Kundapura: ಹದಗೆಟ್ಟ ಬ್ರಹ್ಮಾವರ-ಬಿದ್ಕಲ್‌ಕಟ್ಟೆ ರಾಜ್ಯ ಹೆದ್ದಾರಿ
ಗುಂಡಿಗಳಿಂದ ಸಂಚಾರ ದುಸ್ತರ; ಅಪಘಾತಗಳು ಹೆಚ್ಚಳ; ದುರಸ್ತಿಗೆ ಸಾರ್ವಜನಿಕರ ಆಗ್ರಹ
Team Udayavani, Sep 25, 2024, 5:29 PM IST
ಕುಂದಾಪುರ: ಬಿದ್ಕಲ್‌ಕಟ್ಟೆಯಿಂದ ಹಾಲಾಡಿಯವರೆಗಿನ ರಾಜ್ಯ ಹೆದ್ದಾರಿಯ ಬಹುತೇಕ ಭಾಗ ಹೊಂಡ, ಗುಂಡಿಮಯಗೊಂಡಿದ್ದು, ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ. ಅಲ್ಲಲ್ಲಿ ಹಲವೆಡೆಗಳಲ್ಲಿ ರಸ್ತೆ ಮಧ್ಯದ ಗುಂಡಿಗಳಿಂದಾಗಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಆದಷ್ಟು ಬೇಗ ಈ ರಸ್ತೆ ದುರಸ್ತಿ ಮಾಡಬೇಕು ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ರಹ್ಮಾವರ – ಬಿದ್ಕಲ್‌ಕಟ್ಟೆ- ಹಾಲಾಡಿ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾಗೂ ಕುಂದಾಪುರ – ಕೋಟೇಶ್ವರ – ಹೆಬ್ರಿ ಜಿಲ್ಲಾ ಮುಖ್ಯ ರಸ್ತೆ ಹಾದುಹೋಗುವ ಬಿದ್ಕಲ್‌ಕಟ್ಟೆ- ಹಾಲಾಡಿ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು, ನಿತ್ಯ ಸಂಚರಿಸುವವರು ಸಂಕಷ್ಟ ಪಡುವಂತಾಗಿದೆ.
3 ಕಿ.ಮೀ. ಹೊಂಡಗುಂಡಿ
ಕೋಟೇಶ್ವರದಿಂದ ಬಿದ್ಕಲ್‌ಕಟ್ಟೆಯವರೆಗಿನ ರಸ್ತೆಯು ಉತ್ತಮವಾಗಿದ್ದು, ಅಂತಹ ಸಮಸ್ಯೆಗಳೇನು ಇಲ್ಲ. ಆದರೆ ಬಿದ್ಕಲ್‌ಕಟ್ಟೆಯಿಂದ ಹಾಲಾಡಿಯವರೆಗಿನ 6 ಕಿ.ಮೀ. ದೂರದ ರಸ್ತೆಯಲ್ಲಿ 3 ಕಿ.ಮೀ.ಗೂ ಹೆಚ್ಚು ಭಾಗ ಸಂಪೂರ್ಣ ಹೊಂಡ, ಗುಂಡಗಳಿವೆ. ಅದರಲ್ಲೂ ಕಕ್ಕುಂಜೆ ಕ್ರಾಸ್ ಬಳಿಯಂತೂ ವಾಹನ ಗಳು ಸಂಚರಿಸಲು ಸಾಧ್ಯವೇ ಇಲ್ಲದಂತಹ ಹೊಂಡಗಳು ಉಂಟಾಗಿವೆ. ಇನ್ನು ಜನ್ನಾಡಿ ಬಳಿಯೂ ಗುಂಡಿಗಳಿವೆ.
