ಕುಂದಾಪುರ: ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿ
Team Udayavani, Sep 27, 2021, 5:53 AM IST
ಇಂದು ಪ್ರವಾಸೋದ್ಯಮ ದಿನ. ಕುಂದಾಪುರ ತಾಲೂಕಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈ ಹಿಂದೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಅನೇಕ ಚಲನಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣಗೊಂಡಿವೆ. ಈ ಮೂಲಕ ಕುಂದಾಪುರದ ಕಡಲತಡಿ ಸಹಿತ ಬಹುತೇಕ ಪ್ರವಾಸಿ ತಾಣಗಳು ಜನರನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ತಲುಪಿದೆ. ಈಗಂತೂ ಸಾಮಾಜಿಕ ಜಾಲತಾಣಗಳಿಂದಾಗಿ ಸಣ್ಣ ಸಣ್ಣ ತಾಣಗಳು ಕೂಡ ಬಹಳ ಬೇಗನೆ ಜನರನ್ನು ತಲುಪಬಲ್ಲವು. ಹಾಗಾಗಿ ಈ ನಿಟ್ಟಿನಲ್ಲಿ ಆಡಳಿತ ಯಂತ್ರ ಸ್ವಲ್ಪವೇ ಮುತುವರ್ಜಿ ವಹಿಸಿದರೂ ಯಾವುದೇ ಪ್ರವಾಸಿ ತಾಣವನ್ನು ಬಹಳ ಬೇಗ ಜನಪ್ರಿಯ ಸ್ಥಳ ಆಗಿ ಮಾರ್ಪಾಡು ಮಾಡಬಹುದು.
ಕೋವಿಡ್ ಪ್ರಕರಣಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿರುವುದರಿಂದ ಜನರು ಮತ್ತೆ ಕೋವಿಡ್ ಪೂರ್ವ ಕಾಲದಂತೆ ಪ್ರವಾಸ ಹೊರಡುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಪ್ರವಾಸಿ ಕೇಂದ್ರಗಳಲ್ಲಿ ಎರಡು ವರ್ಷಗಳಿಂದ ನಿರ್ವಹಣ ಕೆಲಸ ಕಾರ್ಯಗಳೇ ಆಗಿಲ್ಲ. ಕೆಲವು ತಾಣ ಗಳಿಗೆ ಹೋಗುವ ದಾರಿಯೂ ಸರಿಯಾಗಿಲ್ಲ. ಕೇವಲ ನಡೆದಾಡುವ ದಾರಿಯಷ್ಟೇ ಇರುವ ಪ್ರದೇಶಗಳಲ್ಲಿ ಗಿಡಗಂಟಿ ಬೆಳೆದು ದಾರಿ ಕಾಣದಂತಹ ಸ್ಥಿತಿ ಇದೆ. ಆದುದರಿಂದ ಈ ಪ್ರದೇಶಗಳನ್ನು ಮತ್ತೆ ಸ್ವತ್ಛಗೊಳಿಸಬೇಕಾಗಿದೆ. ಕನಿಷ್ಠ ಮೂಲಕ ಸೌಕರ್ಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಅವಶ್ಯವಿರುವಲ್ಲಿಗೆ ದಾರಿ, ಬೆಳಕಿನ ವ್ಯವಸ್ಥೆ ಮಾಡಬೇಕಾಗಿದೆ.
ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್ ಶೂ ಧರಿಸಿ ಮೋಸ ಮಾಡುವ ಯತ್ನ
ಕೊರೊನೋತ್ತರ ಪ್ರಪಂಚವೇ ಬದಲಾಗಿದೆ. ಹಿಂದೆ ನಗರಗಳಲ್ಲಿ ಜನರ ಓಡಾಟ ಹೆಚ್ಚಿತ್ತು. ಹಿಂದೆ ಸಂಜೆ ವೇಳೆಗೆ ತಿರುಗಾಟಕ್ಕೆಂದು ನಗರಕ್ಕೆ ಬರುವವರ ಸಂಖ್ಯೆ ಸಾಕಷ್ಟಿತ್ತು. ಹೊಟೇಲ್, ಮಾಲ್, ಎಲೆಕ್ಟ್ರಾನಿಕ್ ಮಳಿಗೆಗಳು, ಬಟ್ಟೆ ಮಳಿಗೆಗಳಿಗೆ ವೀಕೆಂಡ್ ಶಾಪಿಂಗ್ ಎಂದು ಹೋಗುತ್ತಿದ್ದರು. ಈಗ ಅದೆಲ್ಲವೂ ಹೆಚ್ಚಾಗಿ ಶನಿವಾರವೇ ನಡೆಯುತ್ತಿದೆ. ರವಿವಾರ ಸಂಜೆಯ ವೇಳೆ ಕುಟುಂಬ ಸಹಿತವಾಗಿ ಹತ್ತಿರದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂಪ್ರದಾಯ ಆರಂಭವಾಗಿದೆ.
ದೂರದ ಪ್ರವಾಸಿ ತಾಣಗಳಿಗಿಂತ ಹತ್ತಿರದ ಪ್ರವಾಸಿ ತಾಣವೇ ಜನರಿಗೆ ಇಷ್ಟವಾಗತೊಡಗಿದೆ. ಜನ ಜಂಜಾಟದಿಂದ ದೂರವಿದ್ದು, ಪ್ರಶಾಂತ ತಾಣದಲ್ಲಿ ಕಾಲ ಕಳೆಯುವ ಹವ್ಯಾಸ ಹೆಚ್ಚುತ್ತಿದೆ.
ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಮತ್ತಷ್ಟು ಬೆಳವಣಿಗೆ ಕುರಿತು ಸ್ಥಳೀಯಾಡಳಿತಗಳೂ ಮನಸ್ಸು ಮಾಡಬೇಕಿವೆ. ಪ್ರವಾಸೋದ್ಯಮ ಇಲಾಖೆ ಯೂ ಗಮನ ಹರಿಸಬೇಕಿದೆ. ರಾಜ್ಯ ಸರಕಾರ ಪ್ರವಾಸಿಗರ ಆಕರ್ಷಣೆಗೆ ಕ್ರಮ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ. ಹಾಗೆ ಜನ ಬಂದಾಗ ಸ್ವತ್ಛತೆಗೆ ಆದ್ಯ ಗಮನ ನೀಡಬೇಕಿದೆ. ಇದಲ್ಲದ ಹೊರತು ಪ್ರವಾಸಿಗರು ಬಂದರೆ ಆ ಊರಿಗೆ ಶಾಪ. ಹಾಗಾಗದಂತೆ ಜಾಗೃತಿಯ ಅವಶ್ಯವೂ ಇದೆ. ನಗರಕ್ಕೆ ಆತುಕೊಂಡಿರುವ ಪಂಚಗಂಗಾವಳಿ, ಕೋಡಿ, ಬಬ್ಬುಕುದ್ರು ಮೊದಲಾದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆ ತಯಾರಾಗಲಿ. ಅದಕ್ಕೆ ಅಗತ್ಯ ಬಜೆಟ್ ಸರಕಾರದಿಂದ ದೊರೆಯಲಿ. ಅಲ್ಲಿನ ವ್ಯವಸ್ಥೆಗಳೆಲ್ಲ ಉತ್ತಮಗೊಳ್ಳಲಿ. ಆಗ ಒಂದಷ್ಟು ಆರ್ಥಿಕ ಚೇತರಿಕೆಯೂ ಕಂಡು ಬಂದೀತು.
-ಸಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.