Kundapura: ಸಂಕ್ರಾಂತಿಗೆ ನಿರೀಕ್ಷೆಯಷ್ಟು ಅರಳದ ಹೆಮ್ಮಾಡಿ ಸೇವಂತಿಗೆ

ನಾಳೆ ಮಾರಣಕಟ್ಟೆ ಹಬ್ಬ

Team Udayavani, Jan 13, 2025, 2:46 PM IST

7(1

ಕುಂದಾಪುರ: ಚಳಿ ಹಾಗೂ ಇಬ್ಬನಿ ಕೊರತೆ ಕಾರಣಕ್ಕೆ ಮಾರಣಕಟ್ಟೆಯ ಸಂಕ್ರಾಂತಿಗೆ ಹಬ್ಬಕ್ಕೆ ಈ ಬಾರಿ ನಿರೀಕ್ಷೆಯಷ್ಟು ಹೆಮ್ಮಾಡಿ ಸೇವಂತಿಗೆ ಹೂವು ಅರಳಿಲ್ಲ. ಮಳೆ ಹಾಗೂ ಇನ್ನಿತರ ಕಾರಣಕ್ಕೆ ಈ ಬಾರಿ ಬೆಳೆದದ್ದೇ ಕಡಿಮೆ. ಅದೂ ಕೂಡ ಸಂಕ್ರಾಂತಿಗೆ ಅರಳದ ಕಾರಣ, ವ್ಯಾಪಾರಸ್ಥರು ಘಾಟಿ ಸೇವಂತಿಗೆಯನ್ನು ತರಿಸುವಂತಾಗಿದೆ.

ಈ ಬಾರಿ ಭಾರೀ ಮಳೆಗೆ ಗಿಡಗಳು ಅಪಾರ ಪ್ರಮಾಣದಲ್ಲಿ ಕೊಳೆತು, ನಾಶವಾಗಿತ್ತು. ಇದರಿಂದ ಬೆಳೆಗಾರರು ಈ ಬಾರಿ ಸ್ಥಳೀಯ ತಳಿಯನ್ನು ಕಡಿಮೆ ಬೆಳೆದಿದ್ದು, ಬೆಂಗಳೂರು, ನೆಲಮಂಗಳ, ಚಿತ್ರದುರ್ಗ, ಚಿಕ್ಕಮಗಳೂರು ಕಡೆಯ ಸೆಂಟ್‌ ಎಲ್ಲೋ, ಚಾಂದಿನಿ ತಳಿಯ ಗಿಡಗಳನ್ನು ತರಿಸಿ, ಬೆಳೆಸುವಂತಾಗಿತ್ತು.

ಇನ್ನೂ ವಾರ ಬೇಕು ಅರಳಲು
ನಾನು 25 ವರ್ಷಕ್ಕೆ ಸೇವಂತಿಗೆ ಬೆಳೆಯಲು ಶುರು ಮಾಡಿದೆ. ಈಗ 75 ವರ್ಷ. ಕಳೆದ ವರ್ಷದವರೆಗೆ ಬೆಳೆಸಿದ್ದೆ. ಆದರೆ ಈ ವರ್ಷ ಆಗದ ಕಾರಣಕ್ಕೆ ನಿಲ್ಲಿಸಿದೆ. ತರಕಾರಿ ಬೆಳೆಯುತ್ತಿದ್ದೇನೆ. ಈ ಬಾರಿ ಚಳಿ ಕಮ್ಮಿ. ಇನ್ನೂ ಕೂಡ ಸೆಕೆ ಕಮ್ಮಿಯಾಗಿಲ್ಲ. ಹನಿ ಬೀಳುತ್ತಿಲ್ಲ. ಈಗ ಒಂದೆರಡು ದಿನಗಳಿಂದ ಬೀಳುತ್ತಿದೆ. ಇಷ್ಟೊತ್ತಿಗೆ ಅರಳಬೇಕಿತ್ತು. ಆದರೆ ಇನ್ನೂ ಒಂದು ವಾರ ಬೇಕು ಈ ಹೂವು ಅರಳಲು. ಅದು ಮಾರಣಕಟ್ಟೆ ಹಬ್ಬಕ್ಕೆ ಸಿಗಲ್ಲ.

