Kundapura: ಅಪೂರ್ಣ ಯುಜಿಡಿ; ಆಗಲ್ಲ ಎಂದು ಬಿಡಿ!

ಕುಂದಾಪುರ ಪುರಸಭೆಯಲ್ಲಿ ಸದಸ್ಯರ ಆಗ್ರಹ | 48 ಕೋ.ರೂ.ಗಳ ಯೋಜನೆಗೆ ಆಮೆಗತಿ

Team Udayavani, Jan 30, 2025, 1:31 PM IST

9

ಕುಂದಾಪುರ: ಕಳೆದ 13 ವರ್ಷಗಳಿಂದ ಯುಜಿಡಿ ಯೋಜನೆ ಪೂರ್ಣ ಗೊಳಿಸಲು ಆಗಲಿಲ್ಲ. ಕಳೆದ 30 ವರ್ಷಗಳಿಂದ ನಗರದ ತ್ಯಾಜ್ಯವನ್ನೆಲ್ಲ ಖಾರ್ವಿಕೇರಿ ಜನತೆ ಇರುವ ಪರಿಸರ, ಪಂಚಗಂಗಾವಳಿ ನದಿಗೆ ಬಿಡಲಾಗುತ್ತಿದೆ. ಈಗ ಖಾರ್ವಿಕೇರಿಗೆ ಯುಜಿಡಿ ಯೋಜನೆ ಇಲ್ಲ, ಗುರುತ್ವ ಬಲ ಇಲ್ಲ, ಡಿಪಿಆರ್‌ನಲ್ಲಿ ಇಲ್ಲ ಎನ್ನ ಲಾಗುತ್ತಿದೆ. ಹಾಗಾದರೆ ಯುಜಿಡಿ 19 ವಾರ್ಡ್‌ಗೆ ಮಾತ್ರವೇ? 23 ವಾರ್ಡ್‌ಗಳಿಗೆ ಇಲ್ಲವೇ? 48 ಕೋ.ರೂ. ಮಣ್ಣುಪಾಲಾಯಿತೇ? ಕಾಮಗಾರಿ ನಡೆಸಲು ಆಗುವುದಿಲ್ಲ ಎಂದುಬಿಡಿ ಎಂದು ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ ಹೇಳಿದರು.

ಗಿರೀಶ್‌ ಜಿ.ಕೆ. ದೇವಾಡಿಗ ಧ್ವನಿಗೂಡಿಸಿ, ಯುಜಿಡಿಯ ಎಸ್‌ಟಿಪಿ ಜಾಗ ಖರೀದಿ ಅವ್ಯವ ಹಾರದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸು ವಾಗಲೂ ಕಾಮಗಾರಿ ನಡೆಸಬೇಕು ಎಂದಿದ್ದೆ. ಈಗಲೂ ಕಾಮಗಾರಿ ಟೇಕ್‌ಆಫ್‌ ಆಗಲೇ ಇಲ್ಲ. ಯುಜಿಡಿ ಬಗ್ಗೆ ಇಷ್ಟೇಕೆ ನಿರ್ಲಕ್ಷ್ಯ ಎಂದರು. 1 ವಾರದಲ್ಲಿ ಸಭೆ ಕರೆದು ಇದಕ್ಕೊಂದು ಕ್ರಮ ಕೈಗೊಳ್ಳು ವುದಾಗಿ ಅಧ್ಯಕ್ಷ ಮೋಹನದಾಸ ಶೆಣೈ ಹೇಳಿದರು.

