Kundapura ಚೆಕ್ ಅಮಾನ್ಯ: ಆರೋಪಿ ದೋಷಮುಕ್ತ
Team Udayavani, Jan 11, 2025, 12:54 AM IST
ಕುಂದಾಪುರ: ಮೀನುಗಾರಿಕ ಸಂಸ್ಥೆಯೊಂದಕ್ಕೆ 40.62 ಲಕ್ಷ ರೂ. ಮೌಲ್ಯದ ಚೆಕ್ ನೀಡಿ, ಅದು ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಂಗೊಳ್ಳಿಯ ಮೋಹನ ಖಾರ್ವಿ ಅವರನ್ನು ದೋಷಮುಕ್ತಗೊಳಿಸಿ ಕುಂದಾಪುರದ ಹೆಚ್ಚುವರಿ ಸಿವಿಲ್ ಹಾಗೂ ಪ್ರಥಮ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಧೀಶೆ ರೋಹಿಣಿ ಡಿ. ಆದೇಶಿಸಿದ್ದಾರೆ. ಈ ಪ್ರಕರಣ ಸಂಬಂಧ ಮೋಹನ್ ಖಾರ್ವಿ ವಿರುದ್ಧ ಚೆಕ್ ಅಮಾನ್ಯತೆಯ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಮೋಹನ್ ಖಾರ್ವಿ ಅವರ ಮೇಲಿನ ಆರೋಪ ಸಾಬೀತಾಗದ ಕಾರಣಕ್ಕೆ ದೋಷಮುಕ್ತಗೊಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.