Kundapura: ಗಂಧದ ಮರ ಕಡಿತ: ಕೇಸು ದಾಖಲು
Team Udayavani, Jul 30, 2023, 11:34 PM IST
ಸಾಂದರ್ಭಿಕ ಚಿತ್ರ..
ಕುಂದಾಪುರ: ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಶ್ರೀಗಂಧದ ಮರ ಕಡಿದ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೇಸು ದಾಖಲಿಸಿದ್ದಾರೆ. ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಸೊತ್ತುಗಳ ಒಟ್ಟು ಮೌಲ್ಯ ಸುಮಾರು 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಮನೆಯೊಂದರ ಸಮೀಪ (ಸರಕಾರಿ ಜಾಗವೋ ಖಾಸಗಿಯೋ ಎಂದು ಜಾಗದ ಒಡೆತನ ಕುರಿತು ಗೊಂದಲ ಇದೆ) ಒಂದು ಶ್ರೀಗಂಧದ ಮರ ಕಡಿದುದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಆರೋಪಿಗಳು ಸ್ಥಳೀಯರಾಗಿದ್ದು, ಅವರ ಸುಳಿವು ದೊರಕಿದ್ದು, ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.
ಖಾಸಗಿ ಜಾಗದಲ್ಲಿ ಬೆಳೆಸಿದ ಗಂಧದ ಮರಗಳು ಕೂಡಾ ಕಳೆದ ವರ್ಷದವರೆಗೆ ಸರಕಾರದ ಸೊತ್ತಾಗಿತ್ತು. ಕಳೆದ ವರ್ಷದಿಂದ ಇದನ್ನು ಸರಕಾರಿ ಇಲಾಖೆ ಸುಪರ್ದಿಯಲ್ಲಿ ಕಡಿಯಲು ಅನುಮತಿ ನೀಡಲಾಗುತ್ತಿದೆ. ಅದರಲ್ಲೂ ಶೇ. 10 ಸರಕಾರಕ್ಕೆ ನೀಡಬೇಕು ಎಂಬ ನಿಯಮ ಇದೆ.
ಡಿಎಫ್‌ಒ ಉದಯ ನಾಯಕ್ ನಿರ್ದೇಶನದಂತೆ, ಎಸಿಎಫ್ ಕ್ಲಿಫರ್ಡ್ ಲೋಬೋ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿ ಕಾರಿ ಕಿರಣ್ ಬಾಬು ಟಿ., ಉಪ ವಲಯ ಅರಣ್ಯಾ ಧಿಕಾರಿ ಆನಂದ ಬಳೆಗಾರ, ಶರತ್ ಗಾಣಿಗ, ಗೀತಾ ಯಾಸಣ್ಣನವರ್, ಗಸ್ತು ಅರಣ್ಯ ಪಾಲಕ ರಾಘವೇಂದ್ರ, ವಿಜಯ ಕೆ., ಅರಣ್ಯ ವೀಕ್ಷಕ ಉದಯ ಮತ್ತು ವಾಹನ ಚಾಲಕ ಅಶೋಕ ಅವರು ಕಾರ್ಯಾಚರಣೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಟವರ್ನ ಬುಡದಲ್ಲೇ ನೆಟ್ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.