Kundapura;ಮಲ ತಂದೆಯಿಂದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

Team Udayavani, Jul 13, 2023, 7:35 AM IST

crKundapura;ಮಲ ತಂದೆಯಿಂದ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಕುಂದಾಪುರ: ಹೊರ ರಾಜ್ಯದ ಮಹಿಳೆಯನ್ನು ಪ್ರೀತಿಸಿ, ಮದುವೆಯಾಗಿ ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಕುಂದಾಪುರ ವೃತ್ತ ನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಆರೋಪಿ ಸೊಹೇಲ್‌ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇಬ್ಬರು ಮಕ್ಕಳಿದ್ದ ಹೊರ ರಾಜ್ಯದ ಮಹಿಳೆಯೊಬ್ಬರು ಪತಿಯನ್ನು ತ್ಯಜಿಸಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 11 ವರ್ಷಗಳ ಹಿಂದೆ ಬೈಂದೂರಿನ ನಿವಾಸಿಯೆಂದು ಪರಿಚಿತನಾದ ಸೊಹೇಲ್‌ ಆಕೆಯನ್ನು ಪ್ರೀತಿಸಿ, ಮದುವೆಯಾಗಿ ಕುಂದಾಪುರಕ್ಕೆ ಕರೆತಂದಿದ್ದ. ಬಳಿಕ ಮಹಿಳೆಯ ಮಗಳಿಗೆ ಸೊಹೇಲ್‌ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದು, ಆಕೆ ಆತನಿಂದ ದೂರ ಹೋಗಿ ಬೇರೆಡೆ ಬಾಡಿಗೆ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು.

ಜೂ.10ರಂದು ಬಾಡಿಗೆ ಮನೆಯಲ್ಲಿದ್ದ ಆಕೆ ಹಾಗೂ ಅವಳ ಮಗಳನ್ನು ಕರೆದುಕೊಂಡು ಆತನ ಮನೆಗೆ ಕರೆದೊಯ್ದು ಇಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ, ಅಪ್ರಾಪ್ತ ಬಾಲಕಿಯಾದ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆಯು ತನ್ನ ಮಗಳನ್ನು ಆತನಿಂದ ಬಿಡಿಸಲು ಹೋದಾಗ ಆರೋಪಿ ಸೊಹೇಲ್‌ ಆಕೆ ಕುತ್ತಿಗೆಯನ್ನು ಒತ್ತಿ ಹೊಡಿದು ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಆರೋಪಿ ಪತಿಯನ್ನು ದೂಡಿ ತನ್ನ ಮಗಳನ್ನು ಆತನಿಂದ ತಪ್ಪಿಸಿಕೊಂಡು ಬಂದಿದ್ದಳು.

ತಾಯಿ, ಮಗಳನ್ನು ಕೊಲ್ಲುವುದಾಗಿ ಬೆದರಿಸಿ ಆರೋಪಿ ಸೊಹೇಲ್‌ ಈ ಹಿಂದೆಯು ಮಲ ಮಗಳಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಎಂದು ಸಂತ್ರಸ್ತ ಬಾಲಕಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಕುಂದಾಪುರ ನಗರ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

Hosanagara: ಬಿದನೂರಲ್ಲಿ ನಿಲ್ಲದ ನಿಧಿ ಬೇಟೆ! ಭಗ್ನಗೊಳ್ಳುತ್ತಿದೆ ಇತಿಹಾಸದ ಪಳೆಯುಳಿಕೆಗಳು

2-kushtagi

ನಿಯಂತ್ರಣ ತಪ್ಪಿ ಸ್ಲೀಪರ್ ಕೋಚ್ ಬಸ್ ಪಲ್ಟಿ; ಚಾಲಕ ಸಾವು; ಹಲವು ಪ್ರಯಾಣಿಕರಿಗೆ ಗಾಯ

vidhana-Soudha

Karnataka Government: 7ನೇ ವೇತನ ಆಯೋಗದ ಶಿಫಾರಸಿಗೆ ಎಳ್ಳುನೀರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Udupi ಪ್ರೇಯಸಿ ಜತೆ ಜಗಳ: ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಹೋದ ಚಾಲಕ!

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Kamlashile Temple; ಕಮಲಶಿಲೆ ದೇವಿಗೆ ಕುಬ್ಜಾ ಸ್ನಾನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

Heavy Rain ನಾವುಂದ, ಸಾಲ್ಬುಡಾ, ಅರೆಹೊಳೆ ಜಲಾವೃತ; ನೂರಕ್ಕೂ ಮಿಕ್ಕಿ ಮನೆಗಳು ದಿಗ್ಬಂಧನ

ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Transfer of 23 IAS officers including five District Collectors

IAS transfer; ಐವರು ಜಿಲ್ಲಾಧಿಕಾರಿಗಳು ಸೇರಿ 23 ಐಎಎಸ್ ಅಧಿಕಾರಿಗಳ ವರ್ಗಾವಣೆ

4-punjalkatte

Ajilamogaru: ನೀರು ಪಾಲಾದ ಮೈಕಲ್ ರ ಮೃತದೇಹ ಪತ್ತೆ

3-kushtagi

Kushtagi: ಕಳ್ಳರ ಅಟ್ಟಹಾಸಕ್ಕೆ 13 ಶ್ರೀಗಂಧದ ಮರ ಬಲಿ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ಆಯ್ಕೆ

Raichur: ನೂತನ ಜಿಲ್ಲಾಧಿಕಾರಿಯಾಗಿ ನಿತೀಶ್ ಕೆ. ನಿಯೋಜನೆ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Hathras Stampede: ಅಲಿಗಢದಲ್ಲಿರುವ ಸಂತ್ರಸ್ತರ ಮನೆಗೆ ಇಂದು ರಾಹುಲ್ ಗಾಂಧಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.