ಎಂಬಲ್ಲಿಗೆ ಪುರಸಭೆಯ ಒಳಚರಂಡಿ ಕಾಮಗಾರಿ ಕುರಿತು ಮತ್ತೂಂದು ಸುತ್ತಿನ ಚರ್ಚೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಬುಧವಾರ ಮುಂದುವರಿಯಿತು. ಇದು ಕಳೆದ ಅಷ್ಟೂ ವರ್ಷಗಳಿಂದ ನಡೆಯುತ್ತಿರುವ ಚರ್ಚೆಯದೇ ಪುನರಪಿ ಚರ್ವಣ. ಬದಲಾವಣೆ ಏನೂ ಇಲ್ಲ. ಸದಸ್ಯರೂ ಅದನ್ನೇ ಹೇಳುವುದು, ಅಧ್ಯಕ್ಷರಾಗಿದ್ದವರು ಸಮಾಧಾನ ಮಾಡುವುದು. ಇದರ ಹೊರತು ಈ ಹಿಂದಿನ ಶಾಸಕರು, ಈಗಿನ ಶಾಸಕರು ವಹಿಸಿದ ಮುತುವರ್ಜಿಗೂ ಅಧಿಕಾರಿಗಳು ಬೆಲೆಯೇ ಕೊಡಲಿಲ್ಲ. ಕಾಮಗಾರಿ ನಡೆಯಲೇ ಇಲ್ಲ.

ಅಸಮರ್ಪಕ ರಿಂಗ್‌ ರೋಡ್‌ ಕಾಮಗಾರಿ
ಈಗ ನಡೆಯುತ್ತಿರುವ ರಿಂಗ್‌ರೋಡ್‌ ಕಾಮಗಾರಿ ಅಸಮರ್ಪಕವಾಗಿದೆ. ಪೈಪ್‌ಲೈನ್‌ಗೆ ಜಾಗ ಇಡಲಿಲ್ಲ. ಯುಜಿಡಿಗೆ ಅವಕಾಶ ಇಲ್ಲ. ಹೀಗಾದರೆ ಮಳೆಗಾಲದಲ್ಲಿ ಖಾರ್ವಿಕೇರಿ ಮುಳುಗುತ್ತದೆ. ಕಾಮಗಾರಿ ತತ್‌ಕ್ಷಣ ನಿಲ್ಲಿಸದೇ ಇದ್ದರೆ ಅಷ್ಟೂ 23 ವಾರ್ಡ್‌ಗಳ ಕಾಂಕ್ರೀಟ್‌ ಒಡೆದು ಹಾಕಿ ಪ್ರತಿಭಟಿಸುತ್ತೇವೆಂದು ಚಂದ್ರಶೇಖರ ಖಾರ್ವಿ ಹೇಳಿದರು. ಉತ್ತರಿಸಲು ಲೋಕೋಪಯೋಗಿ ಇಲಾಖೆಯವರೇ ಗೈರಾಗಿದ್ದರು. ರಿಂಗ್‌ರೋಡ್‌ ಬಗ್ಗೆ ಶಾಸಕರ ಮುಖಾಂತರ ಕ್ರಮ ಕೈಗೊಳ್ಳಲಾಗುವುದೆಂದು ಅಧ್ಯಕ್ಷರು ಹೇಳಿದರು.

