Kundapura: ಮರವಂತೆ ಮಾರಸ್ವಾಮಿ ಸ್ಟಾಪ್‌ನಲ್ಲಿ ನಿಲ್ಲದ ಸರಕಾರಿ ಬಸ್‌!

ಪ್ರಮುಖ ನಿಲ್ದಾಣವಾದರೂ ಬಸ್‌ ನಿಲ್ಲಿಸದೆ ಉದ್ಧಟತನ; ಆದೇಶವಿದ್ದರೂ ಉಲ್ಲಂಘನೆ; ನಿತ್ಯ ಪ್ರಯಾಣಿಕರ ಗೋಳು; ಮರವಂತೆ, ಹಡವು, ನಾಡ, ಪಡುಕೋಣೆ ಜನರಿಗೆ ತೊಂದರೆ; ಕುಂದಾಪುರ - ಭಟ್ಕಳ ಬಸ್‌ ನಿಲ್ಲಿಸಲು ಆಗ್ರಹ

Team Udayavani, Oct 18, 2024, 2:37 PM IST

6

ಕುಂದಾಪುರ: ವಿಶ್ವ ಪ್ರಸಿದ್ಧ ಮರವಂತೆ ಬೀಚ್‌, ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನ ಹಾಗೂ ಸೌಪರ್ಣಿಕ ನದಿ ಎಲ್ಲವೂ ಒಂದೇ ಕಡೆ ಇರುವಂತಹ ಸುಂದರ ತಾಣವಾದ ಮರವಂತೆಯ ಮಾರಸ್ವಾಮಿ ನಿಲ್ದಾಣದಲ್ಲಿ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ಲದೇ ಇರುವುದರಿಂದ ನೂರಾರು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಕುಂದಾಪುರ – ಭಟ್ಕಳ ನಡುವೆ ಸಂಚರಿಸುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿ ನಿಲ್ಲುತ್ತಿಲ್ಲ.

ಇಲ್ಲಿ ಕುಂದಾಪುರ – ಭಟ್ಕಳ ನಡುವೆ ಸಂಚರಿಸುವ ಬಸ್‌ಗಳನ್ನು ನಿಲ್ಲಿಸಬೇಕು ಎನ್ನುವ ಕೆಎಸ್‌ಆರ್‌ಟಿಸಿ ಆದೇಶವಿದ್ದರೂ, ಕೆಲವು ನಿರ್ವಾಹಕರು, ಚಾಲಕರು ಬಸ್‌ಗಳನ್ನು ನಿಲ್ಲಿಸದೇ ಉದ್ಧಟತನದ ವರ್ತನೆ ತೋರುತ್ತಿರುವುದಾಗಿ ಈ ಭಾಗದ ಪ್ರಯಾಣಿಕರು ಆರೋಪಿಸಿದ್ದಾರೆ. ಈ ಮಾರ್ಗದಲ್ಲಿ ಬಸ್‌ಗಳಲ್ಲಿ ಇಲ್ಲಿನ ಪ್ರಯಾಣಿಕರು ಹಾಗೂ ನಿರ್ವಾಹಕರ ನಡುವೆ ಈಗ ವಾಗ್ವಾದ ಖಾಯಂ ಅನ್ನುವಂತಾಗಿದೆ. ಮಾರಸ್ವಾಮಿ ದೇವಾಲಯಕ್ಕೆ ಬರುವವರು, ಅಲ್ಲಿಂದ ಒಳಭಾಗಕ್ಕೆ ಹೋಗುವವರಿಗೆ ಇದರಿಂದ ತೊಂದರೆಯಾಗುತ್ತಿದೆ.

