Kundapura: ಬಸ್‌ ತಂಗುದಾಣಗಳೇ ಮಾಯ; ಜನರು ಅಯೋಮಯ!

ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ತೆರವಾದ ನಿಲ್ದಾಣಗಳು ಮರು ನಿರ್ಮಾಣವಾಗಲೇ ಇಲ್ಲ; ಮಳೆ-ಬಿಸಿಲಿಗೆ ರಕ್ಷಣೆ ಇಲ್ಲದೆ ಬಸವಳಿಯುವ ವಿದ್ಯಾರ್ಥಿಗಳು, ಮಹಿಳೆಯರು ; ಕೆಲವೆಡೆ ಸರ್ವಿಸ್‌ ರಸ್ತೆಯಲ್ಲಿ ತಂಗುದಾಣ!

Team Udayavani, Nov 26, 2024, 2:25 PM IST

5

ಕುಂದಾಪುರ: ಬಸ್‌ ತಂಗುದಾಣಗಳೆಂದರೆ ಒಂದು ಊರಿನ ಅಸ್ಮಿತೆ. ಒಂದು ಕಾಲದಲ್ಲಿ ಊರನ್ನು ಪ್ರತಿನಿಧಿಸುತ್ತಿದ್ದ ಹೆಗ್ಗುರುತುಗಳು. ಬಸ್ಸಿಗಾಗಿ ಕಾಯುವವರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ರಕ್ಷಣಾ ಕೇಂದ್ರಗಳು. ಅದರಲ್ಲೂ ಮಹಿಳೆಯರು, ವಿದ್ಯಾರ್ಥಿಗಳ ಪಾಲಿಗೆ ಅದೊಂದು ಸುರಕ್ಷಿತ ಪ್ರದೇಶ. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಇಂಥ ತಂಗುದಾಣಗಳನ್ನು ನಾಶ ಮಾಡಿದರೆ? ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಿರುವುದು ಇದೇ. ಅಗಲೀಕರಣದ ಸಂದರ್ಭದಲ್ಲಿ ತೆರವು ಮಾಡಿದ ಬಸ್‌ ತಂಗುದಾಣಗಳನ್ನು ಮರು ನಿರ್ಮಾಣ ಮಾಡಲಾಗಿಲ್ಲ. ಕೆಲವು ಕಡೆ ಮಾಡಿದ್ದರೂ ಸರಿಯಾದ ಜಾಗದಲ್ಲಿಲ್ಲ. ಹೀಗಾಗಿ ಹೆದ್ದಾರಿಯ ಉದ್ದಕ್ಕೂ ಜನರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಬದಿಯಲ್ಲಿ ಕಂಡ ಕಂಡಲ್ಲಿ ನಿಲ್ಲಬೇಕಾದ, ಬಸ್ಸಿನ ಹಿಂದೆ ಓಡಬೇಕಾದ ಅವರ ಕಷ್ಟ ಹೇಳತೀರದು. ನಮಗೊಂದು ಸರಿಯಾದ ಬಸ್‌ ತಂಗುದಾಣ ಕೊಡಿ, ನೆರಳು ಕೊಡಿ ಎಂಬ ಅವರ ಬೇಡಿಕೆಗೆ ಧ್ವನಿಯಾಗುವ ಸರಣಿಯೇ ‘ಎಲ್ಲಿದೆ ಬಸ್‌ ತಂಗುದಾಣ?’

ಕುಂದಾಪುರ-ಬೈಂದೂರು ನಡುವೆ ನಾಲ್ಕು ವರ್ಷಗಳ ಹಿಂದೆ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಯೇನೋ ಸುಂದರವಾಗಿದೆ, ಸಾಕಷ್ಟು ವ್ಯವಸ್ಥಿತವಾಗಿದೆ. ಈ ಹೆದ್ದಾರಿಯಲ್ಲಿ ನೂರಾರು ಬಸ್‌ಗಳ ಓಡಾಟವೂ ಇದೆ. ಆದರೆ, ಪ್ರಯಾಣಿಕರಿಗೆ ಈ ಬಸ್‌ಗಳಿಗಾಗಿ ಕಾಯಲು ಮೂಲಭೂತವಾಗಿ ಬೇಕಾದ ವ್ಯವಸ್ಥಿತ ಬಸ್‌ ತಂಗುದಾಣಗಳೇ ಇಲ್ಲ.