ಪ್ರತಿಭಟಿಸಿದರೂ ಆಗಿದ್ದು ಏಳೇ ಅಧಿಕೃತ ರಿಕ್ಷಾ ನಿಲ್ದಾಣ!
21 ರಿಕ್ಷಾ ನಿಲ್ದಾಣಗಳನ್ನು ಅಧಿಕೃತಗೊಳಿಸಲು ಸಂಘಟನೆಯವರು ಪ್ರತಿಭಟನೆ ಮಾಡಿ ಮನವಿ ನೀಡಿದ್ದರೂ 7 ಮಾತ್ರ ಆಗಿದೆ ಎಂದು ಗಿರೀಶ್‌ ಜಿ.ಕೆ., ಸಂತೋಷ್‌ ಶೆಟ್ಟಿ ಹೇಳಿದರು. ಸರ್ವೇ ಕಾರ್ಯ ಬಾಕಿ ಇದೆ ಎಂದು ಉಪ ತಹಶೀಲ್ದಾರ್‌ ಪ್ರಕಾಶ್‌ ಪೂಜಾರಿ ಹೇಳಿದರು. 2 ವರ್ಷಗಳಿಂದ ಬಾಕಿ ಇದೆ, ಮಾಡಿಕೊಡಿ ಎಂದು ಅಧ್ಯಕ್ಷರು, ಮುಖ್ಯಾಧಿಕಾರಿ ಆನಂದ್‌ ಜೆ. ಸೂಚಿಸಿದರು. ಫೆಬ್ರವರಿ ಅಂತ್ಯದೊಳಗೆ ಮಾಡಿಕೊಡುವುದಾಗಿ ಪ್ರಕಾಶ್‌ ಹೇಳಿದರು. ನೆಹರೂ ಮೈದಾನ ಪುರಸಭೆಗೆ ಹಸ್ತಾಂತರಿಸಲು ಬಿಇಒ ಆಕ್ಷೇಪ ಇದೆ ಎಂದು ಕಂದಾಯ ಇಲಾಖೆಯವರು ಹೇಳಿದಾಗ, ಸರಕಾರದ ಆದೇಶವನ್ನು ಅನುಷ್ಠಾನ ಮಾಡಿ ಎಂದು ನಾವು ಸೂಚಿಸಿದ್ದು ವಿನಾ ಹೊಸದಾಗಿ ಕ್ರಮ ಕೈಗೊಳ್ಳಲು ಅಲ್ಲ. ಈ ಹಿಂದೆ ಸರಕಾರ ಮಾಡಿದ ಆದೇಶಕ್ಕೆ ತಾಲೂಕು ಮಟ್ಟದ ಅಧಿಕಾರಿ ಆಕ್ಷೇಪ ಹಾಕಲು ಬರುತ್ತದೆಯೇ ಎಂದು ಗಿರೀಶ್‌ ಜಿ.ಕೆ. ಹೇಳಿದರು. ಈ ಬಗ್ಗೆ ಡಿಸಿಯವರಲ್ಲಿ ಶಾಸಕರು ಜತೆಗಿದ್ದು ಮಾತನಾಡಿದ್ದು ಪುರಸಭೆಯಿಂದ ಪತ್ರ ಬರೆಯಲು ಸೂಚಿಸಿದ್ದಾಗಿ ಅಧ್ಯಕ್ಷ ಶೆಣೈ ಹೇಳಿದರು.

ನಿಯೋಗ ಕರೆದೊಯ್ಯಿರಿ
ಜಪ್ತಿ ನೀರಿನ ಶುದ್ಧೀಕರಣ ಘಟಕಕ್ಕೆ ಸದಸ್ಯರ ನಿಯೋಗ ಕೊಂಡೊಯ್ಯುವುದಾಗಿ ಹೇಳಿದ್ದರೂ ಆಯ್ದ ಸದಸ್ಯರನ್ನು ಮಾತ್ರ ಕರೆದೊಯ್ಯಲಾಗಿದೆ ಎಂದು ಸದಸ್ಯರಾದ ವೀಣಾ ಭಾಸ್ಕರ ಮೆಂಡನ್‌, ರೋಹಿಣಿ ಉದಯ ಕುಮಾರ್‌, ಅಶ್ವಿ‌ನಿ ಪ್ರದೀಪ್‌ ಆಕ್ಷೇಪಿಸಿದರು. ಸದಸ್ಯರಿಗೆ ಮಾಹಿತಿ ನೀಡಬೇಕಿತ್ತು ಎಂಬ ಸಲಹೆ ಬಂತು. ಕೋಡಿಯಲ್ಲಿ ಪ್ರವಾಸಿಗರ ರಕ್ಷಣೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಕ್ಷ್ಮೀಬಾಯಿ ಹೇಳಿದರು. ಹುಂಚಾರಬೆಟ್ಟಿನಲ್ಲಿ ಅಂಗವಿಕಲರೊಬ್ಬರ ಮನೆ ಸಮೀಪ 14 ಮೀ. ರಸ್ತೆ ಬಾಕಿ ಇದ್ದ ಬಗ್ಗೆ 4 ಬಾರಿ ಮನವಿ ನೀಡಿದರೂ ಮೀಟಿಂಗ್‌ಗೆ ಸೇರಿಸಿಲ್ಲ ಎಂದು ಶೇಖರ ಪೂಜಾರಿ ಹೇಳಿದರು. ಟಿಟಿ ರೋಡ್‌ನ‌ ಪರಿಶಿಷ್ಟ ಮಹಿಳೆಗೆ ಇನ್ನೂ ಹಕ್ಕುಪತ್ರ ನೀಡದ ಕುರಿತು ವೀಣಾ ಭಾಸ್ಕರ್‌ ತಗಾದೆ ತೆಗೆದರು.