ಇದರಿಂದ ಬೆಳೆದವರಿಗೆ ಅಷ್ಟೊಂದು ಲಾಭವಿಲ್ಲ. ಈ ಬಾರಿ ಹಬ್ಬಕ್ಕೆ ಏನಿದ್ದರೂ ಘಾಟಿ ಹೂವೇ ತರಿಸುವಂತಾಗಿದೆ ಎನ್ನುತ್ತಾರೆ ಕಟ್ಟು ಮೇಲ್ಮನೆಯ ಶೀನ ದೇವಾಡಿಗ.

ಚಳಿ- ಇಬ್ಬನಿ ಕೊರತೆ ; ಸಂಕ್ರಾಂತಿಗೆ ಅರಳದ ಹೆಚ್ಚಿನ ಹೂವು ಕಡಿಮೆ ಬೆಳೆಯಿಂದ ಹೆಚ್ಚಿನ ಬೆಲೆ ನಿರೀಕ್ಷೆಯಲ್ಲಿ ಬೆಳೆಗಾರರು ಜಾತ್ರೆಗೆ ಹೊರ ಜಿಲ್ಲೆಗಳ ಹೂವಿನ ಅವಲಂಬನೆ

ಇಲ್ಲಿದು ಅರಳಿಲ್ಲ; ಬೇರೆಡೆದು ಅರಳಿದೆ
ಹೆಮ್ಮಾಡಿ ಸುತ್ತಮುತ್ತಲಿನ ಕಟ್ಟು, ಜಾಲಾಡಿ, ಹರೇಗೋಡು, ಕೆಂಚನೂರು ಸಹಿತ ಇನ್ನಿತರ ಪ್ರದೇಶಗಳ ಸುಮಾರು 50 – 60 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 50 ಕ್ಕೂ ಮಿಕ್ಕಿ ಬೆಳೆಗಾರರು ಸೇವಂತಿಗೆ ಬೆಳೆಯುತ್ತಾರೆ. ಆದರೆ ಈ ಸಲ 15 ಕ್ಕೂ ಹೆಚ್ಚು ರೈತರು ಬೇರೆ ಜಿಲ್ಲೆಗಳಿಂದ ಗಿಡಗಳನ್ನು ತರಿಸಿದ್ದಾರೆ. ಅದು ಈಗ ಅರಳಿದೆ. ಸ್ಥಳೀಯ ತಳಿ ಮಾತ್ರ ಇನ್ನೂ ಅಲ್ಪ-ಸ್ವಲ್ಪ ಮಾತ್ರ ಅರಳಿದೆ. ಅದು 3 ತಿಂಗಳಲ್ಲಿಯೇ ಅರಳುತ್ತೆ. ನಮ್ಮದು 4 ತಿಂಗಳು ಬೇಕು. ಅದಕ್ಕೆ ಅಷ್ಟೊಂದು ಚಳಿ ಬೇಡ. 1 ಗಿಡಕ್ಕೆ 3 ರೂ.ಯಂತೆ ನಾನು 5 ಸಾವಿರ ಗಿಡ ತರಿಸಿದ್ದೇನೆ. ಈ ಹೂವು ಪರ್ವಾ ಗಿಲ್ಲ. ಉತ್ತಮ ಇಳುವರಿ ಬಂದಿದೆ ಎನ್ನುತ್ತಾರೆ ಪ್ರಶಾಂತ್‌ ಭಂಡಾರಿ.