ಈ ಮೊದಲು ಒಂದೇ ರಸ್ತೆ ಇದ್ದಾಗ ವ್ಯವಸ್ಥಿತವಾದ ಬಸ್‌ ನಿಲ್ದಾಣಗಳಿದ್ದವು. ಮಾತ್ರವಲ್ಲ ಆ ಬಸ್‌ ನಿಲ್ದಾಣಗಳು ಊರಿನ ಹೆಗ್ಗುರುತುಗಳಾಗಿದ್ದವು. ಆದರೆ, ರಸ್ತೆಗಾಗಿ ಜಾಗ ವಿಸ್ತರಣೆಗೊಂಡಾಗ ಈ ಬಸ್‌ ತಂಗುದಾಣಗಳನ್ನು ತೆರವು ಮಾಡಲಾಯಿತು. ಹೀಗೆ ತೆರವುಗೊಂಡ ತಂಗುದಾಣಗಳ ಜಾಗದಲ್ಲಿ ಹೊಸದು ನಿರ್ಮಾಣವಾಗಲಿಲ್ಲ. ನಿರ್ಮಾಣವಾಗಿದ್ದೂ ವ್ಯವಸ್ಥಿತವಾಗಿಲ್ಲ.

ಕುಂದಾಪುರದಿಂದ ಉಡುಪಿ ಮತ್ತು ಭಟ್ಕಳ ಕಡೆಗೆ ಹೋಗುವ ಬಸ್ಸುಗಳಿಗಾಗಿ ಜನ ಹೆದ್ದಾರಿ ಬದಿಯಲ್ಲಿ ಕಾಯುತ್ತಾರೆ. ಖಾಸಗಿ ಹಾಗೂ ಸರಕಾರಿ ಬಸ್ಸುಗಳ ವ್ಯವಸ್ಥೆಯಿದ್ದು ವೇಗದೂತ ಸರಕಾರಿ ಬಸ್ಸುಗಳು ನಿಗದಿತ ನಿಲುಗಡೆ ನೀಡುತ್ತವೆ. ಈ ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರಿಗೆ ಬಿಸಿಲು ಇದ್ದಾಗ, ಮಳೆ ಬಂದಾಗ ತಲೆ ಮೇಲೊಂದು ಆಸರೆ ಬೇಕಾಗುತ್ತದೆ. ಹಿಂದೆ ಇದ್ದ ತಂಗುದಾಣಗಳು ಪರಿಪೂರ್ಣ ಅಲ್ಲದಿದ್ದರೂ ಆಸರೆಯಂತೂ ಆಗಿದ್ದವು. ಆದರೆ, ಈಗ ತಂಗುದಾಣಗಳೇ ಇಲ್ಲದಂತಾಗಿವೆ.

ಗುಬ್ಬಿ ಗೂಡಿನಂಥ ತಂಗುದಾಣಗಳು!
ಹೆದ್ದಾರಿಯ ಕೆಲವು ಕಡೆ ಹೆಸರಿಗೆ ಬಸ್‌ ತಂಗುದಾಣಗಳು ಇವೆ. ಅವು ಎಷ್ಟು ಪುಟ್ಟವು ಎಂದರೆ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಬಹುದು. ಮಳೆಗಾಳಿ ಬಂದರೆ ಸಣ್ಣ ರಕ್ಷಣೆಯೂ ಅದಕ್ಕಿಲ್ಲ. ಜೋರು ಗಾಳಿ ಮಳೆ ಬಂದರೆ ತಂಗುದಾಣವೇ ಕಿತ್ತೆದ್ದು ಹೋದೀತೋ ಏನೋ ಎಂಬ ಭಯದಲ್ಲಿ ನಿಲ್ಲಬೇಕು. ಈ ಬಗ್ಗೆ ಜಾಲತಾಣದಲ್ಲಿ ಆಗಾಗ ಅಪಹಾಸ್ಯಗಳು ನಡೆಯುತ್ತಾ ಇರುತ್ತವೆ.