ನಿರ್ಣಯಗಳ ಅನುಷ್ಠಾನ ಇಲ್ಲ
ನಿರ್ಣಯಗಳು ಅನುಷ್ಠಾನವಾಗುವು ದಿಲ್ಲ. ಸಣ್ಣಪುಟ್ಟ ಕಾಮಗಾರಿಯೂ ಆಗುವು ದಿಲ್ಲ. ಜನರಿಗೆ ಹೇಗೆ ಉತ್ತರ ನೀಡುವುದು. ಹಂಪ್‌ಗ್ಳನ್ನು ಹಾಕಲಿಲ್ಲ. ಶೌಚಾಲಯ ದುರಸ್ತಿ ಆಗಲಿಲ್ಲ. ಡಿಪ್ಲೊಮೇಟ್‌ ಬಳಿ ಮರದ ಬೊಡ್ಡೆ ತಿಂಗಳು ಆರಾಗುತ್ತಾ ಬಂತು. ಪೂರ್ಣ ಕೆಲಸವೇ ಆಗದ ಕಾರಣ ಯುಜಿಡಿ ಆಗುವುದಿಲ್ಲ ಎಂದು ನಿರ್ಣಯವೇ ಮಾಡಿಬಿಡಿ. ಬರೆಕಟ್ಟು ರಸ್ತೆ ಹಾಳಾಗಿ ಅರ್ಧ ವರ್ಷವಾಯಿತು. ಜನರಿಗೆ ಪುರಸಭೆ ಮೇಲೆ ಭರವಸೆ ಹೋಗುವಂತೆ ಆಗುತ್ತಿದೆ ಎಂದು ಗಿರೀಶ್‌ ಜಿ.ಕೆ. ಹೇಳಿದರು. ಹಂಪ್‌ ಹಾಕಲು ಗುತ್ತಿಗೆದಾರರು ಬರಲಿಲ್ಲ, ಖಾರ್ವಿಕೇರಿ ಎಸ್‌ಟಿಪಿಗೆ ಸ್ಥಳ ಪರಿಶೀಲಿಸ ಲಾಗಿದೆ, ಶೌಚಾಲಯ ದುರಸ್ತಿಗೆ ದೊಡ್ಡ ಮೊತ್ತದ ಅಗತ್ಯವಿದೆ. ಅನವಶ್ಯ ಆಪಾದನೆ ಮಾಡಬೇಡಿ ಎಂದು ಅಧ್ಯಕ್ಷ ಶೆಣೈ ಉತ್ತರಿಸಿದರು. ಸಮಸ್ಯೆ ಹೇಳಿದರೆ ಆಪಾದನೆ ಹೇಗಾಗುತ್ತದೆ ಎಂದು ಗಿರೀಶ್‌ ಕೇಳಿದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯೀ ಸಮಿತಿ ಅಧ್ಯಕ್ಷ ಪ್ರಭಾಕರ್‌ ವಿ. ಉಪಸ್ಥಿತರಿದ್ದರು.

