ಕುಂದಾಪುರ ಫ್ಲೈ ಓವರ್: ಮುಗಿಯದ ಗೋಳು
ಹೆದ್ದಾರಿ: ಬೇಡಿಕೆಗೆ ದೊರೆಯದ ಸ್ಪಂದನೆ , ಕೈ ಕೊಟ್ಟ ಜನಪ್ರತಿನಿಧಿಗಳು; ಮಾತು ಈಡೇರಿಸದ ಅಧಿಕಾರಿಗಳು
Team Udayavani, Feb 13, 2021, 3:20 AM IST
ಕುಂದಾಪುರ: ಅಂತೂ ಇಂತೂ ಒಂದು ಹಂತಕ್ಕೆ ಬಂದ ಫ್ಲೈಓವರ್ ಕಾಮಗಾರಿ ಈಗ ಊರ ಜನರಿಗೆ ಶಾಪವಾಗಿದೆ. ಫ್ಲೈಒವರ್ ನಿರ್ಮಾಣ ಹಾಗೂ ಅದಕ್ಕೂ ಮೊದಲು ಸಾರ್ವಜನಿಕರು ಇಟ್ಟ ಬೇಡಿಕೆಗಳು ಈಡೇರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜನಪ್ರತಿನಿಧಿಗಳು ಈ ಕುರಿತು ತಲೆಕೆಡಿಸಿಕೊಂಡಿಲ್ಲ. ಜನರ ದೂರಿಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಕೆಲವು ಬಾರಿ ಬಂದು ಭರವಸೆ ನೀಡಿದ್ದರೂ ಅದನ್ನು ಈಡೇರಿಸಲಾಗುತ್ತಿಲ್ಲ. ಇದೆಲ್ಲದರಿಂದಾಗಿ ಸಾರ್ವಜನಿಕರು, ವಾಹನ ಚಾಲಕರು ಅಸಹಾಯಕರಾಗಿದ್ದಾರೆ.
ಕಾಮಗಾರಿ :
ಕಳೆದ ಕೆಲ ತಿಂಗಳಿನಿಂದ ಫ್ಲೈಓವರ್ ಕಾಮಗಾರಿ ತುಸು ವೇಗದಿಂದ ನಡೆಯುತ್ತಿದೆ. ಪ್ಲೆ„ಓವರ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಯೂ ಮುಕ್ತಾಯದ ಹಂತ ಬಂದಿದೆ. ಇದೇ ವೇಗ ಅಥವಾ ಇದಕ್ಕಿಂತ ತುಸು ವೇಗದಲ್ಲಿ ನಡೆದರೂ ಮೇ ಅಥವಾ ಎಪ್ರಿಲ್‌ನಲ್ಲಿಯೇ ಓಡಾಟಕ್ಕೆ ಬಿಟ್ಟುಕೊಡಬಹುದು ಎಂದು ಅಂದಾಜಿಸಲಾಗಿದೆ.
ತೆರೆದಿಲ್ಲ :
ಬಸ್ರೂರು ಮೂರುಕೈ ಅಂಡರ್‌ಪಾಸ್ ಕಾಮಗಾರಿ ಪೂರ್ಣವಾಗಿದೆ. ಆದರೆ ವಾಹನಗಳ ಓಡಾಟಕ್ಕೆ ಬಿಟ್ಟುಕೊಟ್ಟಿಲ್ಲ. ಇದಕ್ಕೆ ಕಾರಣ ಫ್ಲೈಓವರ್ ಮೇಲೆ ವಾಹನಗಳ ಓಡಾಟ ಆರಂಭವಾಗದೇ ಅಂಡರ್‌ಪಾಸ್ ಮೂಲಕ ಬಸ್ರೂರು ಕಡೆಯಿಂದ ಬರುವ ವಾಹನಗಳಿಗೆ ಪ್ರವೇಶ ನೀಡಿದರೆ ವಿನಾಯಕ ಕಡೆಯಿಂದ ಬರುವ ವಾಹನಗಳಿಂದಾಗಿ ಸಂಚಾರ ದಟ್ಟಣೆಯಾಗುತ್ತದೆ. ಈಗ ಸರ್ವಿಸ್ ರಸ್ತೆಯೇ ಹೆದ್ದಾರಿಯಾದ ಕಾರಣ ಇಕ್ಕಟ್ಟಾದ ರಸ್ತೆಯಲ್ಲಿ ಲಾರಿ, ಖಾಸಗಿ, ಸರಕಾರಿ ಬಸ್‌ಗಳ್ಳೋ ಅಥವಾ ಇನ್ನಾವುದೋ ವಾಹನ ಹಾಳಾದರೆ, ಅಪಘಾತಕ್ಕೀಡಾದರೆ ಸಂಚಾರ ಅಸಮರ್ಪಕ ಖಚಿತ ಎಂಬಂತಾಗಿದೆ.