ಹೆಮ್ಮಾಡಿ ಸೇವಂತಿಗೆ ಪ್ರಿಯ ಬ್ರಹ್ಮಲಿಂಗೇಶ್ವರ
ಭೌಗೋಳಿಕತೆ, ಹವಾಮಾನ ಹಾಗೂ ತಳಿ ಪ್ರಬೇಧದಿಂದಾಗಿ ಜಿಲ್ಲೆಯಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡ ಹೆಮ್ಮಾಡಿ ಸೇವಂತಿಗೆಗೆ ಮಾರಣಕಟ್ಟೆಯ ಮಕರ ಸಂಕ್ರಾಂತಿ ಜಾತ್ರೆಯಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಶ್ರೀ ಬ್ರಹ್ಮಲಿಂಗೇಶ್ವರನಿಗೂ ಊರ ಹೆಮ್ಮಾಡಿ ಸೇವಂತಿಗೆಯೆಂದರೆ ಬಲು ಇಷ್ಟ. ಒಂದು ಅಂದಾಜಿನ ಪ್ರಕಾರ ಮಾರಣಕಟ್ಟೆ ಜಾತ್ರೆಗೆ 40 ರಿಂದ 50 ಲಕ್ಷದಷ್ಟು ಹೂವಿನ ಬೇಡಿಕೆಯಿರುತ್ತದೆ. ಹಿಂದೆಯೆಲ್ಲ ಒಬ್ಬೊಬ್ಬ ಬೆಳೆಗಾರರು ಕನಿಷ್ಠ 3-4 ಲಕ್ಷ ಹೂವು ಕೊಯ್ದು ಹಬ್ಬಕ್ಕೆ ಕೊಡುತ್ತಿದ್ದರು. ಆದರೆ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಅರಳದ ಕಾರಣಕ್ಕೆ ಬೆಳೆಗಾರರಿಗೆ ಲಾಭ ಸಿಗದಂತಾಗಿದೆ. ಮಾರಣಕಟ್ಟೆ ಬಳಿಕ ಕುಂದಾಪುರ, ಬೈಂದೂರು ಭಾಗದಲ್ಲಿ ಮಾರ್ಚ್‌ವರೆಗೆ ನಡೆಯುವ ಬಹುತೇಕ ಎಲ್ಲ ಜಾತ್ರೆ, ಕೆಂಡೋತ್ಸವಗಳಿಗೆ ಈ ಸೇವಂತಿಗೆಗೆ ಬೇಡಿಕೆ ಇರುತ್ತದೆ.

500 ರೂ. ಆದರೂ ಬೇಕು
ಈ ಬಾರಿ ಹೆಮ್ಮಾಡಿ ಸೇವಂತಿಗೆ ಹೂವು ಹಬ್ಬಕ್ಕೆ ಕಡಿಮೆಯಿದೆ. ಮಾರಣಕಟ್ಟೆ ಹಬ್ಬವೇ ನಮಗೆ ದೊಡ್ಡ ಮಾರುಕಟ್ಟೆ. ಆದರೆ ಈ ಸಲ ಅರ್ಧದಷ್ಟು ಸಹ ಹೂವು ಇಲ್ಲ. ಅದಕ್ಕಾಗಿ ಘಾಟಿ ಹೂವುಗಳನ್ನು ತರಿಸುವಂತಾಗಿದೆ. ಅಲ್ಲಿಂದ ಕೆಜಿಗೆ 280 -300 ರೂ. ಕೊಟ್ಟು ತರಿಸುತ್ತಿದ್ದಾರೆ. 1 ಸಾವಿರ ಹೂವು ಕೊಯ್ದು, ಕಟ್ಟುವವರಿಗೆ 50 ರೂ. ಇದೆ. ಬೆಳೆ, ನೀರು, ಔಷಧಿ, ಹಂದಿ ಕಾಟ ಎಲ್ಲ ಎಲ್ಲ ಲೆಕ್ಕ ಹಾಕಿದರೆ ಅಷ್ಟೊಂದು ಲಾಭ ಸಿಗಲ್ಲ. ಆದ್ದರಿಂದ ಹೆಮ್ಮಾಡಿ ಸೇವಂತಿಗೆಗೆ ಈ ಬಾರಿ ಸಾವಿರ ಹೂವಿಗೆ ಕನಿಷ್ಠ 500 ರೂ. ಸಿಗಬೇಕು. ಬೇರೆ ಗೆಂಡಗಳಲ್ಲಿ ಸಿಗುವುದು 200-250 ರೂ. ಮಾತ್ರ. ಪ್ರಶಾಂತ್‌ ಭಂಡಾರಿ, ಬೆಳೆಗಾರರು

ಟಾಪ್ ನ್ಯೂಸ್

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ

Udupi: ಮಾದಕ ವಸ್ತು ಮಾರಾಟಕ್ಕೆ ಯತ್ನ… ನಾಲ್ವರು ವಶಕ್ಕೆ

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Road Mishap ಮೂಡುಬಿದಿರೆ: ಸ್ಕೂಟರ್‌ಗೆ ಕಾರು ಢಿಕ್ಕಿ

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Gangolli: ಇನ್ನೂ ಸಿಗದ ಸಮುದ್ರಕ್ಕೆ ಬಿದ್ದ ಮೀನುಗಾರನ ಸುಳಿವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

Udupi: ಪಿಂಚಣಿ ಬಾರದೆ ಸಂಕಷ್ಟ: ಕುಟುಂಬಕ್ಕೆ ನೆರವು

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.