ಸುದಿನ ಹೈಲೈಟ್ಸ್‌
ಉದಯವಾಣಿ ಸುದಿನ ವರದಿ ಮಾಡಿದ ಶಾಸ್ತ್ರಿ ಸರ್ಕಲ್‌ನಲ್ಲಿ ಹೊಂಡ ಬಿದ್ದ ವರದಿ, ಕೆಎಸ್‌ಆರ್‌ಟಿಸಿ ಬಸ್ಸುಗಳ ಸಮಸ್ಯೆಯ ವರದಿ, ಯುಜಿಡಿ ಕುರಿತಾದ ವರದಿ, ನೆಹರೂ ಮೈದಾನ ಹಸ್ತಾಂತರ, ರಿಂಗ್‌ರೋಡ್‌, ಅಧಿಕೃತಗೊಳ್ಳದ ರಿಕ್ಷಾ ನಿಲ್ದಾಣ, ಖಾರ್ವಿಕೇರಿಗೆ ಯುಜಿಡಿ ದೊರೆಯದ ಕುರಿತಾದ ವರದಿ ಸಭೆಯಲ್ಲಿ ಚರ್ಚೆಯಾಯಿತು.

ಹೆದ್ದಾರಿ ಕಾಮಗಾರಿ: ಪ್ರತೀ ಸಲ ಒಬ್ಬೊಬ್ಬ ಗುತ್ತಿಗೆದಾರರು!
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ಪ್ರತೀ ಬಾರಿ ಬೇರೆ ಬೇರೆಯವರನ್ನು ಕಳುಹಿಸುವ ಕಾರಣ ಸಭೆಯಲ್ಲಿ ಸೂಚಿಸಿದ್ದೆಲ್ಲ ವ್ಯರ್ಥವಾಗುತ್ತದೆ. ಕಾಮಗಾರಿ ನಡೆಯುವುದೇ ಇಲ್ಲ ಎಂದು ಸಂತೋಷ್‌ ಶೆಟ್ಟಿ, ಗಿರೀಶ್‌ ಜಿ.ಕೆ., ಶ್ರೀಧರ ಶೇರೆಗಾರ್‌, ದೇವಕಿ ಸಣ್ಣಯ್ಯ, ಶೇಖರ್‌ ಪೂಜಾರಿ ಮೊದಲಾದವರು ಹೆದ್ದಾರಿ ಸಂಬಂಧದ ಸಮಸ್ಯೆಗಳನ್ನು ಹೇಳಿಕೊಂಡರು. ಯೋಜನಾ ನಿರ್ದೇಶಕರನ್ನು ಕರೆದು ಸಭೆ ಮಾಡಲು ಎಸಿಯವರಿಗೆ ಮನವಿ ನೀಡಲಾಗಿತ್ತು. ಸಾಧ್ಯವಾಗದ ಹಿನ್ನೆಲೆಯಲ್ಲಿ ಸಂಸದರು ಹಾಗೂ ಡಿಸಿ ಮೂಲಕ ಸಭೆ ಮಾಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಟಾಪ್ ನ್ಯೂಸ್

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

20-push-up

Push-Up: ಮೈ ಕೊಡವಿಕೊಂಡು ಎದ್ದು ನಿಲ್ಲಿಸುವ ಪುಶ್‌

Black Turmeric:ಕಪ್ಪು ಅರಿಶಿಣ ಬೆಳೆದು ಅಧಿಕ ಲಾಭ ಗಳಿಸಿದ ಧರೆಪ್ಪ;ಔಷಧ ತಯಾರಿಕೆಯಲ್ಲಿ ಬಳಕೆ

Black Turmeric:ಕಪ್ಪು ಅರಿಶಿಣ ಬೆಳೆದು ಅಧಿಕ ಲಾಭ ಗಳಿಸಿದ ಧರೆಪ್ಪ;ಔಷಧ ತಯಾರಿಕೆಯಲ್ಲಿ ಬಳಕೆ

18-Cholesterol

ನೈಸರ್ಗಿಕವಾಗಿ ಅಧಿಕ ಕೊಲೆಸ್ಟ್ರಾಲ್ ಹೊರಹಾಕಲು 5 ಸೂಪರ್‌ಫುಡ್‌ಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾರಿಗುಡಿ ದೇವಸಾನದಲ್ಲಿ ದಾರು ಶಿಲ್ಪ ವೈಭವ!ಸಾಗುವಾನಿ, ಹಲವು, ಹೆಬ್ಬಲಸು ಮರಗಳ ಬಳಕೆ