ಅವಕಾಶ ಇಲ್ಲ :
ಬಸ್ರೂರು ಮೂರುಕೈ ಅಂಡರ್‌ಪಾಸ್, ಟಿಟಿ ರೋಡ್ ಪಾದಚಾರಿ ಮಾರ್ಗ ವಾಹನ ಓಡಾಟಕ್ಕೆ ಬಿಟ್ಟಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಬಳಿ ಕ್ಯಾಟಲ್ ಪಾಸ್‌ನಲ್ಲಿ ಸಣ್ಣ ವಾಹನಗಳು ಓಡಾಡುತ್ತಿವೆ. ಎಲ್‌ಐಸಿ ಕಚೇರಿ ಎದುರು ರಸ್ತೆ ದಾಟಲು ತಡೆ ಒಡ್ಡಲಾಗಿದೆ. ಇದೆಲ್ಲದರ ಪರಿಣಾಮ ವಿನಾಯಕ ಬಳಿ ಸರ್ವಿಸ್ ರಸ್ತೆಗೆ ಹೊಕ್ಕರೆ ಶಾಸ್ತ್ರಿ ಸರ್ಕಲ್ ಬಳಿಯೇ ತಿರುವು ಪಡೆಯಬೇಕು. ಎಪಿಎಂಸಿ ಬಳಿ ತಿರುವು ಪಡೆದರೆ ಶಾಸ್ತ್ರಿ ಸರ್ಕಲ್‌ವರೆಗೆ ಬರಲೇಬೇಕು. ಉಳಿದಂತೆ ಎಲ್ಲಿಯೂ ಇನ್ನೊಂದು ಮಗ್ಗುಲಿಗೆ ತೆರಳಲು ಅವಕಾಶ ಇಲ್ಲ.
ಬೇಡಿಕೆ ಈಡೇರಿಲ್ಲ :
ಟಿಟಿ ರೋಡ್ ಬದಲು ಬೊಬ್ಬರ್ಯನಕಟ್ಟೆ ಬಳಿ ಸಣ್ಣ ವಾಹನ ಓಡಾಡುವಂತೆ ಪಾದಚಾರಿ ಮಾರ್ಗವನ್ನು ನೀಡಿದ್ದರೆ ಅನುಕೂಲವಾಗುತ್ತಿತ್ತು ಎಂದು ಬೇಡಿಕೆ ಇತ್ತು. ಬಸ್ರೂರು ಮೂರುಕೈ ಅಂಡರ್‌ಪಾಸ್ ಬೇಡಿಕೆ ಕೂಡ ಅನಂತರ ಮಂಜೂರಾದುದು. ಅಸಲಿಗೆ ಶಾಸ್ತ್ರಿ ಸರ್ಕಲ್ ಬಳಿ ಫ್ಲೈಓವರ್ ಇರಲಿಲ್ಲ. ಇಲ್ಲಿ ಬ್ರಹ್ಮಾವರ, ಅಂಬಾಗಿಲು, ಪಡುಬಿದ್ರೆಯಲ್ಲಿ ಮಾಡಿದಂತೆ ಹೆದ್ದಾರಿ ಅಗಲ ಮಾಡಿಕೊಟ್ಟಿದ್ದರೆ ಅನುಕೂಲ ಎಂದೇ ಇತ್ತು. ಆದರೆ ಫ್ಲೈಓವರ್ ಏನೋ ಮಂಜೂರಾಯಿತು. ಆ ಕಾರಣದಿಂದಾಗಿಯೇ ಕಾಮಗಾರಿ ವರ್ಷಾನುಗಟ್ಟಲೆ ವಿಳಂಬವಾಯಿತು. ಒಮ್ಮೆ ವಿನಾಯಕ ಬಳಿ ಫ್ಲೈಓವರ್ ಏರಿದರೆ ಅನಂತರ ಇಳಿಯುವುದು ಎಪಿಎಂಸಿ ಬಳಿಯೇ. ಈ ಫ್ಲೈಓವರ್ ಕುಂದಾಪುರ ನಗರದ ಸಂಪರ್ಕವನ್ನೇ ತಪ್ಪಿಸುವ ಕಾರಣ ಇಲ್ಲಿನ ಜನತೆಗೆ ವರವಾಗುವ ಬದಲಿಗೆ ಶಾಪವಾಗಿದೆ.
