂದ್ರಗಳಿವೆ. ತಾಲೂಕು ಕಚೇರಿಯಲ್ಲಿ ದಿನಕ್ಕೆ 50ರಷ್ಟು ನಡೆಯುತ್ತಿದ್ದರೆ ಇತರೆಡೆ ತಲಾ 10ರಿಂದ 15 ಮಾತ್ರ ನಡೆಸುತ್ತಿದ್ದಾರೆ. ಅಲ್ಲೆಲ್ಲ ಸಿಬಂದಿ ಕೊರತೆಯಿದೆ. ಇದರಿಂದಾಗಿ ಜನರ ಆಧಾರ್‌ ಸಮಸ್ಯೆ ಇತ್ಯರ್ಥವಾಗುತ್ತಲೇ ಇಲ್ಲ. ಈ ಕುರಿತಾಗಿ ಆಧಾರ್‌ ಕಡ್ಡಾಯ ಎಂದು ಕಾನೂನು ತರುವ ಯಾವುದೇ ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ.

ಎಲ್ಲೆಲ್ಲಿಂದ ಜನ
ಅಸಲಿಗೆ ಕುಂದಾಪುರ ಭಾಗದ ಜನರಿಗೆ ಪ್ರಯೋಜನವಾಗಲಿ ಎಂದು ಆಧಾರ್‌ ಅದಾಲತ್‌ ನಡೆಸಲಾಗಿತ್ತು. ಆದರೆ ಬೈಂದೂರು ಹಾಗೂ ಇತರೆಡೆಗಳಿಂದಲೂ ಜನ ಆಗಮಿಸಿದ್ದರು. ಅಷ್ಟಲ್ಲದೇ ಭಾರೀ ಪ್ರಮಾಣದಲ್ಲಿ ಜನ ಸೇರಿದ ಕಾರಣ ಅಂಚೆ ಇಲಾಖೆಗೆ ದರ ಜತೆಗೆ ಹಮ್ಮಿಕೊಂಡ ಇತರ ಸೇವೆ ಒದಗಿಸುವುದು ಕಷ್ಟವಾಯಿತು. ವೃದ್ಧರು, ಮಹಿಳೆಯರು, ಮಕ್ಕಳು ಎಂದು ಸೇರಿದ್ದು ಮೂಲಭೂತ ಸೌಕರ್ಯಗಳು ಕೂಡಾ ಇಲ್ಲದೇ ಕಚೇರಿಯ ಅಂಗಳದಲ್ಲಿ ಕುಳಿತು ಸಮಯ ಕಳೆದರು.

ಹೆಚ್ಚುವರಿ ಸೇವೆ
ಆಧಾರ್‌ ನೊಂದಣಿ ಮತ್ತು ತಿದ್ದುಪಡಿಯ ಜೊತೆಗೆ ಅಂಚೆ ಯೋಜನೆಗಳಾದ ಸುಕನ್ಯ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ, ಸಣ್ಣ ಉಳಿತಾಯ ಖಾತೆ ಯೋಜನೆಗಳು, ಅಂಚೆ ಜೀವ ವಿಮೆ ಮತ್ತು ಗ್ರಾಮೀಣ ಅಂಚೆ ಜೀವವಿಮೆ, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌, ಅಂಚೆ ಸಂಗ್ರಹಣಾ ಖಾತೆಗಳನ್ನು ತೆರೆಯಲು ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

Kundapura: ಅಂಬರ್‌ಗ್ರೀಸ್‌ ಮಾರಾಟ ಜಾಲ: ಅಧಿಕಾರಿಗಳಿಗೆ ಹಲ್ಲೆಗೈದ ನಾಲ್ವರ ಬಂಧನ

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Kundapura: ತ್ರಾಸಿ ಕಡಲ ಕಿನಾರೆಯಲ್ಲಿ ಮಗುಚಿದ ಜೆಟ್ ಸ್ಕೀ ಬೋಟ್; ರೈಡರ್ ನಾಪತ್ತೆ!

Shiroor: ಡಿವೈಡರ್‌ಗೆ ಕಾರು ಢಿಕ್ಕಿ

Shiroor: ಡಿವೈಡರ್‌ಗೆ ಕಾರು ಢಿಕ್ಕಿ

6(1

Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ

5(1

ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.