ಕುಂದಾಪುರ: ಜನರ ಬೇಡಿಕೆಗಳು ಹತ್ತು ಹಲವು
Team Udayavani, Apr 22, 2018, 6:05 AM IST
ಉಡುಪಿ ಜಿಲ್ಲೆಯ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎನ್ನುವ ಹೆಗ್ಗಳಿಕೆಯ ಕುಂದಾಪುರದಲ್ಲಿ ಬಹುಮುಖ್ಯವಾಗಿ ಆಗಲೇಬೇಕಾದ
ಬೇಡಿಕೆಗಳ ಪಟ್ಟಿ ಇಲ್ಲಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ-ತುಳುನಾಡಿನ ನಡುವೆ ಕೊಂಡಿಯಂತಿರುವ ಇಲ್ಲಿ ಪ್ರವಾಸೋದ್ಯಮ, ವಾರಾಹಿ, ಅರಣ್ಯ ಹೀಗೆ ಈಡೇರಬೇಕಾದ ಬೇಡಿಕೆಗಳಿರುವ ಹಲವು ರಂಗಗಳಿವೆ.
ಫ್ಲೆ ಓವರ್
ಕಾಮಗಾರಿ ಆರಂಭವಾಗಿ 5 ವರ್ಷ ಕಳೆದರೂ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಫ್ಲೆ$çಓವರ್ ಕಾಮಗಾರಿ ಚುರುಕುಗೊಂಡಿಲ್ಲ. ಈ ಕಾರ್ಯ ಪೂರ್ಣಗೊಳ್ಳದೆ ಕುಂದಾಪುರ ಪೇಟೆ ಭಾಗದ ಅಭಿವೃದ್ಧಿಯೂ ಕುಂಠಿತಗೊಂಡಿದೆ.
ಹೆದ್ದಾರಿ ವಿಸ್ತರಣೆ
ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಸಂಚಾರ ಸಮಸ್ಯೆ ಗಂಭೀರವಾಗಿದೆ. ಕೆಲವು ಕಡೆ ಅಪಘಾತ ಗಳೂ ಸಂಭವಿಸುತ್ತಿವೆ. ಕೆಲಸ ಚುರುಕಾಗಬೇಕಿದೆ.
ಗಂಗೊಳ್ಳಿ- ಕೋಡಿ ಸೇತುವೆ
ಕುಂದಾಪುರದಿಂದ ಗಂಗೊಳ್ಳಿಗೆ ರಸ್ತೆಯಲ್ಲಿ 15 ಕಿ.ಮೀ. ಕ್ರಮಿಸಬೇಕು. ಕೋಡಿ- ಗಂಗೊಳ್ಳಿ ಸೇತುವೆ ನಿರ್ಮಾಣವಾದರೆ ಕುಂದಾಪುರ – ಗಂಗೊಳ್ಳಿ ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಮೀನುಗಾರಿಕೆಗೂ ಪ್ರಯೋಜನವಾಗಲಿದೆ.
ಆರ್‌ಟಿಒ ಕಚೇರಿ
ಜನರು ವಾಹನ ನೋಂದಣಿಗೆ ಕುಂದಾಪುರ ದಿಂದ 45 ಕಿ.ಮೀ., ಬೈಂದೂರಿನಿಂದ 75 ಕಿ.ಮೀ. ದೂರದ ಮಣಿಪಾಲಕ್ಕೆ ಹೋಗಬೇಕು. ಕುಂದಾಪುರದಲ್ಲಿ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿ ಅತ್ಯಂತ ಜರೂರಾಗಿ ಆಗಬೇಕು.
ಮಹಿಳಾ ಠಾಣೆ
ಹಿಂದೆ ಇದ್ದ ಮಹಿಳಾ ಪೊಲೀಸ್ ಠಾಣೆ ಯನ್ನು ಉಡುಪಿಗೆ ವರ್ಗಾಯಿಸಿದ್ದು, ಈಗ ಮತ್ತೆ ಇಲ್ಲಿ ಮಹಿಳಾ ಸಂಬಂಧಿ ದೂರು, ಪ್ರಕರಣ ಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮತ್ತೆ ಮಹಿಳಾ ಠಾಣೆಗೆ ಬೇಡಿಕೆ ಕೇಳಿಬಂದಿದೆ.
ವಾರಾಹಿ “ಮುಕ್ತಿ ‘ ಸಿಗಬಹುದೇ?