ಕೆಲವು ಕಡೆ ಸರ್ವಿಸ್‌ ರಸ್ತೆಯಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗಿದೆ. ಅಲ್ಲಿ ನಿಂತರೆ ಬಸ್‌ ಬರುವಾಗ ಹೆದ್ದಾರಿಗೆ ಓಡಿಕೊಂಡು ಬರುವುದು ಕೂಡಾ ಅಪಾಯಕ್ಕೆ ಆಹ್ವಾನ ನೀಡಿದಂತೆ.

ಕುಂದಾಪುರದಲ್ಲೇ ಹಲವು ಕಡೆ ಸಮಸ್ಯೆ
ಕುಂದಾಪುರ ನಗರದ ಸಮೀಪದಲ್ಲಿ ಕೋಟೇಶ್ವರದಲ್ಲಿ ಹೆದ್ದಾರಿ ಬದಿ ಸುಸಜ್ಜಿತ ತಂಗುದಾಣ ಇಲ್ಲ. ಹಂಗಳೂರಿನಲ್ಲಿ ರಸ್ತೆಯಲ್ಲಿಯೇ ಮಕ್ಕಳು, ಮಹಿಳೆಯರು ಬಸ್ಸೇರುತ್ತಾರೆ. ಸಂಗಂನಲ್ಲಿ ಪುಟ್ಟ ಗೂಡಿನಂತಹ ತಂಗುದಾಣ ಇದೆ. ಆದರೆ ಇಲ್ಲಿ ಬಸ್ಸೇರುವ ಮಕ್ಕಳ ಸಂಖ್ಯೆ ಸಾವಿರಕ್ಕೂ ಹೆಚ್ಚು! ಬೆಳಗ್ಗೆ, ಸಂಜೆ ಇಲ್ಲಿಗೆ ಭೇಟಿ ನೀಡಿದರೆ ಪಕ್ಕದ ಕಾಲೇಜಿನಿಂದ ಬರುವ ಮಕ್ಕಳ ಸಂಖ್ಯೆ ಸ್ಪಷ್ಟವಾಗುತ್ತದೆ.

ಎಲ್ಲೆಲ್ಲಿ ಬಸ್‌ ತಂಗುದಾಣ ಮಾಯ?
ಉಡುಪಿಯ ಸಂತೆಕಟ್ಟೆಯಿಂದ ಆರಂಭಿಸಿ ಶಿರೂರುವರೆಗೆ ಅನೇಕ ಕಡೆ ತಂಗುದಾಣದ ಅಗತ್ಯವಿದೆ. ಸಂತೆಕಟ್ಟೆ, ಬ್ರಹ್ಮಾವರ, ಮಣೂರು, ತೆಕ್ಕಟ್ಟೆ, ಕೋಟೇಶ್ವರ, ಹಂಗಳೂರು, ಹೇರಿಕುದ್ರು, ತಲ್ಲೂರು, ಹೆಮ್ಮಾಡಿ, ತ್ರಾಸಿ, ಮುಳ್ಳಿಕಟ್ಟೆ, ಮರವಂತೆ ಆಸ್ಪತ್ರೆ ಬಳಿ, ನಾವುಂದ, ಅರೆಹೊಳೆ ಕ್ರಾಸ್‌, ನಾಗೂರು ಉಪ್ರಳ್ಳಿ ಕ್ರಾಸ್‌, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ, ಯಡ್ತರೆ ಜಂಕ್ಷನ್‌, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಬೈಂದೂರು ವಿಧಾನಸೌಧ ಬಳಿ, ಶಿರೂರು ಬಳಿ ಬಸ್‌ ನಿಲ್ದಾಣ ಬೇಕು.