ಪ್ರಮುಖ ಸಂಪರ್ಕ ರಸ್ತೆ
ಹಾಲಾಡಿ- ಬಿದ್ಕಲ್‌ಕಟ್ಟೆಯವರೆಗೆ ಹೆದ್ದಾರಿಯು ಹತ್ತಾರು ಊರುಗಳನ್ನು ಸಂಪರ್ಕಿ ಸುವ ರಸ್ತೆಯಾಗಿದೆ. ಕುಂದಾಪುರದಿಂದ ಹಾಲಾಡಿ, ಬೆಳ್ವೆ, ಗೋಳಿಯಂಗಡಿ, ಅಮಾಸೆಬೈಲು, ಹೆಬ್ರಿ, ಆಗುಂಬೆಗೆ ಇದೇ ರಸ್ತೆಯಿಂದ ಸಂಚರಿಸಬೇಕು. ಇನ್ನು ಉಡುಪಿಯಿಂದ ತೀರ್ಥಹಳ್ಳಿ, ಸಿದ್ದಾಪುರಕ್ಕೆ ಸಂಚರಿಸಬೇಕಾದರೂ ಇದೇ ಮಾರ್ಗವಾಗಿ ಹಾದುಹೋಗಬೇಕು. ನಿತ್ಯ ಹತ್ತಾರು ಬಸ್‌ಗಳು, ಸಾವಿರಾರು ವಾಹನಗಳು ಸಂಚರಿಸುವ ಮಾರ್ಗ ಇದಾಗಿದೆ. ಪ್ರತಿ ದಿನ ಸಹಸ್ರಾರು ಮಂದಿ ಈ ಮಾರ್ಗವನ್ನು ಆಶ್ರಯಿಸಿದ್ದಾರೆ.
ಶೀಘ್ರ ದುರಸ್ತಿಗೆ ಕ್ರಮ
ಹಾಲಾಡಿ – ಬಿದ್ಕಲ್‌ಕಟ್ಟೆ ರಸ್ತೆ ಹದಗೆಟ್ಟ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿರ್ವಹಣೆಗೆ ಅನುದಾನವಿದ್ದು, ಅದರಲ್ಲಿ ಮಳೆ ಸಂಪೂರ್ಣ ಕಡಿಮೆಯಾದ ಬಳಿಕ ದುರಸ್ತಿ ಕಾಮಗಾರಿ ಆರಂಭಿಸಲಾಗುವುದು. ಈಗ ಆಗಾಗ್ಗೆ ಮಳೆ ಬರುತ್ತಿರುವುದರಿಂದ ಕಾಮಗಾರಿ ಮಾಡಿದರೂ, ನಿಲ್ಲುವುದಿಲ್ಲ. ಮಳೆ ಕಡಿಮೆಯಾದ ಬಳಿಕ ಶುರು ಮಾಡಲಾಗುವುದು.
-ರಾಮಣ್ಣ ಗೌಡ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಕುಂದಾಪುರ
ಮರು ಡಾಮರೀಕರಣ ಕಾಮಗಾರಿಗೆ ಆಗ್ರಹ
ಈ ಮಾರ್ಗ ಮಳೆಯಿಂದಾಗಿ ಈಗ ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ತುಂಬಾ ಪ್ರಯಾಸಪಟ್ಟು ಸಂಚರಿಸುವಂತಾಗಿದೆ. ಈಗ ಮಳೆ ತುಸು ಕಡಿಮೆಯಾಗುತ್ತಿದ್ದು, ಇನ್ನಾದರೂ ಈ ರಸ್ತೆಯ ಹೊಂಡ- ಗುಂಡಿಗಳಿರುವ ಕಡೆ ಮರು ಡಾಮರು ಕಾಮಗಾರಿ ಮಾಡಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
Naxal Encounter: ಬಂಧಿತ ಸುರೇಶ್ ಅಂಗಡಿ ಮಾಹಿತಿಯಂತೆ ʼಆಪರೇಷನ್ ವಿಕ್ರಂ ಗೌಡʼ
Naxal Encounter: ನಕ್ಸಲ್ ವಿಕ್ರಂ ಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಿದ್ದ: ಡಿಜಿಪಿ
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.