ಸುತ್ತು ಬಳಸು ದಾರಿ :
ವಿನಾಯಕ ಬಳಿ ಕೋಡಿಗೆ ಹೋಗುವಲ್ಲಿ ಪ್ರವೇಶಿಕೆ ಇಲ್ಲ. ಇದು ಸಾರ್ವಜನಿಕರ ಬೇಡಿಕೆಯಾಗಿದ್ದು ಅದನ್ನು ಅನುಷ್ಠಾನ ಮಾಡಲಾಗುತ್ತಿಲ್ಲ. ದುರ್ಗಾಂಬಾ ಬಳಿ ಸರ್ವಿಸ್ ರಸ್ತೆಗೆ ಹೋಗಲು ಅವಕಾಶ ಇದ್ದು ಸಾಧ್ಯವಾದಷ್ಟಾದರೂ ಅದನ್ನು ವಿನಾಯಕ ಬಳಿಯಲ್ಲಿ ಅಳವಡಿಸಬೇಕೆಂದು ಬೇಡಿಕೆ ಇದೆ. ಕೆಎಸ್‌ಆರ್‌ಸಿಟಿ ಬಳಿಯೂ ಇಂತಹ ಬೇಡಿಕೆ ಇದೆ. ಏಕೆಂದರೆ ಎರಡೂ ಕಡೆ ಹೀಗೆ ದೂರವಾದರೆ ಅನವಶ್ಯವಾಗಿ ವಾಹನಗಳು 4-5 ಕಿ.ಮೀ. ಸುತ್ತಬೇಕಾಗುತ್ತದೆ. ಬಸ್ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯ ಇರುವ ಕಾರಣ ಕೆಎಸ್‌ಆರ್‌ಟಿಸಿ ಪ್ರತಿ ಬಸ್ಸು 1 ಲೀ. ಡೀಸೆಲ್ 1 ಸುತ್ತಾಟಕ್ಕಾಗಿ ಈ ಬೆಲೆಯೇರಿದ ಸಮಯದಲ್ಲೂ ವ್ಯಯಿಸಬೇಕಾಗುತ್ತದೆ. ನಿಗಮಕ್ಕೆ ಲಕ್ಷಾಂತರ ರೂ. ನಷ್ಟ. ಸುತ್ತಾಟ ಹೆಚ್ಚಿದಂತೆ ರಿಕ್ಷಾ ಬಾಡಿಗೆ ಏರುತ್ತದೆ. ಖಾಸಗಿ ವಾಹನಗಳಿಗೂ ಸುತ್ತಾಟಕ್ಕೆ ಇಂಧನ ವ್ಯಯವಾಗುತ್ತದೆ.
ನಿರ್ಲಕ್ಷ್ಯ :
ಫ್ಲೈಓವರ್ ಕಾಮಗಾರಿ ಕುರಿತು ಕಾಳಜಿ ವಹಿಸ ಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ ದ್ದಾರೆ ಎಂಬ ಆರೋಪ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ. ಗೆದ್ದರೆ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಬರುತ್ತೇನೆ ಎಂದವರು ಫ್ಲೈಓವರ್ ಕುರಿತು ಪ್ರಶ್ನೆ ಹಾಕಿದಾಗ ಮುಖ ಕೆಂಪು ಮಾಡುತ್ತಾರೆ. ಕಾಮಗಾರಿಗೆ ವೇಗ ನೀಡುವ ಮಾತು ದೂರವೇ ಇದೆ. ಹೋರಾಟ ಗಾರರು ಅನೇಕ ಪ್ರತಿಭಟನೆ ಮಾಡಿದ್ದಾರೆ; ಮನವಿ ನೀಡಿದ್ದಾರೆ. ಸ್ಥಳೀಯವಾಗಿ ಅಲ್ಲಲ್ಲಿ ಫಲಕಗಳನ್ನು ಹಾಕಿ ಫ್ಲೈಒವರ್ ಕಾಮಗಾರಿಯ ಕುರಿತು ಅಣಕ ಮಾಡಲಾಗುತ್ತಿದೆ. ಹಾಗಿದ್ದರೂ ಯಾವುದೇ ಜನಪ್ರತಿನಿಧಿಗೆ ಇದರ ಬಿಸಿ ತಟ್ಟಲೇ ಇಲ್ಲ. ಎಲ್ಲ ಬಿಸಿಯೂ ಜನಸಾಮಾನ್ಯರ ಪಾಲಿಗೆ ಮೀಸಲಾಗಿದೆ.
ಫ್ಲೈಓವರ್‌ಗೆ ಹತ್ತುವಲ್ಲಿ ಹಾಗೂ ಇಳಿಯುವಲ್ಲಿ ಸರ್ವಿಸ್ ರಸ್ತೆಗೆ ಹೋಗುವಂತೆ ಸಂಪರ್ಕ ಕಲ್ಪಿಸುವುದು ತಾಂತ್ರಿಕವಾಗಿ ಸಮಸ್ಯೆಯಾಗುತ್ತದೆ. ಆದ್ದರಿಂದ ಸಾರ್ವಜನಿಕರಿಗೂ ತೊಂದರೆಯಾಗದಂತೆ, ವಾಹನಗಳ ಓಡಾಟಕ್ಕೂ ತೊಂದರೆಯಾಗದಂತೆ, ಅಪಘಾತಗಳೂ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಸಮಾಲೋಚಿಸಲಾಗುವುದು.–ಕೆ. ರಾಜು, ಸಹಾಯಕ ಕಮಿಷನರ್, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.