Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ
Team Udayavani, Jan 11, 2025, 1:12 AM IST
ಕುಂದಾಪುರ: ಅಡುಗೆ ಅನಿಲ ಸಿಲಿಂಡರ್ ಬಳಕೆ, ಸೋರಿಕೆ, ಮುನ್ನೆಚ್ಚರಿಕೆ ಕುರಿತು ಮನೆ ಮನೆಗೆ ಭೇಟಿ ನೀಡಿದ ಮಹಿಳೆಯೊಬ್ಬರ ವರ್ತನೆ ಕುರಿತು ಹೆಮ್ಮಾಡಿ ಪರಿಸರದ ಜನ ಪೊಲೀಸರಿಗೆ ದೂರು ನೀಡಿದ್ದಾರೆ.
ಇಂತಹ ಘಟನೆ ಕುಂದಾಪುರ ಪರಿಸರದಲ್ಲೂ ನಡೆದಿದೆ. ಹೆಮ್ಮಾಡಿಯಲ್ಲಿ ಅನುಮಾನಾಸ್ಪದ ಮಹಿಳೆಯೊಬ್ಬರು ಗ್ಯಾಸ್ ಸಂಪರ್ಕವನ್ನು ಕೇಳುವ ಮೂಲಕ ಮತ್ತು ಗ್ಯಾಸ್ ಸಿಲಿಂಡರ್ ಬಳಸುವಾಗ ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ಡೆಮೊ ತೋರಿಸುತ್ತಾ ಮನೆಗೆ ಭೇಟಿ ನೀಡುತ್ತಿದ್ದರು.
ಮನೆ ಒಳಗೆ ಹೋಗಲು ಪ್ರಯತ್ನಿಸಿದ್ದರು. ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕೇಳುತ್ತಿದ್ದರು. ಮಹಿಳೆಯರು ಇರುವ ಮನೆಗಳಲ್ಲಿ ಅವರ ಪತಿಯ ಬಗ್ಗೆ ಕೇಳುತ್ತಿದ್ದರು. ಗುರುವಾರ ರಾತ್ರಿ 7.30ರ ಅನಂತರ ಮಹಿಳೆ ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ವಾಸಿಸುವ ಮನೆಗಳಿಗೆ ಭೇಟಿ ನೀಡಿದ್ದರು. ಪ್ರತೀ ಬಾರಿಯೂ ಇತರರಿಗೆ ಫೋನ್ ಮಾಡಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆೆ. 8 ಗಂಟೆಯವರೆಗೆ ಗಮನಿಸಿ, 112 ಸಂಖ್ಯೆ ಮೂಲಕ ಪೊಲೀಸರಿಗೆ ದೂರು ನೀಡಲಾಯಿತು. ಆಗ ಆಕೆ ಬೈಕಿನಲ್ಲಿ ಬೇರೆಯವರ ಜತೆ ಸ್ಥಳದಿಂದ ಪರಾರಿಯಾಗಿದ್ದಾಗಿ ಗುರುರಾಜ ಅವರು ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.