ರಸ್ತೆಯಲ್ಲೇ ನಿಂತು ಕಾಯಬೇಕು
ಒಂದು ವ್ಯವಸ್ಥಿತ ಬಸ್‌ ತಂಗುದಾಣ ಇಲ್ಲದೆ ಇರುವುದರಿಂದ ಪ್ರಯಾಣಿಕರು ಮಾರ್ಗದ ಬದಿಯಲ್ಲೇ ನಿಂತು ಕಾಯಬೇಕು. ಕೆಲವೊಮ್ಮೆ ತಮ್ಮ ಊರಿನ ಬಸ್ಸಿಗಾಗಿ ಅರ್ಧರ್ಧ ಗಂಟೆ ಕಾಯಬೇಕಾಗಿಯೂ ಇರುತ್ತದೆ. ಕಾಯುವವರಲ್ಲಿ ವೃದ್ಧರೂ, ಮಹಿಳೆಯರು, ಮಕ್ಕಳು ಕೂಡಾ ಇರುತ್ತಾರೆ. ಶಾಲೆ ಬಿಟ್ಟು ಬರುವವರೋ, ಕೆಲಸ ಬಿಟ್ಟು ಬರುವವರೋ ತುಂಬ ಹೊತ್ತು ನಿಂತುಕೊಳ್ಳುವ ಸ್ಥಿತಿಯಲ್ಲೂ ಇರುವುದಿಲ್ಲ. ಎಲ್ಲಾದರೂ ಕುಳಿತುಕೊಳ್ಳಲು ಜಾಗ ಸಿಗಲಿ ಎಂದು ಅವರು ಹಾರೈಸುವುದಕ್ಕಾಗಿಯಾದರೂ ಬಸ್‌ ತಂಗುದಾಣಗಳಿಲ್ಲ.

ಬಸ್‌ ತಂಗುದಾಣ ಇಲ್ಲವೆಂದಾದರೆ ಜನರೂ ಒಂದು ಕಡೆ ನಿಲ್ಲುವುದಿಲ್ಲ, ಬಸ್‌ಗಳೂ ಸರಿಯಾದ ಜಾಗದಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಜನರು ಬಸ್ಸಿನತ್ತ ಓಡುವುದು ಹೆಚ್ಚು. ಓಡಿ ಬರುವ ಜನರನ್ನು ನೋಡಿ ದಿಢೀರ್‌ ಬ್ರೇಕ್‌ ಹಾಕುವ ಕಾರಣದಿಂದಲೂ ವಾಹನ ಅಪಘಾತಗಳಾಗುತ್ತಿವೆ. ಇತರ ವಾಹನಗಳಿಗೂ ಗೊಂದಲ ಉಂಟಾಗುತ್ತದೆ. ಹಂಗಳೂರಿನಂತಹ ಪ್ರದೇಶದಲ್ಲಿ ಹೆದ್ದಾರಿಯಲ್ಲಿಯೇ ಪ್ರಯಾಣಿಕರು ನಿಂತು ಬಸ್ಸೇರುವ ಕಾರಣದಿಂದ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಬೇಕಿರುವುದು ದುಡ್ಡಲ್ಲ, ಮನಸ್ಸು
ಹೆದ್ದಾರಿ ಚತುಷ್ಪಥಗೊಳ್ಳುವ ಮೊದಲು ಇದ್ದ ಮಾದರಿಯಲ್ಲಿಯೇ ಅಥವಾ ಇನ್ನೂ ಉತ್ತಮ ರೀತಿಯಲ್ಲಿ ಹೆದ್ದಾರಿ ಬದಿ ಬಸ್‌ ತಂಗುದಾಣದ ಅವಶ್ಯವಿದೆ. ಇಲ್ಲೆಲ್ಲ ಬಸ್‌ ತಂಗುದಾಣ ಸ್ಥಾಪನೆಗೆ ದೊಡ್ಡ ಮೊತ್ತವೇನೂ ಬೇಕಾಗಿಲ್ಲ. ಸಣ್ಣ ಮೊತ್ತದಲ್ಲಿ ಮುಗಿಯಬಹುದಾದ ಕೆಲಸ ಇದು. ಒಂದೊಮ್ಮೆ ಸರಕಾರದಿಂದ ಮಾಡಲು ಅಸಾಧ್ಯವಾದರೆ ಸಂಘ, ಸಂಸ್ಥೆ ದಾನಿಗಳು ಕೂಡಾ ಮುಂದೆ ಬರುತ್ತಾರೆ. ಆದರೆ ಇವೆಲ್ಲಕ್ಕೂ ತಲೆ ಕೊಡಬೇಕಾದ ಹೆದ್ದಾರಿ ಪ್ರಾಧಿಕಾರವಾಗಲೀ, ಅದರ ಗುತ್ತಿಗೆದಾರರಾಗಲೀ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಎಸಿ ಕಾರಿನಲ್ಲಿ ಹೋಗುವ ಜನಪ್ರತಿನಿಧಿಗಳಿಗೂ ಇದರ ಅರಿವು ಉಂಟಾಗಲೇ ಇಲ್ಲ.

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

1gavli

Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ

1-hhh-shi

Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.