ಮಾರಿಗುಡಿ ದೇವಸ್ಥಾನದಲ್ಲಿ ದಾರು ಶಿಲ್ಪ ವೈಭವ!ಸಾಗುವಾನಿ, ಹಲವು, ಹೆಬ್ಬಲಸು ಮರಗಳ ಬಳಕೆ

ಹಿರಿಯಕ್ಕ ಹಿರಿಯಡಕ; ಕಟ್ಟೆಗಳ ಊರಿಗೆ ಅಭಿವೃದ್ಧಿಯ ತೇರು!

ಹಿರಿಯಕ್ಕ ಹಿರಿಯಡಕ; ಕಟ್ಟೆಗಳ ಊರಿಗೆ ಅಭಿವೃದ್ಧಿಯ ತೇರು!

ಗಂಗೊಳ್ಳಿ ಅಳಿವೆ: ಮತ್ಸ್ಯಕ್ಷಾಮ- ಸಮುದ್ರ ಸೇರಿದ 5,400 ಸೀಬಾಸ್‌ ಮೀನು ಮರಿಗಳು

ಗಂಗೊಳ್ಳಿ ಅಳಿವೆ: ಮತ್ಸ್ಯಕ್ಷಾಮ- ಸಮುದ್ರ ಸೇರಿದ 5,400 ಸೀಬಾಸ್‌ ಮೀನು ಮರಿಗಳು

ಬಜಗೋಳಿ ಠಾಣೆ ಪ್ರಸ್ತಾವನೆಯಲ್ಲೇ ಬಾಕಿ-ನಗರದ ಇನ್ಸ್ ಸ್ಪೆಕ್ಟರ್‌ ಹುದ್ದೆ ಖಾಲಿ!

ಬಜಗೋಳಿ ಠಾಣೆ ಪ್ರಸ್ತಾವನೆಯಲ್ಲೇ ಬಾಕಿ-ನಗರದ ಇನ್ಸ್ ಸ್ಪೆಕ್ಟರ್‌ ಹುದ್ದೆ ಖಾಲಿ!

1-wedw

Udupi;ಹೋಟೆಲ್ ಮಥುರಾ ಗೋಕುಲ್: ಫೆ19 ರಿಂದ ‘ಉಡುಪಿ ಸಂಸ್ಕೃತಿ’ ಕೈಮಗ್ಗ ಮತ್ತು ಕರಕುಶಲ ಮೇಳ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Thirthahalli: ಭೀಕರ ರಸ್ತೆ ಅಪಘಾತ… ಮಹಿಳೆ ಸ್ಥಳದಲ್ಲಿಯೇ ಮೃತ್ಯು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Belagavi: ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿಯಾಗಿ ಡಿಸೇಲ್ ರಸ್ತೆ ಪಾಲು

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ

Belekeri: ಬೇಲೆಕೇರಿ ಅದಿರು ನಾಪತ್ತೆ; ಶೀಘ್ರ ತೀರ್ಪು ಪ್ರಕಟ ಸಾಧ್ಯತೆ-ಆರೋಪಿಗಳಿಗೆ ಸಂಕಷ್ಟ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

ಬೆಳಿಗ್ಗೆ 3 ಗಂಟೆಗೆ ಕೂಗಿ ನಿದ್ದೆ ಮಾಡಲು ಬಿಡದ ಕೋಳಿಯ ವಿರುದ್ಧವೇ ದೂರು ನೀಡಿದ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.