ಶಕ್ತಿಯಿದ್ದರೂ ಪ್ರಯೋಜನವಿಲ್ಲ
ಕುಂದಾಪುರ ಅಥವಾ ಬೈಂದೂರು ಭಾಗದಿಂದ ಈ ಬಸ್‌ಗಳಲ್ಲಿ ಸಂಚರಿಸುವ ಮರವಂತೆಯ ಮಾರಸ್ವಾಮಿ ಭಾಗದ ಪ್ರಯಾಣಿಕರು ನಿತ್ಯ ನಿರ್ವಾಹಕರ ಬಳಿ ನಿಲುಗಡೆಗಾಗಿ ದುಂಬಾಲು ಬೀಳುವಂತಹ ಪರಿಸ್ಥಿತಿಯಿದ್ದು, ಅದಾಗಿಯೂ ಬಹುತೇಕರು ನಿಲ್ಲಿಸದೇ, ಬೇರೆ ಕಡೆಗಳಲ್ಲಿ ಇಳಿದು ಕಿಲೋ ಮೀಟರ್‌ಗಟ್ಟಲೆ ದೂರದಿಂದ ವಾಪಾಸು ನಡೆದುಕೊಂಡು ಬರಬೇಕಾದ ಸ್ಥಿತಿಯಿದೆ. ಇದರಿಂದ ಮುಖ್ಯವಾಗಿ ಮರವಂತೆಯ ಮಾರಸ್ವಾಮಿ ದೇವಸ್ಥಾನಕ್ಕೆ ಹೋಗುವವರಿಗೆ, ಇನ್ನು ನಾಡ, ಪಡುಕೋಣೆ, ಹಡವು, ಆಲೂರು ಭಾಗದ ಜನರಿಗೆ ಕುಂದಾಪುರ ಅಥವಾ ಬೈಂದೂರಿಗೆ ಹೋಗಲು, ವಾಪಾಸು ಬರಲು ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಶಕ್ತಿ ಯೋಜನೆಯಡಿ ರಾಜ್ಯ ಸರಕಾರದಿಂದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶವಿದ್ದರೂ, ಈ ಭಾಗದ ನೂರಾರು ಜನ ಮಹಿಳೆಯರಿಗೆ ಮಾತ್ರ ಇದರ ಪ್ರಯೋಜನ ಸಿಗದಂತಾಗಿದೆ.

ಕಡ್ಡಾಯ ನಿಲುಗಡೆಗೆ ಸೂಚನೆ
ಮಾರಸ್ವಾಮಿ ಬಳಿ ನಿಲುಗಡೆ ಕೊಡದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಈ ವಿಷಯ ತಿಳಿದ ಕೂಡಲೇ ನಾನು ಎಲ್ಲರಿಗೂ ಕಡ್ಡಾಯವಾಗಿ ಅಲ್ಲಿ ಬಸ್‌ ನಿಲ್ಲಿಸಲು ಸೂಚನೆ ನೀಡಿದ್ದೇನೆ. ಇನ್ನೂ ಈ ಬಗ್ಗೆ ಒಂದಿನ ಅಲ್ಲಿಗೆ ನಮ್ಮ ಸಿಬಂದಿ ನಿಯೋಜಿಸಿ, ನಿಗಾ ವಹಿಸಲಾಗುವುದು. ಅಲ್ಲಿ ಹೆಚ್ಚಿನ ಜಾಗ ಇಲ್ಲದಿರುವುದರಿಂದ ಬಸ್‌ ನಿಲ್ಲಿಸಿದರೆ, ಹಿಂದಿನಿಂದ ಬೇರೆ ವಾಹನ ಬಂದು ಢಿಕ್ಕಿಯಾದ ನಿದರ್ಶನವೂ ಇದೆ. ಅಲ್ಲಿ ಸ್ವಲ್ಪ ಜಾಗ ವಿಸ್ತರಣೆ ಮಾಡಿದರೆ ಅನುಕೂಲವಾಗಲಿದೆ.
– ಉದಯ ಕುಮಾರ್‌ ಶೆಟ್ಟಿ, ಕುಂದಾಪುರ ಕೆಎಸ್‌ಆರ್‌ಟಿಸಿ, ಡಿಪೋ ಮ್ಯಾನೇಜರ್‌

ನಿಲ್ಲಿಸದಿದ್ದರೆ ಮತ್ತೆ ಹೋರಾಟ
ಹಲವು ಸಮಯದ ಹೋರಾಟದ ಫಲವಾಗಿ ಹಿಂದೆ ಇಲ್ಲಿ ಕುಂದಾಪುರ- ಭಟ್ಕಳ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ಆದೇಶ ಹೊರಡಿಸಲಾಗಿತ್ತು. ಈಗ ಮತ್ತೆ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲು ನಿರ್ವಾಹಕರು ಒಪ್ಪುತ್ತಿಲ್ಲ. ಕೇಳಿದರೆ ನಮ್ಮೊಂದಿಗೆ ರಗಳೆ ಮಾಡುತ್ತಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಹೀಗೆ ಮುಂದುವರಿದರೆ ಮತ್ತೆ ಹೋರಾಟ ಮಾಡಲಾಗುವುದು.
– ಶೀಲಾವತಿ ಪಡುಕೋಣೆ, ಜಿಲ್ಲಾ ಪ್ರ. ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ

