Kundapura; ರೈಲಿನಿಂದ ಬಿದ್ದ ಯುವಕನ ರಕ್ಷಣೆ
Team Udayavani, Oct 18, 2024, 1:10 AM IST
ಕುಂದಾಪುರ: ಸೇನಾಪುರ ರೈಲು ನಿಲ್ದಾಣದ ಸಮೀಪ ಬುಧವಾರ ತಡರಾತ್ರಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ಯುವಕನನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಮಧ್ಯಪ್ರದೇಶ ರಾಜ್ಯದ ಭೋಪಾಲ್ ಮೂಲದ ರಂಜಿತ್ ಅಗರವಾಲ್ (28) ಗಾಯಗೊಂಡ ಯುವಕ. ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಚೇತರಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಬುಧವಾರ ತಡರಾತ್ರಿ 2.45 ಗಂಟೆ ವೇಳೆಗೆ ಸೇನಾಪುರ ರೈಲು ನಿಲ್ದಾಣ ಸಮೀಪ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದ. ರಾತ್ರಿಯಲ್ಲೇ ರಕ್ತಸಿಕ್ತ ಬಟ್ಟೆಯೊಂದಿಗೆ, ಹತ್ತಿರದ ಮನೆಗಳ ಸಮೀಪ ತೆರಳಿ ಭಯದ ವಾತಾವರಣ ಸೃಷ್ಟಿಸಿದ್ದ. ತತ್‌ಕ್ಷಣ ಸ್ಥಳೀಯ ಅಂಬೇಡ್ಕರ್ ನಗರದ ನಿವಾಸಿಗಳು ಪೊಲೀಸರು ಹಾಗೂ ಗಂಗೊಳ್ಳಿಯ ಆ್ಯಂಬುಲೆನ್ಸ್‌ನ ಇಬ್ರಾಹಿಂ ಗಂಗೊಳ್ಳಿ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಇಬ್ರಾಹಿಂ ಗಂಗೊಳ್ಳಿ, ಅಬ್ರಾರ್ ಗಂಗೊಳ್ಳಿ, ಗಂಗೊಳ್ಳಿ ಪೊಲೀಸ್ ಮುಖ್ಯ ಪೇದೆ ಶಾಂತಾರಾಮ್ ಶೆಟ್ಟಿ, ಚಾಲಕ ದಿನೇಶ್ ಅವರು ಆತನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.