ಮೂರು ದಶಕಗಳಿಂದ ನನೆಗುದಿಗೆ ಬಿದ್ದಿ ರುವ ಬಹುಕೋಟಿ ರೂ. ವೆಚ್ಚದ ವಾರಾಹಿ ನದಿ ನೀರಿನ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಸಿದ್ದಾಪುರ, ಶಂಕರನಾರಾಯಣ ಭಾಗದ ಕೃಷಿ ಭೂಮಿಗೆ ಅನುಕೂಲವಾಗಲಿದೆ.
ಮೀನುಗಾರಿಕೆಗೆ ಒತ್ತು
ಕುಂದಾಪುರದ 15,000ಕ್ಕೂ ಅಧಿಕ ಮಂದಿ ಮೀನುಗಾರಿಕೆ ವೃತ್ತಿ ಅವಲಂಬಿಸಿದ್ದಾರೆ. ಜೆಟ್ಟಿ ವಿಸ್ತರಣೆ, ಜೆಟ್ಟಿ , ಕೆರೆಯಂತಹ ಒಳನಾಡು ಮೀನುಗಾರಿಕೆಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. ಐಸ್ ಪ್ಲಾಂಟ್, ಸಂಸ್ಕರಣ ಘಟಕಗಳು ಹೆಚ್ಚಾಗಬೇಕು.
ಸಿಆರ್‌ಝಡ್ ಸಮಸ್ಯೆ
ಕುಂದಾಪುರದ ಹೆಚ್ಚಿನ ಭಾಗ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿರುವುದರಿಂದ ನಿರ್ಮಾಣ ಕಾರ್ಯಗಳಿಗೆ ತೊಡಕಾಗಿದೆ. ಸಿಆರ್‌ಝಡ್ ಪ್ರದೇಶವನ್ನು ಸರಿಯಾದ ರೀತಿಯಲ್ಲಿ ಶೀಘ್ರ ಗುರುತಿಸಬೇಕಿದೆ.
ಸರಕಾರಿ ಎಂಜಿನಿಯರಿಂಗ್ ಕಾಲೇಜು
ತಾಲೂಕಿನಲ್ಲಿ ಕೇವಲ ಒಂದು ಖಾಸಗಿ ಎಂಜಿನಿಯರಿಂಗ್ ಕಾಲೇಜು ಇದೆ. ಸರಕಾರಿ ಕಾಲೇಜಿನ ಕೊರತೆಯಿಂದಾಗಿ ಗ್ರಾಮೀಣ ವಿದ್ಯಾರ್ಥಿ ಗಳು ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇದ್ದರೂ ಶಿಕ್ಷಣ ಪಡೆಯಲು ಅಸಾಧ್ಯವಾಗಿದೆ.
ಪುರಭವನ ಬೇಕು
ಸಾಕಷ್ಟು ನಾಟಕ, ಸಭೆ, ಸಮಾರಂಭಗಳು ನಡೆಯುತ್ತಿದ್ದರೂ ತಾಲೂಕು ಕೇಂದ್ರವಾಗಿ ರುವ ಕುಂದಾಪುರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಪುರಭವನದಂತಹ ಸರಿಯಾದ ವೇದಿಕೆಗಳಿಲ್ಲ.
ರಸಗೊಬ್ಬರ ದಾಸ್ತಾನು ಕೇಂದ್ರ
ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ರಸಗೊಬ್ಬರ ದಾಸ್ತಾನು ಕೇಂದ್ರ ನಿರ್ಮಾಣವಾಗಬೇಕಿದೆ. ಸಕಾಲದಲ್ಲಿ ಸೂಕ್ತ ರಸಗೊಬ್ಬರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗದೆ ಕೃಷಿಕರಿಗೆ ಸಮಸ್ಯೆಯಾಗಿದೆ.
ಡೀಮ್ಡ್ ಫಾರೆಸ್ಟ್
ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಈ ಭಾಗದ ಜನತೆ ಗೃಹ ನಿರ್ಮಾಣಕ್ಕೆ ಪಡಿಪಾಟಲು ಅನುಭವಿಸುತ್ತಿದ್ದಾರೆ. ಕೂಡಲೇ ಈ ಬಗ್ಗೆ ಸ್ಪಂದಿಸಿ ಸಮಸ್ಯೆ ನಿವಾರಿಸಿ ಜನರ ಸ್ವಂತ ಮನೆ ಕನಸನ್ನು ನನಸಾಗಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.