ಹೋರಾಟದ ಫಲವಾಗಿ ಸ್ಟಾಪ್‌ ಸಿಕ್ಕಿತ್ತು
ಬಹಳಷ್ಟು ವರ್ಷಗಳ ಹಿಂದಿನಿಂದಲೂ ಮರವಂತೆಯ ಮಾರಸ್ವಾಮಿ ಬಸ್‌ ನಿಲ್ದಾಣದಲ್ಲಿ ಕೆಲವೇ ಕೆಲವು ಸ್ಥಳೀಯ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಾತ್ರ ನಿಲುಗಡೆ ನೀಡುತ್ತಿದ್ದು, ಹೆಚ್ಚಿನವು ನಿಲ್ಲುತ್ತಲೇ ಇರಲಿಲ್ಲ. ಶಕ್ತಿ ಯೋಜನೆ ಜಾರಿಯಾದ ನಂತರ ಇದರ ಪ್ರಯೋಜನ ಈ ಭಾಗದ ಮಹಿಳೆಯರಿಗೂ ಸಿಗಲಿ ಅನ್ನುವ ಕಾರಣಕ್ಕೆ ಜನವಾದಿ ಮಹಿಳಾ ಸಂಘಟನೆಯೂ ನಿರಂತರ ಹೋರಾಟವನ್ನು ಸಂಘಟಿಸಿತು. ಇದಕ್ಕೆ ಡಿವೈಎಫ್‌ಐ ಸಂಘಟನೆಯು ಸಾಥ್‌ ನೀಡಿತು. ಈ ಹೋರಾಟದ ಫಲವಾಗಿ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕುಂದಾಪುರ – ಭಟ್ಕಳ ಮಾರ್ಗದ ಎಲ್ಲ ಸಾಮಾನ್ಯ ಸಾರಿಗೆ ಬಸ್‌ಗಳನ್ನು ನಿಲ್ಲಿಸಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ, ಕೆಲವು ದಿನಗಳಿಂದ ಕುಂದಾಪುರ – ಭಟ್ಕಳ ನಡುವಿನ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಇಲ್ಲಿ ನಿಲ್ಲಿಸದೇ ತೆರಳುತ್ತಿದ್ದಾರೆ.

ಬಸ್‌ ನಿಲ್ಲಿಸುವುದಿಲ್ಲ, ಏನ್ಮಾಡ್ತೀರಿ?
ಕುಂದಾಪುರದಲ್ಲಿ ನಾನು ಕುಂದಾಪುರ- ಭಟ್ಕಳ ಬಸ್‌ ಹತ್ತಿ, ಇಲ್ಲಿ ನಿಲುಗಡೆ ಕೇಳಿದರೆ ಕೊಡಲು ಆಗುವುದಿಲ್ಲ ಅಂತ ದುರ್ವರ್ತನೆ ತೋರುತ್ತಾರೆ. ಅವರಿಗೆ ಇಲ್ಲಿ ನಿಲುಗಡೆಗೆ ಆದೇಶವಿದೆ ಅಂದರೂ ನೀವು ಯಾರ ಬಳಿ ಬೇಕಾದರೂ ಹೇಳಿಕೊಳ್ಳಿ. ನಾವು ಇಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ ಎನ್ನುವುದಾಗಿ ಉದ್ಧಟತನದ ಮಾತುಗಳನ್ನು ಪ್ರಯಾಣಿಕರ ಬಳಿ ಮಾತನಾಡುತ್ತಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಇರುವುದು ಜನರ ಪ್ರಯೋಜನಕ್ಕಾಗಿಯೋ? ಅಥವಾ ನಿರ್ವಾಹಕರ ಅನುಕೂಲಕ್ಕಾಗಿಯೋ? ಅನ್ನುವುದಾಗಿ ಪಡುಕೋಣೆಯ ನಿವಾಸಿ ಸುಬ್ರಹ್ಮಣ್ಯ ಆಚಾರ್‌ ಪ್ರಶ್ನಿಸಿದ್ದಾರೆ.

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

10

Katpadi: ತ್ಯಾಜ್ಯ ಗುಂಡಿಯಾಗುತ್ತಿದೆ ಕುರ್ಕಾಲು ಮದಗ

7

Ajekar ಬಸ್‌ ತಂಗುದಾಣ ನಾಯಿಗಳ ವಾಸಸ್ಥಾನ; ರಾತ್ರಿ-ಹಗಲು ಅಲ್ಲೇ ವಾಸ

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

12

Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್‌ ಪೋರ್ಟಲ್‌ನಲ್ಲಿ ದಾಖಲಾತಿ

11

Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.